For Quick Alerts
  ALLOW NOTIFICATIONS  
  For Daily Alerts

  'ಕಾಮಿಡಿ ಕಿಲಾಡಿಗಳು' ಸೆಟ್ ನಲ್ಲಿ ಕಾಣಿಸಿಕೊಂಡ ಡಿ ಬಾಸ್ ದರ್ಶನ್

  |

  ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರಾಬರ್ಟ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಡಬ್ಬಿಂಗ್ ಪ್ರಾರಂಭಸಿರುವ ದರ್ಶನ್ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಕಾಮಿಡಿ ಕಿಲಾಡಿಗಳು ಸೆಟ್ ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಿರಿತೆರೆಯ ಪ್ರಸಾರವಾಗಿರುವ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಯಾವುದು ಕಾರ್ಯಕ್ರಮದಲ್ಲಿ ಭಾಗಿಯಾದ ದರ್ಶನ್ ಕಾಮಿಡಿ ಕಿಲಾಡಿಗಳು ಸೆಟ್ ನಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ದರ್ಶನ್ ಭೇಟಿ ನೀಡಿರುವ ಫೋಟೋ ಸಖತ್ ವೈರಲ್ ಆಗಿದೆ.

  ಹೊಸ ವರ್ಷಕ್ಕೆ ದರ್ಶನ್, ಯಶ್ ಕುಟುಂಬ ಹಂಚಿಕೊಂಡ ಮೊದಲ ಪೋಟೋಹೊಸ ವರ್ಷಕ್ಕೆ ದರ್ಶನ್, ಯಶ್ ಕುಟುಂಬ ಹಂಚಿಕೊಂಡ ಮೊದಲ ಪೋಟೋ

  ಕಾಮಿಡಿ ಸೆಟ್ ಗೆ ದರ್ಶನ್ ದಿಢೀರ್ ಭೇಟಿ

  ಕಾಮಿಡಿ ಸೆಟ್ ಗೆ ದರ್ಶನ್ ದಿಢೀರ್ ಭೇಟಿ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿದ್ದಾರೆ ಅಂತ ಸಂತಸ ಪಡಬೇಡಿ. ಯಾಕಂದ್ರೆ ದರ್ಶನ್ ಸೆಟ್ ನಲ್ಲಿ ಕಾಣಿಸಿಕೊಂಡಿದ್ದು ಅಷ್ಟೆ. ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ. ದರ್ಶನ್ ಕಾರ್ಯಕ್ರಮಕ್ಕೆ ಬರಲಿ ಎನ್ನುವುದು ಅಭಿಮಾನಿಗಳ ಆಸೆ. ಆದರೆ ಸೆಟ್ ಮಾತ್ರ ವಿಸಿಟ್ ಮಾಡಿದ್ದಾರೆ. ಅಂದ್ಹಾಗೆ ಕಾಮಿಡಿ ಕಿಲಾಡಿಗಳು-3 ಚಿತ್ರೀಕರಣ ನಡೆಯುವ ಸ್ಥಳದ ಸಮೀಪದಲ್ಲೆ ದರ್ಶನ್ ರಾಬರ್ಟ್ ಚಿತ್ರದ ಕೆಲಸ ಕೂಡ ನಡೆಯುತ್ತಿರಬಹುದು. ಹಾಗಾಗಿ ದಿಢೀರ್ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

  ಸಂತಸ ಹಂಚಿಕೊಂಡ ಜಗ್ಗೇಶ್

  ಸಂತಸ ಹಂಚಿಕೊಂಡ ಜಗ್ಗೇಶ್

  ಕಾಮಿಡಿ ಕಿಲಾಡಿಗಳು ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಸೆಟ್ ಗೆ ದಿಢೀರ್ ಭೇಟಿ ನೀಡಿದ್ದಾರೆ. ಡಿ ಬಾಸ್ ಭೇಟಿಯಿಂದ ಚಿತ್ರೀಕರಣದಲ್ಲಿದ್ದ ನಟ ಜಗ್ಗೇಶ್ ಮತ್ತ ನಟಿ ರಕ್ಷಿತಾ ಹಾಗೂ ರಾಘವೇಂದ್ರ ಹುಣಸೂರು ಸಂತಸಪಟ್ಟಿದ್ದಲ್ಲದೆ ಅಚ್ಚರಿಯಾಗಿದ್ದಾರೆ. ಅಲ್ಲದೆ ಜಗ್ಗೇಶ್ ಸೆಟ್ ಗೆ ಭೇಟಿ ನೀಡಿದ ವಿಶೇಷ ಅತಿಥಿ ದರ್ಶನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  ಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಡಿ ಬಾಸ್ 'ರಾಬರ್ಟ್'ಗೆ ಸಾಥ್ ನೀಡಿದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

  ಟ್ವಿಟ್ಟರ್ ನಲ್ಲಿ ಜಗ್ಗೇಶ್ ಹೇಳಿದ್ದೇನು?

  ಟ್ವಿಟ್ಟರ್ ನಲ್ಲಿ ಜಗ್ಗೇಶ್ ಹೇಳಿದ್ದೇನು?

  "ಜಿ ಕನ್ನಡ ಕಾಮಿಡಿಕಿಲಾಡಿಗಳು3 ಸೆಟ್ ಗೆ ಅನಿರೀಕ್ಷಿತವಾಗಿ ಬಂದ ಕಲಾಬಂಧು ದರ್ಶನ. ಬಹಳ ಜನ ದರ್ಶನ ಅಭಿಮಾನಿಗಳು ಜಾಲತಾಣದಲ್ಲಿ ಸಾರ್ ಕಾಮಿಡಿಕಿಲಾಡಿಗೆ ದರ್ಶನ ಕರೆಸಿ ಎನ್ನುತ್ತಿದ್ದರು. ನೋಡಿ ಬಂದೆ ಬಿಟ್ಟ ನಿಮ್ಮವ ನಿಮ್ಮ ಪ್ರೀತಿಗಾಗಿ. ಧನ್ಯವಾದಗಳು ಸಹೋದರ" ಎಂದು ಬರೆದುಕೊಂಡಿದ್ದಾರೆ.

  ಯಾವಾಗ ಬರ್ತಾರೆ ದರ್ಶನ್?

  ಯಾವಾಗ ಬರ್ತಾರೆ ದರ್ಶನ್?

  ಸಾಕಷ್ಟು ಜನ ಅಭಿಮಾನಿಗಳು ದರ್ಶನ್ ಅವರನ್ನು ಕರೆಸಿ ಎಂದು ಮನವಿ ಮಾಡುತ್ತಿದ್ದರು. ಆದರೀಗ ದರ್ಶನ್ ಕಾಮಿಡಿ ಕಿಲಾಡಿ ಸೆಟ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೆಟ್ ನಲ್ಲಿ ಕಾಣಿಸಿಕೊಂಡಿದಕ್ಕೆ ಇಷ್ಟು ಸಂತಸ ಪಡುವ ತಂಡ ಕಾರ್ಯಕ್ರಮದಲ್ಲಿ ಭಾಗಿಯಾದರೆ ಅವರ ಸಂತಸಕ್ಕೆ ಪಾರವೆ ಇರಲ್ಲ. ಮುಂದಿನ ದಿನಗಳಲ್ಲಿ ಕಾಮಿಡಿ ಕಿಲಾಡಿಗಳಲ್ಲಿ ಕಾಣಿಸಿಕೊಂಡರು ಅಚ್ಚರಿ ಇಲ್ಲ.

  English summary
  Kannada actor Darshan visited to Comedy Khiladigalu 3 reality show set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X