For Quick Alerts
  ALLOW NOTIFICATIONS  
  For Daily Alerts

  ಕುರಿ ಪ್ರತಾಪ್ ಬೆನ್ನಿಗೆ ನಿಂತಿದ್ದಾರೆ ದರ್ಶನ್ ಅಭಿಮಾನಿಗಳು.!

  |
  ಕುರಿ ಪ್ರತಾಪ್ ಬೆನ್ನಿಗೆ ನಿಂತ ದರ್ಶನ್ ಫ್ಯಾನ್ಸ್ | KURI PRATHAP | DARSHAN | BIGGBOSS KANNADA

  'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಕುರಿ ಪ್ರತಾಪ್ ಸ್ಪರ್ಧಿಯಾಗಿರೋದು ನಿಮಗೆಲ್ಲ ಗೊತ್ತೇ ಇದೆ. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಯೊಳಗೆ ಕುರಿ ಪ್ರತಾಪ್ ಪ್ರಬಲ ಸ್ಪರ್ಧಿ.

  ಟಾರ್ಗೆಟ್ ಆಗದೆ, ಉತ್ತಮ ಆಟ ಪ್ರದರ್ಶಿಸುತ್ತಿರುವ ಕುರಿ ಪ್ರತಾಪ್ ನಾಮಿನೇಟ್ ಆಗಿ ಡೇಂಜರ್ ಝೋನ್ ಗೆ ಬಂದಿರುವುದು ತೀರಾ ಅಪರೂಪ. ಹೀಗಿದ್ದರೂ, ಹಲವು ಪೋಸ್ಟರ್ ಗಳಲ್ಲಿ 'ವೋಟ್ ಫಾರ್ ಕುರಿ' ಎಂದು ರಾರಾಜಿಸುತ್ತಿದೆ.

  ಅಸಲಿಗೆ, 'ವೋಟ್ ಫಾರ್ ಕುರಿ' ಅಂತ ಪೋಸ್ಟರ್ ಗಳಲ್ಲಿ ಹಾಕುತ್ತಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ಯಾನ್ಸ್ ಅನ್ನೋದು ವಿಶೇಷ.! ಇತ್ತೀಚೆಗಷ್ಟೇ 'ದಾಸ' ದರ್ಶನ್ ಅಭಿನಯದ 'ಒಡೆಯ' ಚಿತ್ರ ಬಿಡುಗಡೆಗೊಂಡಿತ್ತು. 'ಒಡೆಯ' ಚಿತ್ರದ ಫ್ಯಾನ್ಸ್ ಪೋಸ್ಟರ್ ಗಳಲ್ಲಿ 'ವೋಟ್ ಫಾರ್ ಕುರಿ' ಎಂದು ನಮೂದಿಸಲಾಗಿದೆ.

  ಹೌದು, ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿರುವ ಅಷ್ಟೂ ಸ್ಪರ್ಧಿಗಳ ಪೈಕಿ ಕುರಿ ಪ್ರತಾಪ್ ಗೆ ದರ್ಶನ್ ಫ್ಯಾನ್ಸ್ ಸಪೋರ್ಟ್ ಮಾಡುತ್ತಿದ್ದಾರೆ.

  ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..ಕುರಿ ಪ್ರತಾಪ್ 'ಫೇಕ್' ಎನ್ನುವವರು ಸ್ವಲ್ಪ ಶ್ವೇತಾ ಚೆಂಗಪ್ಪ ಮಾತನ್ನ ಕೇಳಿ..

  ಹಾಗ್ನೋಡಿದ್ರೆ, ದರ್ಶನ್ ಮತ್ತು ಕುರಿ ಪ್ರತಾಪ್ ಹಲವು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ದರ್ಶನ್ ರವರ ಅನೇಕ ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಕುರಿ ಪ್ರತಾಪ್ ಕಾಮಿಡಿ ಇನ್ಜೆಕ್ಷನ್ ಕೊಟ್ಟಿದ್ದಾರೆ. ಹೀಗಾಗಿ, ದರ್ಶನ್ ಅಭಿಮಾನಿಗಳಿಗೆ ಕುರಿ ಪ್ರತಾಪ್ ಮೇಲೂ ಪ್ರೀತಿ ಇದೆ. ಈ ಪ್ರೀತಿಯಿಂದಲೇ ಕುರಿ ಪ್ರತಾಪ್ ಗಾಗಿ ದರ್ಶನ್ ಫ್ಯಾನ್ಸ್ ವೋಟ್ ಮಾಡ್ತಿದ್ದಾರೆ, ಹಾಗೇ ವೋಟ್ ಮಾಡಿ ಅಂತ ಎಲ್ಲರಿಗೂ ಹೇಳ್ತಿದ್ದಾರೆ.

  ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಇಷ್ಟೊಂದಾ.?ಕುರಿ ಪ್ರತಾಪ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಇಷ್ಟೊಂದಾ.?

  ಕುರಿ ಪ್ರತಾಪ್ ಬೆನ್ನಿಗೆ ದರ್ಶನ್ ಫ್ಯಾನ್ಸ್ ನಿಂತಿರೋದ್ರಿಂದ 'ಬಿಗ್ ಬಾಸ್' ಮನೆಯಲ್ಲಿ ಅವರು ಟಫ್ ಕಾಂಪಿಟೇಶನ್ ಕೊಡುವುದು ಪಕ್ಕಾ.

  English summary
  Darshan fans are supporting Kuri Prathap in Bigg Boss Kannada 7.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X