twitter
    For Quick Alerts
    ALLOW NOTIFICATIONS  
    For Daily Alerts

    DKD: ಡಿಕೆಡಿಯ ಇಡೀ ವೇದಿಕೆಯನ್ನೇ ಭಾವುಕಗೊಳಿಸಿದ ರಿದ್ಯಾ-ರವ್ಯಾ ಡ್ಯಾನ್ಸ್!

    By ಎಸ್ ಸುಮಂತ್
    |

    ಡಿಕೆಡಿ ವಾರದ ಮನರಂಜನೆಗೆ ಹೇಳಿ ಮಾಡಿಸಿದ ರೀತಿ ಇದೆ. ಡ್ಯಾನ್ಸ್ ನೋಡುವುದಕ್ಕೆ ಒಂದು ರೀತಿಯ ಖುಷಿ ನೀಡುತ್ತದೆ. ಒಬ್ಬೊಬ್ಬರದ್ದು ಒಂದೊಂದು ಸ್ಟೆಪ್. ಇಲ್ಲಿ ಬರೀ ಡ್ಯಾನ್ಸ್ ಅಷ್ಟೇ ಇರುವುದಿಲ್ಲ. ಅದೇ ಹಿಂದೊಂದು ಭಾವನಾತ್ಮಕ ಕಥೆ ಇರುತ್ತೆ. ಅದರ ಹಿಂದೊಂದು ನೋವಿರುತ್ತೆ. ಅದನ್ನು ಡ್ಯಾನ್ಸ್ ಮೂಲಕವೇ ಅರ್ಥೈಸುತ್ತಾರೆ. ನೋಡುಗರ ಕಣ್ಣಿಗೆ, ಮನಸ್ಸಿಗೆ ಭಾವನೆಯ ಸಾರವೇ ದೊರೆತು ಬಿಡುತ್ತದೆ. ಈ ವಾರವಂತೂ ನೋಡುಗರ ಕಣ್ಣು ಒದ್ದೆಯಾಗದೆ ಇರಲಾರದು.

    ಪ್ರತಿ ವಾರ ಮಕ್ಕಳು ಸ್ಟೇಜ್ ಮೇಲೆ ಕುಣಿದರೆ, ಸೀಟಿನ ಮೇಲೆ ಕೂತ ಮಾಸ್ಟರ್ಸ್ ಖುಷಿ ಪಡುತ್ತಾ ಇದ್ದರು. ಆದರೆ ಇಂದಿನ ಸಂಚಿಕೆಯಲ್ಲಿ ಮಕ್ಕಳ ಜೊತೆಗೆ ಮಾಸ್ಟರ್ಸ್ ಕೂಡ ಹೆಜ್ಜೆ ಹಾಕಿದ್ದಾರೆ. ಇದು ನೋಡುಗರಿಗೆ ಹಬ್ಬವನ್ನುಂಟು ಮಾಡಿದ್ದಂತು ಸುಳ್ಳಲ್ಲ. ಅದರಲ್ಲೂ ಇಂದು ಭಾವನಾತ್ಮಕ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ.

    ಬೆಟ್ಟದ ಹೂ: ರಾಹುಲ್ ಮತ್ತು ಹೂವಿಗೆ ವಯಸ್ಸಾದರೆ ಹೇಗೆ ಕಾಣುತ್ತಾರೆ..?ಬೆಟ್ಟದ ಹೂ: ರಾಹುಲ್ ಮತ್ತು ಹೂವಿಗೆ ವಯಸ್ಸಾದರೆ ಹೇಗೆ ಕಾಣುತ್ತಾರೆ..?

    ಅಪ್ಪ ಮಕ್ಕಳ ಬಾಂಧವ್ಯ ಬೆಸೆದ ಡ್ಯಾನ್ಸ್

    ಅಪ್ಪ ಮಕ್ಕಳ ಬಾಂಧವ್ಯ ಬೆಸೆದ ಡ್ಯಾನ್ಸ್

    ಅಪ್ಪಂದಿರಿಗೆ ಹೆಚ್ಚು ಅಟ್ಯಾಚ್ ಇರುವುದು ಹೆಣ್ಣು ಮಕ್ಕಳೇ. ತಂದೆಯಂದಿರು ತನ್ನೆಲ್ಲಾ ಕನಸ್ಸನ್ನು ಮಕ್ಕಳಲ್ಲಿ ನೋಡುವುದಕ್ಕೆ ಬಯಸುತ್ತಾರೆ. ಮಕ್ಕಳ ಬೆಳವಣಿಗೆಯಲ್ಲಿ ಹೆಗಲಾಗಿ ನಿಲ್ಲುತ್ತಾರೆ. ಅವರ ಸ್ಕೂಲಿಂದ ಕರೆದುಕೊಂಡು ಬರುವುದರಿಂದ ಹಿಡಿದು, ಆಟ ಪಾಠಗಳಲ್ಲಿ ಜೊತೆಯಾಗುತ್ತಾರೆ. ಆದರೆ ಮಕ್ಕಳು ಬೆಳೆದದ್ದು ಗೊತ್ತೆ ಆಗುವುದಿಲ್ಲ. ಹೆಣ್ಣು ಮಕ್ಕಳು ದೊಡ್ಡವರಾಗಿ, ಮದುವೆ ಮಾಡಿಕೊಟ್ಟ ಮೇಲೆಯೇ ನನ್ನ ಮಕ್ಕಳು ಇಷ್ಟೊಂದು ಬೆಳೆದು ಬಿಟ್ಟರಾ, ಬೇರೆ ಮನೆಗೆ ಹೋಗಿಯೇ ಬಿಟ್ಟರಾ ಎಂದು ಭಾವನೆಗೆ ಒಳಗಾಗುತ್ತಾರೆ. ದುಃಖ ಬರುತ್ತಲೇ ಇರುತ್ತದೆ. ಇಂಥದ್ದೊಂದು ಹೆಣ್ಣು‌ ಮಕ್ಕಳು ಮತ್ತು ತಂದೆಯ ನಡುವಿನ ಪ್ರೀತಿಯ ಅನಾವರಣವಾಗಿದೆ.

    ಮಕ್ಕಳ ಪರ್ಫಾಮೆನ್ಸ್‌ಗೆ ತಂದೆ ಭಾವುಕ

    ಮಕ್ಕಳ ಪರ್ಫಾಮೆನ್ಸ್‌ಗೆ ತಂದೆ ಭಾವುಕ

    ಮಕ್ಕಳು ಡ್ಯಾನ್ಸ್ ಮಾಡುವಾಗಲಿ, ಹಾಡು ಹೇಳುವಾಗಲಿ ತಂದೆಯಂದಿರುವ ಭಾವುಕರಾಗಲ್ಲ. ಮಕ್ಕಳ ಟ್ಯಾಲೆಂಟ್ ಗುರುತಿಸುತ್ತಾರೆ. ಆದರೆ ಅವರ ಡ್ಯಾನ್ಸ್ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದಾಗ ಮನದ ಕದ ತಟ್ಟಿ, ತಂದೆಯಂದಿರ ಕಣ್ಣಲ್ಲಿ ಕಣ್ಣೀರು ತಾನಾಗಿಯೇ ಬರುತ್ತದೆ. ಇಂದು ಡಿಕೆಡಿ ವೇದಿಕೆಯಲ್ಲಿ ಆಗಿದ್ದು ಅದೇ. ಪುಟ್ಟ ಪುಟ್ಟ ಕಣ್, ಪುಟ್ಟ ಪುಟ್ಟ ಕಾಲ್ ಈ ಹಾಡು ಸದಾ ಕಾಲಕ್ಕೂ ತಂದೆ ಮಕ್ಕಳ ಪ್ರೀತಿಯನ್ನು ತೋರಿಸುತ್ತದೆ. ಇದೇ ಹಾಡಿಗೆ ರಿದ್ಯಾ ಮತ್ತು ರವ್ಯಾ ಕುಣಿದಿದ್ದಾರೆ. ಅವರಿಬ್ಬರೂ ಹಾಕಿದ ಹೆಜ್ಜೆಯಲ್ಲಿ ಮಗುವಿನಿಂದ ಹಿಡಿದು ಮದುವೆಯಾಗುವ ತನಕದ ಕಥೆ ಅಡಗಿತ್ತು. ಅದನ್ನು ಕಂಡು ಅವರ ತಂದೆ ಭಾವುಕರಾಗಿದ್ದಾರೆ. ನನ್ನ ಮಕ್ಕಳು ನನ್ನ ಜೊತೆಯಲ್ಲಿಯೇ ಇರಬೇಕೆಂದು ಅತ್ತಿದ್ದಾರೆ.

    ವೇದಿಕೆಯನ್ನೇ ಅಳಿಸಿದ ರಿದ್ಯಾ-ರವ್ಯಾ

    ವೇದಿಕೆಯನ್ನೇ ಅಳಿಸಿದ ರಿದ್ಯಾ-ರವ್ಯಾ

    ಇಷ್ಟು ದಿನ ಡ್ಯಾನ್ಸ್ ನೋಡಿ ಬೆಚ್ಚಿ ಬೀಳುವುದನ್ನು ಕಂಡಿದ್ದೇವೆ. ವಾರ ವಾರ ಡ್ಯಾನ್ಸ್‌ ರಿಸ್ಕ್ ಹೆಚ್ಚಾಗುತ್ತಿತ್ತು. ಒಬ್ಬೊಬ್ಬರು ಸ್ಪರ್ಧೆಯ ಮೇಲೆ ಕುಣಿಯೋರು. ಮೈ ಝುಮ್ ಎನಿಸುವ ಸ್ಟೆಪ್ಸ್ ಗಳನ್ನೇ ನೋಡಿದ್ದ, ಜಡ್ಜ್‌ಗಳಿಗೆ ಇಂದು ಖುರ್ಚಿಯಲ್ಲಿ ಬಿಗಿಯಾಗಿ ಕೂರುವಂತೆ ಮಾಡಿದ್ದು ಮಾತ್ರ ರಿದ್ಯಾ ಮತ್ತು ರವ್ಯಾ ಪರ್ಫಾಮೆನ್ಸ್. ಪುಟ್ಟ ಪುಟ್ಟ ಕಣ್ ಪುಟ್ಟ ಪುಟ್ಟ ಕಾಲ್ ಹಾಡಿಗೆ ಕುಣಿಯುತ್ತಿದ್ದರೆ, ಎಲ್ಲರೂ ಮಂತ್ರ ಮುಗ್ಧವಾಗಿ ಕುಳಿತು ಬಿಟ್ಟಿದ್ದರು. ಆ ಪರ್ಫಾಮೆನ್ಸ್ ಮುಗಿಯುವ ತನಕ ಭಾವುಕರಾಗಿ ಬಿಟ್ಟಿದ್ದರು.

    ಮಾಸ್ಟರ್‌ಗೆ ಫುಲ್ ಮಾರ್ಕ್ಸ್

    ಮೊದಲೇ ಹೇಳಿದಂತೆ ಈ ವಾರ ಮಕ್ಕಳ ಜೊತೆಗೆ ಮಾಸ್ಟರ್ಸ್ ಕೂಡ ಹೆಜ್ಜೆ ಹಾಕುತ್ತಿದ್ದಾರೆ. ರಿದ್ಯಾ ಮತ್ತು ರವ್ಯಾ ಜೊತೆಗೆ ಮಂಜು ಮಾಸ್ಟರ್ಸ್ ಕೂಡ ವೇದಿಕೆ ಮೇಲೆರಿದ್ದಾರೆ. ಅವರು ಮಾಡಿದ ಪರ್ಫಾಮೆನ್ಸ್‌ಗೆ ಜಡ್ಜ್‌ಗಳೆಲ್ಲಾ ಶಬ್ಬಾಶ್ ಎಂದಿದ್ದಾರೆ. ಶಿವಣ್ಣ ಅಂತು ದೇವರೇ ಬಂದು ಆಕ್ಟ್ ಮಾಡಿದಂತೆ ಇತ್ತು ಎಂದಿದ್ದಾರೆ. ರಕ್ಷಿತಾ ಹಾರ್ಟ್ ಟಚ್ಚಿಂಗ್ ಪರ್ಫಾಮೆನ್ಸ್ ಎಂದಿದ್ದಾರೆ.‌

    English summary
    Dance Karnataka Dance Reality Show Written Update On July 24th Episode. Here is the details.
    Sunday, July 24, 2022, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X