Exclusive: ಬಿಗ್‌ಬಾಸ್ ಪ್ರಿಯರಿಗೆ 'ಬಿಗ್' ಶಾಕ್, 2020ರಲ್ಲಿ ಇರಲ್ಲ 'ದೊಡ್ಮನೆ ಆಟ'

ಕನ್ನಡ ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕುರಿತು ಎಕ್ಸ್ ಕ್ಲೂಸಿವ್ ಮಾಹಿತಿ ಫಿಲ್ಮಿಬೀಟ್‌ಗೆ ಸಿಕ್ಕಿದೆ. ಈಗಾಗಲೇ ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 4 ಆರಂಭವಾಗಿದೆ. ಹಿಂದಿಯಲ್ಲಿ ಹೊಸ ಆವೃತ್ತಿಗೆ ಎಲ್ಲ ತಯಾರಿ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ.

Recommended Video

BiggBoss ಗೆ ಈ ವರ್ಷ ಫುಲ್ ಸ್ಟಾಪ್ | Filmibeat Kannada

ಈ ಕಡೆ ಕನ್ನಡ ಬಿಗ್ ಬಾಸ್ ಯಾವಾಗ ಆರಂಭವಾಗುತ್ತೆ, ಈ ಸಲ ದೊಡ್ಮನೆಗೆ ಯಾರೆಲ್ಲ ಸೆಲೆಬ್ರಿಟಿಗಳು ಹೋಗಬಹುದು ಎಂಬ ಲೆಕ್ಕಾಚಾರ ಹಾಗೂ ಚರ್ಚೆಗಳು ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಗಿದೆ. ಈ ಮಧ್ಯೆ ಬಿಗ್ ಬಾಸ್ ಕನ್ನಡ ಪ್ರಿಯರಿಗೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಮುಂದೆ ಓದಿ...

2020ರಲ್ಲಿ ಬಿಗ್ ಬಾಸ್ ಇರಲ್ಲ

2020ರಲ್ಲಿ ಬಿಗ್ ಬಾಸ್ ಇರಲ್ಲ

ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ತಿಂಗಳಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8 ಆರಂಭವಾಗಬೇಕಿತ್ತು. ಕೊರೊನಾ ವೈರಸ್‌ ಕಾರಣದಿಂದ ಈ ಹಿಂದಿನ ಎಲ್ಲ ಯೋಜನೆಗಳು ತಲೆಕೆಳಗಾದವು. ಸದ್ಯದ ಸಿನಿಮಾ ಶೂಟಿಂಗ್, ಧಾರಾವಾಹಿ ಚಿತ್ರೀಕರಣ, ರಿಯಾಲಿಟಿ ಶೋ ಕಾರ್ಯನಿರ್ವಹಿಸಲು ಸರ್ಕಾರ ಅನುಮತಿ ನೀಡಿದೆ. ಹಾಗಾಗಿ, ಬಿಗ್ ಬಾಸ್ ಸಹ ಆರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ವರ್ಷ ಕನ್ನಡ ಬಿಗ್ ಬಾಸ್ ನಡೆಯಲ್ಲ ಎಂಬ ವಿಚಾರ ಹೊರಬಿದ್ದಿದೆ.

ಮೂರು ಅಥವಾ ನಾಲ್ಕು ತಿಂಗಳು ಆಗಲ್ಲ

ಮೂರು ಅಥವಾ ನಾಲ್ಕು ತಿಂಗಳು ಆಗಲ್ಲ

ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ''ಇನ್ನು ಮೂರು ಅಥವಾ ನಾಲ್ಕು ತಿಂಗಳು ಬಿಗ್ ಬಾಸ್ ಮಾಡೋಕೆ ಆಗಲ್ಲ. ಅದಕ್ಕೆ ಇನ್ನೂ ಹೆಚ್ಚು ಸಮಯ ಬೇಕು. ಸದ್ಯಕ್ಕೆ 2020ರಲ್ಲಿ ಶೋ ಅಂತೂ ಪಕ್ಕಾ ಇರಲ್ಲ''.

ಪರಮೇಶ್ವರ ಗುಂಡ್ಕಲ್ ಏನಂದ್ರು?

ಪರಮೇಶ್ವರ ಗುಂಡ್ಕಲ್ ಏನಂದ್ರು?

ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಸದ್ಯಕ್ಕೆ ನಡೆಯಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಆಯೋಜಕ ಪರಮೇಶ್ವರಂ ಗುಂಡ್ಕಲ್ ಅವರನ್ನು ಸಂಪರ್ಕಿಸಿದ ವೇಳೆ ''ಸದ್ಯಕ್ಕೆ ಬಿಗ್ ಬಾಸ್ ಕುರಿತು ನಾನು ಮಾತನಾಡಲ್ಲ'' ಎಂದು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

2021ಕ್ಕೆ ಬಿಗ್ ಬಾಸ್!

2021ಕ್ಕೆ ಬಿಗ್ ಬಾಸ್!

ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ 2020ರಲ್ಲಿ ಬಿಗ್ ಬಾಸ್ ನಡೆಯಲ್ಲ. ಮೂರು ಅಥವಾ ನಾಲ್ಕು ತಿಂಗಳು ಆಗಲ್ಲ ಎಂದು. ಅಂದ್ರೆ, ನಾಲ್ಕೈದು ತಿಂಗಳ ಬಳಿಕ ಬಿಗ್ ಬಾಸ್ ಸೀಸನ್ 8 ಆಯೋಜಿಸಬಹುದು. 2021ರ ಆರಂಭದ ತಿಂಗಳಿನಲ್ಲಿ ಶೋ ನಡೆದರೂ ನಡೆಯಬಹುದು. ಇಂತಹದೊಂದು ಅನುಮಾನ ಸಹಜವಾಗಿ ಕಾಡುತ್ತಿದೆ.

ಸುದೀಪ್ ಸಹ ಬ್ಯುಸಿ!

ಸುದೀಪ್ ಸಹ ಬ್ಯುಸಿ!

ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಸದ್ಯಕ್ಕೆ ರದ್ದಾಗಲು ಕೊರೊನಾ ವೈರಸ್ ಪ್ರಮುಖ ಕಾರಣ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಮತ್ತೊಂದೆಡೆ ಕಿಚ್ಚ ಸುದೀಪ್ ಸಹ ಬ್ಯುಸಿ ಶೆಡ್ಯೂಲ್‌ನಲ್ಲಿದ್ದಾರೆ. ಹೈದರಾಬಾದ್‌ನಲ್ಲಿ 'ಫ್ಯಾಂಟಮ್' ಸಿನಿಮಾ ಚಿತ್ರೀಕರಣ ಮಾಡ್ತಿದ್ದಾರೆ. ಕೋಟಿಗೊಬ್ಬ 3 ರಿಲೀಸ್‌ಗೆ ರೆಡಿಯಾಗಿದೆ.

More from Filmibeat

English summary
Due to Covid-19, Bigg Boss Kannada Season 8, have decided to discontinue the show this year. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X