ಕಿರುತೆರೆಗೆ ಎಂಟ್ರಿಕೊಟ್ಟ ಮೇಘನಾ ರಾಜ್! ಚಿರುವನ್ನು ನೆನೆದು ಕಣ್ಣೀರು
ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘನಾ ರಾಜ್, ಸಾಕಷ್ಟು ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಬಹಳ ದಿನಗಳ ನಂತರ ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ನೀಡಿದ್ದಾರೆ ಮೇಘನಾ. ಮೇಘನಾ ಅವರನ್ನು ತೆರೆಯ ಮೇಲೆ ನೋಡಬೇಕು ಎಂದು ಅಭಿಮಾನಿಗಳು ಆಸೆ ಪಟ್ಟರು. ಅದಕ್ಕಿಂತ ದೊಡ್ಡ ಸರ್ಪ್ರೈಸ್ ಅನ್ನೇ ಮೇಘನಾ ನೀಡಿದ್ದಾರೆ.
ಮೇಘನಾ ರಾಜ್ ಇನ್ನುಮುಂದೆ ಪ್ರತಿ ವೀಕೆಂಡ್ ನಿಮ್ಮ ಮನೆಗೆ ಬರಲಿದ್ದಾರೆ. ಅದು ಹೇಗೆ ಅಂದ್ರೆ, ಕಲರ್ಸ್ ಕನ್ನಡ ವಾಹಿನಿಯ ಮೂಲಕ ಬರಲಿದ್ದಾರೆ ಮೇಘನಾ ರಾಜ್. ಕಲರ್ಸ್ ಕನ್ನಡ ವಾಹಿನಿಯ ಬಹಳ ಸ್ಪೆಷಲ್ ಆದ ಡ್ಯಾನ್ಸ್ ಶೋ, ಡ್ಯಾನ್ಸಿಂಗ್ ಚಾಂಪಿಯನ್ ಶೋ ಗೆ ಮೇಘನಾ ರಾಜ್ ಅವರು ಜಡ್ಜ್ ಆಗಿ ಬರುತ್ತಿದ್ದಾರೆ. ಇದರ ಪ್ರೊಮೋ ಬಿಡುಗಡೆ ಆಗಿದ್ದು, ಪ್ರೊಮೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಹಾಗೇ ಮೊದಲ ಎಪಿಸೋಡ್ ಕೂಡ ಪ್ರಸಾರವಾಗಿದೆ.
ಮೇಘನಾ ರಾಜ್ ತೆರೆ ಮೇಲೆ ಕಾಣಿಸಿಕೊಂಡು ವರ್ಷಗಳೇ ಕಳೆದವು.. ಗರ್ಭಿಣಿಯಾಗಿದ್ದ ಕಾರಣ ಚಿರು ಇದ್ದಾಗಲೇ ಸಿನಿಮಾ ದಿಂದ ಕೊಂಚ ದೂರ ಉಳಿದಿದ್ದರು.. ಆದರೆ ಆನಂತರ ಜೀವನದ ಸಾಕಷ್ಟು ಏರುಪೇರುಗಳ ನೋವಿನ ದಿನಗಳನ್ನು ದಾಟುವ ಸಮಯದಲ್ಲಿ ಬಹುಶಃ ಬಣ್ಣದ ಲೋಕದಿಂದ ಮೇಘನಾ ರಾಜ್ ಸಂಪೂರ್ಣವಾಗಿ ದೂರ ಉಳಿಯಬಹುದು ಎಂದುಕೊಂಡಿದ್ದರು ಫ್ಯಾನ್ಸ್. ಆದರೆ ಈ ನಡುವೆಯೇ ಸಿನಿಮಾನೇ ನಮ್ಮ ಜೀವನ. ಅದನ್ನು ಬಿಟ್ಟು ನಮಗೆ ನಮ್ಮ ಕುಟುಂಬಕ್ಕೆ ಬೇರೆ ಕೆಲಸವೇ ಗೊತ್ತಿಲ್ಲ. ಮತ್ತೆ ಬಣ್ಣ ಹಚ್ಚುವುದಾಗಿ ತಿಳಿಸಿದ್ದರು ಮೇಘನಾ ರಾಜ್. ಅದರಂತೆ ಈಗ ಕಿರುತೆರೆಯ ಡ್ಯಾನ್ಸ್ ಶೋನಲ್ಲಿ ನಿರೂಪಕರಾಗಿ ಕಾಣಿಸಿಕೊಂಡಿದ್ದಾರೆ.

ಪ್ರತೀ ವೀಕೆಂಡ್‌ನಲ್ಲಿ ನಿಮ್ಮ ಮುಂದೆ ಬರ್ತಾರೆ ಮೇಘನಾ
ಒಂದು ಕಡೆ ಕೊರೊನಾ ಕಾರಣದಿಂದ ಚಿತ್ರರಂಗದ ಕೆಲಸಗಳು ಸರಿಯಾಗಿ ಸಾಗದೇ ಇರುವ ಸಮಯದಲ್ಲಿ ಇತ್ತ ಮೇಘನಾ ರಾಜ್ ಹಾಗೂ ಚಿರು ಸರ್ಜಾ ಸ್ನೇಹಿತ ಪನ್ನಗ ಭರಣ ಅವರೇ ಮೇಘನಾ ರಾಜ್ ಅವರ ಸಿನಿಮಾವನ್ನು ನಿರ್ದೇಶಿಸುವುದಾಗಿ ಹೊಸ ಸಿನಿಮಾ ಬಗ್ಗೆ ತಿಳಿಸಿದ್ದರು.. ಇನ್ನು ಈ ನಡುವೆ ಇದೀಗ ಕಿರುತೆರೆಗೆ ಕಾಲಿಟ್ಟಿದ್ದು ಡ್ಯಾನ್ಸ್ ಮೂಲಕವೇ ಡ್ಯಾನ್ಸ್ ಶೋ ಗೆ ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ಪ್ರೇಕ್ಷಕರ ಮುಂದೆ ಬರಲಿದ್ದು, ಜನವರಿ 8ಕ್ಕೆ ಮೊದಲ ಎಪಿಸೋಡ್ ಪ್ರಸಾರವಾಗಿದೆ. ಈ ಮೂಲಕ ಡ್ಯಾನ್ಸಿಂಗ್ ಚಾಂಪಿಯನ್ ಗ್ರಾಂಡ್ ಓಪನಿಂಗ್ ಕಂಡಿದೆ. ಈ ಬಗ್ಗೆ ಮೇಘನಾ ರಾಜ್ ಕೂಡ ಸಾಮಾಜಿಕ ಜಾಲತಾಣದಲ್ಲಿ "ಚಿತ್ರೀಕರಣದ ದಿನ.. ಇಂದಿನಿಂದ ಚಿತ್ರೀಕರಣ ಶುರು.. ಇದು ನನ್ನ ಹೊಸ ಆರಂಭಗಳಲ್ಲಿ ಮೊದಲನೆಯದು.. ಇದು ಹೀಗೆ ಮುಂದುವರೆಯಲಿದೆ ಎಂಬ ನಂಬಿಕೆ ಇದೆ.. ಎಂದು ಬರೆದು ಪೋಸ್ಟ್ ಹಾಕಿಕೊಂಡಿದ್ದರು.

ಭಾವುಕರಾಗಿ ಕಣ್ಣೀರು ಹಾಕಿದ ನಟಿ ಮೇಘನಾ ರಾಜ್
ಮೇಘನಾ ರಾಜ್ ಡ್ಯಾನ್ಸಿಂಗ್ ಚಾಂಪಿಯನ್ ಶೋನಲ್ಲಿ ತುಂಬ ಹುರುಪಿನಿಂದ ಭಾಗಿಯಾಗಿದ್ದಾರೆ.ಅಲ್ಲದೇ ಮೊದಲ ಎಪಿಸೋಡ್‌ನಲ್ಲೆ ಚಿರುವನ್ನು ನೆನೆದು ಬಾವುಕರಾಗಿದ್ದಾರೆ ಮೇಘನಾ. ಹೌದು. ಕಲರ್ಸ್ ಕನ್ನಡದಲ್ಲಿ ಆರಂಭವಾಗಿರುವ ಈ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಮೇಘನಾ ಅವರನ್ನು ಕಂಡು ಸಾಕಷ್ಟು ಅಭಿಮಾನಿಗಳು ಸಂತಸಗೊಂಡಿದ್ದಾರೆ. ಕಾರ್ಯಕ್ರಮದ ಮೊದಲ ಎಪಿಸೋಡ್‌ನಲ್ಲಿ ಮೇಘನಾ ಕೂಡ ತುಂಬ ಖುಷಿಯಿಂದ ಭಾಗಿಯಾಗಿದ್ದರು. ಆದರೇ ಕಾರ್ಯಕ್ರಮದಲ್ಲಿ ಚಿರುವನ್ನು ನೆನೆದು ಭಾವುಕರಾಗಿದ್ದಾರೆ. ಚಿರುವಿನ ಪ್ರೋಮೊ ಒಂದು ಪ್ಲೇ ಆದ ಸಂದರ್ಭ ಈ ಬಗ್ಗೆ ಮಾತನಾಡಿದ ಮೇಘನಾ "ನನ್ನ ಮಗ ರಾಯನ್ ಅಪ್ಪನ ತರಾನೇ ತುಂಬಾ ತರ್ಲೆ. ನಾನು ಅವನಿಗೆ ಹೇಳುತ್ತೀನಿ ಅಮ್ಮ ಕರಿ ಅಂತ. ಆದರೆ ಅವನು ಅಪ್ಪಾ..ಅಪ್ಪ ಅಂತ ಅಷ್ಟೆ ಹೇಳುತ್ತಾನೆ. ಇನ್ನು ಚಿರು ಬಗ್ಗೆ ನಾನು ಯೋಚನೆ ಮಾಡಿದಾಗಲೆಲ್ಲಾ ನನಗೆ ನೆನಪಿಗೆ ಬರೋದು ಅವರ ನಗು ಮಾತ್ರ. ಯಾವಗಲೂ ನಗು ಮೊಗದಲ್ಲೆ ಇರ್ತಾ ಇದ್ದರು ಚಿರು.ಎಲ್ಲಾರು ಚಿರುನನ್ನ ಹೇಗೆ ನೆನೆಸಿಕೊಳ್ಳುತ್ತಾರೆ ಅಂದ್ರೆ ಚಿರು ಯಾವತ್ತು ಖುಷಿ ಆಗಿ ಇದ್ದರು, ಎಲ್ಲರಲ್ಲೂ ಆ ಖುಷಿಯನ್ನು ಪಸರಿಸುತ್ತಿದ್ರು ಅಂತ. ಚಿರು ನನಗೆ ಹೇಳಿರೋದು ಒಂದೇ. ಹಿಂದೆ ಏನಾಗಿದೆ ಅನ್ನೋದು ಬೇಡ , ಈಗ ನಾವು ಏನಾಗಿದ್ದೇವೆ ಅನ್ನೋದಷ್ಟೆ ಮುಖ್ಯ. ಇರುವ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕು ಅಂತ. ಇದನ್ನೆ ಚಿರು ಕೂಡ ಮಾಡುತ್ತಿದ್ದರು" ಎನ್ನುವ ಮೂಲಕ ಭಾವುಕರಾಗಿದ್ದಾರೆ.

ಸ್ಪರ್ಥಿಗಳಿಂದ ಗಮನ ಸೆಳೆಯುತ್ತಿದೆ ರಿಯಾಲಿಟಿ ಶೋ
ವಿಜಯ್ ರಾಘವೇಂದ್ರ ಅವರು ಈಗಾಗಲೇ ಡಾನ್ಸ್ ಕರ್ನಾಟಕ ಡಾನ್ಸ್ ಎನ್ನುವ ಜನಪ್ರಿಯ ಡಾನ್ಸ್ ಶೋಗೆ ಜಡ್ಜ್ ಆಗಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ. ಡಾನ್ಸ್ ಕರ್ನಾಟಕ ಡಾನ್ಸ್ ಕೆಲವೇ ದಿನಗಳ ಹಿಂದೆ ಮುಗಿದಿದೆ. ಈಗ ವಿಜಯ್ ರಾಘವೇಂದ್ರ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಮತ್ತೊಂದು ಡಾನ್ಸ್ ರಿಯಾಲಿಟಿ ಶೋ ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ ತೀರ್ಪುದಾರರಾಗಿದ್ದಾರೆ. ಇವರೊಂದಿಗೆ ಖ್ಯಾತ ಡ್ಯಾನ್ಸರ್ ಆಗಿರುವ ಮಯೂರಿ ಅವರು ಕೂಡ ಈ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋ ನಲ್ಲಿ ಮೇಘನಾ ರಾಜ್‌ಗೆ ಸಾಥ್ ನೀಡುತ್ತಿದ್ದಾರೆ.

ಮೊದಲ ಎಪಿಸೋಡ್‌ನಿಂದಲೇ ಭರವಸೆ ಹುಟ್ಟಿಸಿದೆ ಶೋ
ಸದ್ಯ ಅದಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಡ್ಯಾನ್ಸಿಂಗ್ ಚಾಂಪಿಯನ್ ಶೋ ನಲ್ಲಿ ಕಿರುತೆರೆಯ ಸಾಕಷ್ಟು ಸೆಲಿಬ್ರೆಟಿಗಳು ನಟಿ ನೇಹಾ ಗೌಡ ಅವರ ಪತಿ ರಾಜಾ ರಾಣಿ ಖ್ಯಾತಿಯ ಚಂದನ್. ಹಾಗೂ ಅದೇ ಶೋ ನ ನಟಿ ಇಶಿತಾ, ಕಿರುತೆರೆ ನಟಿ ಚಂದನ ಅನಂತ ಕೃಷ್ಣ, ಕನ್ನಡತಿ ಧಾರಾವಾಹಿಯ ನಟಿ ಸುಚಿ, ಪುಟ್ಟ ಗೌರಿ ಮದುವೆ ಖ್ಯಾತಿಯ ನಟಿ ಪುಟ್ಟ ಗೌರಿ ಸಾನಿಯಾ. ಇತ್ತ ಗಟ್ಟಿಮೇಳ ಧಾರಾವಾಹಿಯ ವೇದಾಂತ್ ತಂಗಿ ಆದ್ಯ ಹೀಗೆ ಸಾಕಷ್ಟು ಕಿರುತೆರೆ ಸ್ಟಾರ್‌ಗಳು ಶೋನಲ್ಲಿ ಭಾಗವಹಿಸುತ್ತಿದ್ದಾರೆ.


Click it and Unblock the Notifications











