»   » 'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

'ಬಾತ್ ರೂಂ' ಸಂಜನಾ ವಿರುದ್ಧ ದಂಗೆ ಎದ್ದ ದರ್ಶನ್ ಫ್ಯಾನ್ಸ್.!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ಭುವನ್ ಜೊತೆ 'ಬಾತ್ ರೂಂ ತೊಳೆದು' ಗಾಸಿಪ್ ಹಾಗೂ ವಿವಾದಗಳಿಗೆ ಕೇಂದ್ರ ಬಿಂದು ಆಗಿದ್ದ ಸಂಜನಾ ಇದೀಗ ದರ್ಶನ್ ಅಭಿಮಾನಿಗಳ ಹೃದಯ ಸಮುದ್ರ ಕಲಕಿದ್ದಾರೆ.

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ದರ್ಶನ್ ರವರಿಗೆ 'ಬಿಲ್ಡಪ್' ಎಂಬ ಬಿರುದು ಕೊಟ್ಟು ದಚ್ಚು ಅಭಿಮಾನಿಗಳ ರೋಷಾಗ್ನಿ ಉರಿಯುವಂತೆ ಮಾಡಿದ್ದಾರೆ ಮಿಸ್ ಸಂಜನಾ.!

ದರ್ಶನ್ ಗೆ 'ಬಿಲ್ಡಪ್' ಅಂತ ಕರೆದು ದೊಡ್ಡ ಎಡವಟ್ಟು ಮಾಡಿಕೊಂಡ ಸಂಜನಾ.!

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ 'Rapid Fire' ರೌಂಡ್ ನಲ್ಲಿ ದರ್ಶನ್ ಬಗ್ಗೆ ಸಂಜನಾ ಕಾಮೆಂಟ್ ಮಾಡುತ್ತಿದ್ದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಂಜನಾ ವಿರುದ್ಧ ದರ್ಶನ್ ಭಕ್ತರು ದಂಗೆ ಎದ್ದಿದ್ದಾರೆ.

ಸಂಜನಾ ಚಿದಾನಂದ್ ವಿರುದ್ಧ ರೊಚ್ಚಿಗೆದ್ದ ದರ್ಶನ್ ಅಪ್ಪಟ ಅಭಿಮಾನಿಗಳು ಫೇಸ್ ಬುಕ್ ನಲ್ಲಿ ಯದ್ವಾತದ್ವಾ ಕಾಮೆಂಟ್ಸ್ ಹಾಕುತ್ತಿದ್ದಾರೆ. ಅಂತಹ ಕೆಲ ಆಯ್ದ ಕಾಮೆಂಟ್ಸ್ ಇಲ್ಲಿದೆ ನೋಡಿ...

ಸಂಜನಾಗೆ ಭಾವಪೂರ್ಣ ಶ್ರದ್ಧಾಂಜಲಿ

ದರ್ಶನ್ ಬಗ್ಗೆ ಸಂಜನಾ ಅಡಿರುವ ಮಾತಿನಿಂದ ಸಿಟ್ಟಾಗಿರುವ ಡಿ ಬಾಸ್ ಅಭಿಮಾನಿಗಳು ಸಂಜನಾಗೆ ವ್ಯಂಗ್ಯವಾಗಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಬಾತ್ ರೂಂನಲ್ಲಿ ಹುಚ್ಚು ಬಿಡಿಸಬೇಕು

ಸಂಜನಾಗೆ ಹಿಡಿದಿರುವ ಹುಚ್ಚು ಬಿಡಿಸಬೇಕು ಅಂತ ರೊಚ್ಚಿಗೆದ್ದ 'ಡಿ' ಬಾಯ್ ಮಾಡಿರುವ ಕಾಮೆಂಟ್ ಇದು.

ಸುಮ್ನೆ ಸಾರಿ ಕೇಳಿದ್ರೆ ಸರಿ...

''ಡಿ ಬಾಸ್ ಬಗ್ಗೆ ಕೊಟ್ಟಿರುವ ಹೇಳಿಕೆಯನ್ನ ಸುಮ್ನೆ ವಾಪಸ್ ತೆಗೆದುಕೊಂಡರೆ ಸರಿ. ಇಲ್ಲ ಅಂದ್ರೆ ಶನಿ ಯಾರು ಅಂತ ತೋರಿಸ್ತೀವಿ'' ಅಂತ ದರ್ಶನ್ ಅಭಿಮಾನಿಯೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಪಬ್ಲಿಸಿಟಿ ಗಿಮಿಕ್

''ಪಬ್ಲಿಸಿಟಿಗಾಗಿ ಸ್ಟಾರ್ ಗಳ ಹೆಸರನ್ನ ಚಿಲ್ಲರೆಗಳು ಯೂಸ್ ಮಾಡುವುದು ಮಾಮೂಲಿ'' ಅಂತ ಸಂಜನಾಗೆ 'ಡಿ'ಬಾಸ್ ಫ್ಯಾನ್ ಛೀಮಾರಿ ಹಾಕಿದ್ದಾರೆ.

ಹೆಣ್ಣು ಹೆಣ್ಣಾಗಿ ಇರಬೇಕು

''ಹೆಣ್ಣಾಗಿ ಹುಟ್ಟಿದ್ಮೇಲೆ ಹೆಣ್ಣು ಹೆಣ್ಣಾಗಿ ಇರಬೇಕು'' ಅಂತ ದರ್ಶನ್ ಅಭಿಮಾನಿಯೊಬ್ಬರು ಸಂಜನಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ನರಕ ತೋರಿಸ್ತೀವಿ

''ಬರೆದು ಇಟ್ಕೋ... ನಿನಗೆ ನರಕ ತೋರಿಸ್ತೀವಿ... ಕ್ಷಮೆ ಕೇಳುವವರೆಗೂ ಟ್ರೋಲ್ ಬರುತ್ತಲೇ ಇರುತ್ತೆ. ಅದೇನು ಮಾಡ್ಕೋತಿಯೋ ಮಾಡ್ಕೋ'' ಎಂದು 'ಟ್ರೋಲ್ ಹೂ ಟ್ರೋಲ್ಸ್ ದರ್ಶನ್' ಫೇಸ್ ಬುಕ್ ಪೇಜ್ ಬರೆದುಕೊಂಡಿದೆ.

English summary
Challenging Star Darshan fans have taken their Facebook page to express their anger towards Sanjana Chidanand for her Statement against Darshan in Colors Super Channel's Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada