ಮಧು-ನಿಖಿಲ್ ಹನಿಮೂನ್ ಟ್ರೋಲ್; ನೆಟ್ಟಿಗರಿಗೆ ವಿಡಿಯೋದೆ ಚಿಂತೆ!
ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತದೆ ಎಂಬ ಗಾದೆ ಮಾತಿದೆ. ಅಂದ್ರೆ ಯಾವುದೇ ವಿಚಾರವಾಗಲಿ, ಊಟವಾಗಲಿ ಇತಿಮಿತಿ ಇದ್ದರಷ್ಟೇ ಸರಿ ಎನಿಸುವುದು. ಈ ಗಾದೆ ಯಾಕಂದ್ರೆ ಒಂದು ಸುಂದರವಾದ ಜೋಡಿ ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದೆ.
ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ಮಧು, ನಿಖಿಲ್, ನಿಶಾ ಗೊತ್ತೆ ಗೊತ್ತಿರುತ್ತೆ. ಸ್ಕ್ರೋಲ್ ಮಾಡಿದ್ರೆ Instagramನಲ್ಲಿ ಅವರ ಪ್ರೊಫೈಲ್ ಒಮ್ಮೆಯಾದರೂ ಸ್ಲೈಡ್ ಆಗುತ್ತೆ. ಕಾರಣ ಅಷ್ಟು ಫಾಲೋವರ್ಸ್‌ನ ಹೊಂದಿದ್ದಾರೆ. ಜನಪ್ರಿಯತೆ ಗಳಿಸಿದ್ದಾರೆ.

ನಿಶಾ ಕಂಟೆಂಟ್ ವಿಚಾರದಲ್ಲಿ ಟ್ಯಾಲೆಂಟೆಡ್ ಇರುವವರು. ಫನ್ನಿ ಎನಿಸುವಂತ ಕಂಟೆಂಟ್‌ಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ಒಳ್ಳೊಳ್ಳೆ ಸ್ಟೆಪ್ ಹಾಕಿ ಮನರಂಜನೆ ನೀಡುತ್ತಾ ಇರುತ್ತಾರೆ. ಆದರೆ ಅದ್ಯಾಕೋ ಏನೋ ಅವರ ಅತ್ತಿಗೆ ಮಧು ಸಿಕ್ಕಾಪಟ್ಟೆ ಟ್ರೋಲ್ ಆಗ್ತಾ ಇದ್ದಾರೆ.
ತಿಂಗಳ ಕಾಲ ನಡೆದಿದ್ದ ಮದುವೆ
ನಿಖಿಲ್ ಹಾಗೂ ಮಧು ಕ್ಯೂಟ್ ಜೋಡಿ. ನಿಖಿಲ್ ಅವರ ವಿಡಿಯೋಗಳನ್ನ ನೋಡ್ತಾ ಇದ್ರೆ ಸ್ವಲ್ಪ ನಾಚಿಕೆ ಸ್ವಭಾವದ ಗುಣ ಎನಿಸುತ್ತದೆ. ರೀಲ್ಸ್ ಮಾಡುವಾಗ, ತಾಳಿ ಹಾಕುವಾಗ, ಇನ್ಯಾವುದೋ ಪೋಸ್ ಕೊಡುವಾಗಲೂ ಅದು ಎದ್ದು ಕಾಣುತ್ತದೆ. ಈ ಇಬ್ಬರ ಮದುವೆ ಬಹಳ ಅದ್ದೂರಿಯಾಗಿ ಅದರಲ್ಲೂ ಒಂದು ತಿಂಗಳು ಪ್ರಿಪರೇಷನ್‌ನಲ್ಲಿ ನಡೆದಿತ್ತು. ಸ್ವರ್ಗವನ್ನೇ ಧರೆಗಿಳಿಸಿದ್ದರು ಬಿಡಿ. ಆ ಮದುವೆ ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಅಂಬಾನಿ ಫ್ಯಾಮಿಲಿ ಬಳಿಕ ಇವರದ್ದೇ ಮದುವೆ ಇಷ್ಟೊಂದು ಅದ್ದೂರಿಯಾಗಿ ಆಗಿದ್ದು ಅಂತೆಲ್ಲ ಟ್ರೋಲ್ ಮಾಡಿದ್ದರು.
ಹನಿಮೂನ್ ಮೂಡಲ್ಲಿರುವ ಜೋಡಿ
ಮಧು-ನಿಖಿಲ್ ತಮ್ಮ ಮದುವೆಯಾದ ಒಂದೊಂದು ಮೂಮೆಂಟ್ ಅನ್ನು ತುಂಬಾನೇ ಎಂಜಾಯ್ ಮಾಡುತ್ತಿದ್ದಾರೆ. ಅದನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ದೇವಸ್ಥಾನಕ್ಕೆ ಹೋಗಿದ್ದು, ಗಂಡನ ಮನೆಯಲ್ಲಿರೋದು, ತಾಳಿ ಸರ ಹಾಕಿಸಿಕೊಂಡದ್ದು ಎಲ್ಲವೂ ವಿಡಿಯೋ ಮಾಡಿ ಹಾಕಿದ್ದಾರೆ. ಈಗ ಹನಿಮೂನ್‌ಗೆ ಹೋಗಿರುವ ವಿಡಿಯೋ, ಫೋಟೋವನ್ನು ಹಾಕಿದ್ದಾರೆ.
ಹೊಸ ವಿಡಿಯೋ
ಮದುವೆ ಆದ ಮೇಲೆ ಏಕಾಂತದಲ್ಲಿ ಒಂದಷ್ಟು ಕಾಲ ಕಳೆಯೋದಕ್ಕೆ, ಒಬ್ಬರಿಗೊಬ್ಬರು ಇನ್ನಷ್ಟು ಅರ್ಥ ಮಾಡಿಕೊಳ್ಳುವುದಕ್ಕೆ ದಂಪತಿ ಹನಿಮೂನ್ ಹೋಗುತ್ತಾರೆ. ತಿಂಗಳುಗಟ್ಟಲೆ ಮದುವೆ ಬ್ಯುಸಿಯಲ್ಲಿದ್ದ ಮಧು ಹಾಗೂ ನಿಖಿಲ್ ಕೂಡ ಹನಿಮೂನ್ ಹೋಗಿದ್ದಾರೆ. ಅಲ್ಲಿಯೂ ಒಂದಷ್ಟು ಫೋಟೋಸ್ ತೆಗೆಸಿಕೊಂಡಿದ್ದನ್ನು ಹಾಕಿದ್ದಾರೆ, ಉಳಿದುಕೊಂಡಿದ್ದ ರೂಮ್‌ನಲ್ಲಿ ವಿಡಿಯೋ ಮಾಡಿ ಕೂಡ ಹಾಕಿದ್ದಾರೆ. ಅಂದ್ರೆ ಅದೊಂದು ತರ ರೂಮ್ ಟೂರ್ ಇದ್ದಂಗೆ. ಆ ವಿಡಿಯೋನಲ್ಲಿ ಈ ಹನಿಮೂನ್‌ಗಿಂತ ದೊಡ್ಡ ಹನಿಮೂನ್ ಇದೆ ಎಂದೇ ಹೇಳಿದ್ದಾರೆ.
ವಿಡಿಯೋ ಬಗ್ಗೆನೇ ಕಮೆಂಟ್ಸ್
ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ಸ್ ಆದ್ಮೇಲೆ, ಸಿನಿಮಾ ಸ್ಟಾರ್‌ಗಳಾದ ಮೇಲೆ ಟ್ರೋಲರ್ಸ್‌ಗೆ ಹೇಗೆ ಬೇಕೋ ಹಾಗೇ ಟ್ರೋಲ್ ಮಾಡೋದಕ್ಕೆ ಈಸಿಯಾಗಿ ಸಿಗುವುದು ಇವರೇ. ಆದರೆ ಯೂಟ್ಯೂಬ್ ಶುರು ಮಾಡಿದ ಮೇಲೆ, ಸೋಷಿಯಲ್ ಮೀಡಿಯಾದಲ್ಲಿ ವೀವ್ಸ್‌ಗೆಂದು ವಿಡಿಯೋ ಎಲ್ಲಾ ಕಡೆ ಮಾಡುವುದಕ್ಕೆ ಹೋದಾಗ ಒಂದಷ್ಟು ಕೆಟ್ಟ ಕಮೆಂಟ್‌ಗಳಿಗೆ ಗುರಿಯಾಗಬೇಕಾಗುತ್ತದೆ. ಈಗ ಮಧು-ನಿಖಿಲ್ ಹನಿಮೂನ್ ವಿಚಾರವೂ ಅದೇ ಆಗಿದೆ. ಹನಿಮೂನ್ ಹೋಗಿರುವ ವಿಡಿಯೋ, ಫೋಟೋ ಕೆಳಗೆ ಬಂದಿರುವ ಅತಿ ಹೆಚ್ಚು ಕಮೆಂಟ್ ಅಂದ್ರೆ ವಿಡಿಯೋ HD ಕ್ವಾಲಿಟಿ ಇರಲಿ ಎಂದು.


Click it and Unblock the Notifications











