ಕಷ್ಟ ಬಂದಾಗ ನಿನ್ನ ಬೆನ್ನ ಹಿಂದೆ ಇರ್ತೀನಿ: ದರ್ಶನ್ ಮಾತು ನೆನೆದು ಭಾವುಕರಾದ ರಕ್ಷಿತಾ!

By ಎಸ್ ಸುಮಂತ್

ಡಿಕೆಡಿ ಕೇವಲ ಡ್ಯಾನ್ಸ್ ವೇದಿಕೆ ಮಾತ್ರವಲ್ಲ. ಅದೊಂದು ಭಾವನೆಗಳ ಅಡ್ಡ. ಹಲವು ನೋವು ನಲಿವುಗಳನ್ನು ನೆನಪಿಸುವ ವೇದಿಕೆ. ಯಾವತ್ತೋ ಮಾಡಿದ ತಪ್ಪಿಗೆ, ಕಳೆದು ಹೋದ ಸಂಬಂಧಗಳನ್ನು ಹುಡುಕಿಕೊಡುವ ಬಗೆಗೆ, ನಕ್ಕು ನಲಿದು, ಡ್ಯಾನ್ಸ್ ನಲ್ಲಿಯೇ ಎಲ್ಲಾ ನೆನಪಿಸುವಂತ ಫ್ಲಾಟ್ ಫಾರ್ಮ್ ಅಂತಾನೆ ಹೇಳಬಹುದು. ಯಾವತ್ತು ಹೇಳಲಾಗದ ಆ ಒಂದು ಮಾತನ್ನು ಹೇಳಿ ದೂರವಾಗಿದ್ದ ಸಂಬಂಧಗಳನ್ನು ಹತ್ತಿರ ಕರೆಸಿದೆ. ಡ್ಯಾನ್ಸ್ ಮೂಲಕ ಪ್ರತಿಭೆಗಳನ್ನು ಅನಾವರಣ ಮಾಡಿದರೆ, ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದೆ.

ಡಿಕೆಡಿ ವೇದಿಕೆಯಲ್ಲಿ ಆಗಾಗ ಅದ್ಭುತಗಳು ನಡೆಯುತ್ತಿರುತ್ತವೆ. ಡ್ಯಾನ್ಸ್ ಮೂಲಕ ಯಾವಾಗಲೂ ಸೃಷ್ಟಿಯಾಗುವ ಅದ್ಭುತ ಒಂದು ಕಡೆಯಾದರೆ, ಒಬ್ಬೊಬ್ಬರ ಜೀವನದ ಬಗ್ಗೆ ಅನಾವರಣ ಮಾಡುವ ರೀತಿ ಮತ್ತಷ್ಟು ರೋಚಕ. ಕಳೆದ ವಾರ ಚಿನ್ನಿ ಪ್ರಕಾಶ್ ಅವರ ಜೀವನಕಥೆಯನ್ನು ಸಾರಿದ್ದರು. ಇದೀಗ ರಕ್ಷಿತಾ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿ ಜರ್ನಿಯನ್ನು ಸಾರಿದ್ದಾರೆ.

ಮೆಜೆಸ್ಟಿಕ್ & ಅಪ್ಪು ಸಿನಿಮಾದ ಅನಾವರಣ

ಮೆಜೆಸ್ಟಿಕ್ & ಅಪ್ಪು ಸಿನಿಮಾದ ಅನಾವರಣ

ಡ್ಯಾನ್ಸ್ ಮೂಲಕ ಯಾವ ಭಾವನೆಯನ್ನು ಬೇಕಾದರೂ ಎಕ್ಸ್‌ಪ್ರೆಸ್ ಮಾಡಬಹುದು. ಏನನ್ನಾದರೂ ಡ್ಯಾನ್ಸ್ ಮೂಲಕ ಹೇಳುವ ಸಾಮರ್ಥ್ಯ ನೃತ್ಯಗಾರರಿಗಿರುತ್ತದೆ. ಇದೀಗ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಎಮೋಷನಲ್ ಕಥೆಯನ್ನು ಹೇಳಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ 'ಮೆಜೆಸ್ಟಿಕ್'ನಿಂದ ದರ್ಶನ್ ಸಿನಿಜರ್ನಿ ಶುರುವಾದರೆ, ಅಪ್ಪು ಸಿನಿಮಾದಿಂದ ರಕ್ಷಿತಾ ಸಿನಿ ಜರ್ನಿಯನ್ನು ಆರಂಭಿಸಿದ್ದರು. ಈ ಸುಂದರ ಸಿನಿ ಜರ್ನಿಯನ್ನು ಜಾನ್ಸನ್ ಮತ್ತು ಅಶ್ರಿತಾ ಸಕಜತ್ ಪರ್ಫಾಮೆನ್ಸ್ ಮೂಲಕ ತೋರಿಸಿದ್ದಾರೆ.

ಸೂಪರ್ ಜೋಡಿಯ ಸೂಪರ್ ಪರ್ಫಾಮೆನ್ಸ್

ಸೂಪರ್ ಜೋಡಿಯ ಸೂಪರ್ ಪರ್ಫಾಮೆನ್ಸ್

ಸ್ಯಾಂಡಲ್‌ವುಡ್‌ನಲ್ಲಿ ಕ್ಯೂಟ್ ಪೇರ್, ಫೇಮಸ್, ಸಕ್ಸಸ್ ಪೇರ್‌ಗಳಲ್ಲಿ ರಕ್ಷಿತಾ ಮತ್ತು ದರ್ಶನ್ ಪೇರ್ ಕೂಡ ಒಂದು. ದರ್ಶನ್ ಫ್ಯಾನ್ಸ್ ಅಂತು ರಕ್ಷಿತಾರನ್ನು ಅತ್ತಿಗೆ ಅಂತಾನೆ ಕರೆಯುತ್ತಾರೆ. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳು ಹಿಂದೆ ಬಿದ್ದಿದ್ದೆ ಇಲ್ಲ. ಎಲ್ಲಾ ಸಿನಿಮಾಗಳು ಸೂಪರ್ ಹಿಟ್. ಈ ಜೋಡಿಯನ್ನು ಮತ್ತೆ ಮತ್ತೆ ನೋಡಬೇಕು ಎಂದು ಬಯಸುವ ಬಳಗ ಹೆಚ್ಚಾಗಿತ್ತು. ಅಂಥ ಸೂಪರ್ ಜೋಡಿಯ ಸಿನಿಮಾಗಳ ಹಾಡುಗಳನ್ನು ವೇದಿಕೆ ಮೇಲೆ, ನೃತ್ಯದ ಮೂಲಕ ಹಳೆಯ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದೆ.

ರಕ್ಷಿತಾ-ದರ್ಶನ್ ಜೋಡಿ ಹೇಗಿತ್ತು?

ರಕ್ಷಿತಾ-ದರ್ಶನ್ ಜೋಡಿ ಹೇಗಿತ್ತು?

'ಕಲಾಸಿಪಾಳ್ಯ' ಸಿನಿಮಾ ಮೂಲಕ ಇಬ್ಬರ ಜೋಡಿ ಮೋಡಿ ಮಾಡಿತ್ತು. ಓ ಕೆಂಚಾ ಓ ಕೆಂಚಾ ಹಾಡು ಈಗಲೂ ಹಾರ್ಟ್ ಫೇವರಿಟ್. ಇಬ್ಬರ ಜೋಡಿಯನ್ನು ಚಿನ್ನಿ ಪ್ರಕಾಶ್ ಹಾಡಿ ಹೊಗಳಿದ್ದಾರೆ. ರಕ್ಷಿತಾ ಮತ್ತು ದರ್ಶನ್ ಜೋಡಿಯೇ ಅದ್ಭುತ. ರೋಮ್ಯಾನ್ಸ್ ಆಗಲಿ, ಆಕ್ಟಿಂಗ್ ಆಗಲಿ ಬ್ಯೂಟಿಫುಲ್ ಎಂದಿದ್ದಾರೆ. ದರ್ಶನ್ ನಂಗೆ ಚಿಕ್ಕ ವಯಸ್ಸಿನಿಂದ ಗೊತ್ತು. ದೇವರ ಮಗದಲ್ಲಿ ಜೊತೆಯಲ್ಲಿಯೇ ಮಾಡಿದ್ದರು.‌ ಆಮೇಲೆ ದೊಡ್ಡ ಸ್ಟಾರ್ ಆಗಿ ಬೆಳೆದ್ರು, ಹೀಗೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ಶಿವಣ್ಣ ಹಾರೈಸಿದ್ದಾರೆ.

ರಕ್ಷಿತಾಗೆ ದರ್ಶನ್ ಕೊಟ್ಟ ಮಾತೇನು?

ರಕ್ಷಿತಾಗೆ ದರ್ಶನ್ ಕೊಟ್ಟ ಮಾತೇನು?

ಈ ವಾರ ದರ್ಶನ್ ಮತ್ತು ರಕ್ಷಿತಾ ಅವರ ಸರದಿ. ಅವರು ಒಟ್ಟಿಗೆ ಮಾಡಿದ ಎಲ್ಲಾ ಸಿನಿಮಾಗಳ ಹಾಡನ್ನು ಒಟ್ಟು ಮಾಡಿ, ನೃತ್ಯ ಮಾಡಿದ್ದಾರೆ. ಸ್ಟೇಜ್ ಮೇಲೆ ರಕ್ಷಿತಾ ಮತ್ತು ದರ್ಶನ್ ಅವರ ಫೋಟೊಗಳನ್ನು ಹಾಕಲಾಗಿತ್ತು. ಆ ಕಡೆ ಡಿ ಬಾಸ್. ಈ ಕಡೆ ಕ್ರೇಜಿ ಕ್ವೀನ್ ರಕ್ಷಿತಾ ಟೈಟಲ್ ಹಾಕಿ ನೃತ್ಯ ಮಾಡಿದ್ದಾರೆ. ದರ್ಶನ್ ಮತ್ತು ರಕ್ಷಿತಾ ಇಬ್ಬರ ಫ್ರೆಂಡ್‌ಶಿಪ್ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ವೇದಿಕೆ ಮೇಲೆ ಮತ್ತೊಮ್ಮೆ ರಕ್ಷಿತಾ ಆ ಬಗ್ಗೆ ಮಾತನಾಡಿದ್ದಾರೆ. ದರ್ಶನ್ ಅಪ್ಪಾಜಿ ಹತ್ರ ಕ್ಯಾಮೆರಾ ಮೆನ್ ಆಗಿ ಕೆಲಸ ಮಾಡ್ತಾ ಇದ್ರು. ಅದೇ ರೆಸ್ಪೆಕ್ಟ್ ಹೆಚ್ಚಾಗಿದೆ. ಯಾವಾಗಲೂ ಹೇಳ್ತಾರೆ ನೀನು ನಮ್ಮ ಗುರುಗಳ ಮಗಳು ಅಂತ. ಯಾವಾಗಲೂ ಒಂದು ಮಾತು ಹೇಳ್ತಾನೆ. ಏನಾದ್ರೂ ಆಗಲಿ, ಯಾರು ಏನೇ ಮಾತಾಡಲಿ ಖುಷಿಯಾಗಿ ಬದುಕಬೇಕು. ಖುಷಿಯಾಗಿ ಇದ್ದಾಗ ನಾನು ನಿನ್ನ ಜೊತೆ ಇಲ್ಲದೆ ಇರಬಹುದು, ಆದರೆ ದುಃಖದಲ್ಲಿದ್ದಾಗ ಸದಾ ನಿನ್ನ ಬೆನ್ನ ಹಿಂದೆ ಇರ್ತೀನಿ ಅಂತಾನೆ ಎಂದು ರಕ್ಷಿತಾ ತನ್ನ ಸ್ನೇಹದ ಬಗ್ಗೆ ಹೇಳಿದ್ದಾರೆ.

More from Filmibeat

English summary
Dance Karnataka Dance Reality Show Rakshita Emotional Talk About Darshan. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X