ಕರಾಟೆಯಲ್ಲಿ ಕಿಂಗ್ ಡ್ಯಾನ್ಸ್ ನಲ್ಲಿ ನಂ.1: 'DKD' ಸ್ಪರ್ಧಿ ಮಲ್ಟಿ ಟ್ಯಾಲೆಂಟ್ ನಿಧಿ ಬಗ್ಗೆ ನಿಮಗೆಷ್ಟು ಗೊತ್ತು?
ಮಲೆನಾಡಿನ ಸುಂದರಿ ನಿಧಿ ಸುರೇಶ್ ಅಂದರೆ ಯಾರು ಅಂತ 'ಡಾನ್ಸ್ ಕರ್ನಾಟಕ ಡಾನ್ಸ್' ರಿಯಾಲಿಟಿ ಶೋ ನೋಡಿದವರಿಗೆ ಗೊತ್ತಿರುತ್ತೆ. ಡಾನ್ಸ್ ಶೋನಲ್ಲಿ ಹೆಜ್ಜೆ ಹಾಕಿತ್ತಾ ಅದ್ಭುತ ಪ್ರದರ್ಶನ ನೀಡುತ್ತಿರುವ ನಿಧಿ ಸುರೇಶ್ ಕಿರುತೆರೆ ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ಮಲೆನಾಡಿನ ತೀರ್ಥಹಳ್ಳಿಯಿಂದ ಬಂದಿರುವ 17 ವರ್ಷದ ನಿಧಿ 12ನೇ ತರಗತಿ ಓದುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ನಿಧಿಗೆ ನೃತ್ಯನೇ ಎಲ್ಲಾ. ಡಾನ್ಸ್ ಮೇಲೆ ಅಪಾರ ಪ್ರೀತಿ ಹೊಂದಿರುವ ನಿಧಿ ಚಿಕ್ಕ ವಯಸ್ಸಿನಿಂದಲೇ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ. 4 ವರ್ಷದವಳಾಗಿದ್ದಾಗಿನಿಂತ ನೃತ್ಯ ಮಾಡುತ್ತಿರುವ ನಿಧಿ ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೋಲ್ಡ್ ಮೆಡಲ್ ಗೆದ್ದಿದ್ದಾರೆ.
ಗೋವಾದಲ್ಲಿ ನಡೆದ ಸೌತ್ ಇಂಡಿಯಾ ಡಾನ್ಸ್ ಸ್ಪೋರ್ಟ್ಸ ಚಾಂಪಿಯನ್ ಶಿಪ್, ಪಶ್ಚಿಮಬಂಗಾಳದಲ್ಲಿ ನಡೆದ ನ್ಯಾಷನಲ್ ಡಾನ್ಸ್ ಸ್ಪೋರ್ಟ್ಸ ಕಾಂಪಿಟೀಷನ್ ಸೇರಿದಂತೆ ಅನೇಕ ದೊಡ್ಡ ಸ್ಪರ್ಧೆಗಳಲ್ಲಿ ಭಾಗಿಯಾಗಿ ಗೋಲ್ಡ್ ಮೆಡಲ್ ಮುಡಿಗೇರಿಸಿಕೊಂಡಿದ್ದಾರೆ. ಅಂದಹಾಗೆ ನಿಧಿ ಕೇವಲ ಡಾನ್ಸರ್ ಮಾತ್ರವಲ್ಲ, ಕಬಡ್ಡಿ, ಸ್ಕೇಕಿಂಗ್ ನಲ್ಲೂ ಸಾಧನೆ ಮಾಡಿದ್ದಾರೆ.

ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ
ವಿಶೇಷ ಎಂದರೆ ನಿಧಿ ಕರಾಕೆ ಕಿಂಗ್ ಕೂಡ ಹೌದು. ಕರಾಟೆ ಚಾಂಪಿಯನ್ ಶಿಪ್ ನಲ್ಲೂ ಸ್ಪರ್ಧಿಸಿ ಮೊದಲ ಸ್ಥಾನ ಪಡೆದ್ದಾರೆ. Mr and Mrs asia glamour 2020 ಸೆಮಿಫೈನಲಿಸ್ಟ್ ಆಗಿದ್ದಾರೆ. ಸಖತ್ ಆಕ್ಟೀವ್ ಆಗಿರುವ ನಿಧಿ ಅವರಿಗೆ ಈ ವಯಸ್ಸಿನಲ್ಲೇ ಸಾಧಿಸಬೇಕು ಎನ್ನುವ ಚಲವಿದೆ.
ನಿಧಿ ಅವರ ಕನಸಿಗೆ ತಂದೆ-ತಾಯಿಯ ಬೆಂಬಲ ಕೂಡ ಅಷ್ಟೆ ಇದೆ. ಪ್ರತಿ ಹೆಜ್ಜೆಯಲ್ಲೂ ಜೊತೆಯಲ್ಲೇ ನಿಂತು ಸಾಥ್ ನೀಡುತ್ತಿರುವ ತಾಯಿಯ ಬಗ್ಗೆ ನಿಧಿ ತುಂಬಾ ಹೆಮ್ಮೆ ವ್ಯಕ್ತಪಡಿಸುತ್ತಾರೆ. ಡಾನ್ಸರ್ ಆಗಬೇಕು, ನಟಿಯಾಗಬೇಕು ಎಂದು ಕನಸು ಕಾಣುತ್ತಿರುವ ನಿಧಿಗೆ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋ ವೇದಿಕೆ ಮೊದಲ ಹೆಜ್ಜೆಯಾಗಿದೆ.

ನಿಧಿ ಸುರೇಶ್ ಪ್ರತಿಕ್ರಿಯೆ
'ಫಿಲ್ಮಿ ಬೀಟ್ ಕನ್ನಡ'ದ ಜೊತೆ ಮಾತನಾಡಿರುವ ನಿಧಿ, '4 ವರ್ಷದವಳಿದ್ದಾಗಿನಿಂದ ಡಾನ್ಸ್ ಕಲಿಯುತ್ತಿದ್ದೀನಿ. ಇದೀಗ ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ನಲ್ಲಿ ಅವಕಾಶ ಸಿಕ್ಕಿರುವುದು ತುಂಬಾ ಸಂತಸವಾಗಿದೆ. ಅಪ್ಪ-ಅಮ್ಮ ತುಂಬಾ ಖುಷಿ ಪಟ್ಟಿದ್ದಾರೆ. ಬೆಳಗ್ಗೆ 5 ಗಂಟೆಯಿಂದ ನನ್ನ ದಿನ ಪ್ರಾರಂಭವಾಗುತ್ತೆ. ಬೆಳಗ್ಗೆ ಎದ್ದು ಓದುತ್ತೇನೆ, ಬಳಿಕ ಕರಾಟೆ ಕ್ಲಾಸ್ ಹೋಗುತ್ತೇನೆ. ನಂತರ ಕಾಲೇಜು ಮತ್ತೆ ಡಾನ್ಸ್ ಕಲಿಯಲು ಹೋಗುತ್ತೇನೆ. ಉತ್ತಮ ಡಾನ್ಸರ್, ಕೊರಿಯೋಗ್ರಾಫರ್ ಮತ್ತು ನಟಿಯಾಗಬೇಕು ಎಂದುಕೊಂಡಿದ್ದೀನಿ' ಅಂತ ತನ್ನ ದಿನಚರಿ ಮತ್ತು ಕನಸಿನ ಬಗ್ಗೆ ಮಾತನಾಡಿದ್ದಾರೆ.

ಸದ್ಯ ಡ್ಯಾನ್ಸ ರಿಯಾಲಿಟಿ ಶೋನಲ್ಲಿ ಭಾಗಿಯಾಗಿರುವ ನಿಧಿ ಅದ್ಭುತ ನೃತ್ಯದ ಮೂಲಕ ಕನ್ನಡಿಗರನ್ನು ರಂಜಿಸಿ ಗೆದ್ದು ಬರಲಿ ಎಂದು ವಿಶ್ ಮಾಡೋಣ. ನಿಧಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ, ಅವರ ಸುಂದರ ಕನಸುಗಳು ನನಸಾಗಲಿ ಎನ್ನುವುದೇ ನಮ್ಮ ಆಶಯ.


Click it and Unblock the Notifications











