Megha Shetty: ಮೇಘಾ ಶೆಟ್ಟಿ ವಿರುದ್ಧ ದರ್ಶನ್ ಪತ್ನಿ ಗರಂ: ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತ ಫ್ಯಾನ್ಸ್!

By ಎಸ್ ಸುಮಂತ್

ಇತ್ತೀಚೆಗೆ ದರ್ಶನ್ 46ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಹುಟ್ಟುಹಬ್ಬವನ್ನೇ ಆಚರಿಸಿಕೊಂಡಿರದ ದರ್ಶನ್ ಈ ಬಾರಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಸೆಲೆಬ್ರೆಟಿಗಳು ಕೂಡ ಮನೆಯ ಬಳಿ ಹೋಗಿ ರಾತ್ರಿ ಇಡೀ ದರ್ಶನ್ ಅವರನ್ನು ನೋಡಿ, ವಿಶ್ ಮಾಡಿ ಬಂದಿದ್ದಾರೆ.

ದರ್ಶನ್ ಆತ್ಮೀಯರು, ಸ್ನೇಹಿತರ ಬಳಗ, ಚಿತ್ರರಂಗದ ಗೆಳೆಯರೆಲ್ಲ ಅವರ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದಾರೆ. ಆದರೆ, ನಟಿ ಮೇಘಾ ಶೆಟ್ಟಿ, ಸೋನಲ್, ಪವಿತ್ರಾ ಗೌಡ ಸ್ಪೆಷಲ್ ಆಗಿ ಪ್ಲ್ಯಾನ್ ಮಾಡಿ, ದರ್ಶನ್ ಅವರಿಗೆ ಬರ್ತ್ ಡೇ ವಿಶ್ ಮಾಡಿದ್ದರು. ಇದು ವಿಜಯಲಕ್ಷ್ಮೀ ಅವರ ಕೋಪಕ್ಕೆ ಕಾರಣವಾಗಿದೆ.

ವಿಡಿಯೋ ಹಂಚಿಕೊಂಡಿದ್ದ ಮೇಘಾ ಶೆಟ್ಟಿ

ವಿಡಿಯೋ ಹಂಚಿಕೊಂಡಿದ್ದ ಮೇಘಾ ಶೆಟ್ಟಿ

ಮೇಘಾ ಶೆಟ್ಟಿ, ಪವಿತ್ರಾ ಗೌಡ, ಸೋನಲ್ ಅವರದ್ದು ಒಂದು ಗ್ಯಾಂಗ್. ಯಾವಾಗಲೂ ಒಟ್ಟಿಗೆ ಎಲ್ಲಾದರೂ ಒಂದು ಕಡೆ ಸೇರುತ್ತಲೇ ಇರುತ್ತಾರೆ. ಪವಿತ್ರಾ ಗೌಡ ಅವರ ರೆಡ್ ಕಾರ್ಪೇಟ್‌ನ ಮಾಡೆಲ್‌ಗಳು ಕೂಡ ಇವರೇ. ಹೀಗಾಗಿ ಆತ್ಮೀಯತೆ ಹೆಚ್ಚಾಗಿದೆ. ಇದೇ ವೇಳೆ ದರ್ಶನ್ ಬರ್ತ್ ಡೇ ಪಾರ್ಟಿಯಲ್ಲೂ ಮೇಘಾ ಶೆಟ್ಟಿ ಮಿಂಚಿದ್ದಾರೆ. ದರ್ಶನ್ ನಡೆದು ಬರುವ ಹಾದಿಯನ್ನು ದೇವಲೋಕದಂತೆ ಮಾಡಿ, ಡಿ ಬಾಸ್ ರೀತಿ ಡೆಕೊರೇಟ್ ಮಾಡಿ, ಕೇಕ್ ಕಟ್ ಮಾಡಿಸಿದ್ದಾರೆ. ಎಲ್ಲರು ಬರ್ತ್ ಡೇ ಪಾರ್ಟಿಯಲ್ಲಿ ಎಂಜಾಯ್ ಮಾಡಿದ್ದಾರೆ. ಈ ವಿಡಿಯೋವನ್ನು ಮೇಘಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ದರ್ಶನ್ ಬರ್ತ್ ಡೇ ವಿಡಿಯೋ ವೈರಲ್..!

ದರ್ಶನ್ ಬರ್ತ್ ಡೇ ವಿಡಿಯೋ ವೈರಲ್..!

ಮೇಘಾ ಶೆಟ್ಟಿ, ದರ್ಶನ್ ಫ್ಯಾನ್ ಎಂದೇ ಗುರುತಿಸಿಕೊಂಡಿದ್ದಾರೆ. ಆಗಾಗ ದರ್ಶನ್ ಜೊತೆಗೊಂದು ಫೋಟೋ ಕ್ಲಿಕ್ಕಿಸಿಕೊಂಡು ಹಂಚಿಕೊಳ್ಳುತ್ತಾ ಇರುತ್ತಾರೆ. ಕಳೆದ ಬಾರಿ ಡಿ ಬಾಸ್ ಸಫಾರಿಗೂ ಭೇಟಿ ನೀಡಿ ಪಾರ್ಟಿ ಮಾಡಿದ್ದರು. ಫ್ಯಾನ್ಸ್ ಬೇರೆ ಇತ್ತೀಚೆಗೆ ದರ್ಶನ್ ಹಾಗೂ ಮೇಘಾ ಶೆಟ್ಟಿ ಫೋಟೋ ಎಡಿಟ್ ಮಾಡಿ ಒಳ್ಳೆ ಹಾಡನ್ನು ಮಿಕ್ಸ್ ಮಾಡಿದ್ದರು. ಇದೇ ಜೋಶ್‌ನಲ್ಲಿದ್ದ ಮೇಘಾ ಶೆಟ್ಟಿ ದರ್ಶನ್ ಬರ್ತ್ ಡೇ ಸೆಲೆಬ್ರೆಷನ್‌ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು. ಆ ವಿಡಿಯೋ ಕ್ಷಣ ಮಾತ್ರದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೇ ವಿಡಿಯೋ ವಿರುದ್ಧ ದರ್ಶನ್ ಪತ್ನಿ ವಿಜಯಲಕ್ಷ್ಮಿ ತಿರುಗಿಬಿದ್ದಿದ್ದಾರೆ.

ಮೇಘಾ ಶೆಟ್ಟಿ ವಿರುದ್ಧ ವಿಜಯಲಕ್ಷ್ಮೀ ಕಿಡಿ

ಮೇಘಾ ಶೆಟ್ಟಿ ವಿರುದ್ಧ ವಿಜಯಲಕ್ಷ್ಮೀ ಕಿಡಿ

ವಿಜಯಲಕ್ಷ್ಮೀ ಇಷ್ಟು ದಿನ ಮೌನವಾಗಿಯೇ ಇದ್ದರು. ಮೇಘಾ ಶೆಟ್ಟಿ ಫೋಟೋ ಹಾಕಿದಾಗಲೂ ಮಾತನಾಡಿರಲಿಲ್ಲ, ಡಿ ಬಾಸ್ ಸಫಾರಿಗೆ ಹೋದಾಗಲೂ ತುಟಿಕ್ ಪಿಟಿಕ್ ಎಂದಿರಲಿಲ್ಲ. ಆದರೆ, ಹುಟ್ಟುಹಬ್ಬದ ದಿನ ಶೇರ್ ಮಾಡಿದ ವಿಡಿಯೋಗೆ ವಿಜಯಲಕ್ಷ್ಮೀ ದರ್ಶನ್ ತಾಳ್ಮೆಯ ಕಟ್ಟೆ ಹೊಡೆದಿದೆ. ಅದೇ ವಿಡಿಯೋವನ್ನು ತಮ್ಮ ಪ್ರೊಫೈಲ್‌ನಲ್ಲಿ ಹಂಚಿಕೊಂಡು, "ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್‌ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ!" ಎಂದು ನೇರವಾಗಿ ಮೇಘಾ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.

ವಿಜಯಲಕ್ಷ್ಮೀ ಬೆಂಬಲಕ್ಕೆ ನಿಂತ ಫ್ಯಾನ್ಸ್

ಇನ್ನು ವಿಜಯಲಕ್ಷ್ಮೀ ಅವರು ತಮ್ಮ ನೋವನ್ನು ಸೋಶಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದೇ ತಡ, ಫ್ಯಾನ್ಸ್ ಬಳಗ ಅತ್ತಿಗೆಯ ಸಪೋರ್ಟ್‌ಗೆ ನಿಂತಿದೆ. ಅದರಲ್ಲೂ ಹೆಣ್ಣು ಮಕ್ಕಳೇ ಹೆಚ್ಚು ಸಪೋರ್ಟ್ ಮಾಡಿದ್ದಾರೆ. "ನೀವೂ ದೃಢವಾಗಿರಿ. ನಿಮಗೆ ಹೆಂಡತಿಯಾಗಿ ಎಲ್ಲಾ ಹಕ್ಕುಗಳು ಇದೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ. ಇನ್ನೊಂದಿಷ್ಟು ಮಂದಿ, ಹೌದು.. ಅತ್ತಿಗೆ ಅವರದ್ದು ಅತಿಯಾಯ್ತು, ಇವೆಲ್ಲಾ ಪೋಸ್ಟ್ ಮಾಡಬಾರದು" ಎಂದು ಸಮಾಧಾನ ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮೀ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೆ ಮೇಘಾ ಶೆಟ್ಟಿ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

More from Filmibeat

English summary
Darshan's wife Vijayalakshmi is angry at actress Megha Shetty for sharing a video,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X