For Quick Alerts
  ALLOW NOTIFICATIONS  
  For Daily Alerts

  ಡಿ-ಬಾಸ್ ಬಗ್ಗೆ ಕೊಂಡಾಡಿದ ಅಂಬಿ ಪುತ್ರ: ನೋಡೋದು ಮಿಸ್ ಮಾಡ್ಕೋಬೇಡಿ

  |
  Amar Kannada Movie: ಕೆಲವೇ ದಿನಗಳಲ್ಲಿ ತೆರೆ ಮುಂದೆ ಬರ್ತಾರೆ ಅಭಿ, ದರ್ಶನ್ | FILMIBEAT KANNADA

  ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ ಅಮರ್ ಮುಂದಿನ ವಾರ ದೇಶಾದ್ಯಂತ ತೆರೆಕಾಣಲು ಸಜ್ಜಾಗಿದೆ. ಎಲ್ಲೆಡೆ ಅಮರ್ ಸಿನಿಮಾ ಪ್ರಚಾರ ಮಾಡ್ತಿರುವ ಅಭಿ ಟಿವಿ ಕಾರ್ಯಕ್ರಮವೊಂದರಲ್ಲಿ ಡಿ ಬಾಸ್ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

  ''ದರ್ಶನ್ ಅವರು ನಮ್ಮ ತಂದೆಯಂತೆ ಸ್ವಭಾವ ಹೊಂದಿದ್ದಾರೆ. ಬೇರೆಯವರನ್ನ ಬೆಳೆಸಬೇಕು ಎಂಬ ಉದ್ದೇಶ ಅವರಲ್ಲಿದೆ. ಬರಿ ನನಗೆ ಮಾತ್ರವಲ್ಲ, ಎಲ್ಲ ಸಿನಿಮಾಗಳಿಗೂ ಸಪೋರ್ಟ್ ಮಾಡ್ತಾರೆ. ಎಲ್ಲ ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮಗಳಲ್ಲೂ ಭಾಗಿಯಾಗ್ತಾರೆ. ಆ ಗುಣದಿಂದಲೇ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತೆ. ಈಗಲೂ ಅವರಿಲ್ಲ, ಆದರೂ ಡಿ ಬಾಸ್ ಎನ್ನುವ ಬ್ರ್ಯಾಂಡ್ ಸದ್ದು ಮಾಡುತ್ತೆ'' ಎಂದು ಖುಷಿಯಾದರು.

  'ಅಮರ್' ಚಿತ್ರದಲ್ಲಿ ದರ್ಶನ್ ಮಾಡಬೇಕು ಎನ್ನುವುದು 'ಅವರ' ಆಸೆಯಂತೆ

  ಅಂದ್ಹಾಗೆ, ಇದನ್ನ ಅಭಿಷೇಕ್ ಅಂಬರೀಶ್ ಹೇಳಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಕಾರ್ಯಕ್ರಮದಲ್ಲಿ.

  ಈ ವಾರದ ಎಪಿಸೋಡ್ ಗೆ ಅಂಬರೀಶ್ ಮಗ ಅಭಿ ಹಾಗೂ ಅಮರ್ ಚಿತ್ರತಂಡ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯಕ್ಕೆ ಇದು ಪ್ರೋಮೋ ಮಾತ್ರ. ಪೂರ್ತಿ ಎಪಿಸೋಡ್ ಈ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ನೋಡಬೇಕಿದೆ.

  ದರ್ಶನ್ ಹೇಳಿದ ಆ ಮಾತು ನನಗೆ ದೊಡ್ಡ ಸಹಾಯ ಮಾಡಿತು: ಅಭಿಷೇಕ್

  ಇನ್ನು ಅಮರ್ ಸಿನಿಮಾ ಬಗ್ಗೆ ಹೇಳುವುದಾರೇ ಮೈನಾ ಖ್ಯಾತಿ ನಾಗಶೇಖರ್ ನಿರ್ದೇಶನ ಮಾಡಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದ್ದು, ತಾನ್ಯ ಹೋಪ್ ನಾಯಕಿಯಾಗಿ ನಟಿಸಿದ್ದಾರೆ.

  English summary
  Challenging star Darshan character is almost similar to ambareesh character said ambi son abhishek in tv programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X