ಮೋಸ, ಅನ್ಯಾಯ ; ಬಿಗ್ ಬಾಸ್ ಮನೆಯಿಂದ ಹೊರ ಹಾಕಿದ ಆಘಾತ-ಮನದ ನೋವು ಹೊರ ಹಾಕಿ ಗಳಗಳನೆ ಅತ್ತ ಸ್ಪರ್ಧಿ

''ಬಿಗ್ ಬಾಸ್'' ಮನೆಗೆ ಪ್ರತಿ ವರ್ಷ ಹಲವರು ಅತ್ಯುತ್ಸಾಹದಿಂದ ಹೋಗುತ್ತಾರೆ. ಮನೆಯೊಳಗೆ ತೆರಳುವ ಮುನ್ನ ವೇದಿಕೆಯಲ್ಲಿ ಮಾತನಾಡುವಾಗ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಮನೆಯಲ್ಲಿ ನಡೆಯುವ ರಂಪ-ರಾಮಾಯಣದಲ್ಲಿ ಕೂಡ ಭಾಗವಹಿಸುತ್ತಾರೆ. ಮನೆಯಲ್ಲಿ ಸ್ಫರ್ಧಿಗಳ ನಡುವೆ ಬೆಂಕಿಯನ್ನು ಕೂಡ ಹಚ್ಚುವುದರಲ್ಲಿ ಮುಂದಿರುತ್ತಾರೆ. ಆದರೆ.. ಮನೆಯೊಳಗೆ ಹೋದ ಸ್ಫರ್ಧಿಗಳಲ್ಲಿ ಪ್ರತಿವಾರ ಯಾರಾದರೂ ಒಬ್ಬರು ಮನೆ ಹೊರಗಡೆ ಬರಲೇಬೇಕು. ಅದೇ ನಿಯಮ.

ಹೀಗಾಗಿಯೇ ಪ್ರತಿ ವಾರ ಜೊಳ್ಳುಗಳನ್ನ ಉದುರಿಸಿ ಗಟ್ಟಿ ಕಾಳು ಉಳಿಸಿಕೊಳ್ಳಲು ''ಬಿಗ್ ಬಾಸ್'' ಜರಡಿ ಹಿಡಿಯುತ್ತೆ. ಒಬ್ಬರನ್ನು ಮನೆಯ ಹೊರಗೆ ದಬ್ಬಲಾಗುತ್ತೆ. ಆದರೆ ಹೀಗೆ ಮನೆಯಿಂದ ಹೊರ ಬಂದ ಸ್ಫರ್ಧಿಗಳಲ್ಲಿ ಕೆಲವರು ಸೋಲನ್ನು ಅರಗಿಸಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ''ಬಿಗ್ ಬಾಸ್'' ಗೆಲ್ಲುವ ತಮ್ಮ ಕನಸು ಭಗ್ನವಾಗಿದ್ದಕ್ಕೆ ಕಣ್ಣೀರನ್ನು ಹಾಕುತ್ತಾರೆ. ಉದಾಹರಣೆಗೆ ದಮ್ಮು ಶ್ರೀಜಾ ಅವರನ್ನೇ ತೆಗೆದುಕೊಳ್ಳಿ.

Dammu Srija s Tearful Revelation The Unfiltered Truth Behind Her Shock BB Telugu 9 Exit

ಹೌದು, ಅಸಲಿಗೆ ಈ ಬಾರಿಯ ತೆಲುಗು ''ಬಿಗ್ ಬಾಸ್‌''ನಲ್ಲಿ ಜನಸಾಮಾನ್ಯರಿಗೆ ಕೂಡ ಮನೆಯ ಮುಖ್ಯದ್ವಾರವನ್ನು ತೆಗೆಯಲಾಗಿತ್ತು. ಈ ಹಿನ್ನೆಲೆ ಹಲವರು ಅರ್ಜಿ ಸಲ್ಲಿಸಿದ್ದರು. ಆ ಪೈಕಿ 40 ಜನರನ್ನು ಅಗ್ನಿ ಪರೀಕ್ಷೆ ಸುತ್ತಿಗೆ ಆಯ್ಕೆ ಮಾಡಲಾಗಿತ್ತು. ಈ 40 ಜನರಲ್ಲಿ ಕೊನೆಯಲ್ಲಿ 13 ಜನರನ್ನು ಸೆಲೆಕ್ಟ್ ಮಾಡಿಲಾಗಿತ್ತು. ಈ 13 ಜನರಲ್ಲಿ ಹರಿತಾ ಹರೀಶ್.. ಮರ್ಯಾದಾ ಮನೀಶ್.. ಪ್ರಿಯಾ ಶೆಟ್ಟಿ.. ಡಿಮೋನ್ ಪವನ್.. ಪವನ್ ಕಲ್ಯಾಣ್ ಪಡಾಲ.. ದಮ್ಮು ಶ್ರೀಜಾ ಅವರನ್ನು ಮನೆಗೆ ಒಳಗೆ ಕಳುಹಿಸಲಾಗಿತ್ತು.

ಹೀಗೆ ಹೋದ ಇವರಲ್ಲಿ ಮರ್ಯಾದಾ ಮನೀಶ್ ಎರಡನೇ ವಾರದಲ್ಲಿ ಹೊರ ಬಂದರೆ ಮೂರನೇ ವಾರ ಪ್ರಿಯಾ ಶೆಟ್ಟಿ ಹೊರ ಬಂದರು. ನಾಲ್ಕನೇ ವಾರದಲ್ಲಿ ಹರಿತಾ ಹರೀಶ್ ಮನೆಯಿಂದ ಹೊರಗಡೆ ಬಂದರೆ ಐದನೇ ವಾರ ಮನೆಯಲ್ಲಿನ ಇಬ್ಬರು ಸ್ಫರ್ಧಿಗಳ ಮೇಲೆ ತೂಗುಕತ್ತಿ ನೇತಾಡುತ್ತಿತ್ತು.

ಆ ಪೈಕಿ ಪ್ಲೋರಾ ಸೈನಿ ಅವರನ್ನು ಮನೆಯ ಹೊರಗಡೆ ಕಳುಹಿಸಿದ ನಾಗಾರ್ಜುನ ಡೇಂಜರ್ ಝೋನ್‌ನಲ್ಲಿದ್ದವರನ್ನು ಒಬ್ಬೊಬ್ಬರಾಗಿಯೇ ಉಳಿಸುತ್ತಾ ಬಂದರು. ಆದರೆ ಸುಮನ್ ಶೆಟ್ಟಿ ಮತ್ತು ದಮ್ಮು ಶ್ರೀಜಾ ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಉಳಿಸಿಕೊಳ್ಳುವಂತೆ ಮನೆಯನ್ನು ಅದಾಗಲೇ ವೈಲ್ಡ್ ಕಾರ್ಡ್‌ ಮೂಲಕ ಪ್ರವೇಶ ಮಾಡಿದ್ದ ಸದಸ್ಯರಿಗೆ ಹೇಳಿದರು. ಈ ಸಮಯದಲ್ಲಿ ಐವರ ಪೈಕಿ ನಾಲ್ಕು ಜನ ಶ್ರೀಜಾ ಹೆಸರು ತೆಗೆದುಕೊಂಡರು. ಹೀಗಾಗಿ ಬೇರೆ ದಾರಿ ಇಲ್ಲದೇ ದಮ್ಮು ಶ್ರೀಜಾ ಮನೆಯಿಂದ ಹೊರ ಬರಬೇಕಾಯ್ತು.

ಹೀಗೆ ಹೊರ ಬಂದ ದಮ್ಮು ಶ್ರೀಜಾ ಈಗ ತಮ್ಮ ಮನದ ನೋವನ್ನು ಹೊರ ಹಾಕಿದ್ದಾರೆ. ತಮಗೆ ಅನ್ಯಾಯವಾಯ್ತು ಎಂದು ಹೇಳಿದ್ದಾರೆ. ಬಿಗ್ ಬಾಸ್ ವಿರುದ್ಧ ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದಾರೆ. ಈ ಕುರಿತು ಮಾತನಾಡಿರುವ ದಮ್ಮು ಶ್ರೀಜಾ ''ಬಿಗ್ ಬಾಸ್‌'' ವೇದಿಕೆಯಲ್ಲಿ ನನಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಹೇಳಿದ್ದಾರೆ.

Dammu Srija s Tearful Revelation The Unfiltered Truth Behind Her Shock BB Telugu 9 Exit

ನಾನು ಮನೆಯಿಂದ ಹೊರಗಡೆ ಬಂದು ಒಂದು ವಾರ ಆಯ್ತು. ನನಗೆ ಅಲ್ಲಿನ ಸ್ಫರ್ಧಿಗಳು ಆ ಮನೆ ತುಂಬಾ ನೆನಪಾಗುತ್ತಿದ್ದಾರೆ ಎಂದು ಹೇಳಿರುವ ದಮ್ಮು ಶ್ರೀಜಾ ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು ನಾನು ಮನೆಯಿಂದ ಹೊರ ಬಂದ ನಂತರ ಒಂದೇ ಒಂದು ಸಂಚಿಕೆಯನ್ನು ಕೂಡ ನೋಡಿಲ್ಲ. ನೋಡಬೇಕು ಅಂದುಕೊಂಡರು ಕೂಡ ಅದು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಅಲ್ಲಿಯೇ ಇರಬೇಕಿತ್ತು ಅಲ್ವಾ ? ಎಂದು ಪ್ರಶ್ನೆ ಮಾಡಿರುವ ದಮ್ಮು ಶ್ರೀಜಾ ಒಂದು ಎಪಿಸೋಡ್ ನೋಡಲು ಕೂಡ ಸಾಧ್ಯವಾಗುತ್ತಿಲ್ಲ. ರೀಲ್ಸ್‌ನಲ್ಲಿ ಬರುವ ಕ್ಲಿಪ್‌ ನೋಡಿದಾಗ ತುಂಬಾ ನೋವಾಗುತ್ತಿದೆ ಎಂದು ಹೇಳಿದ್ದಾರೆ. ಇನ್ನು ದಸರಾ ಹಬ್ಬದ ಸಮಯದಲ್ಲಿಯೇ ನಾನು ಮನೆಗೆ ಹೈಪರ್ ಆದಿ ಬರ್ತಾರೆ ಎಂದು ಹೇಳಿದ್ದೇ, ಅವರಿಗೋಸ್ಕರ ತುಂಬಾ ಕಾದಿದ್ದೆ ಎಂದು ಹೇಳಿರುವ ದಮ್ಮು ಶ್ರೀಜಾ ತುಂಬಾ ದುಖದ ವಿಚಾರ ಅಂದರೆ ಹೈಪರ್ ಆದಿ ಮನೆಗೆ ಬರುವ ಸಮಯದಲ್ಲಿ ನಾನು ಮನೆಯಿಂದ ಹೊರ ಬಂದೆ ಇದರಿಂದ ನೋವು ಇನ್ನೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇನ್ನೂ ನನ್ನ ಗಾಯದ ಮೇಲೆ ಬರೆ ಎಳೆದಂತೆ ನಾನು ಮನೆಯ ಹೊರಗಡೆ ಬಂದ ನಂತರ ಮನೆಯಲ್ಲಿ ನನ್ನ ಪ್ರಯಾಣ ಹೇಗಿತ್ತು..? ಎನ್ನುವುದರ ಚಿಕ್ಕ ವಿಡಿಯೋ ತುಣುಕನ್ನು ( ಎವಿ) ಕೂಡ ವೇದಿಕೆಯ ಮೇಲೆ ತೋರಿಸಲಿಲ್ಲ. ಬದಲಿಗೆ ಹಾಗೇ ಹೊರಗಡೆ ಹಾಕಲಾಯ್ತು ಎಂದು ಹೇಳಿರುವ ದಮ್ಮು ಶ್ರೀಜಾ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿದ್ದಾಗ ನನ್ನ ಪೋಷಕರನ್ನು ನೋಡಬೇಕೆಂದು ಹೇಳಿದ್ದೆ ಆ ನಂತರ ಎಲ್ಲರಿಗೆ ಅವರ ಮನೆಯಿಂದ ಪತ್ರಗಳು ಬಂದಿದ್ದವು ಆದರೆ ನನಗೆ ಮಾತ್ರ ಆಗ ಪತ್ರ ನೀಡಲಿಲ್ಲ ನಾನು ತುಂಬಾ ದುರಾದೃಷ್ಟವಂತೆ ಎಂದು ಹೇಳಿ ಭಾವುಕರಾಗಿದ್ದಾರೆ.

ಸದ್ಯ ದಮ್ಮು ಶ್ರೀಜಾ ಅವರ ಈ ವಿಡಿಯೋ ವೈರಲ್ ಆಗಿದ್ದು ಬಿಗ್ ಬಾಸ್ ಮನೆಯಲ್ಲಿ ದಮ್ಮು ಶ್ರೀಜಾ ಜೊತೆ ಸಹ ಸ್ಫರ್ಧಿಯಾಗಿದ್ದ ಮನೆಯಿಂದ ಹೊರ ಬಂದ ನಟಿ ಪ್ಲೋರಾ ಸೈನಿ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.

More from Filmibeat

English summary
The tears, the shock, the final words. Dammu Srija opens up in an emotional interview following her exit from the Bigg Boss Telugu 9 house. Don't miss her powerful revelation!
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X