DKD Season- 7: ಮೆಗಾ ಆಡಿಷನ್‌ನಲ್ಲಿ ತೀರ್ಪುಗಾರರ ಜೊತೆ ವೀಕ್ಷಕರ ಮನಗೆದ್ದ ಪ್ರತಿಭೆಗಳು
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್- 7 ಅದ್ಧೂರಿಯಾಗಿ ಶುರುವಾಗಿದೆ. ದೂರದ ಊರುಗಳಿಂದ ಶೋಗೆ ಸ್ಪರ್ಧಿಗಳು ಬಂದಿದ್ದಾರೆ. ಮೈ, ಕೈ ಕುಣಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಶೋಗೆ ಅರ್ಹತೆ ಪಡೀತಿದ್ದಾರೆ. ಡ್ಯಾನ್ಸ್ ಲೋಕದ ವೇದಿಕೆಯಲ್ಲಿ ಡ್ಯಾನ್ಸ್ ಪ್ರತಿಭೆಗಳ ಮಿಂಚಿನ ಸಂಚಾರವಾಗಿದೆ. ಶಿವಣ್ಣ, ರಕ್ಷಿತಾ, ರಾಘು, ಅರ್ಜುನ್ ಜನ್ಯಾ, ಚಿನ್ನಿ ಪ್ರಕಾಶ್ ಡ್ಯಾನ್ಸ್ ನೋಡಿ ಫಿದಾ ಆಗಿದ್ಧಾರೆ.
ಸ್ಪರ್ಧಿಗಳು ಒಬ್ಬರನ್ನೊಬ್ಬರು ಮೀರಿಸುವಂತೆ ತಮ್ಮ ಪ್ರತಿಭೆಯನ್ನ ಅನಾವರಣ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನ ಶಶಾಂಕ್ 'ಯಾರೆ ನೀನು ಪಾರಿವಾಳ' ಎಂಬ ಹಾಡಿಗೆ ಡ್ಯಾನ್ಸ್ ಮಾಡುತ್ತಿದ್ದರೆ ಶಿವಣ್ಣ ಸೇರಿದಂತೆ ಎಲ್ಲರೂ ಸಹ ಫಿದಾ ಆದರು. ರಕ್ಷಿತಾ ಹೀರೋಗಳು ಡ್ಯಾನ್ಸ್ ಮಾಡುವ ರೀತಿಯಲ್ಲಿ ನೀನು ಮಾಡಿದೆ ಎಂದು ಹಾಡಿ ಹೊಗಳಿದರು. ವಿಜಯ್ ರಾಘವೇಂದ್ರ ಒಂದು ಕನಸಿನಲ್ಲಿ ಡ್ಯಾನ್ಸ್ ಮಾಡುವ ರೀತಿ ಮಾಡಿದೆ ಎಂದರು. ಶಿವಣ್ಣ ಡಿಕೆಡಿಗೆ ಸ್ವಾಗತ ಬಯಸುವ ಮೆಡಲ್‌ನ್ನು ಹಾಕಿದರು.

ಸಂಥಿಂಗ್ ಸ್ಪೆಷಲ್ ಡಾನ್ಸ್‌ನಿಂದ ಪುಣೆಯ ಶಿವಕುಮಾರ್‌ರವರು ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ನಂಗೆ ನನ್ನ ತಂದೆ ನನ್ನ ಪರ್ಫಾರ್ಮ್ ನೋಡಬೇಕು ಎಂಬ ಡ್ರೀಮ್ ಇತ್ತು. ಆದರೆ ಇವತ್ತು ಅವರು ನನ್ನ ಜೊತೆ ಇಲ್ಲ ಎಂದು ಶಿವಕುಮಾರ್ ಅವರು ವೇದಿಕೆಯ ಮೇಲೆ ಭಾವುಕರಾದರು. ಎದೆಯ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಎಲ್ಲರೂ ಗಮನ ಸೆಳೆಯಿತು.
ಪೇಡದಂತೆ ಡ್ಯಾನ್ಸ್ ಮಾಡಿದ ಪವಿತ್ರಾ
ಧಾರವಾಡದ ಪೇಡದಂತೆ ಧಾರವಾಡದ ಹುಡುಗಿ ಪವಿತ್ರ ಯಾಡಳ್ಳಿ ಪ್ರದರ್ಶನ ನೀಡಿ ಆಯ್ಕೆ ಆದರು. ಅವರಲ್ಲಿ ಅಪ್ಪ ಅಮ್ಮನ ಕನಸನ್ನ ನನಸಾಗಿಸಿದ ಒಂದು ಖುಷಿಯ ಛಾಯೆ ಆವರಿಸಿತ್ತು. ಮಗಳು ಸೆಲೆಕ್ಟ್ ಆಗುತ್ತಿದ್ದಂತೆ ತಂದೆ ತಾಯಿ ಖುಷಿಗೆ ಪಾರವೇ ಇರಲಿಲ್ಲ.
ಬೆಂಗಳೂರಿನ ನಿತಿನ್ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದರೆ ಮೈಕಲ್ ಜಾಕ್ಸನ್ ಒಮ್ಮೆ ಕಣ್ಮುಂದೆ ಬಂದಂತೆ ಭಾಸವಾಗುತ್ತಿತ್ತು. ನಟಿ ರಕ್ಷಿತಾ ಕೂಡ ಆತನ ಡ್ಯಾನ್ಸ್ ನೋಡಿ ಆಡಿ ಹೊಗಳಿದ್ದಾರೆ. ಈ ಬಾರಿ ಅತ್ಯುತ್ತಮವಾದ ಕಂಟೆಸ್ಟೆಂಟ್ ಎಂದರೆ ಅದು ನಿತಿನ್ ಎಂದರೆ ತಪ್ಪಾಗಲಾರದು ಎಂದು ರಕ್ಷಿತಾ ಹೇಳಿದ್ದಾರೆ. ಓಕೆ ಓಕೆ ಎನ್ನುತ್ತಲೇ ಡ್ಯಾನ್ಸಿಂಗ್ ಪರ್ಫಾರ್ಮೆನ್ಸ್ ಮೂಲಕ ಎಂಟ್ರಿಯನ್ನು ಕೊಟ್ಟಿದ್ದಾರೆ. ಮೈಯಲ್ಲಿ ಮೂಳೆಗಳು ಇದ್ಯೋ ಇಲ್ವೋ ಎನ್ನುವಂತೆ ನಿತಿನ್ ದೇಹವನ್ನು ಬಾಗಿಸಿ ಬಳುಕಿಸಿ ಕುಣಿದ ಪರಿಗೆ ಎಲ್ಲರೂ ಮೈ ಮರೆತರು.

ಮೋಡಿ ಮಾಡೋಕೆ ಬಂದ ಯುವನ್
'ಕಣ್ಣು ಹೊಡೆಯಕಾ' ಹಾಡಿಗೆ ಪರ್ಫಾರ್ಮೆನ್ಸ್ ಮಾಡಿದ ಮಡಿಕೇರಿಯ ಲಿಪಿಕಾ ಎಲ್ಲರ ಗಮನವನ್ನು ಸೆಳೆದರು. ಈ ಕಡೆ ತುಮಕೂರಿನ ಏಳು ವರ್ಷದ ಯುವನ್ ಕುಮಾರ್ ಎಲ್ಲರ ಹುಬ್ಬೇರುವಂತೆ ಡಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಮತ್ತೊಬ್ಬ ಸ್ಪರ್ಧಿ ಜತಿನ್ ಕುಮಾರ್ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಮೈಸೂರಿನಿಂದ ಬಂದ ಪ್ರೀತಿ ಶಿವ ಅವರು ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಡಿಕೆಡಿಗೆ ಸೆಲೆಕ್ಟ್ ಆಗಿದ್ದಾರೆ.
ಇತ್ತೀಚೆಗೆ 'ಸರಿಗಮಪ ಲಿಟ್ಲ್ ಚಾಂಪ್ಸ್' ಸೀಸನ್- 19 ಮುಕ್ತಾಯವಾಗಿತ್ತು. ಅದರ ಬದಲಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಹೊಸ ಸೀಸನ್ ಆರಂಭಿಸಲಾಗಿದೆ. ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7. 30ಕ್ಕೆ ಕಾರ್ಯಕ್ರಮ ಪ್ರಸಾರ ಆಗಲಿದೆ. ಪ್ರತಿಭೆಗಳು ತಮ್ಮ ಡ್ಯಾನ್ಸ್ ಮೂಲಕ ವೀಕ್ಷಕರನ್ನು ರಂಜಿಸಲಿದ್ದಾರೆ.


Click it and Unblock the Notifications











