ಮಲ್ನಾಡ್ ಸ್ಪೆಷಲ್ ಕೆಂಪು ಇರುವೆ ಚಟ್ನಿ ಮಾಡಿ ತಿಂದ ಡ್ಯಾನ್ಸರ್ ಕಿಶನ್: ಚೀನಾಗೆ ಕಳಿಸಿ ಎಂದು ಕಿಡಿಕಾರಿದ ನೆಟ್ಟಿಗರು!

By ಅನಿತಾ ಬನಾರಿ

ಡ್ಯಾನ್ಸರ್ ಕಿಶನ್ ಯಾರಿಗೆ ಗೊತ್ತಿಲ್ಲ ಹೇಳಿ? ರಿಯಾಲಿಟಿ ಶೋಗಳು, ಬಿಗ್ ಬಾಸ್ ಹಾಗೂ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆಕ್ಟಿವ್ ಇರುವ ಇವರು ಇತ್ತೀಚೆಗೆ ಇರುವೆ ಚಟ್ನಿ ಮಾಡಿಕೊಂಡು ತಿಂದು ಜನರಿಂದ ಬೈಸಿಕೊಂಡಿದ್ದಾರೆ. ಹೌದು ಕೆಲ ದಿನಗಳ ಹಿಂದಷ್ಟೇ ಕೆಂಪು ಇರುವ ಚಟ್ನಿಯನ್ನು ಮಾಡುವ ವಿಧಾನವನ್ನು ತಮ್ಮ ಇನ್‌ಸ್ಟಾಗ್ರಾಂ ರೀಲ್‌ನಲ್ಲಿ ಹಾಕಿಕೊಂಡಿದ್ದ ನಟ ಕಿಶನ್ ಅವರು ಈ ಚಟ್ನಿಯನ್ನು ತಿನ್ನುವುದರ ಉಪಯೋಗಗಳನ್ನು ಬರೆದುಕೊಂಡಿದ್ದರು.

ಕಿಶನ್ ತಾವೇ ಒಂದು ಮರವನ್ನು ಹತ್ತಿ ಅದರಲ್ಲಿ ಇದ್ದ ಕೆಂಪು ಇರುವೆಯ ಗೂಡನ್ನು ಕೆಳಗೆ ಉದುರಿಸಿ ಅದನ್ನು ಚಟ್ನಿ ಮಾಡಿ ರೊಟ್ಟಿ ಜೊತೆಗೆ ತಿಂದ ವಿಡಿಯೋ ಬಹಳ ವೈರಲ್ ಆಗಿದೆ. ಇದನ್ನು ಕೆಲವರು ಚಗಳಿ ಇರುವೆ ಚಟ್ನಿ ಎಂದು ಕರೆಯುತ್ತಾರೆ. ಚಟ್ನಿ ಮಾಡಿ ತಿಂದಿದ್ದಷ್ಟೇ ಅಲ್ಲದೆ ಅದರ ಉಪಯೋಗಗಳು, ಆರೋಗ್ಯದ ಮೇಲೆ ದೇಹದ ಮೇಲೆ ಅದರ ಪರಿಣಾಮಗಳನ್ನು ಬರೆದುಕೊಂಡಿರದ್ದಾರೆ.

Dancer Kishan made red ant chutney

ಇದರ ಜೊತೆಗೆ ಕಿಶನ್ ಅವರು ನೀವು ಯಾವುದೇ ರೀತಿ ಕಮೆಂಟ್ ಮಾಡುವ ಮೊದಲು ಇದನ್ನು ಯೂಟ್ಯೂಬ್ ಹಾಗೂ ಗೂಗಲ್ ಮಾಡಿ. ನಂತರ ಕಾಮೆಂಟ್ ತಿಳಿಸಿ ಎಂದು ಹಾಕಿಕೊಂಡಿದ್ದಾರೆ. ಆದರೂ ಸಹ ಡ್ಯಾನ್ಸರ್ ಕಿಶನ್‌ಗೆ ಬಹಳಷ್ಟು ಕೆಟ್ಟ ಕಾಮೆಂಟ್‌ಗಳು, ಬೈಗುಳಗಳು ಬಂದಿವೆ.

ಮಲೆನಾಡು ಹಾಗೂ ಇತರೆ ಬಹಳಷ್ಟು ಜಾಗಗಳಲ್ಲಿ ಈ ರೀತಿ ಕೆಂಪಿರುವೆ ಚಟ್ನಿಯನ್ನು ಮಾಡುವುದು ಸರ್ವೇಸಾಮಾನ್ಯವಾದ ವಿಚಾರ. ಚಗಳಿ ಇರುವೆ ಚಟ್ನಿ ಎಂದು ಫೇಮಸ್ ಆಗಿರುವ ಇದು ಬಹಳಷ್ಟು ಜನರಿಂದ ಸೇವಿಸಲ್ಪಡುತ್ತದೆ. ಹೀಗಿರುವಾಗ ಈ ಚಟ್ನಿಯನ್ನು ಮಾಡುವ ವಿಧಾನವನ್ನು ಶೇರ್ ಮಾಡಿದ ಕಿಶನ್‌ಗೆ ಮಾತ್ರ ಬಹಳಷ್ಟು ಬೈಗುಳಗಳು ಸಿಕ್ಕಿವೆ.

ನೆಟ್ಟಿಗರು ಬಹಳ ಕೋಪದಿಂದ ಕಮೆಂಟ್ ಮಾಡಿದ್ದಾರೆ. "ಆರ್ ಯು ಕ್ರೇಜಿ!", "ತರಕಾರಿ ತಿಂದು ಪ್ರೋಟೀನ್ ಸಿಗುವುದು ಸಾಕಾಗುವುದಿಲ್ಲವೇ ಇರುವೆಗಳನ್ನು ಕೊಂದೇ ಪ್ರೋಟೀನ್ ಪಡೆಯಬೇಕೇ?", "ಇದೇನಿದು ಏನನ್ನು ಹೇಳಲು ಹೊರಟಿದ್ದೀರಿ?!" ಎಂಬಿತ್ಯಾದಿ ಹಲವಾರು ನೆಗೆಟಿವ್ ಕಾಮೆಂಟ್‌ಗಳ ಸುರಿಮಳೆಯೇ ಈ ವಿಡಿಯೋಗೆ ಸಿಕ್ಕಿದೆ.

ಮತ್ತೊಬ್ಬರು " ಎಲ್ಲೆಲ್ಲಿಂದಾನೋ ಮಳೆಗಾಲಕ್ಕೆ ಬಂದು ಮಲ್ನಾಡ್ is heaven. ಅದು ಇದು ಅಂತ ಪೋಸ್ ಕೊಡೊರಿಗೆ ಇಲ್ಲಿನ ನಿಜವಾದ ಆಹಾರ ಪದ್ದತಿ, ಸಂಸೃತಿ ಬಗ್ಗೆ ಏನ್ ಗೊತ್ತಾಗ್ಬೇಕು ... ಇದೂ ಕೂಡಾ ಮಲೆನಾಡ ಸೊಗಡು ಕಣ್ರೋ ಕಪಿಗಳಾ.. ಆ ಇಂಜೆಕ್ಷನ್ ಹಾಕಿರೊ ಕೋಳಿನಾ ಯಮ್ಮಿ ಯಮ್ಮಿ ಅನ್ಕೊಂಡ್ ತಿಂತೀರ. ಚಗಳಿ ಚಟ್ನಿಗೆ ಸೀಮೆಗ್ ಇಲ್ದಿರೋ ಮಡಿವಂತಿಕೆ.. 7ನೇ ಕ್ಲಾಸ್ ಕನ್ನಡ ಪುಸ್ತಕದಲ್ಲಿ ಸರ್ಕಾರಾನೇ ಇದರ ವಿಶೇಷತೆ ಬಗ್ಗೆ ಪಾಠ ಇಟ್ಟಿದಾರೆ ..try to accept the culture of Malnad ಅಜ್ಞಾನಿಗಳ" ಎಂದು ಕಿಶನ್ ಬೆಂಬಲಕ್ಕೂ ಕೆಲವರು ಬಂದಿದ್ದಾರೆ.

ಅದೇ ರೀತಿ ಚಗಳಿ ಇರುವೆ ಚಟ್ನಿಯ ಬಗ್ಗೆ ಗೊತ್ತಿರುವವರು ಇದರ ಬಗ್ಗೆ ಇದರ ಪರಿಣಾಮ ಹಾಗೂ ಉಪಯೋಗಗಳ ಬಗ್ಗೆ ಮಾತನಾಡಿ ಒಳ್ಳೆ ಕಾಮೆಂಟ್ ಗಳನ್ನು ಹಾಕಿದ್ದಾರೆ. ಈ ರೀತಿ ಬಹಳಷ್ಟು ಮಿಶ್ರ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಈ ವಿಡಿಯೋ ಸದ್ಯಕ್ಕಂತೂ ತುಂಬಾ ವೈರಲಾಗಿದೆ.

More from Filmibeat

English summary
Dancer Kishan made red ant chutney with roti here is netizens reaction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X