For Quick Alerts
  ALLOW NOTIFICATIONS  
  For Daily Alerts

  ಹಿಂದಿಯಲ್ಲಿ ಬರ್ತಿದೆ ರಾಬರ್ಟ್: ಬಾಲಿವುಡ್ ಸಣ್ಣ ಪರದೆಯಲ್ಲಿ ದರ್ಶನ್

  |

  ಸೌತ್ ಇಂಡಸ್ಟ್ರಿಯಲ್ಲಿ ಧಮಾಕ ಮಾಡಿದ ರಾಬರ್ಟ್ ಸಿನಿಮಾ ಈಗ ಬಾಲಿವುಡ್ ಪ್ರೇಕ್ಷಕರು ನೋಡುವ ಸಮಯ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ರಾಬರ್ಟ್ ಸಿನಿಮಾ ಕಳೆದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದ ರಾಬರ್ಟ್ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.

  ಕೋವಿಡ್ ಭೀತಿಯ ನಡುವೆಯೂ ಜನರನ್ನು ಚಿತ್ರಮಂದಿರಕ್ಕೆ ಬರಮಾಡಿಕೊಳ್ಳುವಲ್ಲಿ ಈ ಸಿನಿಮಾ ಪ್ರಮುಖ ಪಾತ್ರವಹಿಸಿತು. ಗಳಿಕೆಯಲ್ಲಿ ದಾಖಲೆ ಬರೆದ ರಾಬರ್ಟ್ ಸಿನಿಮಾ ನೂರು ಕೋಟಿ ಗಳಿಸಿದೆ ಎಂದು ಗಾಂಧಿನಗರದಲ್ಲಿ ಚರ್ಚೆಯಾಯಿತು. ದರ್ಶನ್ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದರು. ನಿರೀಕ್ಷೆಯಂತೆ ಅಧಿಕೃತವಾಗಿ ಕಲೆಕ್ಷನ್ ರಹಸ್ಯ ಹೊರಬಿದ್ದಿಲ್ಲ.

  'ರಾಬರ್ಟ್' 100 ಮಿಲಿಯನ್: ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ'ರಾಬರ್ಟ್' 100 ಮಿಲಿಯನ್: ಅರ್ಜುನ್ ಜನ್ಯ ಹೆಸರಿಗೆ ಮತ್ತೊಂದು ದಾಖಲೆ

  ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ಅಬ್ಬರಿಸಿದ ರಾಬರ್ಟ್ ಈಗ ಬಾಲಿವುಡ್ ಕಿರುತೆರೆಯಲ್ಲಿ ವರ್ಲ್ಡ್ ಪ್ರೀಮಿಯರ್ ಕಾಣ್ತಿದೆ. ಆಗಸ್ಟ್ 29 ರಂದು ಮೊಟ್ಟ ಮೊದಲ ಸಲ ಹಿಂದಿಯಲ್ಲಿ ರಾಬರ್ಟ್ ಪ್ರದರ್ಶನ ಕಾಣ್ತಿದೆ. ಕಲರ್ಸ್ ಸಿನಿಪ್ಲೆಕ್ಸ್ ವಾಹಿನಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಸಾರವಾಗ್ತಿದೆ. ಹಿಂದಿಯ ಪ್ರೋಮೋ ಸಹ ಬಿಡುಗಡೆಯಾಗಿದ್ದು, ಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.

  'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ'ಖಳನಾಯಕ' ದರ್ಶನ್ ನಾಯಕನಾಗಿ ಬೆಳೆದ 'ಚಾಲೆಂಜಿಂಗ್' ಕಥೆ

  ನಟ ದರ್ಶನ್ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಆಶಾ ಭಟ್ ನಾಯಕಿಯಾಗಿ ಅಭಿನಯಿಸಿದ್ದರು. ವಿನೋದ್ ಪ್ರಭಾಕರ್, ಸೊನಾಲ್, ರವಿಶಂಕರ್, ಜಗಪತಿಬಾಬು, ದೇವರಾಜ್, ರವಿ ಕಿಶನ್, ಚಿಕ್ಕಣ್ಣ, ಶಿವರಾಜ್ ಕೆ ಆರ್ ಪೇಟೆ, ಅವಿನಾಶ್, ತೇಜಸ್ವಿನಿ ಪ್ರಕಾಶ್, ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದ ಹಾಡುಗಳು ಸೂಪರ್ ಹಿಟ್ ಆಗಿತ್ತು. ಹರಿಕೃಷ್ಣ ಹಿನ್ನೆಲೆ ಸಂಗೀತವೂ ಚಿತ್ರಕ್ಕೆ ಸಾಥ್ ಕೊಟ್ಟಿತ್ತು. ಉಮಾಪತಿ ಶ್ರೀನಿವಾಸ್ ಗೌಡ ಈ ಚಿತ್ರ ನಿರ್ಮಿಸಿದ್ದ ರಾಮ್-ಲಕ್ಷ್ಮಣ್ ಮಾಸ್ಟರ್, ವಿನೋದ್ ಮಾಸ್ಟರ್ ಸ್ಟಂಟ್ ನಿರ್ದೇಶಿಸಿದ್ದರು. ಮುಂದೆ ಓದಿ

  ಬಾಲಿವುಡ್‌ನಲ್ಲಿ ಡಿ ಬಾಸ್‌ ಬೇಡಿಕೆ ಹೆಚ್ಚಿದೆ

  ಬಾಲಿವುಡ್‌ನಲ್ಲಿ ಡಿ ಬಾಸ್‌ ಬೇಡಿಕೆ ಹೆಚ್ಚಿದೆ

  ಅಂದ್ಹಾಗೆ, ಬಾಲಿವುಡ್‌ನಲ್ಲಿ ದರ್ಶನ್ ಸಿನಿಮಾಗಳಿಗೆ ಒಳ್ಳೆಯ ಬೇಡಿಕೆ ಇದೆ. ದರ್ಶನ್ ಅವರ ಡಬ್ಬಿಂಗ್ ಚಿತ್ರಗಳು ಯೂಟ್ಯೂಬ್‌ನಲ್ಲಿ ದಾಖಲೆಯ ವೀಕ್ಷಣೆ ಕಂಡಿದೆ. ಸಹಜವಾಗಿ ಡಬ್ಬಿಂಗ್ ಹಕ್ಕು ಸಹ ದೊಡ್ಡ ಬೆಲೆ ಮಾರಾಟವಾಗುತ್ತದೆ. ದರ್ಶನ್ ನಟಿಸಿರುವ ಬಹುತೇಕ ಚಿತ್ರಗಳು ಹಿಂದಿಗೆ ಡಬ್ ಆಗಿ ಪ್ರದರ್ಶನ ಕಂಡಿದೆ.

  ದರ್ಶನ್ ಹಿಂದಿ ಡಬ್ ಸಿನಿಮಾಗಳು

  ದರ್ಶನ್ ಹಿಂದಿ ಡಬ್ ಸಿನಿಮಾಗಳು

  ದರ್ಶನ್ ನಟಿಸಿದ್ದ ಗಜ ಸಿನಿಮಾ (ಗಜ ಠಾಕೂರ್), ಪೊರ್ಕಿ ಸಿನಿಮಾ (ಮೈ ಹೂ ವಾಂಟೆಡ್), ಬಾಸ್ ಸಿನಿಮಾ (ಡಬಲ್ ಬಾಸ್), ಚಿಂಗಾರಿ ಸಿನಿಮಾ (ಚಿಂಗಾರ), ಅಂಬರೀಶ ಸಿನಿಮಾ (ಭಾಗಿ ದಿ ರೆಬಲ್), ಜಗ್ಗುದಾದ ಸಿನಿಮಾ (ಖತರ್‌ನಾಕ್ ಖಿಲಾಡಿ 3), ಮಿಸ್ಟರ್ ಐರಾವತ ಸಿನಿಮಾ (ವರ್ದಿವಾಲ ದಿ ಐರನ್ ಮ್ಯಾನ್), ವಿರಾಟ್ ಸಿನಿಮಾ (ವಿರಾಟ್), ಬೃಂದಾವನ ಸಿನಿಮಾ (ಪ್ರೇಮಲೀಲಾ) ಹೆಸರಿನಲ್ಲಿ ಡಬ್ ಆಗಿ ಯೂಟ್ಯೂಬ್ ಹಾಗೂ ಟಿವಿಯಲ್ಲಿ ಪ್ರಿಮೀಯರ್ ಕಂಡಿದೆ.

  ಸಿನಿಮಾ ಇಂಡಸ್ಟ್ರಿಯಲ್ಲಿ 24 ಪೂರೈಸಿದ ದಾಸ

  ಸಿನಿಮಾ ಇಂಡಸ್ಟ್ರಿಯಲ್ಲಿ 24 ಪೂರೈಸಿದ ದಾಸ

  ನಟ ದರ್ಶನ್ ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದರು. 1997ರಲ್ಲಿ 'ಮಹಾಭಾರತ' ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಸುಮಾರು 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಜಗತ್ತಿನಲ್ಲಿ 24 ವರ್ಷ ಪೂರೈಸಿದ ಹಿನ್ನೆಲೆ ಕೇಕ್ ಕತ್ತರಿಸಿ ಸಂಭ್ರಮಿಸಿದರು. ವಿಶೇಷ ಪಾರ್ಟಿ ಆಯೋಜಿಸಿ ಸಂಭ್ರಮಿಸಿದರು. ಅಭಿಮಾನಿಗಳ ಜೊತೆಯಲ್ಲಿ ದರ್ಶನ್ ಸಹ ಭಾಗಿಯಾಗಿ ಸಂತಸ ಹಂಚಿಕೊಂಡರು.

  ದರ್ಶನ್ ಮುಂದಿನ ಸಿನಿಮಾ

  ದರ್ಶನ್ ಮುಂದಿನ ಸಿನಿಮಾ

  'ರಾಬರ್ಟ್' ಸಿನಿಮಾ ಬಳಿಕ 'ರಾಜವೀರ ಮದಕರಿ ನಾಯಕ' ಚಿತ್ರ ಮಾಡುತ್ತಿರುವ ದರ್ಶನ್ ಕೋವಿಡ್ ಕಾರಣದಿಂದ ತಾತ್ಕಾಲಿಕವಾಗಿ ಬ್ರೇಕ್ ಕೊಟ್ಟಿದ್ದಾರೆ. ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ಜೊತೆ 55ನೇ ಚಿತ್ರ ಆರಂಭಿಸಿದ್ದು, ಶೀಘ್ರದಲ್ಲೇ ಶುರುವಾಗುವ ಸಾಧ್ಯತೆ ಇದೆ. ಈ ನಡುವೆ ರಾಕ್‌ಲೈನ್ ಜೊತೆ ಮತ್ತೊಂದು ಪ್ರಾಜೆಕ್ಟ್ ಆರಂಭಿಸುವ ಚಿಂತನೆಯೂ ನಡೆದಿದೆ.

  English summary
  Kannada actor Darshan's Roberrt Hindi Version Television Premiere on 29th August at 12 pm.
  Tuesday, August 17, 2021, 18:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X