»   » ಕಿರುತೆರೆ ಶೋನಲ್ಲಿ ಮಹಿಳೆಯರ ಬೆತ್ತಲೆ ದರ್ಶನ

ಕಿರುತೆರೆ ಶೋನಲ್ಲಿ ಮಹಿಳೆಯರ ಬೆತ್ತಲೆ ದರ್ಶನ

By: ರವಿಕಿಶೋರ್
Subscribe to Filmibeat Kannada

ದಿನಕ್ಕೊಂದು ಹೊಸ ಹೊಸ ರಿಯಾಲಿಟಿ ಶೋಗಳ ಜಮಾನಾ ಇದು. ಪರದೇಶಗಳಲ್ಲಿ ಕ್ಲಿಕ್ ಆದ ಶೋಗಳು ಭಾರತದಲ್ಲೂ ನಿರ್ಮಾಣವಾಗುತ್ತಿರುವುದು ಹೊಸದಲ್ಲ ಬಿಡಿ. ಅಲ್ಲಿನ ತರಹೇವಾರಿ ಸಂಸ್ಕೃತಿ, ಸಂಪ್ರದಾಯಗಳು ಇಲ್ಲೂ ಇಣುಕುತ್ತಿವೆ.

ಅಂತಹದ್ದೇ ಒಂದು ಟಿವಿ ಶೋ ಈಗ ಡೆನ್ಮಾರ್ಕ್ ನಲ್ಲಿ ಪ್ರಾರಂಭವಾಗಿದೆ. ಈ ಕಿರುತೆರೆ ಕಾರ್ಯಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದರೂ ನಿರ್ವಾಹಕರು ಮಾತ್ರ ಕ್ಯಾರೆ ಎನ್ನುತ್ತಿಲ್ಲವಂತೆ. ಡೇನಿಷ್ ಭಾಷೆಯ ಈ ರಿಯಾಲಿಟಿ ಶೋ ಹೆಸರು 'X Factor'.

ಈ ಶೋನಲ್ಲಿ ಏನಪ್ಪಾ ಅಂತಹ ವಿಶೇಷ ಎಂದರೆ, ಮಹಿಳೆಯನ್ನು ಬೆತ್ತಲೆಯಾಗಿ ತೋರಿಸುತ್ತಿರುವುದು. ಸ್ಟುಡಿಯೋ ಒಳಗೆ ಮೌನವಾಗಿ ಹೆಜ್ಜೆ ಇಡುತ್ತಾ ಬರುವ ಮಹಿಳೆಯರು ಇಲ್ಲಿ ವಿವಸ್ತ್ರರಾಗುತ್ತಾರೆ. ಅವರ ಎದುರುಗಡೆ ಕಾರ್ಯಕ್ರಮದ ನಿರ್ವಾಹಕ ಹಾಗೂ ಅತಿಥಿಯೊಬ್ಬರು ಕುಳಿತಿರುತ್ತಾರೆ.

ಅಂಗಾಂಗ ನೋಡಿ ಸೌಂದರ್ಯ ವಿಶ್ಲೇಷಣೆ

ಇವರಿಬ್ಬರೂ ವಿವಸ್ತ್ರರಾದ ಮಹಿಳೆಯ ಅಂಗಾಂಗಗಳನ್ನು ನೋಡುತ್ತಾ ಅವರ ಸೌಂದರ್ಯವನ್ನು ವಿಶ್ಲೇಷಿಸುತ್ತಾರೆ. ಇದು X Factor ಶೋನ ಒಂದು ಝಲಕ್. ಒಂದು ಎಪಿಸೋಡಿನಲ್ಲಿ ಕಾರ್ಯಕ್ರಮದ ನಿರೂಪಕ ಥಾಮಸ್ ಬ್ಲಾಕ್ ಮ್ಯಾನ್ ಅವರು ನೀವು ತಪ್ಪು ತಿಳಿಯಲ್ಲ ಎಂದರೆ ಹಾಗೆ ಒಂದು ಕ್ಷಣ ತಮ್ಮ ದೇಹವನ್ನು ಸುತ್ತು ಹಾಕಿ ಪ್ರದರ್ಶಿಸಿ ಎಂದು ಕೇಳುತ್ತಾರೆ.

ಡೆನ್ಮಾರ್ಕ್ ದೇಶದ ಪ್ರಜೆಗಳ ಕೆಣಕಿದ ಶೋ

ಮಹಿಳೆಯರ ಬಗ್ಗೆ ಥಾಮಸ್ ಈ ರೀತಿ ಅಸಭ್ಯವಾಗಿ ಮಾತನಾಡಿರುವುದು ಈಗ ಡೆನ್ಮಾರ್ಕ್ ದೇಶದ ಪ್ರಜೆಗಳನ್ನು ಕೆಣಕಿದೆಯಂತೆ. ಥಾಮಸ್ ಅವರು ಮಹಿಳೆಯರ ತೇಜೋವಧೆ ಮಾಡುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

ಐಡಿಯಾ ಕೊಟ್ಟವರು ಜಾಸ್ ಗಾಯಕ

ಈ ರೀತಿಯ ಕಾರ್ಯಕ್ರಮದ ಐಡಿಯಾ ಕೊಟ್ಟವರು ಜಾಸ್ ಗಾಯಕ ಡೇನ್ ಬ್ಲಾಕ್ ಮ್ಯಾನ್ ಎಂಬುವವರಂತೆ. ಈ ಕಾರ್ಯಕ್ರಾಮದ ಬಗ್ಗೆ ಅವರು ಹೇಳುವುದು ಏನೆಂದರೆ, ಕೇವಲ ಮಹಿಳೆಯರ ಬೆತ್ತಲೆ ದೇಹವನ್ನು ತೋರಿಸಿದರೆ ಈ ಕಾರ್ಯಕ್ರಮವೊಂದು ನೀಲಿ ಚಿತ್ರವಾಗಿಬಿಡುತ್ತಿತ್ತು.

ಪದಗಳಿಗೆ ನಿಲುಕದ ಸೌಂದರ್ಯ

ಅದಕ್ಕೆ ಬದಲಾಗಿ ತಾವು ಅವರ ದೇಹದ ಬಗ್ಗೆ ಮಾತನಾಡುವ, ಅದನ್ನು ವಿಶ್ಲೇಷಿಸುವಂತೆ ಮಾಡಿದ್ದೇವೆ. ಹೆಣ್ಣಿನ ದೇಹದ ವರ್ಣನೆ ಪದಗಳಿಗೆ ನಿಲುಕುವುದಿಲ್ಲ. ಪುರುಷನೊಬ್ಬನ ಮುಂದೆ ನಿಂತ ಮಹಿಳೆಯ ದೇಹವನ್ನು ವರ್ಣಿಸುವುದು ನಿಜಕ್ಕೂ ಸವಾಲು ಎಂದು ತಮ್ಮ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದ್ದಾನೆ.

ಶೋ ಬಗ್ಗೆ ತೀವ್ರ ಅಸಮಾಧಾನ

ಡೆನ್ಮಾರ್ಕ್ ದೇಶದ DR2 ವಾಹಿನಿಯಲ್ಲಿ ಈ ಕಾರ್ಯಕ್ರಮ ಮೂಡಿಬರುತ್ತಿದೆ. ಒಂದು ತಿಂಗಳ ಹಿಂದೆ ಆರಂಭವಾಗಿರುವ ಈ ಕಾರ್ಯಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾರ್ಯಕ್ರಮ ನಿಲ್ಲಿಸುವ ಬಗ್ಗೆಯೂ ಚಿಂತನೆ ನಡೆದಿದೆ.

English summary
A Danish TV series, styled on popular show "X Factor", has caused outrage after parading women without a stitch on in the programme. The primetime show features a "series of silent women who walk in to a studio and slip out of their bathrobes in front of a leering host and his guest", reports thesun.co.uk. 
Please Wait while comments are loading...