»   » ರವಿಚಂದ್ರನ್ ಹಾಗೂ ಯಶ್ ನಡುವೆ ಮಾತಿನ ಜುಗಲ್ಬಂದಿ.!

ರವಿಚಂದ್ರನ್ ಹಾಗೂ ಯಶ್ ನಡುವೆ ಮಾತಿನ ಜುಗಲ್ಬಂದಿ.!

Posted By:
Subscribe to Filmibeat Kannada

ಇರೋದನ್ನ ಇದ್ಹಂಗೆ 'ಫಿಲ್ಟರ್' ಇಲ್ಲದೆ ನೇರವಾಗಿ ಮಾತನಾಡುವುದರಲ್ಲಿ ನಮ್ಮ ರವಿಚಂದ್ರನ್ ಎಕ್ಸ್ ಪರ್ಟ್.

ಇನ್ನೂ ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳದ ಹಾಗೆ ಯೋಚಿಸಿ ಮಾತನಾಡುವುದರಲ್ಲಿ ರಾಕಿಂಗ್ ಸ್ಟಾರ್ ಯಶ್ ಎತ್ತಿದ ಕೈ. [ಕಡೆಗೂ ತಮ್ಮ ಲವ್ ಸ್ಟೋರಿ ಸೀಕ್ರೆಟ್ ಬಿಚ್ಚಿಟ್ಟ ನಟ ಯಶ್.!]

ಇಂತಿಪ್ಪ ಇಬ್ಬರು ಒಂದೇ ವೇದಿಕೆ ಮೇಲೆ ಮಾತಿಗಿಳಿದರೆ ಹೇಗೆ.? ಈ ಐಡಿಯಾ ಕಲರ್ಸ್ ಕನ್ನಡ ವಾಹಿನಿ ಕಡೆಯವರಿಗೆ ಬಂದ ಪರಿಣಾಮ, ಕಲರ್ಸ್ ಸೂಪರ್ ಚಾನೆಲ್ ನ ಸೂಪರ್ ಡ್ಯೂಪರ್ ಲಾಂಚ್ ಕಾರ್ಯಕ್ರಮದ ವೇಳೆ ರವಿಚಂದ್ರನ್ ಹಾಗೂ ಯಶ್ ನಡುವೆ ಮಾತಿನ ಜುಗಲ್ಬಂದಿ ನಡೆಯಿತು.

ಅದರಲ್ಲಿ ತಮ್ಮ ಜೀವನದ ಬಗ್ಗೆ, ಚಿತ್ರರಂಗದಲ್ಲಿ ಸಿಕ್ಕಿರುವ ಯಶಸ್ಸಿನ ಬಗ್ಗೆ, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಬಗ್ಗೆ ಹಾಗೂ 'ರಾಮಾಚಾರಿ' ಬಗ್ಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಕೇಳಿದ ನೇರ ಪ್ರಶ್ನೆಗಳಿಗೆ ರಾಕಿಂಗ್ ಸ್ಟಾರ್ ಯಶ್ ಉತ್ತರ ನೀಡಿದರು. ಮುಂದೆ ಓದಿ....

ಕ್ರೇಜಿ ಪ್ರಶ್ನೆಗಳನ್ನು ನಿರೀಕ್ಷಿಸಿದ್ದ ಯಶ್.!

ಹೇಳಿ ಕೇಳಿ ಪ್ರಶ್ನೆ ಕೇಳುತ್ತಿರುವವರು ಕ್ರೇಜಿ ಸ್ಟಾರ್ ರವಿಚಂದ್ರನ್.! ಹೀಗಾಗಿ ಅವರಿಂದ ಬರುವ ಪ್ರಶ್ನೆಗಳು ಕೂಡ ಕ್ರೇಜಿ ಆಗಿ ಇರಲಿವೆ ಅಂತ ಯಶ್ ಊಹಿಸಿದ್ದರು.

ರವಿಚಂದ್ರನ್ ಕೇಳಿದ ಪ್ರಶ್ನೆ

''ಟೋಟಲ್ ಆಗಿ ಮೂರು ರಾಮಾಚಾರಿ. ಅದರಲ್ಲಿ ಎರಡು ರಾಮಾಚಾರಿ ನಮ್ಮ ಈಶ್ವರಿ ಪ್ರೊಡಕ್ಷನ್ಸ್ ನಿಂದ ಬಂದಿದ್ದು. ಮೂರನೇ ರಾಮಾಚಾರಿ ಜವಾಬ್ದಾರಿ ಜಾಸ್ತಿ ಇತ್ತು. ಅದೇ ಯಶಸ್ಸು ನೀನೂ ಕೊಡಬೇಕಾಗಿತ್ತು. ನೀನು ಕೊಟ್ಟಿದ್ಯಾ. ಆ ರಾಮಾಚಾರಿ ನಿನ್ನ ಜೀವನದಲ್ಲಿ ಎಷ್ಟು ಮುಖ್ಯ.?'' ಅಂತ ನಟ ಯಶ್ ಗೆ ರವಿಚಂದ್ರನ್ ಪ್ರಶ್ನೆ ಕೇಳಿದರು.

ಯಶ್ ಕೊಟ್ಟ ಉತ್ತರ

''ಮೊದಲನೆಯದ್ದಾಗಿ ತುಂಬಾ ಥ್ಯಾಂಕ್ಸ್ ಸರ್. ನನ್ನ ನಿಮ್ಮ ಲಿಸ್ಟ್ ಗೆ ಸೇರಿಸಿಕೊಂಡಿದ್ದಕ್ಕೆ. ಆ ರಾಮಾಚಾರಿ ಹುಟ್ಟಿರೋದು ನಿಮ್ಮ ಸಂಸ್ಥೆಯಿಂದ. ಮೊದಲು ವಿಷ್ಣುದಾದಾ 'ನಾಗರಹಾವು' ನಿಮ್ಮ ಪ್ರೊಡಕ್ಷನ್. ಆಮೇಲೆ ನಿಮ್ಮ 'ರಾಮಾಚಾರಿ'. ಅದೂ ಕೂಡ ಸೂಪರ್ ಡ್ಯೂಪರ್ ಹಿಟ್'' - ಯಶ್

ಪುಟ್ಟ ಹುಡುಗ ನಾನು

''ಕೆಲವೊಂದು ಹೆಸರಿಗೆ ಪಾಸಿಟೀವ್ ಎನರ್ಜಿ ಇರುತ್ತೆ ಅನ್ಸುತ್ತೆ. ವಿಷ್ಣು ಸರ್ ಇತಿಹಾಸ ನಮ್ಮೆಲ್ಲರಿಗೂ ಗೊತ್ತಿದೆ. ಇವತ್ತು ನಮ್ಮ ರಾಮಾಚಾರಿ ಹಿಟ್ ಆಗಿದೆ ಅಂದ್ರೆ ನೀವೆಲ್ಲಾ ಬೆಳಸಿದ ಮರ ಅದು. ಅದರಲ್ಲಿ ಫಲ ತೆಗೆದುಕೊಂಡಿರುವ ಒಬ್ಬ ಹುಡುಗ ನಾನು ಅಷ್ಟೇ. ರಾಮಾಚಾರಿಗೂ ನನಗೂ ಕಂಪಾರಿಸನ್ ಬೇಡ. ಇವತ್ತು ಈ ಸ್ಟೇಜ್ ಮೇಲೆ ವಿಷ್ಣುದಾದಾ ನೆನಪಿಸಿಕೊಳ್ಳುತ್ತೇನೆ'' - ಯಶ್

ರಾಮಾಚಾರಿ ಟೈಟಲ್ ಕೊಟ್ಟಿದ್ದು ರವಿಚಂದ್ರನ್

''ರಾಮಾಚಾರಿ ಟೈಟಲ್ ರವಿಚಂದ್ರನ್ ಸರ್ ಬಳಿಯೇ ಇತ್ತು. ಪರ್ಮಿಷನ್ ಇಲ್ಲದೆ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಅಂತ ಟೈಟಲ್ ಅನೌನ್ಸ್ ಆದಾಗ ಎಲ್ಲರೂ ಹೇಳಿದರು ರವಿಚಂದ್ರನ್ ಸರ್ ಬಳಿ ಟೈಟಲ್ ಇದೆ ಅಂತ. ನನಗೆ ಗೊತ್ತಿರಲಿಲ್ಲ. ಆದ್ರೆ ರವಿ ಸರ್ ನನ್ನ ಮೀಟ್ ಮಾಡಿ, ''ನನ್ನ ಫೇವರಿಟ್ ಟೈಟಲ್ ಅದು. ಟೈಟಲ್ ಗೆ ಒಂದು ಪವರ್ ಇದೆ. ಖಂಡಿತ ಕ್ಲಿಕ್ ಆಗುತ್ತೆ. ಬೇರೆ ಯಾರಿಗೂ ಬಿಡ್ತಿರ್ಲಿಲ್ಲ. ನೀನಾಗಿದ್ದಕ್ಕೆ ಬಿಟ್ಟಿದ್ದೀನಿ. ಒಳ್ಳೆಯದಾಗಲಿ'' ಅಂತ ಅವತ್ತು ಆಶೀರ್ವಾದ ಮಾಡಿದರು'' - ಯಶ್

ಗಿಮಿಕ್ ಮಾಡ್ಲಿಲ್ಲ.!

''ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸಿನಿಮಾದಲ್ಲಿ ನಾನು ಎದೆ ಮೇಲೆ ವಿಷ್ಣು ರವರ ಟಾಟ್ಯೂ ಹಾಕೊಂಡಿರ್ತೀನಿ. ಎಲ್ಲರೂ ಕೇಳ್ತಾರೆ, ಅದು ಗಿಮಿಕ್ಕಾ ಅಂತ.? ಒಬ್ಬ ಫ್ಯಾನ್ ಆಗಿ ನಾನು ಆ ಸಿನಿಮಾದಲ್ಲಿ ನಟಿಸಬೇಕು. ಫ್ಯಾನ್ಸ್ ಗೆ ನಟರೇ ದೇವರು. ದೇವರಿಗೆ ಎದೆಯಲ್ಲಿ ಸ್ಥಾನ. ಹೀಗಾಗಿ ನಾನು ಎದೆ ಮೇಲೆ ಟಾಟ್ಯೂ ಹಾಕಿಸಿದ್ದು. ವಿಷ್ಣು ಸರ್ ಗೆ ನನ್ನ ಎದೆಯಲ್ಲಿ ಸ್ಥಾನ ಇದೆ.'' - ಯಶ್

English summary
Rocking Star Yash and Crazy Star V.Ravichandran had a Chit-Chat during the Launch Program of Colors Super Channel.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X