ಕನ್ನಡ ಕಿರುತೆರೆಯಲ್ಲಿ ಸಲ್ಮಾನ್-ಸುದೀಪ್ ಜೋಡಿಯ ದಬಾಂಗ್-3 ಪ್ರಸಾರ

ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಪ್ರದರ್ಶನವಾಗ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟಿಸಿರುವ ದಬಾಂಗ್ 3 ಸಿನಿಮಾ ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗ್ತಿದೆ.

ನವೆಂಬರ್ 29 ರಂದು ಮಧ್ಯಾಹ್ನ 3 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ದಬಾಂಗ್ 3 ಚಿತ್ರ ಟೆಲಿಕಾಸ್ಟ್ ಆಗ್ತಿದೆ. ಈ ಸುದ್ದಿಯನ್ನು ಜೀ ಕನ್ನಡ ವಾಹಿನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಪ್ರಭುದೇವ ನಿರ್ದೇಶನದಲ್ಲಿ ಮೂಡಿಬಂದಿದ್ದ ದಬಾಂಗ್ 3 ಸಿನಿಮಾ 2019ರ ಡಿಸೆಂಬರ್ ತಿಂಗಳಿನಲ್ಲಿ ತೆರೆಕಂಡಿತ್ತು. ಖುದ್ದು ಸಲ್ಮಾನ್ ಖಾನ್ ಮತ್ತು ಸಹೋದರ ಅರ್ಬಾಜ್ ಖಾನ್ ಈ ಚಿತ್ರ ನಿರ್ಮಿಸಿದ್ದರು.

Dabangg 3 World Television Premiere on Zee Kannada on November 29th

ಸೂಪರ್ ಕಾಪ್ ಆಗಿ ಸಲ್ಮಾನ್ ಖಾನ್ ಅಬ್ಬರಿಸಿದ್ರೆ ಸಲ್ಲು ಎದುರು ಖಳನಾಯಕನಾಗಿ ಸುದೀಪ್ ಮಿಂಚಿದ್ದರು. ಇವರಿಬ್ಬರ ಜುಗುಲ್ ಬಂದಿಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ನಟಿಸಿದ್ದ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ತೆರೆಕಂಡಿತ್ತು. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ದಬಾಂಗ್ 3 ರಿಲೀಸ್ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದ ಈ ಚಿತ್ರ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲವಾದರೂ 250 ಕೋಟಿ ಗಳಿಸಿತ್ತು.

Recommended Video

ಮಹಾನ್ ನಾಯಕ ಮೋದಿ ಪಾರ್ಟಿಯಲ್ಲಿ ನಾನು ಇರೋದೇ ಒಂದು ದೊಡ್ಡ ಹೆಮ್ಮೆ

English summary
Bollywood super star salman khan and kiccha sudeep Dabangg 3 World Television Premiere on Zee Kannada on Sunday, november 29th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X