ಬಿಗ್ ಬಾಸ್ ಮನೆಗೆ ನಾನು ಯಾವತ್ತೂ ಹೋಗಲ್ಲ ಎಂದ ಪ್ರಜ್ವಲ್ ದೇವರಾಜ್ ಜೊತೆ ಅಭಿನಯಿಸಿದ್ದ ಖ್ಯಾತ ನಟಿ

ಪ್ರತಿ ವರ್ಷ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಈ ಶೋ ಅಪೂರ್ಣವೆನಿಸುತ್ತದೆ. ಕಾರ್ಯಕ್ರಮದ ಆಯೋಜಕರಿಗೆ.. ವಾಹಿನಿಯವರಿಗೆ.. ಕೂಡ ಈ ವಿಚಾರ ಚೆನ್ನಾಗೇ ಗೊತ್ತು. ಹೀಗಾಗಿಯೇ ಎಲ್ಲರನ್ನೂ ಇರಿಟೇಟ್ ಮಾಡುವ, ನರಿ ಬುದ್ಧಿ ಪ್ರದರ್ಶಿಸುವ, ಡ್ರಾಮಾ ಮಾಡುವ ವ್ಯಕ್ತಿತ್ವಗಳನ್ನೇ ಹುಡುಕಾಡಿ ಮನೆಯಲ್ಲಿ ಸೇರಿಸಲು ಕಸರತ್ತು ಮಾಡುತ್ತಾರೆ. ಈ ವರ್ಷ ಕೂಡ ಇದೇ ತರಹದ ಪ್ರಯತ್ನಗಳಾಗುತ್ತಿವೆ.

ಇದಕ್ಕೆ ಪೂರಕವಾಗಿ ಆ ಭಾಷೆ ಈ ಭಾಷೆ ಅಂತಲ್ಲ. ಎಲ್ಲಾ ಭಾಷೆಯಲ್ಲಿ ಕೂಡ ಈಗಾಗಲೇ ಅನೇಕ ಖ್ಯಾತನಾಮರಿಗೆ ಗಾಳ ಹಾಕುವ ಕಾರ್ಯಕ್ರಮ ಶುರುವಾಗಿದೆ. ಹಲವರ ಹೆಸರುಗಳು ಅಂತೆ-ಕಂತೆಯ ಸಂತೆಯಲ್ಲಿ ಈಗಾಗಲೇ ಕೇಳಿ ಬರುತ್ತಿವೆ. ಆ ಪೈಕಿ 'ಡೈಸಿ ಷಾ' ಅವರ ಹೆಸರು ಕೂಡ ಒಂದು.

Daisy Shah Confirms She Won t Join Bigg Boss 19 Probably Never Will

ಹೌದು ಡೈಸಿ ಷಾ .. ಬಾಲಿವುಡ್‌ನ ಬೆಡಗಿ. ಒಂದ್ಕಾಲದಲ್ಲಿ ಖ್ಯಾತ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಬಳಿ ಕೆಲಸ ಮಾಡುತ್ತಿದ್ದ ಡೈಸಿ ಷಾ ಬಾಲಿವುಡ್‌ನ ಕೆಲ ಚಿತ್ರಗಳಲ್ಲಿ ಡ್ಯಾನ್ಸರ್ ಆಗಿ ಹೆಜ್ಜೆಯನ್ನು ಹಾಕಿದ್ದಾರೆ. ಚಿತ್ರರಂಗದಲ್ಲಿ ಒಂದು ದೊಡ್ಡ ಗೆಲುವು ಪಡೆಯಲು 2001ರಿಂದ ಕಸರತ್ತು ಮಾಡುತ್ತಿರುವ ಡೈಸಿ ಷಾ, ಸಲ್ಮಾನ್ ಖಾನ್ ಅಭಿನಯದ 'ಜೈಹೋ' ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು.

ಇದಕ್ಕೂ ಮುನ್ನ ಪ್ರಜ್ವಲ್ ದೇವರಾಜ್ ಅಭಿನಯದ 'ಭದ್ರ'.. ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್'.. 'ಗಜೇಂದ್ರ'.. ಹೀಗೆ ಒಂದಾದ ಮೇಲೊಂದು 3 ಕನ್ನಡ ಚಿತ್ರಗಳನ್ನು ಕೂಡ ಮಾಡಿದ್ದರು. ಇಂಥಾ ಡೈಸಿ ಷಾ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇತ್ತು.

ಈ ಸುದ್ದಿಗೆ ಈಗ ಡೈಸಿ ಷಾ ಉತ್ತರ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಪ್ರತಿಕ್ರಿಯೆಯನ್ನು ನೀಡಿರುವ ಡೈಸಿ ಷಾ ನಾನು ಬಿಗ್ ಬಾಸ್ ಮನೆಗೆ ಹೋಗ್ತಿಲ್ಲ, ಬಹುಶಃ ಯಾವತ್ತು ಹೋಗುವುದು ಇಲ್ಲ ಎಂದು ಹೇಳಿದ್ದಾರೆ.

ಡೈಸಿ ಷಾ ಅವರ ಈ ನಿರ್ಧಾರದಿಂದ ಸದ್ಯ ಇವರ ಅಭಿಮಾನಿ ಬಳಗ ಬೇಸರ ಮಾಡಿಕೊಂಡಿದೆ. ಯಾಕೆಂದರೆ.. ಸಲ್ಮಾನ್ ಖಾನ್ ಅವರ ಆಪ್ತ ವಲಯದಲ್ಲಿ ಒಂದು ಕಾಲದಲ್ಲಿ ಗುರುತಿಸಿಕೊಂಡವರು ಡೈಸಿ. ಹೀಗಾಗಿ ಡೈಸಿ ಶಾ ಬಿಗ್ ಬಾಸ್ ಮನೆಗೆ ತೆರಳಿದರೆ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದು ಎಂದು ಅನೇಕರು ಅಂದುಕೊಂಡಿದ್ದರು. ಆದರೆ ಈಗ ಈ ಆಸೆಗೆ ತಣ್ಣೀರೆರಚಿದಂತೆ ಆಗಿದೆ.

daisy-shah-confirms-she-wont-join-bigg-boss-19-probably-never-will

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಡೈಸಿ ಷಾ ಅವರಂತೆಯೇ ರಾಮ್ ಕಪೂರ್ ಕೂಡ ಬಿಗ್ ಬಾಸ್ ವಿಚಾರದಲ್ಲಿ ಮಾತನಾಡಿದ್ದರು. ಈ ಬಾರಿ ಬಿಗ್ ಬಾಸ್ ಮನೆಗೆ ಹೋಗ್ತಿದ್ದೀರಾ.? ನಿಮ್ಮ ಹೆಸರು ಕೇಳಿ ಬರುತ್ತಿದೆ ? ಎಂಬ ಪ್ರಶ್ನೆಗೆ ಉತ್ತರಿಸಿದ್ದ ರಾಮ್ ಕಪೂರ್ 20 ಕೋಟಿ ಕೊಟ್ಟರು ಕೂಡ ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದರು. ಇದೀಗ ಡೈಸಿ ಷಾ ಕೂಡ ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಹಿಂದಿ ಯೂಟ್ಯೂಬರ್ ಗೌತಮ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ, ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್‌ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್, ಮಮತಾ ಕುಲಕರ್ಣಿ,ಹೀಗೆ ಇನ್ನೂ ಕೆಲವರ ಹೆಸರುಗಳು ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಇವರಲ್ಲಿ ಯಾರೆಲ್ಲ ಹೋಗಲಿದ್ದಾರೆ ಎನ್ನುವುದಕ್ಕೆ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.

More from Filmibeat

English summary
"I am not doing Bigg Boss—probably never will," states Daisy Shah. Read her full statement clearing the air around joining Salman Khan's Bigg Boss 19.
Read more about: bigg boss actress biggboss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X