For Quick Alerts
  ALLOW NOTIFICATIONS  
  For Daily Alerts

  'ಸೂಪರ್ ಸ್ಟಾರ್' ಜೆಕೆ ಮತ್ತು ಪುಟಾಣಿಗಳ 'ಕನೆಕ್ಷನ್' ಸ್ಪೆಷಲ್

  By Harshitha
  |

  'ಮಕ್ಕಳು ಏನ್ ಮಾಡಿದ್ರೂ ಚೆಂದ' ಎನ್ನುವ ಹಾಗೆ ಈ ವೀಕೆಂಡ್ ನಲ್ಲಿ, ಪುಟಾಣಿಗಳು ಆಟದ ಜೊತೆ ಡ್ಯಾನ್ಸ್ ಮಾಡಿ, ತಮ್ಮ ಚಿಟ-ಪಟ ಮಾತುಗಳಿಂದ 'ಕನೆಕ್ಷನ್' ವೇದಿಕೆಯನ್ನು ನಗೆ ಸಾಗರದಲ್ಲಿ ಮುಳುಗಿಸಿದ್ದಾರೆ.['ಕನೆಕ್ಷನ್' ಶೋಗೆ ಬಂದು ಕಣ್ಣೀರು ಹಾಕಿದ ಹುಚ್ಚ ವೆಂಕಟ್]

  ಸಂಬಂಧವಿಲ್ಲದ ಚಿತ್ರಗಳ ಲಿಂಕ್ ಗೆ ಸಿಂಕ್ ಮಾಡಿ, ನಕ್ಕು ನಲಿಸಿ ನೋಡುಗರಿಗೆ ಖುಷಿಯನ್ನು ನೀಡಿದ್ದಾರೆ. ಸ್ಪರ್ಧೆಯಲ್ಲಿ ಗೆಲ್ಲುವುದು ಮಾತ್ರ ಮುಖ್ಯವಲ್ಲ, ಸ್ಪರ್ಧಿಸುವುದು ಮುಖ್ಯ ಅಂತ ಹೇಳಿ ದೊಡ್ಡವರಿಗೆ ಆಶ್ಚರ್ಯ ಮೂಡಿಸಿದ ಮಕ್ಕಳ ಪೈಪೋಟಿ ಈ ಶನಿವಾರ ನಿಮ್ಮ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.[ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಗೀತಾಂಜಲಿ']

  'ಕನೆಕ್ಷನ್' ಸ್ಪರ್ಧೆಯಲ್ಲಿ ಯಾರ್ಯಾರು?

  'ಕನೆಕ್ಷನ್' ಸ್ಪರ್ಧೆಯಲ್ಲಿ ಯಾರ್ಯಾರು?

  ಜನಮನ ಗೆದ್ದಿರುವ 'ಪುಟಾಣಿ ಪಂಟ್ರು' ಕಾರ್ಯಕ್ರಮದ ಮೋಕ್ಷ ಕೀರ್ತಿ, ವರ್ಷಿಣಿ ಸಾಕ್ಷಿ, ಹೇಮಂತ, 'ಡ್ಯಾನ್ಸ್ ಡ್ಯಾನ್ಸ್' ಶೋನ ಪ್ರಣಮ್ಯ ಈ ವಾರದ 'ಕನೆಕ್ಷನ್' ಕಾರ್ಯಕ್ರಮದ ಸ್ಪರ್ಧಿಗಳು.

  ಸೂಪರ್ ಸ್ಟಾರ್ ಜೆಕೆ ಕೂಡ ಬಂದಿದ್ರು!

  ಸೂಪರ್ ಸ್ಟಾರ್ ಜೆಕೆ ಕೂಡ ಬಂದಿದ್ರು!

  ಕಿರುತೆರೆ ಮತ್ತು ಬೆಳ್ಳಿತೆರೆ ಮೇಲೆ ತಮ್ಮದೇ ಆದ ಛಾಪು ಮೂಡಿಸಿರುವ ಜಯರಾಂ ಕಾರ್ತಿಕ್ ಅಲಿಯಾಸ್ ಜೆ.ಕೆ ಈ ವಾರದ 'ಕನೆಕ್ಷನ್' ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ. ಇವರ ಜೊತೆಗೆ ಸಾಥ್ ಕೊಟ್ಟಿದ್ದು 'ಸ' ಚಿತ್ರದ ನಿರ್ದೇಶಕ ಹೇಮಂತ್ ಹೆಗಡೆ.

  ನೋಡಲು ಮಜಾ

  ನೋಡಲು ಮಜಾ

  ಚಿತ್ರಗಳನ್ನ ಸಿಂಕ್ ಮಾಡುವಲ್ಲಿ ಜೆ.ಕೆ ಮತ್ತು ಹೇಮಂತ್ ಹೆಗಡೆ ರವರ ಕನೆಕ್ಷನ್ ನೋಡಲು ಮಜವಾಗಿದ್ಯಂತೆ.

  ಪ್ರತಿಸ್ಪರ್ಧಿಗಳು

  ಪ್ರತಿಸ್ಪರ್ಧಿಗಳು

  ಡ್ಯಾನ್ಸ್ ಜೋಡಿಯಾದ ಲಾಸ್ಯ ಮತ್ತು ರಜತ್, ಕಿರುತೆರೆಯ ಶ್ರವಂತ್ ಮತ್ತು ಅಪೇಕ್ಷ ಜೋಡಿ ಜೆ.ಕೆ ಟೀಮ್ ಗೆ ಪ್ರತಿಸ್ಪರ್ಧಿ ಆಗಿದ್ದಾರೆ.

  ಕಾರ್ಯಕ್ರಮ ಪ್ರಸಾರ ಯಾವಾಗ?

  ಕಾರ್ಯಕ್ರಮ ಪ್ರಸಾರ ಯಾವಾಗ?

  ಈ ಸೆಲೆಬ್ರಿಟಿಗಳ ನಡುವಿನ ಹಣಾಹಣಿಯ 'ಕನೆಕ್ಷನ್' ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  English summary
  Small Screen Super Star Jayaram Karthik has taken part in Star Suvarna Channel's popular program 'Connexion' which will be aired on This Saturday (Sept 10th) and Sunday (Sept 11th) at 7.30 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X