DKD Season 7: "ಅಪ್ಪು 7 ವರ್ಷ ಆಗಿದ್ದಾಗ ಇಷ್ಟೇ ಲೀಲಾಜಾಲವಾಗಿ ಡ್ಯಾನ್ಸ್ ಮಾಡ್ತಿದ್ದ": ಪೋರ ಯುವನ್‌ಗೆ ಮನಸೋತ ಶಿವಣ್ಣ
ಡ್ಯಾನ್ಸ್ ಅಂದ್ರೆ ಅಪ್ಪು.. ಅಪ್ಪು ಅಂದ್ರೆ ಡ್ಯಾನ್ಸ್ ಅನ್ನೋ ಮಾತು ಸ್ಯಾಂಡಲ್‌ವುಡ್‌ನಲ್ಲಿ ಸದಾ ಚಾಲ್ತಿಯಲ್ಲಿದೆ. ಅಪ್ಪು ದೈಹಿಕವಾಗಿ ನಮ್ಮಗಳ ಜೊತೆ ಇಲ್ಲದೆ ಇರಬಹುದು. ಆದರೆ, ಅವರ ಡ್ಯಾನ್ಸ್ ಮೀರಿಸುವವರು ಇನ್ನು ಕಣ್ಣಿಗೆ ಬಿದ್ದಿಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ವಾವ್ ಇವರು ಅಪ್ಪುರಂತೆ ಡ್ಯಾನ್ಸ್ ಮಾಡ್ತಾರೆ ಅಂತ ಕೂಡ ಅನಿಸಿಲ್ಲ. ಡ್ಯಾನ್ಸ್ ವಿಚಾರದಲ್ಲಿ ಅಪ್ಪುಗೆ ಅಪ್ಪುನೇ ಸರಿಸಾಟಿ. ಅಪ್ಪು ಫಾರ್ ಎವರ್.
ಜೀ ಕನ್ನಡದ ಫೇಮಸ್ ರಿಯಾಲಿಟಿ ಶೋಗಳಲ್ಲಿ ಡಿಕೆಡಿ ಕೂಡ ಒಂದು. ಎಲ್ಲೆಲ್ಲೋ ಇದ್ದ ಡ್ಯಾನ್ಸ್ ಪ್ರತಿಭೆಗಳನ್ನು ಕರೆ ತಂದು, ವೇದಿಕೆ ಮೇಲೆ ಕುಣಿಸುತ್ತಾರೆ. ಮನರಂಜನೆಯ ಜೊತೆಗೆ ಪ್ರತಿಭೆಗಳಿಗೆ ಅವಕಾಶ ನೀಡುವ ವೇದಿಕೆಯೂ ಹೌದು ಎಂದರೆ ತಪ್ಪಾಗುವುದಿಲ್ಲ. ಈಗ ಮತ್ತೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಬರ್ತಿದೆ. ಮೊದಲ ಪ್ರೋಮೊನೇ ಪುನೀತ್ ರಾಜ್‍ಕುಮಾರ್ ಅವರನ್ನು ನೆನಪಿಸಿದೆ.

ಡಿಕೆಡಿ ಶುರುವಾಯ್ತು.. ಇನ್ಮುಂದೆ ಹಬ್ಬ
ಜೀ ಕನ್ನಡದ ಡಿಕೆಡಿ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಸಮಯ ಬಂದೇ ಬಿಡ್ತು. ಡಿಕೆಡಿ ಸೀಸನ್ 7 ಆಡಿಷನ್ ಎಪಿಸೋಡ್ ನಾಳೆಯಿಂದ ಅಂದ್ರೆ, ಶನಿವಾರ ರಾತ್ರಿ 7.30ರಿಂದ ಆರಂಭವಾಗಲಿದೆ. ಹಳ್ಳಿ ಹಳ್ಳಿಗಳಿಂದಾನೂ ಸಾಮಾನ್ಯರನ್ನು ಹುಡುಕಿ, ಸೆಲೆಬ್ರೆಟಿ ಮಾಡೋಕೆ ಹೊರಟಿದ್ದಾರೆ. ಡ್ಯಾನ್ ಕಲೆ ಇದ್ದವರಿಗೆ ಕರೆದು ವೇದಿಕೆ ಕೊಡುತ್ತಿದ್ದಾರೆ. ಸಾವಿರಾರು ಕಲಾವಿದರಲ್ಲಿ ಆಯ್ಕೆ ಮಾಡಲಾಗುತ್ತದೆ. ಈಗ ಆಡಿಷನ್‌ನಲ್ಲಿ ಹುಡುಕಿ ಹುಡುಕಿ ಸೆಲೆಕ್ಟ್ ಮಾಡಲಾಗುತ್ತಿದೆ.
ಅಪ್ಪು ನೆನಪಿಸಿದ ಯುವನ್
ಡಿಕೆಡಿಗೆ ತುಮಕೂರಿನ ಯುವನ್ ಕೂಡ ಬಂದಿದ್ದಾನೆ. ವೇದಿಕೆ ಮೇಲೆ ಡ್ಯಾನ್ಸ್ ಶೋ ಕೂಡ ಕೊಟ್ಟಿದ್ದಾನೆ. ಎಷ್ಟು ಲೀಲಾಜಾಲವಾಗಿ ಡ್ಯಾನ್ಸ್ ಮಾಡಿದ ಅಂದ್ರೆ, ನೋಡುಗರ ಮನಸ್ಸು ಬೇರೆ ಏನನ್ನೋ ನೆನಪಿಸುತ್ತಾ ಇತ್ತು. ಒಂದು ಕ್ಷಣವೂ ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಕಾಗದದ ದೋಣಿಯಲ್ಲಿ ನೀ ಕೂರುವಂತ ಒತ್ತಾಯಿತೇ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಅವನ ಡ್ಯಾನ್ಸ್ ನೋಡಿ ಎಲ್ಲರೂ ಮೂಕ ವಿಸ್ಮಿತರಾದರೂ, ಸಂಪೂರ್ಣವಾಗಿ ಯುವನ್ ಡ್ಯಾನ್ಸ್ ಅಪ್ಪು ಅವರನ್ನೇ ನೆನಪಿಸಿದೆ.

ಮನಸಾರೆ ಹೊಗಳಿದ ಶಿವಣ್ಣ
ಯುವನ್ ಡ್ಯಾನ್ಸ್ ನೋಡಿ ಶಿವಣ್ಣ ಫುಲ್ ಖುಷಿಯಾಗಿದ್ದಾರೆ. ಯುವನ್ ನನ್ನು ಹೊಗಳಿದ್ದಾರೆ. "ಅಪ್ಪು ಎಲ್ಲೂ ಹೋಗಿಲ್ಲ. ಅಪ್ಪು 7 ವರ್ಷದವನಿದ್ದಾಗ ಇಷ್ಟೇ ಲೀಲಾಜಾಲವಾಗಿ ಡ್ಯಾನ್ಸ್ ಮಾಡುತ್ತಿದ್ದ. ಇವತ್ತು ನೋಡಿದಾಗ ಅಪ್ಪು ನೋಡಿದಂಗೆ ಆಯ್ತು" ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನು ಯುವನ್ ಜೊತೆ ಶಿವಣ್ಣನ ಸ್ಟೈಲ್ ತೋರಿಸಿದ್ದಾರೆ. ಲಾಂಗ್ ಹಿಡಿದು ಒಂದು ಹೆಜ್ಜೆ ಹಾಕಿದ್ದಾರೆ.
ತುಮಕೂರಿನ ಹುಡುಗನಿಗೆ ಬಹುಪರಾಕ್
ಯುವನ್ ಮೂಲತಃ ತುಮಕೂರಿನ ಹುಡುಗ. ಅಷ್ಟು ಅದ್ಭುತವಾದ ಡ್ಯಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಂತೂ ಎಲ್ಲರ ಹೊಗಳಿಕೆಗೆ ಪಾತ್ರನಾಗಿದ್ದಾನೆ. ಜಡ್ಜ್‌ಗಳು ಕೂಡ ಯುವನ್ ಡ್ಯಾನ್ಸ್‌ಗೆ ಮನಸೋತಿದ್ದಾರೆ. ನೋಡ ನೋಡುತ್ತಿದ್ದಂತೆ ಸೆಲೆಕ್ಟ್ ಬಟನ್ ಒತ್ತಿಯೇ ಬಿಟ್ಟರು. ಸೋಷಿಯಲ್ ಮೀಡಿಯಾದಲ್ಲಂತೂ ಹೊಗಳಿದ್ದಾರೆ. ನಮ್ಮ ತುಮಕೂರಿನ ಹೆಮ್ಮೆ ನೀನು. ತುಮಕೂರಿನ ಹೆಸರನ್ನು ಉಳಿಸಿಬಿಟ್ಟೆ, ಒಳ್ಳೆಯದ್ದಾಗಲಿ. ಶೆಟ್ರಿಗೆ ಒಳ್ಳೆಯದಾಗಲಿ ಅಂತ ತರಹೇವಾರಿ ಕಮೆಂಟ್ ಹಾಕಿದ್ದಾರೆ.


Click it and Unblock the Notifications











