For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಡ್ಯಾನ್ಸ್ ಶೋ.!

  By Harshitha
  |

  ಹೊಸತನದೊಂದಿಗೆ ಸುವರ್ಣ ವಾಹಿನಿ ಹೊಚ್ಚ ಹೊಸ ಡ್ಯಾನ್ಸ್ ಶೋ ಆರಂಭಿಸಿದೆ. 'ಡ್ಯಾನ್ಸ್ ಡ್ಯಾನ್ಸ್' ರಿಯಾಲಿಟಿ ಶೋ ಫೆಬ್ರವರಿ 1 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

  ಕನ್ನಡ ಕಿರುತೆರೆ ಮತ್ತು ಸಿನಿಮಾ ರಂಗದಲ್ಲಿ ಹೆಸರುವಾಸಿಯಾಗಿರುವ 10 ಜೋಡಿಗಳು ಈ ಶೋನಲ್ಲಿ ಸ್ಪರ್ಧಿಸಲಿದ್ದಾರೆ. ಪ್ರತಿವಾರ ಒಂದು ಎಲಿಮಿನೇಷನ್ ಇರಲಿದೆ. ಡ್ಯಾನ್ಸ್ ಜೊತೆ ರಿಯಾಲಿಟಿ ಟಾಸ್ಕ್ ಕೂಡ ಇರುವುದು 'ಡ್ಯಾನ್ಸ್ ಡ್ಯಾನ್ಸ್' ಶೋ ಸ್ಪೆಷಾಲಿಟಿ.

  'ಲೂಸಿಯಾ' ಖ್ಯಾತಿಯ ನಟಿ ಶ್ರುತಿ ಹರಿಹರನ್, 'ನವಗ್ರಹ', 'ಸಜನಿ' ಚಿತ್ರಗಳ ಬೆಡಗಿ ಶರ್ಮಿಳಾ ಮಾಂಡ್ರೆ ಮತ್ತು ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಚಿನ್ನಿ ಪ್ರಕಾಶ್ 'ಡ್ಯಾನ್ಸ್ ಡ್ಯಾನ್ಸ್' ಶೋ ನಿರ್ಣಾಯಕರು. [ಹೆಂಗಳೆಯರ ಮನಮುಟ್ಟುವ ಹೊಸ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ!]

  ಸುವರ್ಣ ವಾಹಿನಿಯ ರಿಯಾಲಿಟಿ ಶೋಗಳ ಸಾರಥ್ಯ ವಹಿಸಿರುವ ಅಕುಲ್ ಬಾಲಾಜಿ 'ಡ್ಯಾನ್ಸ್ ಡ್ಯಾನ್ಸ್' ಶೋ ನಿರೂಪಣೆ ಮಾಡಲಿದ್ದಾರೆ. ಫೆಬ್ರವರಿ 1 ರಂದು ಕಾರ್ಯಕ್ರಮದ ಮೊದಲ ಸಂಚಿಕೆ ಪ್ರಸಾರವಾಗಲಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.

  English summary
  Kannada Entertainment Channel Suvarna has come up with a new dance reality show called 'Dance Dance' exclusively for celebrity couples. The show will telecast from February 1st, 7.30 pm Monday to Friday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X