For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?

  By Harshitha
  |

  ಕನ್ನಡ ಸಿನಿ ಪ್ರಿಯರಿಗೆ ಇದೋ ಇಲ್ಲಿದೆ ಸಿಹಿ ಸುದ್ದಿ. ಜನಪ್ರಿಯ 'ಬಿಗ್ ಬಾಸ್' ಹೊಸ ಆವೃತ್ತಿ ಸದ್ಯದಲ್ಲೇ ಶುರುವಾಗಲಿದೆ. ಈಗಾಗಲೇ ಕಾರ್ಯಕ್ರಮದ ಪೂರ್ವ ತಯಾರಿಗೆ ಕಲರ್ಸ್ ಕನ್ನಡ ವಾಹಿನಿ ಚಾಲನೆ ನೀಡಿದೆ.

  'ಬಿಗ್ ಬಾಸ್ ಕನ್ನಡ -3' ಸ್ಟಾರ್ಟ್ ಆಗುತ್ತಿರುವ ಬಗ್ಗೆ ಎರಡು ದಿನಗಳ ಹಿಂದೆಯಷ್ಟೇ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಸುದ್ದಿ ಮಾಡಿತ್ತು. ಆ ಸುದ್ದಿ ಈಗ ನಿಜವಾಗಿದೆ.

  'ಡ್ಯಾನ್ಸಿಂಗ್ ಸ್ಟಾರ್ - 2' ಮುಗಿದ ನಂತ್ರ ಕಲರ್ಸ್ ಕನ್ನಡ (ಈಟಿವಿ ಕನ್ನಡ)ದಲ್ಲಿ ಬಿಗ್ ಬಾಸ್ ಮೂರನೇ ಆವೃತ್ತಿ ಪ್ರಸಾರವಾಗಲಿದೆ. ಖುಷಿ ವಿಷಯ ಅಂದ್ರೆ, ಈ ಬಾರಿಯೂ ಸುದೀಪ್ ಕಾರ್ಯಕ್ರಮವನ್ನ ನಡೆಸಿಕೊಡಲಿದ್ದಾರೆ. ಮುಂದೆ ಓದಿ.....

  ಕಲರ್ಸ್ ಕನ್ನಡ ಪಾಲಾದ 'ಬಿಗ್ ಬಾಸ್-3'

  ಕಲರ್ಸ್ ಕನ್ನಡ ಪಾಲಾದ 'ಬಿಗ್ ಬಾಸ್-3'

  'ಬಿಗ್ ಬಾಸ್' ಸೀಸನ್ 1 ಪ್ರಸಾರವಾಗಿದ್ದು ಈಟಿವಿ ಕನ್ನಡ ವಾಹಿನಿಯಲ್ಲಿ. ಮೊದಲ ಆವೃತ್ತಿ ಜನಪ್ರಿಯತೆ ಪಡೆದರೂ, 'ಬಿಗ್ ಬಾಸ್' ಎರಡನೇ ಆವೃತ್ತಿ ಪಾಲಾಗಿದ್ದು ಮಾತ್ರ ಸುವರ್ಣ ವಾಹಿನಿಗೆ. ಆದ್ರೆ, ಸ್ಪರ್ಧಿಗಳ ಆಯ್ಕೆ ಮತ್ತು ಕಾರ್ಯಕ್ರಮದ ರೂಪುರೇಷೆ ಸೆಕೆಂಡ್ ಸೀಸನ್ ನಲ್ಲಿ ಮಜಾ ಕೊಡಲಿಲ್ಲ. ಹೀಗಾಗಿ ಮೂರನೇ ಸೀಸನ್ ಮತ್ತೊಮ್ಮೆ ಈಟಿವಿ (ಕಲರ್ಸ್) ಕನ್ನಡ ಪಾಲಾಗಿದೆ. ['ಬಿಗ್ ಬಾಸ್ ಕನ್ನಡ 2' ತಮಾಷೇನೇ ಇರಲಿಲ್ಲ ಸ್ವಾಮಿ!]

  ಇಲ್ಲೂ ಸುದೀಪ್ ಇರ್ತಾರೆ ಸ್ವಾಮಿ..!

  ಇಲ್ಲೂ ಸುದೀಪ್ ಇರ್ತಾರೆ ಸ್ವಾಮಿ..!

  ಈಗಷ್ಟೇ ಬಂದಿರುವ ಬ್ರೇಕಿಂಗ್ ನ್ಯೂಸ್ ಪ್ರಕಾರ, 'ಬಿಗ್ ಬಾಸ್-3' ಕಾರ್ಯಕ್ರಮವನ್ನ ನಿರೂಪಿಸುವುದಕ್ಕೆ ಸುದೀಪ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸುದೀಪ್ ವೃತ್ತಿಬದುಕಿಗೆ ಹೊಸ ತಿರುವು ಕೊಟ್ಟ 'ಬಿಗ್ ಬಾಸ್' ಕಾರ್ಯಕ್ರಮವನ್ನ ಬಿಟ್ಟುಕೊಡುವ ಮನಸ್ಸು ಸುದೀಪ್ ಗಿಲ್ಲ. ಹೀಗಾಗಿ, ಮೂರನೇ ಸೀಸನ್ ಗೆ ಜೈ ಅಂದಿದ್ದಾರೆ.

  ಕಾರ್ಯಕ್ರಮದಲ್ಲಿ ಯಾರ್ಯಾರು ಇರ್ತಾರೆ?

  ಕಾರ್ಯಕ್ರಮದಲ್ಲಿ ಯಾರ್ಯಾರು ಇರ್ತಾರೆ?

  'ಬಿಗ್ ಬಾಸ್-3' ಪ್ರೀ ಪ್ರೊಡಕ್ಷನ್ ವರ್ಕ್ ಗೆ ಆಗಲೇ ಚಾಲನೆ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಸ್ಪರ್ಧಿಗಳ ಆಯ್ಕೆಯಲ್ಲಿ ತೊಡಗಿದೆ. ಹಾಗಾದ್ರೆ, ಈ ಬಾರಿಯ 'ಬಿಗ್ ಬಾಸ್' ನಲ್ಲಿ ಯಾರ್ಯಾರು ಇರಲಿದ್ದಾರೆ..? ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

  ಮೈತ್ರಿಯಾ ಗೌಡ

  ಮೈತ್ರಿಯಾ ಗೌಡ

  'ಬಿಗ್ ಬಾಸ್-3' ನಲ್ಲಿ ಮೈತ್ರಿಯಾ ಗೌಡ ಇರುವುದು ಅಧಿಕೃತ ಆಗಿಲ್ಲ. ಆದ್ರೆ, ಕೋಟ್ಯಾಂತರ ಕನ್ನಡಿಗರ ಪ್ರಕಾರ ಮೈತ್ರಿಯಾ ಗೌಡ ಬಿಗ್ ಬಾಸ್ ಸ್ಪರ್ಧಿಯಾಗುವುದು ಖಚಿತ.

  ಹುಚ್ಚ ವೆಂಕಟ್

  ಹುಚ್ಚ ವೆಂಕಟ್

  ''ಈ ಬಾರಿ ನಾನು ಬಿಗ್ ಬಾಸ್ ಗೆ ಹೋಗ್ತಾಯಿದ್ದೀನಿ'' ಅಂತ ಖುದ್ದು ಹುಚ್ಚ ವೆಂಕಟ್ ಚಾನೆಲ್ ಒಂದರಲ್ಲಿ ಹೇಳಿಕೆ ನೀಡಿದ್ದರು. ಅದು ನಿಜವೇ ಆದರೆ, ನೀವು ಇನ್ಮುಂದೆ ಪ್ರತಿ ದಿನ ಹುಚ್ಚ ವೆಂಕಟ್ ನ ಹುಚ್ಚಾಟ ನೋಡುವುದು ಗ್ಯಾರೆಂಟಿ. ['ಬಿಗ್ ಬಾಸ್' ಸ್ಪರ್ಧಿಯಾಗಲಿದ್ದಾರೆ 'ಹುಚ್ಚ ವೆಂಕಟ್']

  ಮಾಸ್ಟರ್ ಆನಂದ್

  ಮಾಸ್ಟರ್ ಆನಂದ್

  ವರ್ಷಗಳ ನಂತರ ಮತ್ತೆ ಕಿರುತೆರೆ ಮೂಲಕ ಜನಪ್ರಿಯತೆ ಗಿಟ್ಟಿಸಿರುವ ಪ್ರತಿಭೆ ಮಾಸ್ಟರ್ ಆನಂದ್. 'ಡ್ಯಾನ್ಸಿಂಗ್ ಸ್ಟಾರ್-2' ನಲ್ಲಿ ಮಾಸ್ಟರ್ ಆನಂದ್ ಫೈನಲ್ ತಲುಪಿದ್ದಾರೆ. ಅಲ್ಲಿಗೆ, ಅವರಿಗೆ ಟಿ.ಆರ್.ಪಿ ಇದೆ ಅಂತರ್ಥ. ಈ ಟಿ.ಆರ್.ಪಿ, 'ಬಿಗ್ ಬಾಸ್' ನಲ್ಲೂ ಮುಂದುವರಿದರೆ ಅಚ್ಚರಿ ಇಲ್ಲ.

  ಸುನಾಮಿ ಕಿಟ್ಟಿ

  ಸುನಾಮಿ ಕಿಟ್ಟಿ

  ರಿಯಾಲಿಟಿ ಶೋಗಳ ಸ್ಟಾರ್ ಆಗಿರುವ ಸುನಾಮಿ ಕಿಟ್ಟಿ ಕೂಡ 'ಬಿಗ್ ಬಾಸ್-3' ಕನ್ಟೆಸ್ಟೆಂಟ್ ಲಿಸ್ಟ್ ನಲ್ಲಿದ್ದಾರೆ.

  ನಿತ್ಯಾನಂದ

  ನಿತ್ಯಾನಂದ

  ಮೊದಲ ಎರಡು ಸೀಸನ್ ನಿಂದಲೂ ಬಿಗ್ ಬಾಸ್ ಗೆ ನಿತ್ಯಾನಂದ ಬರ್ತಾರೆ ಅನ್ನುವ ಸುದ್ದಿ ಇದ್ದೇ ಇದೆ. ಅದು ಈ ಬಾರಿ ನಿಜವಾಗುತ್ತಾ ಅಂತ ನೋಡ್ಬೇಕು.

  ರಾಗಿಣಿ ದ್ವಿವೇದಿ

  ರಾಗಿಣಿ ದ್ವಿವೇದಿ

  'ಬಿಗ್ ಬಾಸ್-2' ನಲ್ಲೇ ರಾಗಿಣಿ ದ್ವಿವೇದಿ ಭಾಗವಹಿಸಬೇಕಿತ್ತು. ಅನಿವಾರ್ಯ ಕಾರಣಗಳಿಂದ ಅದು ಮಿಸ್ ಆಗಿತ್ತು. ಈ ಬಾರಿ ರಾಗಿಣಿ 'ಬಿಗ್ ಬಾಸ್' ಮನೆ ಸೇರಿ ತುಪ್ಪದ ದೋಸೆ ಹ್ಯುಯ್ತಾರಾ..? ನೋಡೋಣ.

  ಶೀತಲ್ ಶೆಟ್ಟಿ

  ಶೀತಲ್ ಶೆಟ್ಟಿ

  ಖಾಸಗಿ ಸುದ್ದಿ ವಾಹಿನಿಯ ಜನಪ್ರಿಯ ಆಂಕರ್ ಶೀತಲ್ ಶೆಟ್ಟಿ ಕೂಡ 'ಬಿಗ್ ಬಾಸ್' ಕಾರ್ಯಕ್ರಮ ನಿರ್ಮಾಪಕರ ಕಣ್ಣುಕುಕ್ಕಿದ್ದಾರೆ ಅನ್ನುತ್ತಿವೆ ಮೂಲಗಳು.

  ರಾಧಾ ಹಿರೇಗೌಡರ್

  ರಾಧಾ ಹಿರೇಗೌಡರ್

  ರಾಜಕಾರಣಿಗಳ ವಿರುದ್ಧ ಅಬ್ಬರಿಸುವ ಖಾಸಗಿ ಸುದ್ದಿ ವಾಹಿನಿಯ ಆಂಕರ್ ರಾಧಾ ಹಿರೇಗೌಡರ್ ಕೂಡ 'ಬಿಗ್ ಬಾಸ್-3' ನಲ್ಲಿ ಗುಡುಗಿದ್ರೆ ಹೇಗೆ ಅನ್ನುವ ಲೆಕ್ಕಾಚಾರ ನಡೆಯುತ್ತಿದೆ.

  ಕಾಮೆಂಟ್ ಮಾಡಿ....

  ಕಾಮೆಂಟ್ ಮಾಡಿ....

  Tentative List ನಲ್ಲಿರುವ ಸ್ಪರ್ಧಿಗಳ ಹೆಸರುಗಳನ್ನ ನಾವು ನಿಮ್ಮ ಮುಂದೆ ಇಟ್ಟಿದ್ದೀವಿ. ಇವರುಗಳಲ್ಲಿ ನೀವು 'ಬಿಗ್ ಬಾಸ್' ಮನೆಯಲ್ಲಿ ಯಾರನ್ನ ನೋಡಲು ಬಯಸುತ್ತೀರಾ ಅಂತ ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....

  English summary
  'Bigg Boss' is back in Kannada. According to the sources, 'Bigg Boss-3' will be aired in 'Colours Kannada Channel' and Sudeep to host the Season.
  Monday, June 22, 2015, 12:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X