ಡಿಕೆಡಿಯಲ್ಲಿ ' ದಿ ವಿಲನ್' ಸಮಾಗಮ : ಕಿಚ್ಚನ ಹಾಡಿಗೆ ಸಖತ್ ಸ್ಟೆಪ್ಸ್

By ಎಸ್ ಸುಮಂತ್

ಇಂದು ( ಜುಲೈ 2) ಡಿಕೆಡಿಯಲ್ಲಿ ಬಿಗ್ ಸ್ಟಾರ್ ಗಳ ಸಮಾಗಮವಾಗುತ್ತಿದೆ. ಇಷ್ಟು ದಿನ ಶಿವಣ್ಣ ರಂಜಿಸುತ್ತಿದ್ದರು. ಇದೀಗ ಇಬ್ಬರು ಬಿಗ್ ಸ್ಟಾರ್‌ಗಳು ರಂಜಿಸಲಿದ್ದಾರೆ. ಸ್ಪೆಷಲ್ ಗೆಸ್ಟ್ ಆಗಿ ಕಿಚ್ಚ ಸುದೀಪ್ ಎಂಟ್ರಿಯಾಗಿದ್ದಾರೆ. ಇಂದು ಮತ್ತು ನಾಳೆ ಡಿಕೆಡಿ ತುಂಬೆಲ್ಲಾ ಕಿಚ್ಚೋತ್ಸವ ನೆರವೇರುತ್ತಿದೆ. ಸುದೀಪ್ ಸಿನಿಮಾದ ಹಾಡುಗಳಿಗೆ ಡಿಕೆಡಿ ನೃತ್ಯಪಟುಗಳು ಕುಣಿದು ಮನರಂಜಿಸಿದ್ದಾರೆ.

ಡಿಕೆಡಿ ವೇದಿಕೆಯಲ್ಲಿ ವೀಕೆಂಡ್ ಮನರಂಜನೆ ಜೋರಾಗಿದೆ. ಸುದೀಪ್‌ರನ್ನು ಬಹಳ ಅದ್ಧೂರಿಯಿಂದ ಸ್ವಾಗತಿಸಿದ ಟೀಂ, ಅವರಿಗಾವಿ ಅವರದ್ದೇ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದಾರೆ. ಡಿಕೆಡಿಯ ಡ್ಯಾನ್ಸ್ ನೋಡಿ ಸುದೀಪ್ ಅಕ್ಷರಶಃ ದಂಗಾಗಿದ್ದಾರೆ. ಈ ರೀತಿಯ ಡ್ಯಾನ್ಸ್ ನೋಡಿಯೇ ಇಲ್ಲ ಎಂದು ಹಾಡಿ ಹೊಗಳಿದ್ದಾರೆ. ಪ್ರತಿ ವಾರಕ್ಕಿಂತ ಈ ವಾರ ಹೆಚ್ಚಿನ ಮನರಂಜನೆ ಸಿಗುತ್ತಿರುವುದರಲ್ಲಿ ನೋ ಡೌಟ್.

ಶಿವಣ್ಣ-ಸುದೀಪ್ ನೋಡುವುದೇ ಚೆಂದಾ

ಶಿವಣ್ಣ-ಸುದೀಪ್ ನೋಡುವುದೇ ಚೆಂದಾ

ಶಿವಣ್ಣ ಮತ್ತು ಸುದೀಪ್ ಅವರನ್ನು ವಿಲನ್ ಸಿನಿಮಾದಲ್ಲಿ ನೋಡಿದ್ವಿ. ಅಷ್ಟೇ ಯಾಕೆ ಆಗಾಗ ಸಿನಿಮಾಗಳ ಪ್ರೆಸ್ ಮೀಟ್‌ಗಳಲ್ಲಿ ಅವರು ಮುಖಾಮುಖಿಯಾಗುವುದು ಕಂಡೆ ಇದೆ. ಅದರಲ್ಲೂ ಅವರಿಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ಬಿಗ್ ಸ್ಟಾರ್‌ಗಳು. ಆದರೆ ಈ ಇಬ್ಬರನ್ನು ನೋಡುವುದೇ ಒಂದು ಚಂದ. ಶಿವಣ್ಣ ಕೂಡ ಸುದೀಪ್ ಈ ವಾರದ ಸಂಚಿಕೆಗೆ ಬಂದಿದ್ದನ್ನು ಎಂಜಾಯ್ ಮಾಡುತ್ತಿದ್ದಾರೆ.

ಅಪ್ಪುವಿನ ಅಪ್ಪುಗೆ ನೆನೆದ ಕಿಚ್ಚ

ಅಪ್ಪುವಿನ ಅಪ್ಪುಗೆ ನೆನೆದ ಕಿಚ್ಚ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಲ್ಲರ ಮನಸ್ಸಲ್ಲೂ ಅಜಾರಮರ. ಜೊತೆಯಿರದ ಜೀವ ಎಂದಿಗಿಂತಲೂ ಜೀವಂತ ಎಂಬ ಮಾತು ಅಪ್ಪುಗೆ ಒಪ್ಪುತ್ತೆ. ಅದೇ ರೀತಿಯಲ್ಲಿಯೇ ಎಲ್ಲರೂ ಭಾವಿಸುತ್ತಿದ್ದಾರೆ, ಪೂಜಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರಿಗೂ ಅಪ್ಪು ನೆನಪು ಅಗಾಧ. ಚಿಕ್ಕವಯಸ್ಸಿನಲ್ಲಿ ಪ್ರೀತಿಯ ಅಪ್ಪುಗೆ ನೀಡಿದ್ದ ಫೋಟೊ ಒಂದಿದೆ. ಆ ಫೋಟೊ ರೀತಿಯೇ ಒಮ್ಮೆ 'ಪೈಲ್ವಾನ್‌' ಸಿನಿಮಾ ಕಾರ್ಯಕ್ರಮದ ವೇಳೆ ಅಪ್ಪು ಮತ್ತು ಸುದೀಪ್ ಫೋಟೊ ತೆಗೆಸಿಕೊಂಡಿದ್ದರು. ಆ ಫೋಟೊ ಇದೀಗ ಡಿಕೆಡಿ ಸ್ಟೇಜ್ ಮೇಲೆ ಅನಾವರಣವಾಗಿದೆ. ಈ ದೃಶ್ಯ ಎಲ್ಲರಿಗೂ ಮನಮುಟ್ಟುವಂತೆ ಮಾಡಿದ್ದು, ಎಲ್ಲರನ್ನು ಮತ್ತೆ ಆ ದಿನ ಭಾವಲೋಕಕ್ಕೆ ಕರೆದೊಯ್ದಿದೆ.

ಅಪ್ಪುವಿಗಾಗಿ ಹಾಡು

ಅಪ್ಪುವಿಗಾಗಿ ಹಾಡು

ಕರುನಾಡ ರಾಜರತ್ನ ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಲು ಜೀ ಕನ್ನಡ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡುತ್ತಿದೆ. ಈ ಬಾರಿ ಡಿಕೆಡಿಯಲ್ಲೂ ಅಪ್ಪು ಟ್ರೋಫಿ ಕೊಡುವ ಮೂಲಕ, ಪದಕ ನೀಡುವ ಮೂಲಕ ಗೌರವ ಸಲ್ಲಿಸುತ್ತಿದೆ. ಇದೀಗ ಸುದೀಪ್ ಕೂಡ ಡಿಕೆಡಿಗೆ ಬಂದಿದ್ದು, ಅಪ್ಪುಗಾಗಿ ಅದ್ಭುತ ಹಾಡು ಹಾಡಿದ್ದಾರೆ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನ ಮೂಲಕ ಮತ್ತೊಮ್ಮೆ ನಮನ ಸಲ್ಲಿಸಿದ್ದಾರೆ. ಈ ಹಾಡು ಹಾಡುವಾಗ ಎಲ್ಲರ ಕಣ್ಗಳು ತೇವವಾಗಿದೆ. ಅಂದರೆ ಅಪ್ಪುರನ್ನು ಮರೆಯಲು ಯಾರಿಗೂ ಸಾಧ್ಯವೇ ಇಲ್ಲ. ಹಾಗಂತ ಅದನ್ನು ಸ್ವೀಕರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವರ ಬಗ್ಗೆ ಏನೇ ಕಣ್ಣ ಮುಂದೆ ಬಂದರೂ ಅಲ್ಲಿ ಕಣ್ಣೀರು ತಾನಾಗಿಯೇ ಬರುತ್ತಿದೆ.

ಕೇಂಪೇಗೌಡ ಡ್ಯಾನ್ಸಿಗೆ ಫಿದಾ

ಡಿಕೆಡಿಗೆ ಯಾರು ಗೆಸ್ಟ್ ಆಗಿ ಬರುತ್ತಾರೆ ಆ ಗೆಸ್ಟ್ ಸಿನಿಮಾದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸುತ್ತಾರೆ. ಈ ವಾರದ ಸ್ಪೆಷಲ್ ಸಂಚಿಕೆಯಲ್ಲಿ ಕಿಚ್ಚನ ಹಾಡುಗಳಿಗೆ ಕುಣಿದು ಶಬ್ಬಾಶ್‌ಗಿರಿ ತೆಗೆದುಕೊಳ್ಳಲಿದ್ದಾರೆ. ಅದರಂತೆ ಕೆಂಪೇಗೌಡ ಹಾಡಿಗೆ ದಿಶಾ ಮತ್ತು ಗಗನ್ ಸ್ಟೆಪ್ಸ್ ಹಾಕಿದ್ದು ಸುದೀಪ್ ಅವರಿಗೆ ಇಷ್ಟವಾಗಿದೆ. ಹೀಗಾಗಿಯೇ ಕೊನೆಯಲ್ಲಿ ಕಿಚ್ಚ ಸುದೀಪ್ ಕೆಂಪೇಗೌಡ ಡೈಲಾಗ್ ಹೊಡೆದಿದ್ದಾರೆ.

More from Filmibeat

English summary
Dance Karnataka Dance Reality Show Written Update On July 2nd Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X