Breaking News: ಬಿಗ್‌ಬಾಸ್ 12 ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ. ಸಹ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ನಿಂದಿಸಿದ ಆರೋಪದಲ್ಲಿ ಇದೀಗ ಸಂಕಷ್ಟ ಎದುರಾಗಿದೆ. ಕಳೆದ ವಾರದ ಎಪಿಸೋಡ್‌ನಲ್ಲಿ ಜಾಹ್ನವಿ ಹಾಗೂ ಅಶ್ವಿನಿ ಗೌಡ ಕೂತು ರಕ್ಷಿತಾ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ರಕ್ಷಿತಾರನ್ನು 'ಸ್ಲಮ್' ಎಂದು ಅಶ್ವಿನಿ ಕರೆದಿದ್ದರು.

ಬಿಡದಿ ಪೊಲೀಸ್ ಠಾಣೆಯಲ್ಲಿ ಬಿಗ್‌ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ. ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಗಳು ಮನೆ ಒಳಗೆ ಇದ್ದಾಗಲೇ ದೂರು ದಾಖಲಾಗಿ ಸಂಕಷ್ಟ ಎದುರಿಸಿದ್ದ ಘಟನೆಗಳು ನಡೆದಿತ್ತು. ಬಿಗ್‌ಬಾಸ್ ಕನ್ನಡ 12ನೇ ಸೀಸನ್‌ನಲ್ಲಿ ಕೂಡ ಇದು ಮರುಕಳಿಸುತ್ತಿದೆ.

Complaint Filed Against Bigg Boss Kannada 12 Contestant Ashwini Gowda for Insulting Rakshita Shetty

ರಕ್ಷಿತಾ ಶೆಟ್ಟಿ ಬಗ್ಗೆ 'ಸ್ಲಮ್' ಎಂದು ಅಶ್ವಿನಿ ಗೌಡ ಹೇಳಿದ್ದನ್ನು ಮ್ಯೂಟ್ ಮಾಡಲಾಗಿತ್ತು. ಆದರೆ ಆಕೆಯ ಪದ ಬಳಕೆ ವೀಕ್ಷಕರಿಗೆ ಅರ್ಥವಾಗಿತ್ತು. ಅಷ್ಟೇ ಅಲ್ಲ, ಮತ್ತೆ ಇದೇ ವಿಚಾರವಾಗಿ ಜಾಹ್ನವಿ ಬಳಿಕ ಮಾತನಾಡುತ್ತಾ 'ಎಸ್‌' ಅಂತ ಹೇಳ್ದೆ ಅಲ್ವಾ ಎಂದು ಅಶ್ವಿನಿ ಮತ್ತೆ ಅದೇ ಅರ್ಥದಲ್ಲಿ ಮಾತನಾಡಿದ್ದರು. ಜಿಯೋ ಹಾಟ್‌ಸ್ಟರ್‌ನಲ್ಲಿ ಇದು ಸ್ಟ್ರೀಮಿಂಗ್ ಆಗಿತ್ತು. ಬಳಿಕ ಅದನ್ನು ಎಡಿಟ್ ಮಾಡಿ ಅಪ್‌ಲೋಡ್ ಮಾಡಿದ್ದರು. ಆದರೂ ವೀಕ್ಷಕರು ಅದನ್ನು ಗಮನಿಸಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಸಿದ್ದರು.

ಬಿಗ್‌ಬಾಸ್ ಮನೆಯಲ್ಲಿ ಸಹಸ್ಪರ್ಧಿ ಬಗ್ಗೆ ಅಶ್ವಿನಿ ಗೌಡ ಅವಹೇಳಕಾರಿ ಪದ ಬಳಕೆ ಮಾಡಿದ್ದಕ್ಕೆ ಆಕೆಯ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ದೂರು ನೀಡಿದ್ದಾರೆ. ಇದು ವ್ಯಕ್ತಿ ನಿಂದನೆ ಎಂದು ಆರೋಪಿಸಿರುವ ಅವರು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಶೋ ಆಯೋಜಕರ ವಿರುದ್ಧವೂ ದೂರು ನೀಡಿದ್ದಾರೆ. ಸಮಾಜದಲ್ಲಿ ಎಲ್ಲರೂ ಒಂದೇ, ಯಾವುದೇ ಜಾತಿ ಭೇದ ಹರಡಬಾರದು. ಅಶ್ವಿನಿ ಗೌಡ ಮಾತನ್ನು ತೆಗೆಯದೇ ಕಾರ್ಯಕ್ರಮ ಪ್ರಸಾರ ಮಾಡಿದ್ದು ತಪ್ಪು. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದಾರೆ.

Complaint Filed Against Bigg Boss Kannada 12 Contestant Ashwini Gowda for Insulting Rakshita Shetty

ವಕೀಲರು ನೀಡಿದ ದೂರು ಆಧರಿಸಿ ಬಿಡದಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಮೊದಲಿನಿಂದಲೂ ರಕ್ಷಿತಾ ಅವರನ್ನು ಅಶ್ವಿನಿ ಗೌಡ ಹಾಗೂ ಜಾಹ್ನವಿ ಟಾರ್ಗೆಟ್ ಮಾಡುತ್ತಾ ಬರ್ತಿದ್ದಾರೆ. ತಾವೇ ಗೆಜ್ಜೆ ಸದ್ದು ಮಾಡಿ ಅದನ್ನು ರಕ್ಷಿತಾ ಮೇಲೆ ಹಾಕಲು ಯತ್ನಿಸಿದ್ದರು. ಈ ವಿಚಾರವಾಗಿ ಮನೆಯಲ್ಲೆ ದೊಡ್ಡ ಗಲಾಟೆ ನಡೆದಿತ್ತು.

ಕಳೆದ ಶುಕ್ರವಾರ ಮಧ್ಯಾಹ್ನ ರಕ್ಷಿತಾ ಬಗ್ಗೆ ಗಾರ್ಡನ್ ಏರಿಯಾದಲ್ಲಿಅಶ್ವಿನಿ ಗೌಡ ಹಾಗೂ ಜಾಹ್ನವಿ ಮಾತನಾಡುತ್ತಿದ್ದರು. ಈ ವೇಳೆ "ಅವಳು ಮಾಡಿದ್ದು ನಿನ್ನೆ ಇನ್ನು ನನ್ನ ತಲೆಯಲ್ಲೇ ಕೂತಿದೆ. ಹೆಂಗೆ ಆಡ್ತಿದ್ಲು ಅವ್ಳು. ತೀರ 'ಸ್ಲಮ್' ತರ ಆಡ್ತಿದ್ಲಪ್ಪ ಅವ್ಳು. ಅವಳ ಲೆವೆಲ್‌ಗೆ ನಾವೆಲ್ಲಾ ಇಳಿಯೋಕೆ ಆಗಲ್ಲ" ಎಂದಿದ್ದರು. ಬಳಿಕ ರಕ್ಷಿತಾ ಮಾತನಾಡುವ ಶೈಲಿಯನ್ನು ಇಮಿಟೇಟ್ ಮಾಡಿ ಅಶ್ವಿನಿ ವ್ಯಂಗ್ಯವಾಡಿದ್ದರು.

ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಅಶ್ವಿನಿ ಹಾಗೂ ಜಾಹ್ನವಿ ಇಬ್ಬರೂ ಮಾತನಾಡುವ ವೇಳೆ "ಅವಳಿಗೆ ಫುಲ್ ಶೇಪ್‌ ಔಟ್ ಆಗೋಯ್ತು. ಏನು ಮಾತನಾಡಲಿಲ್ಲ ಇವತ್ತು. ನಾನು ಹೇಳಲಿಲ್ವಾ ಆ "S.." ಎಂದು ಅಶ್ವಿನಿ ಮತ್ತೆ ಹೇಳಿದ್ದರು. ಇದೇ ಈಗ ಸಂಕಷ್ಟಕ್ಕೆ ಕಾರಣವಾಗಿದೆ.

ಎರಡು ವರ್ಷಗಳ ಹಿಂದೆ ಬಿಗ್‌ಬಾಸ್ ಸೀಸನ್‌ 11ರಲ್ಲಿ ಸ್ಪರ್ಧಿ ತನಿಷಾ ಕುಪ್ಪಂಡ ಪದ ಬಳಕೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಡ್ರೋನ್ ಪ್ರತಾಪ್ ಕುರಿತು ಮಾತನಾಡುತ್ತಾ ತನಿಷಾ ಬಳಸಿದ್ದ ಪದ ಭೋವಿ ಸಮುದಾಯದವರ ಕೆಂಗಣ್ಣಿಗೆ ಗುರಿಯಾಗಿತ್ತು. ಜಾತಿ ನಿಂದನೆ ಆರೋಪದಡಿ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. "ತನಿಷಾ, ವಡ್ಡ ಎಂಬ ಪದ ಬಳಸುವ ಮೂಲಕ ಭೋವಿ ಸಮುದಾಯಕ್ಕೆ ಅಪಮಾನ ಎಸಗಿದ್ದಾರೆ. ಭೋವಿ ಸಮುದಾಯವು ಪರಿಶಿಷ್ಟ ಜಾತಿಗೆ ಸೇರಿದೆ ಎಂದು ತಿಳಿದಿದ್ದರೂ ಸಹ ಅಪಮಾನ ಮಾಡಲಾಗಿದೆ. ಆಕೆಯನ್ನು ಈ ಕೂಡಲೇ ಬಿಗ್‌ಬಾಸ್ ಮನೆಯಿಂದ ಹೊರಗೆ ಕಳಿಸಬೇಕು, ಬಂಧಿಸಬೇಕು" ಎಂದು ಆಗ್ರಹಿಸಿದ್ದರು.

More from Filmibeat

Read more about: bigg boss 12 bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X