ತಮಿಳು ಬಿಗ್ ಬಾಸ್ ಮನೆ ಪ್ರವೇಶಿಸಿದ ದರ್ಶನ್ ನಾಯಕಿ

Recommended Video

ಬಿಗ್ ಬಾಸ್‍ಗೆ ಕಾಲಿಟ್ಟಳು ಭೂಪತಿ ಹುಡುಗಿ | FILMIBEAT KANNADA

ಕನ್ನಡದಲ್ಲಿ ಬಿಗ್ ಬಾಸ್ ಇನ್ನು ಶುರುವಾಗಿಲ್ಲ. ಆದರೆ ತೆಲುಗು ಮತ್ತು ತಮಿಳಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬೆಳವಣಿಗೆ ಚುರುಕುಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಬಿಗ್ ಬಾಸ್ ಮೂರನೇ ಆವೃತ್ತಿ ಆರಂಭವಾಗಿದೆ. ಜೂನ್ 23 (ಭಾನುವಾರ) ಸೀಸನ್ 3ಗೆ ಚಾಲನೆ ಸಿಕ್ಕಿದೆ.

ನಿರೀಕ್ಷೆಯಂತೆ ಸೂಪರ್ ಸ್ಟಾರ್ ಕಮಲ್ ಹಾಸನ್ ಈ ಬಾರಿಯೂ ನಿರೂಪಣೆ ಮಾಡ್ತಿದ್ದಾರೆ. ಈ ಆವೃತ್ತಿಯಲ್ಲಿ ಯಾರೆಲ್ಲ ಬಿಗ್ ಮನೆ ಪ್ರವೇಶ ಮಾಡಿದ್ದಾರೆ ಎಂದು ಗಮನಿಸಿದಾಗ ಕನ್ನಡ ಸಿನಿಮಾದಲ್ಲಿ ನಟಿಸಿದ್ದ ಹೀರೋಯಿನ್ ಒಬ್ಬರು ಕಣ್ಣಿಗೆ ಬಿದ್ದಿದ್ದಾರೆ.

ಕನ್ನಡದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಶೆರೀನ್ ಈ ಆವೃತ್ತಿಯಲ್ಲಿ ಬಿಗ್ ಮನೆಯೊಳಗೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ, ದರ್ಶನ್ ಜೊತೆ ಯಾವ ಸಿನಿಮಾದಲ್ಲಿ ಈ ನಟಿ ಅಭಿನಯಿಸಿದ್ದಾರೆ, ಈಕೆಯ ಜೊತೆ ಮತ್ಯಾರೆಲ್ಲ ಹೋಗಿದ್ದಾರೆ ಎಂಬುದು ತಿಳಿಯಲು ಮುಂದೆ ಓದಿ.....

ತಮಿಳು ಬಿಗ್ ಬಾಸ್ ನಲ್ಲಿ ಡಿ ಬಾಸ್ ನಾಯಕಿ

ತಮಿಳು ಬಿಗ್ ಬಾಸ್ ನಲ್ಲಿ ಡಿ ಬಾಸ್ ನಾಯಕಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಧ್ರುವ' ಸಿನಿಮಾದಲ್ಲಿ ನಟಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದ್ದ ಶೆರೀನ್ ಈಗ ತಮಿಳು ಬಿಗ್ ಬಾಸ್ ಮೂರನೇ ಆವೃತ್ತಿಯಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ಧ್ರುವ ಸಿನಿಮಾ ಮಾತ್ರವಲ್ಲ, ದರ್ಶನ್ 25ನೇ ಚಿತ್ರ ಭೂಪತಿ ಸಿನಿಮಾದಲ್ಲೂ ಜೊತೆಗೆ ಅಭಿನಯಿಸಿದ್ದಾರೆ.

ಮೂಲತಃ ಬೆಂಗಳೂರು ಹುಡುಗಿ

ಮೂಲತಃ ಬೆಂಗಳೂರು ಹುಡುಗಿ

ಅಂದ್ಹಾಗೆ, ಶೆರೀನ್ ಮೂಲತಃ ಬೆಂಗಳೂರಿನವರು. ಇಲ್ಲೇ ಹುಟ್ಟಿ ಬೆಳೆದ ಕನ್ನಡ ನಾಡಿನ ಹುಡುಗಿ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ಧ್ರುವ, ಭೂಪತಿ ಜೊತೆಗೆ ಸಿಹಿಗಾಳಿ ಮತ್ತು ಎಕೆ 57 ಎಂಬ ಮತ್ತೆರಡು ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದಾರೆ.

ಜಗ್ಗೇಶ್ ನಟಿಯೂ ಇದ್ದಾರೆ

ಜಗ್ಗೇಶ್ ನಟಿಯೂ ಇದ್ದಾರೆ

ನವರಸ ನಾಯಕ ಜಗ್ಗೇಶ್ ಅಭಿನಯಿಸಿದ್ದ ಸಾಫ್ಟ್ ವೇರ್ ಗಂಡ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ನಟಿಸಿದ್ದ ಸಾಕ್ಷಿ ಅಗರ್ ವಾಲ್ ಕೂಡ ಈ ಬಾರಿಯ ತಮಿಳು ಬಿಗ್ ಬಾಸ್ ನಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ತಮಿಳಿನಲ್ಲೂ ನಾಲ್ಕೈದು ಸಿನಿಮಾ ಮಾಡಿದ್ದಾರೆ.

ಉಳಿದವರು ಯಾರೆಲ್ಲಾ ಇದ್ದಾರೆ

ಉಳಿದವರು ಯಾರೆಲ್ಲಾ ಇದ್ದಾರೆ

ಶೆರೀನ್ ಮತ್ತು ಸಾಕ್ಷಿ ಅಗರ್ ವಾಲ್ ಜೊತೆ ಫಾತೀಮಾ ಬಾಬು, ಲೋಸ್ಲಿಯಾ, ಮಧುಮಿತಾ, ಕವೀನ್, ಅಭಿರಾಮಿ, ಸರವಣನ್, ವನಿತಾ ವಿಜಯ್ ಕುಮಾರ್, ಚೆರಣ್, ಮೋಹನ್ ವೈಥ್ಯ, ತರ್ಷನ್, ಸ್ಯಾಂಡಿ, ಮುಗನ್ ರಾವ್, ರೇಷ್ಮಾ ಈ ಸಲ ಬಿಗ್ ಮನೆಗೆ ಹೋಗಿದ್ದಾರೆ.

More from Filmibeat

English summary
Kannada actor Darshan movie heroine sherin shringar has enter to tamil bigg boss session 3 home. she was starts from june 23rd. kamal hassan hosting the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X