ಯಶ್ ಎಂಟ್ರಿ? ಐಟಂ ಸಾಂಗ್? ಅಬ್ಬಬ್ಬಾ 'ಸಲಾರ್' ಬಗ್ಗೆ ಗಾಸಿಪ್ಸ್ ಒಂದಾ ಎರಡಾ? ನಿಜವಾಗಿದ್ದೆಷ್ಟು?
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಜೋಡಿಯ 'ಸಲಾರ್' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಕ್ರಿಸ್‌ಮಸ್ ವೀಕೆಂಡ್‌ನಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಬ್ಯುಸಿನೆಸ್ ಮಾಡು ಸುಳಿವು ಸಿಕ್ತಿದೆ. 2 ದಿನಕ್ಕೆ ಸಿನಿಮಾ ಗ್ರಾಸ್ ಕಲೆಕ್ಷನ್ 300 ಕೋಟಿ ರೂ. ಗಡಿ ಸಮೀಪದಲ್ಲಿದೆ. ಬಾಕ್ಸಾಫೀಸ್‌ನಲ್ಲಿ ಪ್ರಭಾಸ್ ಆರ್ಭಟ ಮುಂದುವರೆದಿದೆ.
ದೊಡ್ಡ ದೊಡ್ಡ ಸಿನಿಮಾಗಳ ವಿಚಾರದಲ್ಲಿ ಸಾಕಷ್ಟು ಊಹಾಪೋಹ, ಗಾಳಿಸುದ್ದಿ ಕೇಳಿಬರುತ್ತವೆ. ಅದರಲ್ಲಿ ಕೆಲವು ವದಂತಿಗಳಿಗೆ ಸಿನಿಮಾ ಬಿಡುಗಡೆಗೂ ಮೊದ್ಲೆ ಸ್ಪಷ್ಟನೆ ಸಿಕ್ಕಿಬಿಡುತ್ತದೆ. ಆದರೆ ಮತ್ತೆ ಕೆಲವು ಸುದ್ದಿಗಳಿಗೆ ತೆರೆಮೇಲೆ ಉತ್ತರ ಸಿಗುತ್ತದೆ. 'ಸಲಾರ್' ಸಿನಿಮಾ ಬಗ್ಗೆಯೂ ಸಾಕಷ್ಟು ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಅದರಲ್ಲಿ ಬಹುತೇಕ ಸುಳ್ಳು ಎನ್ನುವುದು ಸಿನಿಮಾ ರಿಲೀಸ್ ಬಳಿಕ ಗೊತ್ತಾಗಿದೆ.

1. 'ಉಗ್ರಂ' ರೀಮೆಕ್
'ಸಲಾರ್' ಸಿನಿಮಾ ಸೆಟ್ಟೇರಿದ ದಿನದಿಂದಲೂ ಇದು 'ಉಗ್ರಂ' ರೀಮೆಕ್ ಎನ್ನುವ ಗುಸುಗುಸು ಶುರುವಾಗಿತ್ತು. ಒಮ್ಮೆ ಸಂಗೀತ ನಿರ್ದೇಶಕ ರವಿಬಸ್ರೂರು ಹೇಳಿದ ಮೇಲೆ ಮತ್ತಷ್ಟು ಖಚಿತವಾಗಿತ್ತು. ಟ್ರೈಲರ್ ರಿಲೀಸ್ ಆದಾಗಲೇ ಇದು ಸ್ಪಷ್ಟವಾಗಿತ್ತು. ಇನ್ನು ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಇದನ್ನು ಒಪ್ಪಿಕೊಂಡರು.
2. 'KGF' ಲಿಂಕ್, ಯಶ್ ಕೆಮಿಯೊ
ಹೌದು. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಕಥೆಗೂ 'KGF' ಸರಣಿಗೂ ಲಿಂಕ್ ಇದೆ ಎನ್ನುವ ಸುದ್ದಿ ಭಾರೀ ಚರ್ಚ ಹುಟ್ಟಾಕ್ಕಿತ್ತು. ಯಶ್ ಸಿನಿಮಾ ಮುಹೂರ್ತ ಸಮಾರಂಭಕ್ಕೆ ಹಾಜರಾಗಿದ್ದು ಮತ್ತಷ್ಟು ಇಂಬು ನೀಡಿತ್ತು. ಆದರೆ ಚಿತ್ರತಂಡ ಮಾತ್ರ ಇದನ್ನು ಎಲ್ಲೂ ಹೇಳಿರಲಿಲ್ಲ. ಯಶ್ 'ಸಲಾರ್' ಪ್ರಭಾಸ್ ಜೊತೆ ರಾಕಿ ಭಾಯ್ ಆಗಿ ಕಾಣಿಸಿಕೊಳ್ಳುತ್ತಾರೆ. ಚಿತ್ರೀಕರಣ ನಡೀತಿದೆ. ಇಬ್ಬರು ಸ್ಕ್ರೀನ್ ಶೇರ್ ಮಾಡಿಕೊಂಡಿರೋದು ಸೂಪರ್ ಅಂತೆಲ್ಲಾ ಊಹಾಪೋಹ ಕೇಳಿಬಂದಿತ್ತು. ಆದರೆ ಸಿನಿಮಾ ಪ್ರಶಾಂತ್ ನೀಲ್ ಇತ್ತೀಚೆಗೆ ಇದೆಲ್ಲಾ ಸುಳ್ಳು ಎಂದಿದ್ದರು. ಎರಡೂ ಬೇರೆ ಬೇರೆ ಕಾಲಘಟ್ಟದ ಕಥೆ ಎಂದಿದ್ದರು. ಆದರೂ ಕೂಡ ಕೆಲವರು ಸಿನಿಮಾ ನೋಡುವವರೆಗೂ ಇದನ್ನು ಒಪ್ಪಲು ಸಿದ್ಧರಿರಲಿಲ್ಲ.
3. 'KGF'-2 ಫರ್ಮಾನ್ ಈಗ ಸಲಾರ್
ಚಿತ್ರರಂಗದಲ್ಲಿ ಗಾಳಿಸುದ್ದಿಗಳು ಅದು ಹೇಗೆ ಹುಟ್ಟಿಕೊಳ್ಳುತ್ತದೆ ಎನ್ನುವುದೇ ಗೊತ್ತಾಗಲ್ಲ. ಎಲ್ಲಿಂದ ಎಲ್ಲಿಗೂ ಲಿಂಕ್ ಮಾಡಿ ಏನೇನೋ ಕಲ್ಪಿಸಿಕೊಂಡು ಸುದ್ದಿಗಳನ್ನು ತೇಳಿಬಿಡುತ್ತಾರೆ. KGF- 2 ಚಿತ್ರದಲ್ಲಿ ಶರಣ್ ಶಕ್ತಿ ಫರ್ಮಾನ್ ಎನ್ನುವ ಪಾತ್ರ ಮಾಡಿದ್ದರು. ಆತನ ತಾಯಿ ಪಾತ್ರದಲ್ಲಿ ಈಶ್ವರಿ ರಾವ್ ಮಿಂಚಿದ್ದರು. ಆದರೆ ಅದೇ ಫರ್ಮಾನ್ ಈ 'ಸಲಾರ್' ಎನ್ನುವ ಊಹಾಪೋಹ ಕೂಡ ಶುರುವಾಗಿತ್ತು. ಹಾಗಾಗಿ ರಾಕಿಭಾಯ್ ಕೂಡ 'ಸಲಾರ್' ಇರ್ತಾನೆ ಎನ್ನುವ ವಾದವನ್ನು ಕೆಲವರು ಮುಂದಿಟ್ಟಿದ್ದರು.
4. ಐಟಂ ಸಾಂಗ್
ಕಮರ್ಷಿಯಲ್ ಸಿನಿಮಾಗಳಲ್ಲಿ ಐಟಂ ಸಾಂಗ್ ಇರಬೇಕು ಎನ್ನುವ ಅಲಿಖಿತ ನಿಯಮವೊಂದು ಚಿತ್ರರಂಗದಲ್ಲಿದೆ. 'KGF' ಮೊದಲ ಭಾಗದಲ್ಲಿ ತಮನ್ನಾ ಹೆಜ್ಜೆ ಹಾಕಿದ್ದರು. ಅದೇ 'ಸಲಾರ್' ಚಿತ್ರದಲ್ಲಿ ಒಂದು ಸ್ಪೆಷಲ್ ಸಾಂಗ್ ಇದೆ. ಇಟಲಿಯಿಂದ ಬಂದ ಕೂಡಲೇ ಪ್ರಭಾಸ್ ಹಾಡಿನ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿತ್ತು. ಸಿಮ್ರನ್ ಕೌರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ ಎನ್ನಲಾಗಿತ್ತು. ಆದರೆ ಚಿತ್ರದಲ್ಲಿ ಅಂತಹ ಹಾಡು ಇಲ್ಲ.
5. ಪ್ರಭಾಸ್ ಡಬಲ್ ರೋಲ್
'ಸಲಾರ್' ಚಿತ್ರದಲ್ಲಿ ಪ್ರಭಾಸ್ ತಂದೆ ಮಗನಾಗಿ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ ಎನ್ನುವ ಸುದ್ದಿ ಭಾರೀ ಚರ್ಚೆಯಾಗಿತ್ತು. ಪ್ರಭಾಸ್ ಅಭಿಮಾನಿಯೊಬ್ಬರು ನಾನು ಸಿನಿಮಾ ಶೂಟಿಂಗ್ ನೋಡಿದ್ದೆ. ಪ್ರಭಾಸ್ ತಂದೆ ಮಗನಾಗಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ನಟಿಸಿದ್ದು ಕಣ್ಣಾರೆ ಕಂಡೆ ಎಂದು ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಚಿತ್ರದಲ್ಲಿ ಪೃಥ್ವಿರಾಜ್ ತಂದೆ, ಮಗನಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಅಲ್ಲ.


Click it and Unblock the Notifications











