ಬಿಗ್ ಬಾಸ್ ಸ್ಫರ್ಧಿಯ ದಾಂಪತ್ಯದಲ್ಲಿ ಬಿರುಗಾಳಿ, ಪ್ರತ್ಯೇಕವಾಗಿ ವಾಸ ಮಾಡುತ್ತಿರುವ ನಟಿ..!
ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.
ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಐಶ್ವರ್ಯ ಶರ್ಮಾ ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

ಹೌದು, ಐಶ್ವರ್ಯ ಶರ್ಮಾ- ನೀಲ್ ಭಟ್.. ಹಿಂದಿ ಕಿರುತೆರೆಯ ಖ್ಯಾತ ಜೋಡಿ. 'ಘುಮ್ ಹೈ ಕಿಸಿಕೇ ಪ್ಯಾರ್ ಮೇ' ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದವರು ಇಬ್ಬರು. ಧಾರಾವಾಹಿಯಲ್ಲಿ ಅಭಿನಯಿಸುತ್ತಲೇ ಪ್ರೀತಿಯಲ್ಲಿ ಬಿದ್ದು ಆ ನಂತರ 2021ರಲ್ಲಿ ಮದುವೆಯಾದ ಇಬ್ಬರು ಬಿಗ್ ಬಾಸ್ ಮನೆಯನ್ನು ಕೂಡ ಒಟ್ಟಿಗೆ ಪ್ರವೇಶಿಸಿದ್ದರು. ಹಿಂದಿಯ ಬಿಗ್ ಬಾಸ್ ಸೀಸನ್ 17ರಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದರು.
ಇಂಥಾ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೀಗೊಂದು ಸುದ್ದಿ ಸದ್ಯ ಹಿಂದಿ ಕಿರುತೆರೆಯಲ್ಲಿ ಓಡಾಡುತ್ತಿದೆ. ಇದಕ್ಕೆ ಪೂರಕವಾಗಿ ಐಶ್ವರ್ಯ ಶರ್ಮಾ ಗಂಡನಿಂದ ದೂರವಾಗು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಮಲಾಡ್‌ನಲ್ಲೊಂದು ಮನೆಯನ್ನು ಕೂಡ ಖರೀದಿಸಿದ್ದಾರೆ. ಹೀಗಾಗಿಯೇ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿರುವುದು ನಿಜಾ ಎಂದು ಅನೇಕರು ಅಂದುಕೊಂಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಐಶ್ವರ್ಯ ಶರ್ಮಾ ಮಾತನಾಡಿದ್ದಾರೆ. ಸ್ಪಷ್ಟೀಕರಣ ನೀಡಿದ್ದಾರೆ. ಹೌದು, ಎಂಟ್ರಟೈನ್ಮೆಂಟ್ ನ್ಯೂಸ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಐಶ್ವರ್ಯ ಶರ್ಮಾ ಸಂಸಾರ ಅಂದ ಮೇಲೆ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತಾವೆ, ಎಲ್ಲರಂತೆ ನಮ್ಮ ಸಂಸಾರದಲ್ಲಿ ಕೂಡ ಇವೆ ಎಂದು ಹೇಳಿದ್ದಾರೆ.
ಹಾಗಂಥ ವಿಚ್ಛೇದನ ಪಡೆಯುವಷ್ಟು ನಮ್ಮ ನಡುವೆ ಜಗಳಗಳಾಗಿಲ್ಲ ಎಂದಿರುವ ಐಶ್ವರ್ಯ ಶರ್ಮಾ ನೀಲ್ ಮತ್ತು ನಾನು ಬಹಳ ಸಮಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿಲ್ಲ, ಇದರರ್ಥ ನಮ್ಮ ನಡುವೆ ಎಲ್ಲವೂ ಸರಿಯಾಗಿಲ್ಲ ಎಂದಲ್ಲ ಎಂದು ಕೂಡ ಹೇಳಿದ್ದಾರೆ. ಮುಂದುವರೆದು ನಾನು ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದ ದಿನದಿಂದ ಈ ಸುದ್ದಿ ಚಾಲ್ತಿಯಲ್ಲಿದೆ ಎಂದು ಹೇಳಿರುವ ಐಶ್ವರ್ಯ ಶರ್ಮಾ ಕೆಲಸದ ಪ್ರಯುಕ್ತ ನನಗೆ ನನ್ನದೇ ಆದ ಸ್ಥಳ ಬೇಕಿತ್ತು, ಮನೆಯಲ್ಲಿ ಫೋಟೊಶೂಟ್ ಮಾಡಿಸಲು ಅಥವಾ ಬೇರೆ ಯಾವುದೇ ಕೆಲಸವನ್ನು ಮಾಡುವುದು ಕಷ್ಟ ಎಂದು ಹೇಳಿದ್ದಾರೆ. ಬೇರೆ ಮನೆಯನ್ನು ಮಾಡಲು ಇದೇ ಪ್ರಮುಖ ಕಾರಣ ಇದನ್ನು ಹೊರತು ಪಡಿಸಿದರೆ ಬೇರೆ ಯಾವ ಕಾರಣ ಕೂಡ ಇಲ್ಲ ಎಂದು ಹೇಳಿದ್ದಾರೆ.
ಅಂದ್ಹಾಗೇ ಬಿಗ್ ಬಾಸ್ 17ನೇ ಸೀಸನ್‌ನಲ್ಲಿ ಗಂಡ ಹೆಂಡತಿಯಾದ ನಂತರ ಭಾಗವಹಿಸಿದ್ದ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್, ಹೆಚ್ಚು ಕಡಿಮೆ ಹನ್ನೊಂದು ವಾರ ಮನೆಯಲ್ಲಿ ಜೊತೆಯಾಗಿಯೇ ಇದ್ದರು. 70ನೇ ದಿನಕ್ಕೆ ಮನೆಯಿಂದ ಐಶ್ವರ್ಯ ಶರ್ಮಾ ಹೊರ ಬಂದರೆ ಆ ನಂತರ ನೀಲ್ ಭಟ್ ಮನೆಯಿಂದ ಎಲಿಮಿನೇಟ್ ಆಗಿದ್ದರು.


Click it and Unblock the Notifications











