ಕಥಾಬ್ರಹ್ಮರು ಮಾಡಿದ ಷಡ್ಯಂತ್ರ ; ಲಲಿತಾ ಪಾತ್ರ ದಿಢೀರ್ ಅಂತ್ಯ - 'ಲಕ್ಷ್ಮೀ ನಿವಾಸ' ವಿರುದ್ದ ವಿಜಯಲಕ್ಷ್ಮೀ ಆಕ್ರೋಶ
ಕಿರುತೆರೆಯಲ್ಲಿ ಯಾವುದೇ ಧಾರಾವಾಹಿ ಇರಲಿ, ಆ ಧಾರಾವಾಹಿಯ ಪಾತ್ರಗಳ ಜೊತೆ ಪ್ರೇಕ್ಷಕರು ಭಾವನಾತ್ಮಕವಾಗಿ ಬೆಸದುಕೊಂಡರೆ ಆ ಧಾರಾವಾಹಿ ಗೆದ್ದಂತೆ ಎನ್ನುವ ಮಾತು ಇದೆ. ಇದು ಎಷ್ಟರ ಮಟ್ಟಿಗೆ ನಿಜಾ ಎನ್ನುವುದು ಕಿರುತೆರೆಯವರಿಗೆ ಗೊತ್ತಾದರು ಹಲವರು ಬಾರಿ ಆ ಪಾತ್ರಗಳನ್ನು ಮತ್ತು ಆ ಪಾತ್ರಧಾರಿಗಳನ್ನು ಹಲವರು ಮನೆಯ ಸದಸ್ಯರಂತೆ ನೋಡುತ್ತಾರೆ. ಪ್ರೀತಿ ಮಾಡುತ್ತಾರೆ. ಇನ್ನೂ ಕೆಲ ಒಮ್ಮೆ ದ್ವೇಷವನ್ನು ಕೂಡ ಮಾಡುತ್ತಾರೆ.
ಆದರೆ.. ಹೀಗೆ ಬೆಸೆದ ಸಂಬಂಧ ಕೆಲ ಒಮ್ಮೆ ಅರ್ಧಕ್ಕೆ ಕಳಚಿ ಬಿದ್ದಿದ್ದು ಇದೆ. ಹಲವರು ವ್ಯೆಯಕ್ತಿಕ ಕಾರಣ ನೀಡಿ ಧಾರಾವಾಹಿಯಿಂದ ಏಕಾಏಕಿ ಹೊರ ಬರುತ್ತಾರೆ. ಇನ್ನೂ ಕೆಲವರು ಬೇರೆ ಯಾವುದೋ ಕಾರಣಕ್ಕೋ ಅಥವಾ ಅನಾರೋಗ್ಯದಿಂದಾಗಿಯೋ, ಮನಸಿಲ್ಲದಿದ್ದರೂ ಧಾರಾವಾಹಿಯನ್ನು ಕೈ ಬಿಡುತ್ತಾರೆ. ಹೀಗೆ ದಿನ ನಿತ್ಯ ಕಣ್ಣೆದುರು ಬರುವ ಚಿರಪರಿಚಿತ ಮುಖ ಏಕಾಏಕಿ ಕಾಣಿಸದಿದ್ದಾಗ, ಪಾತ್ರಧಾರಿ ಬದಲಾದಾಗ ಪ್ರೇಕ್ಷಕರಿಗೆ ನಿರಾಸೆಯಾಗುತ್ತೆ. ಕೆಲ ಒಮ್ಮೆ ಚೆನ್ನಾಗಿ ಪ್ರಸಾರವಾಗುತ್ತಿದ್ದ ಧಾರಾವಾಹಿ ಕೂಡ ಮಕಾಡೆ ಮಲಗುತ್ತೆ.

ಇನ್ನೂ ಇಲ್ಲಿ ಪಾತ್ರಧಾರಿಗಳನ್ನು ಹೇಗೆ ಬದಲಿಸಲಾಗುತ್ತೋ ಅದೇ ತರ ಆ ಪಾತ್ರಗಳನ್ನು ಏಕಾಏಕಿ ಅಂತ್ಯಗೊಳಿಸಲಾಗುತ್ತೆ. ಅದರಲ್ಲಿಯೂ ಕನ್ನಡದಲ್ಲಿ ಸದ್ಯ ಇದೇ ಟ್ರೆಂಡ್‌ಗೆ ಭಾರೀ ಬೇಡಿಕೆ ಇದ್ದಂತೆ ಇದೆ. ಕಥೆಯ ಜೀವನಾಡಿಯಂತೆ ಇದ್ದ ಪಾತ್ರವನ್ನು ದೀಢಿರನೆ ಸಾಯಿಸಲಾಗುತ್ತಿದೆ.
ನಿಜಾ.. ಎಲ್ಲವೂ ಆ ತಂಡದ ನಿರ್ದೇಶಕನ ನಿರ್ಧಾರ. ಆ ತಂಡದ ನಿರ್ಧಾರ. ಆದರೆ.. ಈ ನಿರ್ಧಾರಗಳು ಕೆಲ ಒಮ್ಮೆ ಪ್ರಶ್ನೆ ಹುಟ್ಟು ಹಾಕುತ್ತವೆ. ವಿವಾದಕ್ಕೆ ಕೂಡ ನಾಂದಿ ಹಾಡುತ್ತವೆ. ಧಾರಾವಾಹಿಯಲ್ಲಿನ ವಾತಾವರಣ ಹಾಳಾಗಿದೆಯಾ ಎನ್ನುವ ಅನುಮಾನಕ್ಕೆ ಕೂಡ ಕಾರಣವಾಗುತ್ತವೆ. ಸದ್ಯ ''ಲಕ್ಷ್ಮೀ ನಿವಾಸ'' ಧಾರಾವಾಹಿ ವಿಚಾರದಲ್ಲಿ ಇದೇ ಆಗಿದೆ.
ಹೌದು, ''ಲಕ್ಷ್ಮೀ ನಿವಾಸ''.. ಜೀ ಕನ್ನಡದ ಜನಪ್ರಿಯ ಧಾರಾವಾಹಿ. ಟಿಆರ್‌ಪಿ ರೇಸ್‌ನಲ್ಲಿ ಕೂಡ ಮುಂಚೂಣಿಯಲ್ಲಿರುವ ಧಾರಾವಾಹಿ ಇದು. ಆದರೆ. ವಿಪರ್ಯಾಸ ಇದರ ಹೊರತಾಗಿಯೂ ಈ ಧಾರಾವಾಹಿ ಮೊದಲಿಂದ ವಿವಾದದ ಕೇಂದ್ರ ಬಿಂದುವಾಗುತ್ತಲೇ ಬಂದಿದೆ.
ಏಕಾಏಕಿ ಈ ಧಾರಾವಾಹಿಯಲ್ಲಿ ಪಾತ್ರಧಾರಿಗಳನ್ನು ಬದಲಿಸಲಾಗುತ್ತಿದೆ. ಯಾಕೆ ಹೀಗೆ..? ಗೊತ್ತಿಲ್ಲ. ಆದರೆ ಧಾರಾವಾಹಿಯಿಂದ ಹೊರ ಬಂದ ನಟಿಯರು ತಂಡದ ವಿರುದ್ದ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಕೂಡ ಹೊರ ಹಾಕುತ್ತಿದ್ದಾರೆ. ಇದಕ್ಕೆ ಇನ್ನೊಂದು ಉದಾಹರಣೆ ಎನ್ನುವಂತೆ ಶ್ವೇತಾ ಮತ್ತು ಅಂಜಲಿ ಅವರ ಬೆನ್ನಲ್ಲಿಯೇ ಈ ಧಾರಾವಾಹಿಯಿಂದ ನಿರ್ಗಮಿಸಿರುವ ವಿಜಯಲಕ್ಷ್ಮೀ ಸುಬ್ರಮಣಿ ಸದ್ಯ ಈ ತಂಡದ ವಿರುದ್ಧ ತಮ್ಮ ಆಕ್ರೋಶವನ್ನು ಸೋಶಿಯಲ್ ಮೀಡಿಯಾ ಮೂಲಕ ಹೊರ ಹಾಕಿದ್ದಾರೆ.

ಹೌದು, ಅಸಲಿಗೆ ವಿಶ್ವನ ತಾಯಿ ಪಾತ್ರವನ್ನು ವಿಜಯಲಕ್ಷ್ಮೀ ಸುಬ್ರಮಣಿ ನಿರ್ವಹಿಸುತ್ತಿದ್ದರು. ಆದರೆ ಪ್ರಮುಖ ಘಟ್ಟ ತಲುಪಿದ ಸಮಯದಲ್ಲಿಯೇ ಈ ಪಾತ್ರವನ್ನು ಈಗ ಸಾಯಿಸಲಾಗಿದೆ. ಹೇಳದೇ ಕೇಳದೇ ತಮ್ಮ ಪಾತ್ರ ಅಂತ್ಯಗೊಳಿಸಿದ್ದಕ್ಕೆ ಸಹಜವಾಗಿಯೇ ವಿಜಯಲಕ್ಷ್ಮೀ ಬೇಸರ ಮಾಡಿಕೊಂಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಿಜಯಲಕ್ಷ್ಮಿ ಸುಬ್ರಮಣಿ ಇದು ಎಷ್ಟು ಸರಿ? ಒಂದು ಒಳ್ಳೆ ಪಾತ್ರವನ್ನ ಸುಖಾಸುಮ್ಮನೆ ಸಾಯಿಸೋದು? ಎಂದು ಪ್ರಶ್ನೆ ಮಾಡಿದ್ದಾರೆ. ಈ ಧಾರಾವಾಹಿ ಕಥೆ ಮಾಡುವವರ ಪಾಂಡಿತ್ಯ ನಿಪುಣತೆಗೆ ಕನ್ನಡಿ ಹಿಡಿದಿದೆ ಎಂದು ವ್ಯಂಗ್ಯ ಮಾಡಿದ್ದಾರೆ. ಇಷ್ಟೇ ಅಲ್ಲ ತಮ್ಮೊಂದಿಗೆ ಯಾವುದೇ ಚರ್ಚೆ ಮಾಡದೆ, ಒಂದು ಮಾತನ್ನೂ ಹೇಳದೆ ಪಾತ್ರವನ್ನೇ ಸಾಯಿಸುತ್ತಿದ್ದಾರೆ ಎಂದು ಕೂಡ ವಿಜಯಲಕ್ಷ್ಮೀ ಸುಬ್ರಮಣಿ ಕಾಮೆಂಟ್ ಸೆಕ್ಷನ್‌ನಲ್ಲಿ ಬರೆದಿದ್ದಾರೆ.
ಮುಂದುವರೆದು ಫೋಟೊ ಹಂಚಿಕೊಂಡಿರುವ ವಿಜಯಲಕ್ಷ್ಮೀ ಸುಬ್ರಮಣಿ, ಮಾವನ ಜೊತೆ ಲಲಿತಾಳ ಕೊನೆಯ ಮಾತುಗಳು... ಎಷ್ಟು ಆಶ್ಚರ್ಯ ಅಂದರೆ ''ಲಕ್ಷ್ಮಿ ನಿವಾಸ'' ಧಾರಾವಾಹಿಯ ಮೊದಲ ದಿನದ ಸೀನ್‌ನಲ್ಲಿ ಇದೇ ಸೀರೆ ಉಟ್ಟಿದ್ದೆ. ಕೊನೆಯ ಸೀನ್‌ನಲ್ಲೂ ಅದೇ ಸೀರೆ. ಈ ಸೀರಿಯಲ್‌ನ ಕಥಾಬ್ರಹ್ಮರು ನನಗೆ ತಿಳಿಸದೇ ಮಾಡಿದ ಷಡ್ಯಂತ್ರಕ್ಕೆ ನನ್ನ ಈ ಹಸಿರು ಸೀರೆ ನಗಬೇಕೋ.. ಅಳ್ಬೇಕೋ ತಿಳಿಯದೇ ಸೂಟ್ ಕೇಸ್‌ನಲ್ಲಿ ಕೂತಿದೆ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ಬರೆದುಕೊಂಡಿದ್ದಾರೆ.


Click it and Unblock the Notifications











