Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Gattimela: ಸಾವಿರ ಸಂಚಿಕೆಯತ್ತ 'ಗಟ್ಟಿಮೇಳ' ಧಾರಾವಾಹಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಈಗ ಡುಪ್ಲಿಕೇಟ್ ವೈದೇಹಿಯ ಬಣ್ಣ ಬಯಲಾಗಿದೆ. ಚಂದ್ರಾ ಎಂಬಾಕೆ ತೇಜಸ್ ಜೊತೆ ಸೇರಿ ಬೇಕಂತಲೇ ಮನೆಗೆ ಬಂದು ಸೇರಿಕೊಂಡಿದ್ದಳು ಎಂಬುದು ಮನೆಯವರಿಗೆ ತಿಳಿದು ಬಂದಿದೆ.
ಈಗ ಡುಪ್ಲಿಕೇಟ್ ವೈದೇಹಿ ಮನೆಯಿಂದ ಹೊರಗೆ ಹೋಗಿಯಾಗಿದೆ. ಈಗ ವೇದಾಂತ್ ಹಾಗೂ ಮನೆಯವರೆಲ್ಲಾ ನಡೆದ ಘಟನೆ ಬಗ್ಗೆ ಪರಾಮರ್ಶೆ ನಡೆಸುತ್ತಿದ್ದಾರೆ. ಇದೆಲ್ಲಾ ಹೇಗಾಯ್ತು ಎಂದು ಯೋಚಿಸುತ್ತಿದ್ದಾರೆ.
'ಮನೆದೇವ್ರು',
'ಪಾರು'
ಖ್ಯಾತಿ
ವರ್ಷಿತಾ
ಮತ್ತೆ
ಕಿರುತೆರೆಗೆ
ಮರಳಲು
ರೆಡಿ!
ಇದೇ ವೇಳೆಗೆ ವಿಕ್ಕಿ, ಅಮೂಲ್ಯ ಇಬ್ಬರಿಗೂ ಸುಹಾಸಿನಿ ಮೇಲೆ ಅನುಮಾನ ಹೆಚ್ಚಾಗುತ್ತದೆ. ವೈದೇಹಿ ಬಗ್ಗೆ ಗೊತ್ತಿದ್ದರೂ, ಚಂದ್ರಳನ್ನು ಹೇಗೆ ಒಪ್ಪಿಕೊಂಡಿದ್ದು ಎಂದು ಪ್ರಶ್ನೆ ಮಾಡಿದ್ದಾರೆ.

ಕಥೆ ಕಟ್ಟಿದ ಸುಹಾಸಿನಿ
ಈ ಪ್ರಶ್ನೆಗಳನ್ನು ಕೇಳಿ ಶಾಕ್ ಆದ ಸುಹಾಸಿನಿ ಏನು ಸಮಜಾಯಿಷಿ ಕೊಡುವುದು ಎಂದು ತಬ್ಬಿಬ್ಬಾಗುತ್ತಾಳೆ. ಸ್ವಲ್ಪ ಸಮಯ ಮೌನವಾಗಿರುವ ಸುಹಾಸಿನಿ, ಬಳಿಕ ಕಥೆ ಕಟ್ಟಲು ಶುರು ಮಾಡುತ್ತಾಳೆ. ಎಲ್ಲಾ ಗೊತ್ತಿದ್ದರೂ ತಾನೇ ಸುಮ್ಮನಿರಲು ಕಾರಣವನ್ನು ಹೇಳುತ್ತಾಳೆ. ಚಂದ್ರ ಕಡೆಯವರಿಂದ ಮಕ್ಕಳಿಗೆ ತೊಂದರೆಯಾಗಬಾರದು ಎಂದು ಸುಮ್ಮನಿದ್ದೆ ಎಂದು ಕಥೆ ಹೇಳುತ್ತಾಳೆ. ಅವಶ್ಯಕತೆ ಇಲ್ಲದಿದ್ದರೂ ಹಳೆಯ ಕಥೆಯನ್ನು ಪುನಃ ಹೇಳುತ್ತಾಳೆ. ವೈದೇಹಿಗೆ ಸುಹಾಸಿನಿ ಮಾತುಗಳನ್ನು ಕೇಳುತ್ತಾ ಮತ್ತಷ್ಟು ಸಿಟ್ಟು ಬರುತ್ತಿರುತ್ತದೆ. ಆದರೂ ಸುಮ್ಮನಿರುತ್ತಾಳೆ.

ಸುಹಾಸಿನಿ ಸುಳ್ಳಿಗೆ ವೈದೇಹಿ ಮೌನ
ಸುಹಾಸಿನಿ ತನ್ನ ಮಾತನ್ನು ಮುಂದುವರಿಸಿ, ವೈದೇಹಿ ಹಾಗೂ ಸೂರ್ಯ ನಾರಾಯಣ ಬೆಂಕಿಯಲ್ಲಿ ಸಿಲುಕಿದ ಬಳಿಕ ನಾನು ನೋಡಿದ್ದು ವೈದೇಹಿ ದೇಹವನ್ನು ಮಾತ್ರವೇ, ಸೂರ್ಯನಾರಾಯಣ ಬದುಕಿದ್ದಾರೆ ಎಂದೇ ನಂಬಿದ್ದೆ. ಚಂದ್ರ ಕೂಡ ಸೂರ್ಯ ನಾರಾಯಣ ಬಗ್ಗೆ ಎಲ್ಲಾ ಗೊತ್ತು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ವೈದೇಹಿ ಮತ್ತಷ್ಟು ಶಾಕ್ ಆಗುತ್ತಾಳೆ. ಆದರೆ, ವೈದೇಹಿಗೆ ಸುಹಾಸಿನಿ ಹೇಳುತ್ತಿರುವುದೆಲ್ಲಾ ಸುಳ್ಳು ಎಮದು ಗೊತ್ತಿರುತ್ತದೆ. ಹಾಗಾಗು ವೈದೇಹಿ ಒಂದಲ್ಲ ಒಂದು ದಿನ ಸುಹಾಸಿನಿ ಬಣ್ಣ ಬಯಲಾಗುತ್ತೆ ಎಂದು ಸುಮ್ಮನಾಗುತ್ತಾಳೆ.

ಸಂಭ್ರಮಿಸಿದ್ದ ಧಾರಾವಾಹಿ ತಂಡ
ಇನ್ನು 'ಗಟ್ಟಿಮೇಳ' ಧಾರಾವಾಹಿ ಶುರುವಾಗಿ ಹತ್ತಿರತ್ತಿರ ನಾಲ್ಕು ವರ್ಷವಾಗುತ್ತಿದೆ. ಈಗಾಗಲೇ 999 ಸಂಚಿಕೆಗಳು ಪೂರ್ಣಗೊಂಡಿದೆ. ಸೋಮವಾರದ ಸಂಚಿಕೆ 1000 ತಲುಪಲಿದ್ದು, ಧಾರಾವಾಹಿ ತಂಡ ಸಂಭ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಗಟ್ಟಿಮೇಲ ಧಾರಾವಾಹಿ ತಂಡ ಜಾತ್ರೆಯನ್ನು ಏರ್ಪಡಿಸಿತ್ತು. 1000 ಸಂಚಿಕೆಯ ಹಿನ್ನೆಲೆ ಕುಕನೂರಿನಲ್ಲಿ ಸಂಕ್ರಾಂತಿ ಸಂಭ್ರಮವನ್ನು ಆಚರಿಸಿ ಸಂತಸಗೋಮಡಿತ್ತು. ಇದನ್ನು ಈಗಾಗಲೇ ಜೀ ಕನ್ನಡ ವಬಾಹಿನಿ ಪ್ರಸಾರವನ್ನೂ ಮಾಡಿದೆ. ವಾಹಿನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಗಟ್ಟಿಮೇಳ ಧಾರಾವಾಹಿ ಕುರಿತು ಪ್ರೇಕ್ಷಕರಿಗೆ ಕೆಲ ಪ್ರಶ್ನೆಗಳನ್ನೂ ಕೇಳಿದೆ.

ವೈದೇಹಿ ಸಿಗುವುದು ಯಾವಾಗ..?
ಇನ್ನು ಈ ಧಾರಾವಾಹಿಯಲ್ಲಿ ವೈದೇಹಿಯನ್ನು ಹುಡುಕುವುದರಲ್ಲೇ ಮುಳುಗಿ ಹೋಗಿದೆ. ಸುಮ್ಮನೆ ಕಥೆಯನ್ನು ಎಳೆಯಲಾಗುತ್ತದೆ ಎಂದು ಕೆಲವರು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ನಟ ರಕ್ಷ್ ಸಂದರ್ಶನ ಒಂದರಲ್ಲಿ ಖಡಕ್ ಉತ್ತರವನ್ನೂ ನೀಡಿದ್ದರು. ಧಾರಾವಾಹಿಯ ಕಥೆಯನ್ನು ಬೇಕಂತ ಎಳೆದಾಡುತ್ತಿಲ್ಲ. ಕಥೆಗೆ ಬೇಕಿರುವ ಪಾತ್ರಗಳ ಮೂಲಕವೇ ಕಥೆ ನಡೆಯುತ್ತಿದೆ. ವೈದೇಹಿ ತಾಯಿಯನ್ನು ಹುಡುಕುವುದಕ್ಕೆ, ಅಗ್ನಿ ಪಾತ್ರವೂ ಬಹಳ ಮುಖ್ಯವಾಗಿದೆ ಎಂದು ಹೇಳಿದ್ದರು. ಇನ್ನು ಗಟ್ಟಿಮೇಳ ಧಾರಾವಾಹಿಯಲ್ಲಿ ಅಮೂಲ್ಯ ಮತ್ತು ವೇದಾಂತ್ ಪಾತ್ರಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ.