ಸಿ ಎಸ್ ಪಿ ಸಿಡಿಸಿದ ಹೊಸ ಬಾಂಬ್ ಗೆ ಶಾಕ್ ಆದ ಜಾನಕಿ

ಮಗಳು ಜಾನಕಿ ಧಾರವಾಹಿಯಲ್ಲಿ ಸದ್ಯ ಮದುವೆಯದೆ ಮಾತುಕತೆ. ಚಂಚಲ ಮತ್ತು ಚಿರಂತನ್ ಮದುವೆ ಆಗುತ್ತಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಇದರ ನಡುವೆ ಸಿ ಎಸ್ ಪಿ ಸಿಡಿಸಿದ ಹೊಸ ಬಾಂಬ್ ಗೆ ಜಾನಕಿ ಶಾಕ್ ಆಗಿದ್ದಾರೆ.

ತಂಗಿಯ ಮದುವೆ ಸಂತಸದಲ್ಲಿದ್ದ ಜಾನಕಿಗೆ ಈಗ ದಿಕ್ಕು ತೋಚದಾಗಿದೆ. ಇಷ್ಟು ದಿನ ಅಪ್ಪ ಭಾರ್ಗಿ ಬಳಿ ಹೋಗಿ ಚಿರಂತನ್ ಜೊತೆ ತಂಗಿಯ ಮದುವೆ ಮಾಡಿಸುವಂತೆ ಒತ್ತಾಯಿಸುತ್ತಿದ್ದ ಜಾನಕಿಗೆ, ಚಿರಂತನ್ ಬಗ್ಗೆ ಗೊತ್ತಾಗುತ್ತಿದ್ದಂತೆ ಏನು ಮಾಡಬೇಕೆಂದು ತೋಚದೆ ಗೊಂದಲದಲ್ಲಿದ್ದಾರೆ.

ಒಂದು ವೇಳೆ ಜಾನಕಿ ಬೇಡ ಅಂದ್ರು ಅನೇಕ ವರ್ಷಗಳಿಂದ ಚಿರಂತನ್ ಅನ್ನು ಪ್ರೀತಿಸುತ್ತಿರುವ ಚಂಚಲ ಅಕ್ಕ ಜಾನಕಿಯ ಮಾತು ಕೇಳುತ್ತಾಳಾ? ಚಿರಂತನ್ ಬಗ್ಗೆ ಹೇಳುವ ಸತ್ಯವನ್ನು ಚಂಚಲ ಒಪ್ಪಿಕೊಳ್ಳುತ್ತಾಳಾ? ಅಥವಾ ಈ ಎಲ್ಲಾ ಸತ್ಯ ಮೊದಲೆ ಚಂಚಲಗೂ ಗೊತ್ತಿರುತ್ತಾ? ಎನ್ನುವುದು ಕುತೂಹಲ ಮೂಡಿಸಿದೆ. ಅಷ್ಟಕ್ಕೂ ಚಿರಂತನ್ ಬಗ್ಗೆ ಸಿ ಎಸ್ ಪಿ ಹೇಳಿದ ಸತ್ಯವೇನು? ಮುಂದೆ ಓದಿ..

ಅಪ್ಪನಿಗೆ ಕ್ಷಮೆ ಕೇಳಲು ಹೇಳಿದ ಜಾನಕಿ

ಅಪ್ಪನಿಗೆ ಕ್ಷಮೆ ಕೇಳಲು ಹೇಳಿದ ಜಾನಕಿ

ತಂಗಿಯ ಬದುಕು ಹಾಳಾಗಬಾರದೆಂದು ಜಾನಕಿ ಅಪ್ಪ ಭಾರ್ಗಿ ಬಳಿ ಬಳಿ ಮಾತಕತೆ ನಡೆಸುತ್ತಿದ್ದಾರೆ. ಚಂಚಲ ಮತ್ತು ಚಿರಂತನ್ ಮದುವೆ ಆಗಬೇಕು ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರ ಅಹಂಕಾರದಿಂದ ಅವರ ಬದುಕು ಹಾಳಾಗಬಾರದು. ಒಮ್ಮೆ ರಾಜು ಚೌಧರಿ ಬಳಿ ಕ್ಷಮೆ ಕೇಳಿ ಎಂದು ಜಾನಕಿ ಅಪ್ಪನ ಬಳಿ ಹೇಳಿದ್ದಾರೆ.

ಜಾನಕಿ ಮಾತು ಕೇಳಿ ಶಾಕ್ ಆದ ಭಾರ್ಗಿ

ಜಾನಕಿ ಮಾತು ಕೇಳಿ ಶಾಕ್ ಆದ ಭಾರ್ಗಿ

ಮಗಳ ಕ್ಷಮೆಯ ಮಾತು ಕೇಳಿ ಉರಿದು ಬಿದ್ದ ಚಂದು ಭಾರ್ಗಿ. ಆತ್ಮಾಭಿಮಾನ ಬಿಟ್ಟು ರಾಜ್ ಚೌಧರಿ ಮನೆಗೆ ಕ್ಷಮೆ ಕೇಳಲು ಹೋಗಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಹಾಗಾಗಿ ಜಾನಕಿಯೇ ರಾಜು ಚೌಧರಿ ಮನೆಗೆ ಹೋಗಿ ಕ್ಷಮೆ ಕೇಳಿ, ಮದುವೆಗೆ ಒಪ್ಪಿಸುವ ನಿರ್ಧಾರ ತೆಗುದುಕೊಂಡು ಮನೆಯಿಂದ ಹೊರಟು ಹೋಗಿದ್ದಾರೆ.

ಚಂಚಲ ಮದುವೆಯಲ್ಲಿ ಮ್ಯಾಜಿಕ್ ಶೋ

ಚಂಚಲ ಮದುವೆಯಲ್ಲಿ ಮ್ಯಾಜಿಕ್ ಶೋ

ಚಂಚಲಗೆ ಮದುವೆ ಫಿಕ್ಸ್ ಆಗುತ್ತಿದಂತೆ ಮದುವೆಯಲ್ಲಿ ಶಾಮಲ ಪತಿ ಸುಂದರ್ ಮೂರ್ತಿ ಮ್ಯಾಜಿಕ್ ಶೋ ಮಾಡಲು ಪ್ಲಾನ್ ಮಾಡಿದ್ದಾರೆ. ಈ ಆಸೆಯನ್ನು ಜಾನಕಿ ಬಳಿ ಹೇಳಿಕೊಂಡು ಶಾಮಲ ಕೈಯಿಂದ ಉಗಿಸಿಕೊಂಡಿದ್ದಾರೆ. ಮ್ಯಾಜಿಕ್ ಮಾಡಲು ಹೋಗಿ ಎಲ್ಲಾ ಕಡೆ ನಷ್ಟ ಮಾಡಿ, ಹಣವನ್ನು ನಾವೆ ಕಟ್ಟಬೇಕು ಎಂದು ಹೇಳಿ ಚಂಚಲ ಮದುವೆಯ ಮ್ಯಾಜಿಕ್ ಕನಸನ್ನು ಬಸ್ಮ ಮಾಡಿದ್ರು.

ಚಿರಂತನ್ ಬಗ್ಗೆ ಸಿ ಎಸ್ ಪಿ ಅನುಮಾನ

ಚಿರಂತನ್ ಬಗ್ಗೆ ಸಿ ಎಸ್ ಪಿ ಅನುಮಾನ

ಚಂಚಲ ಮತ್ತು ಚಿರಂತನ್ ಮದುವೆಗೆ ಸಿದ್ದತೆಗಳು ನಡೆಯುತ್ತಿವೆ. ಈ ಬಗ್ಗೆ ಸಿ ಎಸ್ ಪಿ ಸಲಹೆ ಕೇಳಲು ಬಂದ ಜಾನಕಿಗೆ ಸಿ ಎಸ್ ಹೊಸ ಬಾಂಬ್ ಸಿಡಿಸಿದ್ದಾರೆ. ಚಿರಂತನ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆತನ ಬ್ಯಾಗ್ರೌಂಡ್ ಸರಿ ಇಲ್ಲ. ಕ್ರಿಮಿನಲ್ ವ್ಯಕ್ತಿ ಎಂದು ಹೇಳುವ ಮೂಲಕ ಜಾನಕಿ ತಲೆಯಲ್ಲಿ ಅನುಮಾನದ ಹುಳ ಬಿಟ್ಟಿದ್ದಾರೆ ಸಿ ಎಸ್ ಪಿ.

ಚಂಚಲ ಮದುವೆ ತಡೆಯುತ್ತಾರಾ ಜಾನಕಿ

ಚಂಚಲ ಮದುವೆ ತಡೆಯುತ್ತಾರಾ ಜಾನಕಿ

ಚಿರಂತನ್ ನ ಕ್ರಿಮಿನಲ್ ಬ್ಯಾಗ್ರೌಂಡ್ ಬಗ್ಗೆ ಸಿ ಎಸ್ ಪಿ ಹೇಳಿದ ಮೇಲೆ, ಜಾನಕಿ ತಂಗಿ ಚಂಚಲ ಮತ್ತು ಚಿರಂತನ್ ಜೊತೆ ಮದುವೆ ಮಾಡಿಸುತ್ತಾರಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿದೆ. ಅಲ್ಲದೆ ಚಿರಂತನ್ ಮೇಲೆ ಕ್ರಿಮಿನಲ್ ಕೇಸ್ ಕೂಡ ಇದೆ. ಹಾಗಾಗಿ ತಂಗಿಯನ್ನು ಕ್ರಿಮಿನಲ್ ಗೆ ಕೊಡಲು ಕಂಡಿತ ಜಾನಕಿ ಮನಸ್ಸು ಒಪ್ಪುವಿದಿಲ್ಲ. ಅಪ್ಪನ ಬಳಿ ಮದುವೆ ಮಾಡಿಸಿ ಕೊಡಿ ಎಂದು ಒತ್ತಾಯ ಮಾಡುತ್ತಿದ್ದ ಜಾನಕಿ, ಮತ್ತೆ ಹೋಗಿ ಮದುವೆ ನಿಲ್ಲಿಸಿ ಎಂದು ಹೇಳುತ್ತಾರಾ ಎನ್ನುವುದನ್ನು ತಿಳಿದುಕೊಳ್ಳಲು ಧಾರಾವಾಹಿ ನೋಡಬೇಕು. ಆದ್ರೆ ಸಿ ಎಸ್ ಪಿ ಮಾತು ಕೇಳಿದ ನಂತರ ಜಾನಕಿ ತುಂಬಾ ಗೊಂದಲದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ.

More from Filmibeat

English summary
CSP revealed to Janaki about Chirantan's criminal background in Magalu Janaki serial. Will Janaki Preventing to Chanchala and Chiranthan marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X