DKD Season 7: ಅದೇ ಎನರ್ಜಿ.. ಅದೇ ಖದರ್..ಸಾಮಾನ್ಯರನ್ನೂ ಸೆಲೆಬ್ರೆಟಿ ಮಾಡೋಕೆ ಹೊರಟ ಶಿವಣ್ಣ
ಜೀ ಕನ್ನಡದಲ್ಲಿ ಆಗಾಗ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಧಾರಾವಾಹಿಯಲ್ಲಿ ಆಗಿರಬಹುದು, ರಿಯಾಲಿಟಿ ಶೋಗಳಲ್ಲಿ ಆಗಿರಬಹುದು. ಜನಗಳಿಗೆ ಮನರಂಜನೆ ನೀಡುವುದಕ್ಕೆ ಮೊದಲಿಗೆ ನಿಂತಿರುತ್ತದೆ ಜೀ ಕನ್ನಡ. ಒಂದು ಕಾರ್ಯಕ್ರಮ ಮುಗಿಯುತ್ತಿದೆ ಎಂದರೆ ಅದನ್ನು ಫುಲ್ ಫಿಲ್ ಮಾಡುವುದಕ್ಕೆ ಮತ್ತೊಂದು ಕಾರ್ಯಕ್ರಮ ಸಜ್ಜಾಗಿರುತ್ತದೆ.
ಇತ್ತೀಚೆಗಷ್ಟೇ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋ ಮುಕ್ತಾಯವಾಗಿದೆ. ಹಳ್ಳಿ ಪ್ರತಿಭೆ, ನಗರ ಪ್ರತಿಭೆಗಳನ್ನು ಕರೆ ತಂದು ಕಡೆಗೂ ಹಳ್ಳಿ ಪ್ರತಿಭೆಗೆ ಬಹುಮಾನವನ್ನು ನೀಡಿದ್ದಾರೆ. ಆ ಶೋ ಮುಗಿದ ಬೆನ್ನಲ್ಲೇ ಹೊಸ ಶೋ ಶುರು ವೇದಿಕೆ ಸಜ್ಜಾಗಿದೆ. ಅದಕ್ಕೆ ಸ್ಯಾಂಡಲ್‌ವುಡ್‌ನ ಎನರ್ಜಿಟಿಕ್ ಹೀರೋ ಒನ್ ಅಂಡ್ ಓನ್ಲಿ ಶಿವಣ್ಣ ಕೂಡ ರೆಡಿ ಅಂತ ಕೂಗಿ ಕೂಗಿ ಹೇಳ್ತಿದ್ದಾರೆ.

ಮತ್ತೆ ಶುರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್
ಜೀ ಕನ್ನಡಕ್ಕೂ ಡಾ. ಶಿವರಾಜ್ ಕುಮಾರ್ ಅವರಿಗೂ ಅವಿನಾಭಾವ ಸಂಬಂಧ. ಅದನ್ನು ಬಾಯ್ಬಿಟ್ಟು ಹೇಳುವಂತೆಯೇ ಇಲ್ಲ. ಡಿಕೆಡಿಯಲ್ಲಿ ಶಿವಣ್ಣ ಇಲ್ಲ ಅಂದ್ರೆ ಅಲ್ಲೊಂದು ಎನರ್ಜಿ ಮಿಸ್ ಆದಂತೆಯೇ ಸರಿ. ಡಿಕೆಡಿ ಸೀಸನ್ 5ರ ಮೂಲಕ ಶಿವಣ್ಣ ಮತ್ತೆ ಕರ್ನಾಟಕದ ಡ್ಯಾನ್ಸರ್‌ಗೆ ಎನರ್ಜಿ ತುಂಬಲು ಬರುತ್ತಿದ್ದಾರೆ. ಜೀ ಕನ್ನಡದಿಂದ ಈ ಬಾರಿಯೂ ಡಿಕೆಡಿ ಶೋ ಆರಂಭವಾಗುತ್ತಿದೆ. ಅತಿ ಶೀಘ್ರದಲ್ಲಿ ಇದಕ್ಕೊಂದು ದಿನಾಂಕ ಗೊತ್ತು ಪಡಿಸಲಿದ್ದಾರೆ. ಅದಕ್ಕಾಗಿಯೇ ಹೊಸದಾಗಿ ಪ್ರೋಮೋ ಕೂಡ ರೆಡಿ ಮಾಡಿದ್ದಾರೆ.
ಡಿಕೆಡಿ ಪ್ರೋಮೋದಲ್ಲಿ 'ಓಂ' ಸಿನಿಮಾ
ಜೀ ಕನ್ನಡದಲ್ಲಿ ಯಾವುದೇ ಹೊಸ ರಿಯಾಲಿಟಿ ಶೋ ಬಂದರು ಕೂಡ ಪ್ರೋಮೊ ಅದ್ಭುತವಾಗಿರುತ್ತದೆ, ವಿಭಿನ್ನವಾಗಿರುತ್ತದೆ. ಕಾರ್ಯಕ್ರಮ ಕೈ ಬೀಸಿ ಕರೆದು, ಕಾತುರತೆ ಹೆಚ್ಚುವಂತೆ ಮಾಡುತ್ತದೆ ಜೀ ಕನ್ನಡದಲ್ಲಿ ಬಿಡುವಂತ ಪ್ರೋಮೋಗಳು. ಇದೀಗ ಡಿಕೆಡಿ ಆರಂಭದ ವಿಚಾರಕ್ಕೂ ಪ್ರೋಮೋ ಬಿಟ್ಟಿದ್ದು, ಶಿವಣ್ಣನ ಓಂ ಸಿನಿಮಾವನ್ನು ನೆನಪಿಸುತ್ತಿದೆ. ಶಿವಣ್ಣನ ಕ್ರೇಜ್ ಈಗಲೂ ಹೇಗಿದೆ ಎಂಬುದನ್ನು ತೋರಿಸುತ್ತಿದೆ.
ಶಿವಣ್ಣನ ಸುತ್ತ ಫ್ಯಾನ್ಸ್
'ಓಂ' ಸಿನಿಮಾವನ್ನು ಈಗಾಗಲೇ ಅದೆಷ್ಟು ಬಾರಿ ರಿ-ರಿಲೀಸ್ ಮಾಡಲಾಗಿದೆ. ಆದರೆ, ಅಷ್ಟು ಬಾರಿಯೂ ಜನರಿಗೆ ತಲುಪುವಲ್ಲಿ ಸಕ್ಸಸ್ ಆಗಿದೆ. ಟಿವಿಯಲ್ಲಿ, ಮೊಬೈಲ್‌ನಲ್ಲಿ ನೋಡಿದ್ದಾರೆ. ಆದರೆ, ಈಗಲೂ ಥಿಯೇಟರ್‌ನಲ್ಲಿ 'ಓಂ' ಸಿನಿಮಾ ರಿಲೀಸ್ ಆದ್ರೆ, ಒಮ್ಮೆ ಹೋಗಿ ಬರೋಣಾ ಅಂತಾನೆ ಎಲ್ಲರೂ ಹೇಳ್ತಾರೆ. ಅದೇ ಕ್ರೇಜ್ ಮೂಲಕ ಪ್ರೋಮೋ ರೆಡಿ ಮಾಡಿದ್ದಾರೆ.

ಹೊಸ ಪ್ರೋಮೋದಲ್ಲಿ ಏನಿದೆ..?
ಡಿಕೆಡಿ ಹೊಸ ಪ್ರೋಮೋದಲ್ಲಿ ಶಿವಣ್ಣನೇ ಹೈಲೈಟ್ ಆಗಿದ್ದಾರೆ. ಥಿಯೇಟರ್‌ನಲ್ಲಿ ಶಿವಣ್ಣ ಅಭಿನಯದ 'ಓಂ' ಸಿನಿಮಾ ರಿಲೀಸ್ ಆಗುತ್ತೆ. ದೊಡ್ಡ ಬ್ಯಾನರ್ ಬೀಳುತ್ತೆ, ಹಾರ, ಅಭಿಷೇಕ ಆಗುತ್ತೆ. ತಮಟೆಯ ಸದ್ದು ಥಿಯೇಟರ್ ಮುಂದೆ ಮೊಳಗುತ್ತೆ. ಜನ ಸಂದಣಿ ಇರುವಲ್ಲಿಗೆ ಶಿವಣ್ಣನ ಕಾರು ಎಂಟ್ರಿ ಕೊಡುತ್ತೆ. ಫ್ಯಾನ್ಸ್ ದಿಲ್ ಖುಷ್ ಆಗ್ತಾರೆ. ಅಣ್ಣಾ ಒಂದು ಸೆಲ್ಫಿ ಅಂದ್ರೆ ಕೊಟ್ಟು ಹೋಗುವಾಗ, ಶಿವಣ್ಣನ ಕಿವಿಗೆ ಒಂದು ಸೌಂಡ್ ಕೇಳುತ್ತೆ. ಎಲ್ಲಿ ಅಂತ ಹುಡುಕಿ ಹೊರಟಾಗ, ಒಬ್ಬ ಸಾಮಾನ್ಯ ಹುಡುಗ ಕುಣಿತಾ ಇರುತ್ತಾನೆ. ಅವನ ಬಳಿ ಶಿವಣ್ಣ ಅವರೇ ಹೋಗಿ, ಸೆಲ್ಫಿ ತಗೊಂಡು, ಮುತ್ತು ಕೊಡ್ತಾರೆ. ಆಗ "ಸಾಮಾನ್ಯರನ್ನ ಸೆಲೆಬ್ರೆಟಿ ಮಾಡೋಣಾ" ಅಂತ ಡೈಲಾಗ್ ಹೊಡಿತಾರೆ. ಅಂದ್ರೆ, ಈ ಬಾರಿ ಡಿಕೆಡಿಯಲ್ಲಿ ಸಾಮಾನ್ಯ ಡ್ಯಾನ್ಸರ್‌ಗಳು ಇರಲಿದ್ದಾರೆ ಎಂಬ ಕ್ಲೂ ಸಿಕ್ಕಿದೆ.


Click it and Unblock the Notifications











