ಡಾಕ್ಯುಮೆಂಟರಿ ಸಿನಿಮಾದ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ ದರ್ಶಕ್ ಗೌಡ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಪತ್ರಕರ್ತನಾಗಿ ರಾಹುಲ್ ಅಭಿನಯಿಸಿದ್ದ ದರ್ಶಕ್ ಗೌಡ ಈಗ
ಡಾಕ್ಯುಮೆಂಟರಿ ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಹೌದು, ಸಾಮಾಜಿಕ ಹಾಗೂ ಪರಿಸರ ಕಳಕಳಿರುವಂತಹ ಡಾಕ್ಯುಮೆಂಟರಿ 'ನಿಶಾಚರ'ದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ನಟ ದರ್ಶಕ್ ಗೌಡ.

ಅಳಿವಿನಂಚಿನಲ್ಲಿರುವ ಪ್ರಾಣಿ ಬಗ್ಗೆ ಡಾಕ್ಯುಮೆಂಟರಿ

ಪಶ್ಚಿಮ ಘಟ್ಟದ 'ಸ್ಲೆಂಡರ್ ಲಾರಿಸ್' ಎಂಬ ಪ್ರಾಣಿಯ ಬಗೆಗಿನ ಡಾಕ್ಯುಮೆಂಟರಿ ಇದಾಗಿದ್ದು, ಈ ಪ್ರಾಣಿ ಅಳಿವಿನಂಚಿನಲ್ಲಿದೆಯಂತೆ. ಹಾಗಾಗಿ ಈ ಪ್ರಾಣಿಯ ಬಗ್ಗೆ ಅರಿವು ಮೂಡಿಸುವಂತಹ ಡಾಕ್ಯುಮೆಂಟರಿಯಲ್ಲಿ ನಟ ದರ್ಶಕ್ ಗೌಡ ಅವರು ಬಣ್ಣ ಹಚ್ಚಿದ್ದಾರೆ.

Darshak Gowda is coming to entertain the viewers through a documentary movie

30 ನಿಮಿಷದ ಡಾಕ್ಯುಮೆಂಟರಿ

ನಿರ್ದೇಶಕ ಸತೀಶ್ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಹೆಚ್ಚು ಕಮ್ಮಿ 30 ನಿಮಿಷಗಳದ್ದಾಗಿದೆ. ಸ್ಪ್ಲೆಂಡರ್ ಲಾರಿಸ್ ಎಂಬ ಪ್ರಾಣಿಯನ್ನು ಮಾಟ ಮಂತ್ರ ಹಾಗೂ ಇತ್ಯಾದಿ ಅನೇಕ ಮೂಢನಂಬಿಕೆ ವಿಚಾರಗಳಿಗೆ ಬಳಸಿಕೊಂಡು ಅದರ ಸಂತತಿ ಈಗ ಕ್ಷೀಣಿಸುತ್ತಿದೆಯಂತೆ.

ಅರಿವು ಮೂಡಿಸುವ ಡಾಕ್ಯುಮೆಂಟರಿ

'ಬೆಟ್ಟದ ಹೂವು' ಧಾರಾವಾಹಿಯಲ್ಲಿ ಬ್ಯುಸಿ ಇದ್ದ ನಟ ದರ್ಶಕ್ ಗೌಡ ಅವರು ಒಂದೊಮ್ಮೆ ಈ ವಿಚಾರದ ಬಗ್ಗೆ ತಿಳಿದು ಬಹಳ ಬೇಸರ ವ್ಯಕ್ತಪಡಿಸಿದ್ದರಂತೆ. ನಂತರ ಅವರಿಗೆ ಈ ವಿಚಾರದ ಬಗ್ಗೆ ಬಹಳಷ್ಟು ಅರಿವು ಮೂಡಿಸಬೇಕೆಂಬ ಬಯಕೆ ಶುರುವಾಗಿ ತಮ್ಮದೇ ಒಂದು ತಂಡದ ಮೂಲಕ ಡಾಕ್ಯುಮೆಂಟರಿಯನ್ನು ಹೊರ ತರಲಿದ್ದಾರೆ.

Darshak Gowda is coming to entertain the viewers through a documentary movie

ಈ ಸ್ಲೆಂಡರ್ ಲಾರಿಸ್ ಎಂಬ ಪ್ರಾಣಿ ರೈತರಿಗೆ ಬಹಳಷ್ಟು ಮುಖ್ಯವಾಗಿದ್ದು ಇಕೋ ಸಿಸ್ಟಮ್ ಅನ್ನು ಸಮತೋಲನದಲ್ಲಿಡಲು ಬಹಳಷ್ಟು ಸಹಕಾರಿಯಂತೆ. ಇದು ರಾತ್ರಿ ಓಡಾಡುವ ಪ್ರಾಣಿಯಾಗಿದ್ದು, ಈ ಕಾರಣಕ್ಕೆ ಈ ಚಿತ್ರಕ್ಕೆ 'ನಿಶಾಚರ' ಎಂಬ ಹೆಸರಿಡಲಾಗಿದೆ. ಚಿತ್ರದಲ್ಲಿ ನಟ ದರ್ಶಕ್ ಗೌಡ ಅವರು ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಹಾಗೂ ಪರಿಸರ ಕಳಕಳಿರುವ ಚಿತ್ರ ಇದಾಗಿದ್ದು ಹೇಗೆ ಮೂಡಿ ಬಂದಿದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Darshak Gowda will entertain the viewers on screen as a wildlife photographer, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X