ಹಿಂದಿ ಬಿಗ್ ಬಾಸ್ ಬಗ್ಗೆ ರಾಖೀ ಸಾವಂತ್ ಅಸಮಾಧಾನ!
ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎನ್ನುವ ಹೆಗ್ಗಳಿಕೆ ಬಿಗ್‌ಬಾಸ್‌ನದ್ದು. ಪ್ರತಿ ಸೀಸನ್ ಕೂಡಾ ಅನೇಕ ವಿವಾದಗಳು, ಮನೆಯಲ್ಲಿ ಸ್ಪರ್ಧಿಗಳ ನಡುವೆ ನಡೆಯುವ ಗಲಾಟೆಗಳು, ಮಾತಿನ ಚಕಮಕಿ ಹಾಗೂ ಕೆಲವೊಮ್ಮೆ ಹೊಡೆದಾಟಗಳು ಕೂಡಾ ನಡೆದು ದೊಡ್ಡ ಮಟ್ಟದಲ್ಲಿ ಸುದ್ದಿಗಳಾಗುತ್ತವೆ. ಪ್ರತಿ ಸೀಸನ್‌ನಲ್ಲೂ ಯಶಸ್ಸನ್ನು ಪಡೆಯುತ್ತಾ ಬರೋಬ್ಬರಿ ಹದಿನೈದು ಸೀಸನ್‌ಗಳ ಯಾತ್ರೆ ಮುಗಿಸಿ, ಇದೀಗ ಹದಿನೈದನೇ ಸೀಸನ್ ಕೂಡ ಕೊನೆಯಾಗಲಿದೆ. ಇನ್ನು ಬಿಗ್ ಬಾಸ್ ಮತ್ತು ಕಾಂಟ್ರವರ್ಸಿ ಕ್ವೀನ್, ಡ್ರಾಮಾ ಕ್ವೀನ್ ಹಾಗೂ ಟಿಆರ್‌ಪಿ ಕ್ವೀನ್ ಎಂದೆಲ್ಲಾ ಹೆಸರು ಪಡೆದಿರುವ ರಾಖಿ ಸಾವಂತ್‌ಗೆ ಒಂದು ವಿಶೇಷ ಸಂಬಂಧವಿದೆ.
ರಾಖಿ ಸಾವಂತ್ ಬಿಗ್ ಬಾಸ್‌ನ ಮೊದಲ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ನೀಡಿದ್ದರು. ಅನಂತರ ಬಿಗ್‌ಬಾಸ್‌ನ ಪ್ರತಿ ಸೀಸನ್‌ನಲ್ಲಿ ರಾಖಿಯನ್ನು ಅತಿಥಿಯಾಗಿ ಕರೆಸಲಾಗುತ್ತದೆ. ಅದರಲ್ಲೂ ಕಳೆದ ಕೆಲವು ಸೀಸನ್‌ಗಳಿಂದಲೂ ಬಿಗ್‌ಬಾಸ್‌ನಲ್ಲಿ ಎಂಟರ್ಟೈನ್ಮೆಂಟ್ ಕಡಿಮೆ ಆಗಿದೆ ಅಥವಾ ಟಿಆರ್‌ಪಿ ಕಡಿಮೆ ಆಗಿದೆ ಎನ್ನುವ ಸುದ್ದಿಗಳು ಬಂದ ಕೂಡಲೇ ರಾಖಿ ಸಾವಂತ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ, ವಿಐಪಿ ಕಂಟೆಸ್ಟಂಟ್ ಎಂಟ್ರಿ ಹೀಗೆಲ್ಲಾ ಮನೆಯೊಳಕ್ಕೆ ಎಂಟ್ರಿ ನೀಡಲಾಗುತ್ತದೆ.
ರಾಖಿ ಎಂಟ್ರಿ ಸಹಜವಾಗಿಯೇ ಬಿಗ್‌ಬಾಸ್‌ನಲ್ಲಿ ಹೊಸ ಸಂಚಲನಕ್ಕೆ ಕಾರಣವಾಗುತ್ತದೆ. ಈ ಬಾರಿ ಕೂಡಾ ಅಂದರೆ ಬಿಗ್‌ಬಾಸ್ ಸೀಸನ್ 15 ರಲ್ಲೂ ಕೂಡಾ ಟಿ ಆರ್ ಪಿ ಮೊದಲಿನಿಂದಲೇ ಕುಸಿದಿತ್ತು. ಎಂಟರ್ಟೈನ್ಮೆಂಟ್ ಎನ್ನುವುದು ಈ ಸೀಸನ್‌ನಲ್ಲಿ ಕಾಣೆಯಾಗಿತ್ತು. ಆಗ ಎಂದಿನಂತೆ ಬಿಗ್ ಬಾಸ್ ರಾಖೀ ಸಾವಂತ್ ಅನ್ನು ವೈಲ್ಡ್ ಕಾರ್ಡ್ ಮೂಲಕ ಮನೆಗೆ ಪ್ರವೇಶವನ್ನು ನೀಡಿತು. ಖುಷಿಯಾಗಿ ಬಂದ ರಾಖೀ ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಹೊರ ಬಂದ ಮೇಲೆ ಇದೀಗ ರಾಖೀ ಬಿಗ್ ಬಾಸ್ ಮೇಲೆ ಮೊದಲ ಬಾರಿಗೆ ತನ್ನ ಸಿಟ್ಟು, ಅಸಮಾಧಾನವನ್ನು ಹೊರ ಹಾಕಿದ್ದಾರೆ. ಹೌದು, ಬಿಗ್‌ಬಾಸ್‌ನಿಂದ ಹೊರ ಬಂದ ಮೇಲೆ ಎಂದಿನಂತೆ ಜಿಮ್‌ಗೆ ಹೋಗುತ್ತಿದ್ದ ರಾಖಿಯನ್ನು ಮಾಧ್ಯಮಗಳು ಮಾತನಾಡಿಸಿದಾಗ, ರಾಖಿ ಬಿಗ್‌ಬಾಸ್ ಬಗ್ಗೆ ಸಿಟ್ಟಿನಿಂದ, ಪ್ರತಿವರ್ಷ ನೀವು ನನಗೆ ಕರೆ ಮಾಡಿ ಶೋ ಗೆ ಕರೆಸಿಕೊಳ್ಳುತ್ತೀರಿ. ಅಲ್ಲಿ ಅಗತ್ಯಕ್ಕೆ ತಕ್ಕಂತೆ ನನ್ನನ್ನು ಬಳಸಿಕೊಳ್ಳುತ್ತೀರಿ ಎನ್ನುವುದು ಸ್ಪಷ್ಟವಾಗಿ ಇದು ತೋರಿಸುತ್ತಿದೆ.
ಕಿತ್ತಳೆ ಹಣ್ಣಿನಲ್ಲಿ ರಸ ಇರುವವರೆಗೆ ಹಿಂಡುತ್ತೀರಿ, ಅನಂತರ ಸಿಪ್ಪೆಯನ್ನು ಎಸೆಯುತ್ತೀರಿ. ಹಾಗೆ ಮನರಂಜನೆ ಅಗತ್ಯ ಇರೋವರೆಗೆ ನನ್ನನ್ನು ಬಳಸಿಕೊಂಡು, ಆಮೇಲೆ ನನ್ನನ್ನು ಹೊರಗೆ ಹಾಕುತ್ತೀರಿ. ನಾನೇನು ಕಿತ್ತಳೆ ಹಣ್ಣೋ ಅಥವಾ ಟಿಶ್ಯೂ ಪೇಪರೊ ಅಲ್ಲ. ಬಿಗ್‌ಬಾಸ್ ನಾನು ನಿಮ್ಮನ್ನು ತುಂಬಾ ಇಷ್ಟ ಪಡುತ್ತೇನೆ. ನಾನು ಟ್ರೋಫಿಗೆ ಅರ್ಹಳಾಗಿದ್ದೆ ಆದರೆ ಎಂದು ರಾಖೀ ಸಾವಂತ್ ಮಾದ್ಯಮಗಳ ಮುಂದೆ ಕಣ್ಣೀರನ್ನು ಹಾಕಿದ್ದು, ವಿಡಿಯೋ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ.

ರಾಖಿಯ ಕಣ್ಣೀರಿಗೆ ಅಭಿಮಾನಿಗಳು ಸಹಾ ಭಾವುಕರಾಗಿದ್ದಾರೆ. ಅಲ್ಲದೇ ಪ್ರತಿಕ್ರಿಯೆ ನೀಡಿದ ಕೆಲವರು ಸಹಾ , ಇದು ಮೋಸ, ಟಿ ಆರ್ ಪಿ ಕಡಿಮೆಯಾದಾಗ ರಾಖೀ ಸಾವಂತ್ ಅನ್ನು ಕರೆಸಿಕೊಳ್ಳುತ್ತಾರೆ, ಫಿನಾಲೇ ವೇಳೆಗೆ ಉಳಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಇನ್ನೂ ಕೆಲವರು ರಾಖಿ ನೀವು ಇನ್ನೊಮ್ಮೆ ಬಿಗ್‌ಬಾಸ್‌ಗೆ ಆಹ್ವಾನ ಬಂದರೆ ಅದನ್ನು ತಿರಸ್ಕರಿಸಿ, ಆ ಕಾರ್ಯಕ್ರಮಕ್ಕೆ ಹೋಗಬೇಡಿ ಎನ್ನುವ ಸಲಹೆಯನ್ನು ಸಹಾ ನೀಡಿದ್ದಾರೆ.


Click it and Unblock the Notifications











