ಬಿಗ್ ಬಾಸ್‌ನಲ್ಲಿ ಬಿಗ್ ಟ್ವಿಸ್ಟ್ ; ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿ ಕೊಟ್ಟ ಭಾರತದ ಸ್ಟಾರ್ ಕ್ರಿಕೆಟಿಗನ ಅಕ್ಕ
ಪ್ರತಿ ವರ್ಷ ಪ್ರೇಕ್ಷಕರನ್ನು ಸೆಳೆಯಲು ''ಬಿಗ್ ಬಾಸ್'' ನಲ್ಲಿ ನಾನಾ ಕಸರತ್ತುಗಳಾಗುತ್ತವೆ. ಆ ಪೈಕಿ ಕೆಲ ಒಮ್ಮೆ ಮಾಡಿದ ಪ್ಲ್ಯಾನ್ ವರ್ಕೌಟ್ ಆಗಿ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಇನ್ನು ಕೆಲ ಒಮ್ಮೆ ಪ್ಲ್ಯಾನ್ ತಲೆ ಕೆಳಗಾಗಿ ಟಿಆರ್‌ಪಿ ನೆಲ ಕಚ್ಚುತ್ತೆ. ಆ ಭಾಷೆ .. ಈ ಭಾಷೆ ಅಂತಲ್ಲ. ಎಲ್ಲ ಭಾಷೆಯಲ್ಲಿ ಕೂಡ ಪ್ರತಿ ವರ್ಷ ಈ ಸರ್ಕಸ್ ನಡೆದೇ ನಡೆಯುತ್ತೆ.
ಈ ಬಾರಿಯ ''ಬಿಗ್ ಬಾಸ್'' ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಹಿಂದಿಯಲ್ಲಿ ಈ ಬಾರಿ ಪ್ರೇಕ್ಷಕರನ್ನು ಹಿಡಿದು ಕೂರಿಸಲು ಪ್ರಜಾಪ್ರಭುತ್ವದ ಥೀಮ್‌ನಡಿ ಸ್ಫರ್ಧಿಗಳ ನಡುವೆ ಕಿಡಿಯನ್ನು ಹಚ್ಚುವ ಕೆಲಸವನ್ನು ಮಾಡಲಾಗಿದೆ. ಕಿರುತೆರೆಯ ಪ್ರೇಕ್ಷಕರಿಗಿಂತ ಮೊದಲು ಓಟಿಟಿಯ ವೀಕ್ಷಕರಿಗೆ ''ಬಿಗ್ ಬಾಸ್''ನ ಕಣ್ತುಂಬಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಇಷ್ಟೇ ಅಲ್ಲ ಆರಂಭದಲ್ಲಿಯೇ ''ಬಿಗ್ ಬಾಸ್ 13''ರ ಸ್ಫರ್ಧಿ ಶೆಹನಾಜ್ ಗಿಲ್ ಅವರ ಸಹೋದರ ಶೆಹನಾಜ್ ಬಡೇಶ್ ಅವರನ್ನು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಕಳುಹಿಸಲಾಗಿದೆ. ಆವೇಜ್ ದರ್ಬಾರ್.. ನಗ್ಮಾ ಮಿರಜ್‌ಕರ್ ಮತ್ತು ನಟಾಲಿಯಾ ಅವರನ್ನು ಮನೆ ಹೊರಗಡೆ ಕಳುಹಿಸಲಾಗಿದೆ.
ಆದರೂ ಕೂಡ.. ನೋಡುಗರಿಗೆ ಬೇಕಿರುವ ಮನರಂಜನೆಯ ಕಿಕ್ ಸಿಕ್ತಿಲ್ಲ. 1.4ರ ಮೇಲೆ ಕಾರ್ಯಕ್ರಮಕ್ಕೆ ಟಿಆರ್‌ಪಿ ಬರುತ್ತಿಲ್ಲ. ಈ ಹಿನ್ನೆಲೆ ಸದ್ಯ ಹೇಗಾದರೂ ಮಾಡಿ ಟಿಆರ್‌ಪಿ ಹೆಚ್ಚು ಮಾಡಲೇಬೇಕೆಂಬ ತೀರ್ಮಾನಕ್ಕೆ ಬಂದಂತೆ ಇರುವ ''ಬಿಗ್ ಬಾಸ್'' ಸದ್ಯ ಭಾರತದ ಸ್ಟಾರ್ ಕ್ರಿಕೆಟ್ ಪ್ಲೇಯರ್ ಮತ್ತು ಖ್ಯಾತ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯ ಶಿಷ್ಯ ದೀಪಕ್ ಚಹಾರ್ ಅವರಿಗೆ ಬಲೆ ಬೀಸಿದೆ.

ಹೌದು. ದೀಪಕ್ ಚಹಾರ್‌ಗೆ ''ಬಿಗ್ ಬಾಸ್'' ಕಡೆಯಿಂದ ಬುಲಾವ್ ಬಂದಿದೆ. ಸಲ್ಮಾನ್ ಖಾನ್ ಜೊತೆ ದೀಪಕ್ ಚಹಾರ್ ವೇದಿಕೆಯನ್ನು ಕೂಡ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ಕ್ರಿಕೆಟ್ ಆಡಿದ್ದಾರೆ. ಸಲ್ಮಾನ್ ಖಾನ್ ಕೇಳಿದ ಪ್ರಶ್ನೆಗೆ ಮನೆಯಲ್ಲಿ ಯಾರು ನಮ್ಮ ಸ್ನೇಹಿತರು.. ಯಾರು ನಮ್ಮ ಶತ್ರುಗಳು ಎನ್ನುವುದೇ ನಮಗೆ ಗೊತ್ತಿರಲ್ಲ .. ತುಂಬಾ ಕಷ್ಟಕರವಾದ ಆಟ ಇದು ಎಂದು ಹೇಳಿದ್ದಾರೆ. ಆದರೆ .. ದೀಪಕ್ ಚಹಾರ್ ಮನೆಯೊಳಗೆ ಹೋಗಿಲ್ಲ. ಬದಲಿಗೆ ಅವರ ಸಹೋದರಿ ಮಾಲತಿ ಅವರನ್ನು ಮನೆಯೊಳಗಡೆ ಕಳಿಸಿದ್ದಾರೆ.
ಹೌದು, ಮಾಲ್ತಿ ಚಹಾರ್.. ದೀಪಕ್ ಚಹಾರ್ ಅವರ ಅಕ್ಕ. ಮಾಡೆಲ್ ಮತ್ತು ನಟಿ ಕೂಡ ಹೌದು. ಆಗ್ರಾದ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಮಾಲ್ತಿ ಲಕ್ನೋದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಪದವಿಯನ್ನು ಪಡೆದರು. ''ಬಾಲಿವುಡ್ ಶಾದಿ'' ವರದಿಯ ಪ್ರಕಾರ 2209ರಲ್ಲಿ ಮಿಸ್ ಇಂಡಿಯಾ ಅರ್ಥ್ ಪ್ರಶಸ್ತಿ ಪಡೆದ ಮಾಲ್ತಿ 2014ರಲ್ಲಿ ದೆಹಲಿಯ ಫೆಮಿನಾ ಮಿಸ್ ಇಂಡಿಯಾದ ಮಿಸ್ ಫೋಟೋಜೆನಿಕ್ ಪ್ರಶಸ್ತಿ ಪಡೆದರು. ಇಷ್ಟೇ ಅಲ್ಲ ಫೈನಲಿಸ್ಟ್ ಕೂಡ ಆಗಿದ್ದರು.

ಕಿರುಚಿತ್ರ ''ಮ್ಯಾನಿಕ್ಯೂರ್'' ಮೂಲಕ ಬಣ್ಣದ ಲೋಕಕ್ಕೆ ಬಂದ ಮಾಲ್ತಿ ''ಗದರ್'' ಖ್ಯಾತಿಯ ನಿರ್ದೇಶಕ ಅನಿಲ್ ಶರ್ಮಾ ನಿರ್ದೇಶನದ ''ಜೀನಿಯಸ್'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಇವರದ್ದು ರಾ ಏಜೆಂಟ್ ಪಾತ್ರವಾಗಿತ್ತು. ಆ ನಂತರ 2022ರಲ್ಲಿ ಅರವಿಂದ್ ಪಾಂಡೆ ನಿರ್ದೇಶನದ ''ಇಷ್ಕ್ ಪಶ್ಮಿನಾ'' ಚಿತ್ರದ ಮೂಲಕ ನಾಯಕಿಯಾಗಿ ಕೂಡ ಮಾಲ್ತಿ ಬಡ್ತಿ ಪಡೆದರು. ''ಓ ಮೇರಿ'' ಎಂಬ ಕಿರುಚಿತ್ರವನ್ನು ಕೂಡ ಬರೆದು ನಿರ್ದೇಶಿಸಿದರು.
ಇಂಥಾ ಮಾಲ್ತಿ ಚಹಾರ್ ಈಗ ಹಿಂದಿಯ ''ಬಿಗ್ ಬಾಸ್'' ಮನೆಯನ್ನು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿದ್ದಾರೆ. ಮನೆಯಲ್ಲಿ ಮಾಲ್ತಿ ಎಷ್ಟು ದಿನ ಇರ್ತಾರೆ..? ಅಳಿದು ಉಳಿದ ಸ್ಫರ್ಧಿಗಳಿಗೆ ಹೇಗೆಲ್ಲಾ ಬೆವರಿಳಿಸುತ್ತಾರೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











