'ಬೆಟ್ಟದ ಹೂ' ಮುಕ್ತಾಯ? ಸುಂದರ ಪಯಣ ನೆನೆದ ನಟ ದರ್ಶಕ್ ಗೌಡ

By ಅನಿತಾ ಬನಾರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೆಟ್ಟದ ಹೂ' ಧಾರಾವಾಹಿಯು ಮುಕ್ತಾಯದ ಹಂತದಲ್ಲಿದೆ. ಈಗಾಗಲೇ ಧಾರಾವಾಹಿಯು ತನ್ನ ಪ್ರಸಾರ ನಿಲ್ಲಿಸಲಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.

ಇದರ ಜೊತೆಗೆ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ನಾಯಕ ರಾಹುಲ್ ಆಗಿ ಅಭಿನಯಿಸುತ್ತಿರುವ ದರ್ಶಕ್ ಅವರು ಧಾರಾವಾಹಿ ತಂಡದವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದು 'ಇದೊಂದು ಸುಂದರ ಪ್ರಯಾಣವಾಗಿದೆ. ಇಂತಹ ಪ್ರಯಾಣ ಇದೀಗ ಕೊನೆಯಾಗುತ್ತಿದೆ ಎಂದರೆ ನಂಬಲಾಗುತ್ತಿಲ್ಲ. 'ಬೆಟ್ಟದ ಹೂ' ಧಾರಾವಾಹಿಯಿಂದಾಗಿ ನನಗೆ ಯಲ್ಲಾಪುರದ ಪರಿಚಯವೂ ಆಯಿತು. ಅಲ್ಲಿ ನಡೆದ ಬೆಳಗ್ಗಿನ 6.30 ಗಂಟೆಯ ಶೂಟಿಂಗ್ ಅನ್ನು ನಾನು ಮರೆಯಲು ಅಸಾಧ್ಯ. ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಸದಾ ಕಾಲ ಹೀಗಿರಲಿ" ಎಂದು ಬರೆದುಕೊಂಡಿದ್ದಾರೆ.

ತಮಿಳು ಕಿರುತೆರೆಯಲ್ಲಿ ವಿಲನ್

ತಮಿಳು ಕಿರುತೆರೆಯಲ್ಲಿ ವಿಲನ್

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪದ್ಮಾವತಿ' ಧಾರಾವಾಹಿಯಲ್ಲಿ ಖಳನಾಯಕ ಪ್ರಸನ್ನ ಅವತಾರದಲ್ಲಿ ಅಭಿನಯಿಸಿದ್ದ ದರ್ಶಕ್‌ಗೆ ಕಿರುತೆರೆಗಿಂತಲೂ ಜಾಸ್ತಿ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಮನಸ್ಸಿತ್ತು. 'ಪದ್ಮಾವತಿ'ಯ ಪ್ರಸನ್ನ ಆಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ದರ್ಶಕ್ ನಂತರ ಮೋಡಿ ಮಾಡಿದ್ದು ತಮಿಳು ಕಿರುತೆರೆಯಲ್ಲಿ. ತಮಿಳಿನ 'ಅರುಂಧತಿ' ಧಾರಾವಾಹಿಯಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ದರ್ಶಕ್ ಮತ್ತೆ ನಾಯಕನಾಗಿ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದರು.

ಕನ್ನಡ ಕಿರುತೆರೆಯ 'ಕಣ್ಮಣಿ' ದರ್ಶಕ್

ಕನ್ನಡ ಕಿರುತೆರೆಯ 'ಕಣ್ಮಣಿ' ದರ್ಶಕ್

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಣ್ಮಣಿ' ಧಾರಾವಾಹಿಯಲ್ಲಿ ನಾಯಕ ಆಗಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿದ ದರ್ಶಕ್ ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ನಟಿಸಿದರು.

'ಬೆಟ್ಟದ ಹೂ' ಧಾರಾವಾಹಿಯಲ್ಲಿ ಪತ್ರಕರ್ತ

'ಬೆಟ್ಟದ ಹೂ' ಧಾರಾವಾಹಿಯಲ್ಲಿ ಪತ್ರಕರ್ತ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಜರ್ನಲಿಸ್ಟ್ ರಾಹುಲ್ ಪಾತ್ರಕ್ಕೆ ಜೀವ ತುಂಬಿದ್ದ ದರ್ಶಕ್ ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಪ್ರತಿಭೆ. "ಮೊದಲಿನಿಂದಲೂ ನನಗೆ ನಟನಾಗಬೇಕು ಎಂಬ ಆಸೆ ಇದ್ದಿದ್ದಂತೂ ನಿಜ. ಆದರೆ ನಾಯಕನಾಗಬೇಕು ಎಂದು ಅಂದುಕೊಂಡಿರಲಿಲ್ಲ. ಯಾಕೆಂದರೆ ಒಳ್ಳೆಯ ಕಲಾವಿದನಾಗಬೇಕು ಎಂಬುದೇ ನನ್ನ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದಕ್ಕಾಗಿ ನಾನು ತುಂಬಾ ಪ್ರಯತ್ನ ಪಟ್ಟಿದ್ದೇನೆ. ಪಡುತ್ತಲೂ ಇದ್ದೇನೆ" ಎಂದು ನಗುತ್ತಾ ಹೇಳುವ ದರ್ಶಕ್‌ಗೆ ಚಾಲೆಂಜಿಂಗ್ ಆಗಿರುವಂತಹ ಪಾತ್ರಗಳಿಗೆ ಜೀವ ತುಂಬುವ ಮನಸ್ಸಿದೆ.

ಬೈಕ್ ಅಂದ್ರೆ ದರ್ಶಕ್‌ಗೆ ಬಲು ಪ್ರೀತಿ

ಬೈಕ್ ಅಂದ್ರೆ ದರ್ಶಕ್‌ಗೆ ಬಲು ಪ್ರೀತಿ

ನಟನೆಯ ಹೊರತಾಗಿ ದರ್ಶಕ್ ಅವರಿಗೆ ಆಟೋಮೊಬೈಲ್‌ನಲ್ಲಿ ವಿಶೇಷ ಆಸಕ್ತಿ. ಬೈಕ್‌ಗಳೆಂದರೆ ದರ್ಶಕ್‌ಗೆ ತುಂಬಾ ಕ್ರೇಜ್. ಹೌದು, ಅವರ ಇನ್‌ಸ್ಟಾಗ್ರಾಂ ಖಾತೆ ನೋಡಿದರೆ ಅವರಿಗೆ ಎಷ್ಟರ ಮಟ್ಟಿಗೆ ಬೈಕ್ ಕ್ರೇಜ್ ಇದೆ ಎಂಬುದು ಗೊತ್ತಾಗುತ್ತದೆ‌. ದರ್ಶಕ್ ಅವರು ಆರು ವರ್ಷದ ಹುಡುಗನಾಗಿದ್ದಾಗಲೇ ಸುಮಾರು 200 ಕಾರುಗಳ ಹೆಸರನ್ನು ನೆನಪಿಟ್ಟುಕೊಂಡು ಹೇಳುತ್ತಿದ್ದರು. ಇದರ ಬಗ್ಗೆ ಮಾತನಾಡಿರುವ ಅವರು "ಬಾಲ್ಯದಿಂದಲೂ ಬೈಕ್ ಬಗ್ಗೆ ಕ್ರೇಜ್ ಇತ್ತು. ಆದರೆ ನನಗೆ ಬೈಕ್ ದೊರಕಿದ್ದು ಮಾತ್ರ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ. ಅದು ನನ್ನ ಜೀವನದ ಅತ್ಯಂತ ಸಂತಸದ ಕ್ಷಣ" ಎಂದು ಹೇಳಿದ್ದರು ದರ್ಶಕ್.

English summary
Darshak Gowda expressed sadness over the ending of Bettada Hoo serial, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X