Dhananjaya-Hoysala: 'ಹೊಯ್ಸಳ' ಸಿನಿಮಾ ನೋಡಿ ಆ 2 ಪ್ರಶ್ನೆ ಉತ್ತರ ಕೊಡಿ.. ಅದೃಷ್ಟ ಇದ್ರೆ ದುಬಾರಿ ಗಿಫ್ಟ್ ನಿಮ್ದೆ!

By ಫಿಲ್ಮಿಬೀಟ್ ಡೆಸ್ಕ್

ಡಾಲಿ ಧನಂಜಯ್ ಮಾಸ್ ಆಕ್ಷನ್ ಸಿನಿಮಾ 'ಗುರುದೇವ್ ಹೊಯ್ಸಳ'. ಈಗಾಗಲೇ ಥಿಯೇಟರ್‌ಗೆ ಲಗ್ಗೆ ಇಟ್ಟು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಪೊಲೀಸ್ ಅಧಿಕಾರಿಯಾಗಿ ಧನಂಜಯ್ ತಮ್ಮ ಅಭಿಮಾನಿಗಳಿಗೆ ಕಿಕ್ ಕೊಟ್ಟಿದ್ದರು. ಧನಂಜಯ್ ಹಾಗೂ ನವೀನ್ ಶಂಕರ್ ಫೈಟ್ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿತ್ತು.

ಉತ್ತರ ಕರ್ನಾಟಕ ಭಾಗದ ಕಥೆಯನ್ನೇ ಸಿದ್ಧಪಡಿಸಿ ವಿಜಯ್ ಆಕ್ಷನ್ ಕಟ್ ಹೇಳಿದ್ದರು. ಕೆಆರ್‌ಜಿ ಸ್ಟುಡಿಯೋ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ನಿರ್ಮಾಣ ಮಾಡಿತ್ತು. ಮಾಸ್ ಡೈಲಾಗ್, ಆಕ್ಷನ್, ಕಾಮಿಡಿ ಇದ್ದ ಈ ಸಿನಿಮಾವೀಗ ವರ್ಲ್ಡ್ ಪ್ರೀಮಿಯರ್ ಕಾಣುವುದಕ್ಕೆ ಹೊರಟಿದೆ.

Hoysala-Star Suvarna-World Premier

ಸ್ಟಾರ್ ಸುವರ್ಣ ಇದೇ ಭಾನುವಾರ ಸ್ವಾತಂತ್ರ್ಯ ದಿನ ಸಂಭ್ರಮದಲ್ಲಿ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿಯಲ್ಲಿ ನಟ ರಾಕ್ಷಸ ಡಾಲಿ ಧನಂಜಯ್ ನಟಿಸಿದ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ಪ್ರಸಾರ ಮಾಡುತ್ತಿದೆ. ಸ್ಟಾರ್ ಸುವರ್ಣ ಈಗಾಗಲೇ ಕೆಲವು ಪ್ರೋಮೊಗಳನ್ನು ರಿಲೀಸ್ ಮಾಡಿದೆ.

ನಗರದ ಅತ್ಯಂತ ನಿಷ್ಠಾವಂತ ಹಾಗೂ ಶಕ್ತಿಶಾಲಿ ಪೊಲೀಸ್ ಅಧಿಕಾರಿ 'ಗುರುದೇವ್ ಹೊಯ್ಸಳ'. ರಾಜಕಾರಣಿಗಳು ಹಾಗೂ ದರೋಡೆಕೋರರಿಂದ ಭೂ ಮಾಫಿಯಾವನ್ನು ತಡೆಗಟ್ಟುವಲ್ಲಿ ಹೊಯ್ಸಳ ಹೇಗೆ ಯಶಸ್ವಿಯಾಗುತ್ತಾನೆ ಅನ್ನೋದೇ ಈ ಸಿನಿಮಾದ ಒನ್ ಲೈನ್ ಸ್ಟೋರಿ. ರೆಗ್ಯೂಲರ್ ಪೊಲೀಸ್ ಹಾಗೂ ವಿಲನ್ ಕಥೆಯಾಗಿರದೆ, ಕನ್ನಡ ಭಾಷೆ, ನೆಲವನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಸುಂದರ ಕಥೆಯನ್ನು ಹೆಣೆಯಲಾಗಿದೆ.

Hoysala-Star Suvarna-World Premier

'ಗುರುದೇವ್ ಹೊಯ್ಸಳ'ನಾಗಿ ಸಿನಿಮಾದ ಹೀರೊ ಆಗಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಹಾಗೇ ಡಾಲಿಗೆ ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದಾರೆ. ಡಾಲಿ ಜೊತೆಗೆ ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ರಾಜೇಶ್ ನಟರಂಗ, ನಾಗಭೂಷಣ್ ಸೇರಿದಂತೆ ಕನ್ನಡ ಚಿತ್ರರಂಗದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಥಿಯೇಟರ್‌ನಲ್ಲಿ ಸದ್ದು ಮಾಡಿದ್ದ ಈ ಸಿನಿಮಾ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.

ಸ್ಟಾರ್ ಸುವರ್ಣ 'ಗುರುದೇವ್ ಹೊಯ್ಸಳ' ಸಿನಿಮಾವನ್ನು ಪ್ರಸಾರ ಮಾಡುತ್ತಿದ್ದು, ಇದೇ ವೇಳೆ ಪ್ರೇಕ್ಷಕರಿಗಾಗಿ ದುಬಾರಿ ಗಿಫ್ಟ್ ನೀಡುವುದಕ್ಕೆ ಸಜ್ಜಾಗಿದೆ. 'ಗುರುದೇವ್ ಹೊಯ್ಸಳ' ಸಿನಿಮಾವನ್ನು ನೋಡಿದವರಿಗೆ 2 ಸರಳ ಪ್ರಶ್ನೆಗಳನ್ನು ಕೇಳಲಿದ್ದಾರೆ. ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದರೆ, ಅದೃಷ್ಟಶಾಲಿಗಳಿಗೆ 43 ಇಂಚಿನ LED TV ಗಿಫ್ಟ್ ಆಗಿ ಸಿಗಲಿದೆ.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸುವರ್ಣ ವರ್ಲ್ಡ್ ಪ್ರೀಮಿಯರ್ ಮೂವಿಯಲ್ಲಿ 'ಗುರುದೇವ್ ಹೊಯ್ಸಳ' ಇದೇ ಆಗಸ್ಟ್ 13 ರಂದು ಭಾನುವಾರ ಸಂಜೆ 6.00 ಕ್ಕೆ ಪ್ರಸಾರ ಆಗುತ್ತಿದೆ. ಥಿಯೇಟರ್‌ನಲ್ಲಿ ಸದ್ದು ಮಾಡಿದಂತೆ ಈ ಸಿನಿಮಾ ಕಿರುತೆರೆಯಲ್ಲೂ ಮೋಡಿ ಮಾಡುತ್ತಾ? ಅನ್ನೋದು ಕುತೂಹಲದ ಪ್ರಶ್ನೆಯಾಗಿದೆ.

More from Filmibeat

English summary
Daali Dhananjaya Starrer Hoysala Movie will be telecasting in August 13th in Star Suvarna
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X