ಕ್ರೇಜಿಸ್ಟಾರ್‌ಗೆ ಗಿಫ್ಟ್ ಕೊಟ್ಟಿರೋದು ಅಪ್ಪು & ದರ್ಶನ್ ಮಾತ್ರ; ಹಳೇ ನೆನಪುಗಳಲ್ಲಿ ರವಿಚಂದ್ರನ್

By ಎಸ್ ಸುಮಂತ್

ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಜೀ ಕನ್ನಡದ ಆಲ್ಮೋಸ್ಟ್ ಕಾರ್ಯಕ್ರಮಗಳು ನಡೆಯುವುದು. 'ಭರ್ಜರಿ ಬ್ಯಾಚುಲರ್- 2' ಕೂಡ ಅಲ್ಲಿಯೇ ನಡೆಯುತ್ತಿದೆ. ಅಪ್ಪುಗೆ ವಿಶೇಷ ಗೌರವ ಸಲ್ಲಿಸುವುದಕ್ಕೆ ಅಬ್ಬಯ್ಯ ನಾಯ್ಡು ಸ್ಟುಡಿಯೋ ಮುಂದೆ ದೊಡ್ಡದಾದ ಅಪ್ಪು ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಮಾನವೀಯತೆಯ ರಾಯಭಾರಿಗೆ ನಮನ ಸಲ್ಲಿಸುವ ಮೂಲಕ ಅಪ್ಪು 50ನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಜೀ ಕನ್ನಡದಲ್ಲಿ ಅಪ್ಪು ಹಬ್ಬವನ್ನ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಅವರಿಗಾಗಿ ಎಲ್ಲಾ ರಿಯಾಲಿಟಿ ಶೋಗಳನ್ನು ಮೀಸಲಿಡುತ್ತಾರೆ. ಹಾಡಿನ ಮೂಲಕ, ಡ್ಯಾನ್ಸ್ ಮೂಲಕ ಅಪ್ಪು ಸ್ಮರಣೆ ಮಾಡುತ್ತಾರೆ, ಅವರ ನೆನಪುಗಳನ್ನು ಮೆಲುಕು ಹಾಕುತ್ತಾರೆ.

Darshan and Puneeth Rajkumar only gave gift to me says Ravichandran

ಉಲ್ಲಾಸ್, ಪವಿ ಪರ್ಫಾಮೆನ್ಸ್‌ಗೆ ಫಿದಾ

'ಭರ್ಜರಿ ಬ್ಯಾಚುಲರ್-2' ಶೋನಲ್ಲಿ ಪವಿ ಪೂವಣ್ಣ ಅವರು ಉಲ್ಲಾಸ್ ಅವರಿಗೆ ಜೋಡಿಯಾಗಿದ್ದಾರೆ. ಈ ವಾರದ ಎಪಿಸೋಡ್‌ನಲ್ಲಿ ಅಪ್ಪು ಚಿತ್ರದ ಬಹಳ ಮುಖ್ಯವಾದ ದೃಶ್ಯಗಳನ್ನ ರಿಕ್ರಿಯೇಟ್ ಮಾಡಿದ್ದಾರೆ. ಉಲ್ಲಾಸ್ ಹೈಟ್ ತುಂಬಾನೇ ಕಡಿಮೆ ಇದೆ. ಪವಿ ಹೈಟ್ ಸಿಕ್ಕಾಪಟ್ಟೆ ಜಾಸ್ತಿ ಇದೆ. ಆದರೂ ಇಬ್ಬರ ಪರ್ಫಾಮೆನ್ಸ್ ತುಂಬಾ ಅದ್ಭುತವಾಗಿತ್ತು. ಅಪ್ಪು ಸಿನಿಮಾದ ದೃಶ್ಯಗಳನ್ನ ಮತ್ತೆ ನೋಡಿದಂತೆ ಆಗಿದೆ.

ಅಪ್ಪು ನೆನೆದ ರಚಿತಾ ರಾಮ್

ಇದೇ ಶೋನಲ್ಲಿ ರಚಿತಾ ರಾಮ್ ಜಡ್ಜ್ ಆಗಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರ ಜೊತೆಗೆ ರಚಿತಾ ರಾಮ್ ಕೂಡ ನಟಿಸಿದ್ದಾರೆ. ಅಪ್ಪು ಜೊತೆಗೆ ಒಂದಷ್ಟು ನೆನಪುಗಳು ಅವರೊಟ್ಟಿಗೆ ಇದಾವೆ. ಅವರಿಲ್ಲ ಎಂಬ ನೋವು ರಚಿತಾ ರಾಮ್ ಅವರಲ್ಲಿಯೂ ಇದೆ. ಈಗ 50 ವರ್ಷದ ಹುಟ್ಟುಹಬ್ಬ. ಆದರೆ ಅವರಿಲ್ಲ ಎಂಬ ನೋವಿದ್ದರು, ಅವರನ್ನ ಸೆಲೆಬ್ರೇಷನ್ ಮಾಡಿ, ಸಂಭ್ರಮಿಸುತ್ತಿದ್ದೇವೆ. ಅವರ ಸಿನಿಮಾಗಳ ಮೂಲಕವೇ ಅವರನ್ನ ಜೀವಂತವಾಗಿರಿಸಿಕೊಂಡಿದ್ದೇವೆ. ರಚಿತಾ ರಾಮ್ ಕೂಡ ಎದ್ದು ನಿಂತು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.

ಅಪ್ಪು ಬಗ್ಗೆ ರವಿಚಂದ್ರನ್ ಮಾತು

ಪುನೀತ್ ಅವರನ್ನ ತೀರಾ ಹತ್ತಿರದಿಂದ ಕಂಡವರು ರವಿಚಂದ್ರನ್. ಈಗ ಈ ವೇದಿಕೆಯಲ್ಲಿ ಅಪ್ಪು ಅವರ ಬಗ್ಗೆ ಮಾತನಾಡಿದ್ದಾರೆ. ಅಪ್ಪು ಯಾರ ಬಗ್ಗೆಯೂ ಮಾತನಾಡುವುದಕ್ಕೆ ಇಷ್ಟ ಪಡುತ್ತಿರಲಿಲ್ಲ. ಒಳ್ಳೆಯದಾಗುತ್ತೆ ಎಂದರೆ ಅದರ ಬಗ್ಗೆ ಮಾತ್ರ ಮಾತಾಡ್ತಾ ಇದ್ದದ್ದು. ಬೇಡದ ಜಾಗದಲ್ಲಿ ಹೆಚ್ಚು ಸಮಯ ಇರೋದಕ್ಕೆ ಇಷ್ಟ ಪಡುತ್ತಾ ಇರಲಿಲ್ಲ. ಅದಕ್ಕೆ ಕಾರಣ ಅಲ್ಲಿ ಹೆಚ್ಚು ಸಮಯ ಇದ್ದರೆ ತಾನೇ ಬೇರೆಯವರ ಬಗ್ಗೆ ಮಾತನಾಡುವ ಪ್ರಮೇಯ ಬರುವುದು ಎಂದು ಅಲ್ಲು ಹೋಗಿ ಬಿಡ್ತಾ ಇದ್ದರು ಎಂದು ಅಂದಿನ ದಿನವನ್ನ ನೆನೆದಿದ್ದಾರೆ.

ರವಿಚಂದ್ರನ್ ಗಿಫ್ಟ್ ಕೊಟ್ಟ ನಟರು

ಇನ್ನು ರವಿಚಂದ್ರನ್ ಅವರಿಗೆ ಇಂಡಸ್ಟ್ರಿಯಲ್ಲಿ ಇಬ್ಬರು ಮಾತ್ರ ಗಿಫ್ಟ್ ಕೊಟ್ಟಿರೋದಂತೆ. ಆ ಸ್ಪೆಷಲ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದುವೇ ಅಪ್ಪು ಹಾಗೂ ದರ್ಶನ್ ಮಾತ್ರ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಒಮ್ಮೆ ವಿದೇಶದಿಂದ ಬಂದಾಗ ಬ್ಯಾಗ್ ತಂದು ರವಿಚಂದ್ರನ್ ಅವರಿಗೆ ಗಿಫ್ಟ್ ನೀಡಿದ್ದರಂತೆ. ಅದನ್ನ ಹೇಳಿರುವ ರವಿಚಂದ್ರನ್, ದರ್ಶನ್ ಕೂಡ ಗಿಫ್ಟ್ ನೀಡಿದ್ದರು. ಒಂದು ಐಪ್ಯಾಡ್ ನೀಡಿದ್ದಾರೆ. ಈ ವಿಚಾರವನ್ನ 'ಭರ್ಜರಿ ಬ್ಯಾಚುಲರ್-2' ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Here is the details about appu and Darshan gifted Ravichandran
Read more about: sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X