»   » ಮಕ್ಕಳ ರಿಯಾಲಿಟಿ ಶೋಗಳು ಬೇಸರ ಮೂಡಿಸುವುದು ಇದೇ ಕಾರಣಕ್ಕೆ.!

ಮಕ್ಕಳ ರಿಯಾಲಿಟಿ ಶೋಗಳು ಬೇಸರ ಮೂಡಿಸುವುದು ಇದೇ ಕಾರಣಕ್ಕೆ.!

By ಶುಭಾಶಯ ಜೈನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮೊನ್ನೆ ಮೊನ್ನೆ ಒಂದು ಘಟನೆ ನಡೆದಿತ್ತಂತೆ... ವಿಪತ್ತು ನಿರ್ವಹಣೆಗೆ ನೀಡಲಾಗುತ್ತಿದ್ದ ತರಬೇತಿಯಲ್ಲಿ ಯುವತಿಯೊಬ್ಬಳ ಜೀವ ಕಳೆದುಕೊಂಡ ಹೃದಯ ವಿದ್ರಾವಕ ದುರಂತ.

  ತಮಿಳುನಾಡಿನ ಕೊಯಮತ್ತೂರಿನ ಕಾಲೇಜೊಂದರಲ್ಲಿ ನಡೆದ ಘಟನೆ ಇದು. ಕೊಯಮತ್ತೂರಿನ ಕೊವೈ ಕಲೈಮಗಳ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿಪತ್ತು ಸಂದರ್ಭಗಳಲ್ಲಿ ರಕ್ಷಣಾ ಕಾರ್ಯಾಚರಣೆ ಹಾಗೂ ನಮ್ಮ ಜೀವ ಉಳಿಸಿಕೊಳ್ಳುವುದು ಹೇಗೆ ಎಂಬ ತರಬೇತಿ ನೀಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಆಕೆ ಎರಡನೇ ಮಹಡಿಯಿಂದ ಜಿಗಿಯಬೇಕಾಗಿತ್ತು. ಆಕೆ ಭಯದಿಂದ ಹಿಂದೇಟು ಹಾಕಿದ್ದಾಳೆ. ಆದ್ರೂ ಒತ್ತಾಯದಿಂದ ಈ ಸಾಹಸ ಮಾಡಿಸಲಾಗಿದೆ. ಪರಿಣಾಮ, ಆಕೆಯ ಸಾವು..

  ಎಷ್ಟೆಷ್ಟೋ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ನಡೆಸುವ ಸ್ಟಂಟ್ ಪ್ರದರ್ಶನಗಳಲ್ಲೇ ಎಡವಟ್ಟುಗಳಾಗೋದನ್ನು ನಾವು ಕಾಣ್ತೇವೆ. ಟೈಮ್ ಸರಿ ಇಲ್ಲ ಅಂದ್ರೆ ಎಂಥಾ ತರಬೇತಿ ಪಡ್ಕೊಂಡ್ರೂ ಜೀವಕ್ಕೆ ವಿಪತ್ತಾಗಿ ಕಾಡುವ ಸಾಧ್ಯತೆಗಳಿವೆ. ಅಂಥದ್ರಲ್ಲಿ ಕೇವಲ ಮನರಂಜನೆಗೋಸ್ಕರ ಇಂಥಾ ರಿಸ್ಕೇ???

  ಹ್ಯಾಂಗಿಂಗ್ ಲ್ಯಾಡರ್ ನಲ್ಲಿ ಗಾಳಿಯ ಬೊಂಬೆಗಳಂತೆ ವಯಸ್ಸಿಗೆ ಬಾರದ ಮಕ್ಕಳು ತೂಗಾಡ್ತಾರೆ. ಉಸಿರಾಟವನ್ನೇ ಒಮ್ಮೆಗೆ ಸ್ತಬ್ಧಗೊಳಿಸುವಂತೆ ಅದೆಷ್ಟೋ ಎತ್ತರದಿಂದ ಜಂಪ್ ಮಾಡ್ತಾರೆ. ಯಾವುದನ್ನು ಬ್ಯಾಡ್ ಟಚ್ ಅಂತ ಮಕ್ಕಳಿಗೆ ಹಿಂದೆಲ್ಲಾ ಹೇಳಿ ಕೊಡ್ತಿದ್ರೋ... ಅದೀಗ ಕಾಮನ್ ಟಚ್ ಗಳಾಗಿಬಿಟ್ಟಿವೆ.

  ಮಕ್ಕಳ ವಯಸ್ಸನ್ನು ಮೀರಿದ ಕಣ್ಸನ್ನೆ, ಕೈಸನ್ನೆಗಳ ಅಭಿವ್ಯಕ್ತಿಗೆ ತೀರ್ಪುಗಾರರಿಂದ ಶಭಾಷ್ ಗಿರಿ, ಪುಟ್ಟ ಬಾಯಲ್ಲಿ ವಯಸ್ಸಿಗೆ ಮೀರಿದ ಮಾತುಗಳಿಗೆ ಶಿಳ್ಳೆ ಚಪ್ಪಾಳೆಗಳು, ಈ ಚಿಣ್ಣರಲ್ಲಿ ತಮ್ಮ ವಯಸ್ಸಿಗೂ, ದೊಡ್ಡವರಂತೆ ನಡೆದುಕೊಳ್ಳುವ ರೀತಿಗೂ ಅಜಗಜಾಂತರ ವ್ಯತ್ಯಾಸ. ಅದಕ್ಕೆ ಸೇರಿಕೊಂಡಂತೆ, ಒಂದೆರಡು ಟಿವಿ ಶೋಗಳಲ್ಲಿ ಭಾಗವಹಿಸಿದ್ರೆ ಸಾಕು ಸಣ್ಣಂದಿನಲ್ಲೇ ಸೆಲೆಬ್ರಿಟಿ ಪಟ್ಟ... ಇವೆಲ್ಲಾ ಸೇರಿ ಪುಟ್ಟ ಮನಸ್ಸಿನಲ್ಲಿ ತಲೆ ಭಾರ ಹೆಚ್ಚಾಗುವಂತೆ ಮಾಡುತ್ತೆ.

  ಈ ರಿಯಾಲಿಟಿ ಶೋಗಳು.... ಮಕ್ಕಳ ಕಾರ್ಯಕ್ರಮಗಳು ಬೇಸರ ಮೂಡಿಸುವುದು ಇದೇ ಕಾರಣಕ್ಕೆ. ಮುಗ್ಧತೆ ಇರಬೇಕಾದ ಮಕ್ಕಳಲ್ಲಿ ಕೃತಕತೆ, ಮಕ್ಕಳ ಈ ಹೇಳಿಕೊಟ್ಟ ಪ್ರದರ್ಶನಕ್ಕೆ, ಸ್ಕ್ರಿಪ್ಟೆಡ್ ಸಂಭಾಷಣೆಗಳಿಗೆ, ನಿರೂಪಕರು, ತೀರ್ಪುಗಾರರ ಪ್ರತಿಕ್ರಿಯೆಯಂತೂ ಅಬ್ಬಬ್ಬಾ.. ಏನು ರಿಯಾಕ್ಷನ್..

  ಆಂಕರ್ ಗಳು 'ಹಾ ಹೋ' ಅಂತ ಅಂತ ಕಿರುಚಾಡಿ ಅದನ್ನೇ ವೈಭವೀಕರಣ ಮಾಡ್ತಾರೆ. ಇನ್ನು ಜಡ್ಜ್ ಗಳೂ... ನುರಿತ ನಟರು ಬಿಡಿ. ಕ್ಯಾಮರಾ ಮುಂದೆ ಹೇಗೆ ಕಾಣಿಸಿಕೊಂಡ್ರೆ ಟಿ.ಆರ್.ಪಿ ಜಾಸ್ತಿಯಾಗುತ್ತೆ ಅಂತ ಅವರಿಗೊತ್ತು. ಆದ್ರೆ ಅತಿರಂಜಿತ ಅವರ ತೀರ್ಪನ್ನು, ಅದಕ್ಕಾಗೇ ತಮ್ಮ ಮಕ್ಕಳನ್ನು ರಿಸ್ಕ್ ಗೆ ದೂಡುವ ಅಪ್ಪ ಅಮ್ಮಂದಿರ ಈ ದುರಾಸೆಗೆ ಏನನ್ನೋಣ.. ಅದನ್ನೇ ಘನತೆ ಅಂತ ಭಾವಿಸೋ ತಂದೆ ತಾಯಂದಿರು, ಕೋಡು ಮೂಡಿಸಿಕೊಂಡು ಅಹಂಕಾರವನ್ನೇ ಜೀವನದ ಅವಿಭಾಜ್ಯ ಗುಣವನ್ನಾಗಿ ಬೆಳೆಸಿಕೊಳ್ಳುವ ಪುಟಾಣಿಗಳು ಇವೆಲ್ಲದರ ಫೈನಲ್ ರಿಸಲ್ಟ್ ಹತಾಶೆ, ಅವಮಾನಗಳು ಅಂದ್ರೆ ಸುಳ್ಳಾಗಲ್ಲ.

  ಸ್ವಲ್ಪ ನೆಗೆಟಿವ್ ಕಾಮೆಂಟ್ ಬಂದ್ರೆ ಸ್ಪರ್ಧೆಯಲ್ಲಿ ಸ್ವಲ್ಪ ಹಿಂದೆ ಬಿದ್ದ ಪುಟಾಣಿಗಳ ಕಣ್ಣಲ್ಲಿ ಗಂಗಾ ಕಾವೇರಿ. ಅದರ ಮೇಲೆ, "ಮತ್ತೊಬ್ಬ ಗೆದ್ದಿದ್ದು ಖುಷಿ, ಒಬ್ರು ಸೋತ್ರೆ ಮತ್ತೊಬ್ರು ಗೆಲ್ಲೋಕೆ ಸಾಧ್ಯ ತಾನೇ" ಅನ್ನೋ ಕೃತಕ ಆದರ್ಶದ ಮಾತುಗಳು. ಎಲ್ಲಾ ಹೇಳಿಕೊಟ್ಟಂಥ ಶೋಗಳಿವು.

  ಇಷ್ಟು ಸಣ್ಣ ಹಿನ್ನಡೆಯನ್ನೇ ಸಹಿಸ್ಕೊಳ್ಳದ ಮಕ್ಕಳಲ್ಲಿ ಮುಂದೆ ಜೀವನದ ಸವಾಲುಗಳನ್ನು ನಿಭಾಯಿಸುವುದಕ್ಕೆ ನಾವು ಕಲಿಸುತ್ತಿದ್ದೇವಾ.. ಊಂ... ಹೂಂ.... ಇಲ್ಲ. ಇಂಥಾ ಶೋಗಳಿಂದ ಕೇವಲ ಸ್ಪರ್ಧೆಯನ್ನು ಗೆಲ್ಲಬೇಕೆಂಬ ಹಠವನ್ನು ಮಾತ್ರ ಕಲಿಸ್ತಿದ್ದೇವೆ. ಹಾಗಾದ್ರೆ ಇಂಥದ್ದನ್ನು ಪ್ರೋತ್ಸಾಹಿಸ್ಬೇಕೇ?

  ಮಕ್ಕಳು ಅವರ ಬಾಲ್ಯದಿಂದ ವಂಚಿತರಾಗ್ತಿದ್ದಾರೆ. ಎಲ್ಲರಿಗೂ ರಿಯಾಲಿಟಿ ಶೋಗಳಲ್ಲಿ ಬಾಗವಹಿಸುವ ಹುಚ್ಚು, ಟಿವಿ ಪರದೆಗಳಲ್ಲಿ ಕಾಣಿಸಿಕೊಳ್ಳುವ ಧಾವಂತ. ಕೆಲವೊಂದ್ಸಲ ಅಪ್ರಬುದ್ಧ ತೀರ್ಪುಗಾರರೂ ಇಂಥಾ ಶೋಗಳಲ್ಲಿ ಕಾಣಿಸಿಕೊಳ್ತಾರೆ. ಈ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದೇ ಅವರ ಜೀವಮಾನದ ಸಾಧನೆ, ಅತೀ ಮಹತ್ತರ ಸರ್ಟಿಫಿಕೇಟ್ ಆಗಿಬಿಡುತ್ತೆ. ಅದಕ್ಕಾಗಿ ಪೋಷಕರು ತಮ್ಮ ಮಕ್ಕಳನ್ನು ಯಾವ ರಿಸ್ಕ್ ಗೆ ದೂಡೋದಕ್ಕೂ ರೆಡಿ. ಮಕ್ಕಳಿಗೆ ಟೆನ್ಷನ್ ನೀಡೋದಕ್ಕೂ ರೆಡಿ. ಟಿವಿಯಲ್ಲಿ ತಮ್ಮ ಮಕ್ಕಳು ಬರ್ಬೇಕು ಅನ್ನೋ ದುರಾಸೆಯಲ್ಲಿ ಮಕ್ಕಳು ಮಕ್ಕಳಾಗಿ ಬೆಳೆಯಲು ಅವಕಾಶವೇ ನೀಡೋದಿಲ್ಲ. ಇನ್ನು ತರಬೇತುದಾರರು ಮಕ್ಕಳಿಗೆ ಒತ್ತಡ ಹಾಕಿ ಮಾಡಿಸ್ತಾರೆ.

  ರಿಯಾಲಿಟಿ ಶೋಗಳಲ್ಲಿ ಬಾಗವಹಿಸಿ ಬಂದ ಮಕ್ಕಳಿಗೆ ಶಾಲೆಯಲ್ಲೂ ವಿಶೇಷ ಮನ್ನಣೆ... ಸನ್ಮಾನ. ಅಂತಹ ಮಕ್ಕಳಿಗೆ ಹಾಜರಾತಿ ನಷ್ಟವಾದ್ರೂ ವಿಶೇಷ ಪಾಠ ಹೇಳಿಕೊಡೋದು, ನೋಟ್ಸ್ ರೆಡಿ ಮಾಡಿ ಕೊಡೋದು, ಇವೆಲ್ಲಕ್ಕೂ ರೆಡಿ ಈಗಿನ ಸ್ಕೂಲ್ ಗಳು. ಇದು ಇತರ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತೆ ಅನ್ನೋ ವಿವೇಚನೆಯೂ ಇಲ್ಲ. ಇನ್ನು ಇತರೆ ಮಕ್ಕಳ ಮೇಲೆ, ತಾವೂ ಅದೇ ಮಕ್ಕಳಂತಾಗಬೇಕು ಅನ್ನೋ ಒತ್ತಡ ಒಂದ್ಕಡೆ ಆದ್ರೆ ಮತ್ತೊಂದ್ಕಡೆ ತಾವು ಅವರಷ್ಟು ಪ್ರತಿಭಾವಂತರಲ್ಲ ಅನ್ನೋ ಕೀಳರಿಮೆ, ಇತರ ಮಕ್ಕಳಲ್ಲಿ.

  ಕಿರುತೆರೆ, ಹಿರಿತೆರೆಯಲ್ಲಿ ಮಿಂಚಿ ದಿನಬೆಳಗಾಗೋದ್ರೊಳಗೇ ದುಸ್ಸಾಹಸ ಮಾಡಿಯಾದ್ರೂ ಸೆಲೆಬ್ರಿಟಿ ಆಗ್ಬೇಕು ಅನ್ನೋ ಪ್ರಚಾರದ ಹುಚ್ಚಿಗೆ, ಇಂಥಾ ಮನಃಸ್ಥಿತಿಗೆ ಕೊನೆ ಎಂದು? ಈ ಓಟ ಎಂದು ಕೊನೆಯಾಗ್ತದೆ ಅನ್ನೋ ಆತಂಕ ಸಾಮಾಜಿಕ ಚಿಂತಕರ ಮನಸಲ್ಲಿ ಮೂಡಿರೋದಂತೂ ಸುಳ್ಳಲ್ಲ.

  English summary
  Shubhashaya Jain has given their opinion on Children reality shows. Have a look.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more