»   » ರಾಗಿಣಿಗೆ ಫೋನ್ ಮಾಡಿ ಬೆಡ್ ರೂಂಗೆ ಕರೆದ ಪೊಲಿಟಿಷಿಯನ್.!

ರಾಗಿಣಿಗೆ ಫೋನ್ ಮಾಡಿ ಬೆಡ್ ರೂಂಗೆ ಕರೆದ ಪೊಲಿಟಿಷಿಯನ್.!

Posted By:
Subscribe to Filmibeat Kannada
ಈ ಪೊಲಿಟಿಷಿಯನ್ ರಾಗಿಣಿಗೆ ಫೋನ್ ಮಾಡಿ ಬೆಡ್ ರೂಂಗೆ ಕರೆದ | Oneindia Kannada

ಈ ಟೈಟಲ್ ನೋಡಿ ಒಂದು ಕ್ಷಣ ಶಾಕ್ ಆದ್ರಾ.? ನಟಿ ರಾಗಿಣಿ ಅವರನ್ನ ಪೊಲಿಟಿಷಿಯನ್ ಒಬ್ಬರು ಬೆಡ್ ರೂಂಗೆ ಕರೆದಿರುವುದು ನಿಜ. ಆದ್ರೆ, ಬೆಡ್ ರೂಂಗೆ ಕರೆದ ಆ ಪೊಲಿಟಿಶಿಯನ್ ಯಾರು? ಯಾಕೆ ಆ ರೀತಿ ಕರೆದ? ಏನಿದು ಘಟನೆ ಎಂಬುದನ್ನ ತಿಳಿಯಬೇಕಾದ್ರೆ ಈ ಪೂರ್ತಿ ಸ್ಟೋರಿ ಓದಿ....

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಭರ್ಜರಿ ಕಾಮಿಡಿ' ಶೋನಲ್ಲಿ ನಟಿ ರಾಗಿಣಿ ದ್ವಿವೇದಿ ತೀರ್ಪುಗಾರರಾಗಿದ್ದಾರೆ. ನಿರ್ದೇಶಕ ಗುರುಪ್ರಸಾದ್ ಮತ್ತು ದೊಡ್ಡಣ್ಣ ಅವರ ಜೊತೆ ರಾಗಿಣಿ ಕೂಡ ವೇದಿಕೆ ಹಂಚಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಒಂದಾದ ದೊಡ್ಡಣ್ಣ - ರಾಗಿಣಿ ದ್ವಿವೇದಿ ಜೋಡಿ

ಈ ವಾರದ ಎಪಿಸೋಡ್ ನಲ್ಲಿ ರಾಗಿಣಿ ಅವರಿಗೊಬ್ಬ ಅಭಿಮಾನಿ ಫೋನ್ ಮಾಡಿ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ವೇಳೆ ತುಪ್ಪದ ಹುಡುಗಿ ಜೊತೆ ಮಾತನಾಡಿದ ಅಭಿಮಾನಿ, ಬೆಳಗಾವಿ ಕಡೆ ಬರುವಂತೆ ಕೋರಿಕೆ ಇಟ್ಟರು. ಅದಕ್ಕೆ ಪ್ರತಿಕ್ರಿಯಿಸಿದ ರಾಗಿಣಿ ನಾನು ಆ ಕಡೆ ಯಾವಾಗಲೂ ಬರುತ್ತೇನೆ, ನೀವು ಭೇಟಿಯಾಗಿಲ್ಲ ಅಷ್ಟೇ ಅಂದರು.

 Danish sait as special guest in Bharjari comedy

ಮಾತು ಮುಂದುವರೆಸಿದ ಅಭಿಮಾನಿ ''ಈ ಬಾರಿ ನಮ್ಮೂರಿಗೆ ಬಂದಾಗ ನಮ್ಮ ಮನೆಗೆ ಬನ್ನಿ, ನಮ್ಮದು ಸಿಂಗಲ್ ಬೆಡ್ ರೂಂ, ನಾನು ಮತ್ತು ನೀವು ಉಳಿದುಕೊಳ್ಳಬಹುದು. ನನ್ನ ಹೆಂಡತಿ ಇರ್ತಾಳೆ. ಆದ್ರೂ, ಅವಳು ಅಡ್ಜಸ್ಟ್ ಮಾಡಿಕೊಳ್ತಾರೆ'' ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದರು. ಇದು ಸ್ವತಃ ರಾಗಿಣಿ ಅವರಿಗೆ ಮುಜುಗರ ಜೊತೆ ಆಶ್ಚರ್ಯ ಉಂಟು ಮಾಡಿತು.

ಅಯ್ಯೋ...! ಯಾಕೋ ಈ ವರ್ಷ ರಾಗಿಣಿ ದ್ವಿವೇದಿ ಹಣೆ ಬರಹ ಸರಿ ಇಲ್ಲ ಬಿಡಿ

ಅಂದ್ಹಾಗೆ, ಆ ಕಾಲ್ ಮಾಡಿದ್ದು ಬೇರೆ ಯಾರೂ ಅಲ್ಲ. ಹಂಬಲ್ ಪೊಲಿಟಿಷಿಯನ್ ನೊಗರಾಜ್.! ಡ್ಯಾನಿಶ್ ಸೇಠ್ ಅಭಿನಯದ 'ಹಂಬಲ್ ಪೊಲಿಟಿಷಿಯನ್ ನೊಗರಾಜ್' ಇದೇ ವಾರ (ಜನವರಿ 12) ರಾಜ್ಯಾದ್ಯಂತ ತೆರೆಕಾಣುತ್ತಿದೆ. ಚಿತ್ರದ ಬಗ್ಗೆ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ ಡ್ಯಾನಿಶ್ ಸೇಠ್, 'ಭರ್ಜರಿ ಕಾಮಿಡಿ' ಕಾರ್ಯಕ್ರಮಕ್ಕೆ ಪ್ರಾಂಕ್ ಕಾಲ್ ಮಾಡಿ ಈ ರೀತಿ ಮಾತನಾಡಿದ್ದಾರೆ. ಇದು ಕೇವಲ ಕಾಮಿಡಿಗಾಗಿ ಅಷ್ಟೇ.

ಈ ಸನ್ನಿವೇಶ ಹೇಗಿತ್ತು? ಡ್ಯಾನಿಶ್ ಕಾಲ್ ಮಾಡಿ ಮಾತನಾಡಿದ ದೃಶ್ಯ ಈ ವಾರ 'ಭರ್ಜರಿ ಕಾಮಿಡಿ' ಎಪಿಸೋಡ್ ನಲ್ಲಿ ಪ್ರಸಾರವಾಗಲಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೀಕ್ಷಿಸಿ...

English summary
Kannada actor Danish sait enters as special guest in Suvarna Channel's 'Bharjari comedy' show this week. Danish sait is hero of Kannada Movie 'Humble Politician Nograj' which is releasing this week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X