For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್-5'ಗೆ ಸ್ವರ್ಧಿಗಳ ಬೇಟೆ ಶುರು.! ಈ ಬಾರಿ 'ಕಾಮನ್ ಮ್ಯಾನ್' ಎಂಟ್ರಿ ಪಕ್ಕಾ

  By Bharath Kumar
  |

  'ಬಿಗ್ ಬಾಸ್ ಕನ್ನಡ'......ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ. ಈಗಾಗಲೇ ನಾಲ್ಕು ಸೀಸನ್ ಮುಗಿಸಿರುವ 'ಬಿಗ್ ಬಾಸ್ ಕನ್ನಡ' 5ನೇ ಆವೃತ್ತಿಗೆ ಸಖತ್ ತಯಾರಿ ನಡೆಸುತ್ತಿದೆ.

  ವಿಷ್ಯ ಏನಪ್ಪಾ ಅಂದ್ರೆ, 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಚಾನ್ಸ್ ಕೊಡ್ತಾರೆ, ಸಾಮಾನ್ಯ ಜನರಿಗೆ ಅವಕಾಶವಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ಬಾರಿ ಕಾಮನ್ ಮ್ಯಾನ್ ಆಸೆ ನೆರವೇರಲಿದೆ.

  ಹೌದು, ಸಾಮಾನ್ಯ ಜನರಿಗೆ 'ಬಿಗ್ ಬಾಸ್' ನಲ್ಲಿ ಅವಕಾಶ ಕೊಡ್ತೀವಿ ಅಂತ ಹೇಳುತಿದ್ದ 'ಬಿಗ್ ಬಾಸ್' ಅಯೋಜಕರು, 5 ನೇ ಆವೃತ್ತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಗೆ ಹೋಗಬೇಕೆಂದು ಕಾಯುತ್ತಿದ್ದ ಸಾಮಾನ್ಯ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮುಂದೆ ಓದಿ....

  'ಬಿಗ್ ಬಾಸ್' 5ನೇ ಆವೃತ್ತಿಗೆ ಕಾಮನ್ ಮ್ಯಾನ್!

  'ಬಿಗ್ ಬಾಸ್' 5ನೇ ಆವೃತ್ತಿಗೆ ಕಾಮನ್ ಮ್ಯಾನ್!

  ಕೊನೆಗೂ 'ಬಿಗ್ ಬಾಸ್ ಕನ್ನಡ' ಮನೆಗೆ ಕಾಮನ್ ಮ್ಯಾನ್ ಕಾಲಿಡುವ ಸಮಯ ಹತ್ತಿರ ಬಂದಂತಿದೆ. ಕಳೆದ ನಾಲ್ಕು ಸೀಸನ್ ನಿಂದಲೂ ಇಂತಹದೊಂದು ಆಸೆ ಅನೇಕರಿಗೆ ಇತ್ತು. ಅದು 5ನೇ ಆವೃತ್ತಿಯಲ್ಲಿ ನೆರವೇರುವ ಸಾಧ್ಯತೆ ಇದೆ.

  ಈ ಬಾರಿ ಬಿಗ್ ಮನೆಯೊಳಗೆ ಸಾಮಾನ್ಯರು!

  ಈ ಬಾರಿ ಬಿಗ್ ಮನೆಯೊಳಗೆ ಸಾಮಾನ್ಯರು!

  ಕಲರ್ಸ್ ಕನ್ನಡ ವಾಹಿನಿಯ ಮೂಲಗಳಿಂದ ಹೊರ ಬಿದ್ದಿರುವ ಮಾಹಿತಿಯ ಪ್ರಕಾರ 'ಬಿಗ್ ಬಾಸ್-5' ನೇ ಆವೃತ್ತಿಯಲ್ಲಿ ಸಾಮಾನ್ಯ ಜನರು ಸ್ವರ್ಧಿಗಳಾಗಿ ಮನೆಯೊಳಗೆ ಹೋಗುವ ಅವಕಾಶ ಪಡೆಯಲಿದ್ದಾರಂತೆ.

  ಕುತೂಹಲ ಮೂಡಿಸಿದೆ ಅಯೋಜಕರ ಸ್ಟೇಟಸ್!

  ಕುತೂಹಲ ಮೂಡಿಸಿದೆ ಅಯೋಜಕರ ಸ್ಟೇಟಸ್!

  ಅಂದ್ಹಾಗೆ, ಈ ಸುದ್ದಿ ಇಷ್ಟೊಂದು ಕುತೂಹಲ ಮೂಡಿಸಲು ಕಾರಣ ಬಿಗ್ ಬಾಸ್ ಕನ್ನಡ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಅವರು ಪೋಸ್ಟ್ ಮಾಡಿರುವ ಸ್ಟೇಟಸ್.

  ಗುಂಡ್ಕಲ್ ಪೋಸ್ಟ್ ಮಾಡಿರುವ ಸ್ಟೇಟಸ್ ಏನು?

  ಗುಂಡ್ಕಲ್ ಪೋಸ್ಟ್ ಮಾಡಿರುವ ಸ್ಟೇಟಸ್ ಏನು?

  ಸುದೀಪ್ ಮತ್ತು ಪರಮೇಶ್ವರ ಗುಂಡ್ಕಲ್ ಒಟ್ಟಿಗೆ ಇರುವ ಫೋಟೋ ಜೊತೆಗೆ ''Bigg Boss House of Common People. Would that interest you? (ಸಾಮಾನ್ಯ ಜನರ ಬಿಗ್ ಬಾಸ್. ನಿಮಗೆ ಆಸಕ್ತಿ ಇದಿಯಾ) ಎಂದು ಸ್ಟೇಟಸ್ ಹಾಕಿದ್ದಾರೆ.

  ಈ ಸ್ಟೇಟಸ್ ಗೆ ಸಖತ್ ರೆಸ್ಪಾನ್ಸ್!

  ಈ ಸ್ಟೇಟಸ್ ಗೆ ಸಖತ್ ರೆಸ್ಪಾನ್ಸ್!

  ಪರಮೇಶ್ವರ ಗುಂಡ್ಕಲ್ ಅವರು ಪೋಸ್ಟ್ ಮಾಡಿರುವ ಈ ಸ್ಟೇಟಸ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ತಾ ಮುಂದು ನಾ ಮುಂದು ಎಂದು ಜನರು ಮುಗಿ ಬೀಳುತ್ತಿದ್ದಾರೆ.

  ಎಷ್ಟು ಜನ ಸಾಮಾನ್ಯರಿಗೆ ಅವಕಾಶ ಸಿಗಬಹುದು?

  ಎಷ್ಟು ಜನ ಸಾಮಾನ್ಯರಿಗೆ ಅವಕಾಶ ಸಿಗಬಹುದು?

  ಒಂದು ಪಕ್ಷ ಇದು ನಿಜವೇ ಆದರೇ, ಎಷ್ಟು ಜನ ಸಾಮಾನ್ಯರು ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಬಹುದು ಎಂಬ ಕುತೂಹಲ ಕೂಡ ಸಾಮಾನ್ಯರನ್ನ ಕಾಡುತ್ತಿದೆ.

  'ಬಿಗ್ ಬಾಸ್-4' ವಿನ್ನರ್ ಆಗಿದ್ದ ಪ್ರಥಮ್

  'ಬಿಗ್ ಬಾಸ್-4' ವಿನ್ನರ್ ಆಗಿದ್ದ ಪ್ರಥಮ್

  'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಪ್ರಥಮ್ ವಿನ್ನರ್ ಆಗಿ ಹೊರಹೊಮ್ಮಿದ್ದರು. ಒಂದು ರೀತಿಯಲ್ಲಿ ನೋಡುವುದಾದರೇ, ಪ್ರಥಮ್ ಸಾಮಾನ್ಯ ವ್ಯಕ್ತಿಯಾಗಿಯೇ ಬಿಗ್ ಬಾಸ್ ಮನೆಗೆ ಹೋಗಿದ್ದರು. ಹೀಗಾಗಿ, ಈ ಬಾರಿಯೂ ಇದೇ ಯೋಚನೆಯಲ್ಲಿ ಸಾಮಾನ್ಯರಿಗೆ ಅವಕಾಶ ನೀಡಬಹುದು ಎನ್ನಲಾಗುತ್ತಿದೆ.

  ನೀವು 'ಬಿಗ್ ಬಾಸ್' ಮನೆಗೆ ಹೋಗ್ಬೇಕಾ?

  ನೀವು 'ಬಿಗ್ ಬಾಸ್' ಮನೆಗೆ ಹೋಗ್ಬೇಕಾ?

  ಈ ಬಾರಿ 'ಬಿಗ್ ಬಾಸ್' ಮನೆಗೆ ಸಾಮಾನ್ಯರು ಹೋಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದ್ರೆ, ಇದಕ್ಕೆ ಯಾವ ಮಾನದಂಡ ಎಂಬುದು ಗೊತ್ತಿಲ್ಲ. ಬಟ್, ಈ ಬಾರಿ ಅವಕಾಶ ನಿಮಗೆ ಸಿಕ್ಕಿದ್ರೂ ಸಿಗಬಹುದು ಕಾಯ್ತಿರಿ..........

  ಸ್ವರ್ಧಿಗಳ ಬೇಟೆ ಶುರು!

  ಸ್ವರ್ಧಿಗಳ ಬೇಟೆ ಶುರು!

  ವರ್ಷಾಂತ್ಯದಲ್ಲಿ ಶುರುವಾಗುವ ಬಿಗ್ ಬಾಸ್ 5ನೇ ಆವೃತ್ತಿಗೆ ಸ್ವರ್ಧಿಗಳನ್ನ ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಶುರುವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ, ಈ ಬಾರಿ ಯಾರೆಲ್ಲ ಬಿಗ್ ಮನೆಯನ್ನ ಪ್ರವೇಶ ಮಾಡಬಹುದು ಎಂಬ ಕುತೂಹಲ ಹೆಚ್ಚಾಗುತ್ತಿದೆ.

  English summary
  According Source Common People Will Get Chance to Participate in Bigg Boss Kannada Session 5

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X