Actress Darshini Gowda: ಕಿರುತೆರೆಯ ಪ್ರೇಮಲೋಕಕ್ಕೆ ಲಗ್ಗೆ ಇಟ್ಟಿದ ದರ್ಶಿನಿ ಗೌಡ ನಾಗಕನ್ನಿಕೆಯಾಗಿ ಪ್ರತ್ಯಕ್ಷ!

By ಅನಿತಾ ಬನಾರಿ

ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಿದೆ. ಹೌದು, ತೆಲುಗು ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ನಾಗಪಂಚಮಿ' ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ ಇದಾಗಿದೆ.

ಅಲೌಕಿಕ ಶಕ್ತಿಯಿಂದಾಗಿ ಶಿವನ ಸನ್ನಿಧಾನದಲ್ಲಿ ಕಥಾನಾಯಕಿ 'ಪಂಚಮಿ' ಜನಿಸಿರುತ್ತಾಳೆ. ವಿಚಿತ್ರ ರೀತಿಯಲ್ಲಿ ಜನ್ಮಪಡೆದ ಕಾರಣ ಊರಿನ ಜನ ಆಕೆಯನ್ನು ಅನಿಷ್ಟವೆಂದು ದೂಷಿಸುತ್ತಿರುತ್ತಾರೆ. ಆದರೆ, ಕಥಾನಾಯಕಿ ಪಂಚಮಿ ನಾಗಕನ್ನಿಕೆಯಾಗಿ ಹೇಗೆ ಬದಲಾಗುತ್ತಾಳೆ ಎಂಬುದೇ ಕುತೂಹಲ. ಆಕೆಗೆ ತಿಳಿಯಲಾರದ ಶಕ್ತಿಯೊಂದು ಅವಳ ರೂಪದಲ್ಲಿ ಊರಿನ ಜನರಿಗೆ ಮಾಡುವ ಸಹಾಯ, ಪವಾಡಗಳು ನೋಡುಗರಿಗೆ ಮೈನವಿರೇಳಿಸುವಂತೆ ಮಾಡುತ್ತದೆ.

Darshini Gowda returned to Kannada television as Panchami in Naga Panchami Serial

ಇನ್ನು ಕಥಾನಾಯಕ ಮೋಕ್ಷ, ಈತನ ಕುಟುಂಬ ವಂಶ ಪಾರಂಪರೆಯಿಂದ ಅಲ್ಪಾಯುಷ್ಯರಾಗಿ ಮುಂದುವರಿಯುವಂತೆ ಶಾಪಗ್ರಸ್ತವಾಗಿರುತ್ತದೆ. ನಾಗದೇವತೆಯ ಆರಾಧನೆಯನ್ನು ಮಾಡಿಕೊಂಡು ಬಂದಿರುವ ಪಂಚಮಿ, ಮೋಕ್ಷನ ಕುಟುಂಬವನ್ನು ಹೇಗೆ ರಕ್ಷಿಸುತ್ತಾಳೆ ಎಂಬುದೇ 'ನಾಗಪಂಚಮಿ' ಧಾರಾವಾಹಿಯ ಕಥಾಹಂದರ.

ಪಂಚಮಿಯಾಗಿದ ದರ್ಶಿನಿ ಗೌಡ

'ನಾಗಪಂಚಮಿ' ಧಾರಾವಾಹಿಯಲ್ಲಿ ನಾಯಕಿ ಪಂಚಮಿ ಆಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ದರ್ಶಿನಿ ಗೌಡ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಮನಸ್ವಿನಿ ಆಗಿ ಅಭಿನಯಿಸುವ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ದರ್ಶಿನಿ ಗೌಡ ಅವರ ಕೆರಿಯರ್ ಆರಂಭವಾಗಿದ್ದು ನಿರೂಪಣೆ ಮೂಲಕ.

Darshini Gowda returned to Kannada television as Panchami in Naga Panchami Serial

ನಿರೂಪಕಿಯಾಗಿ ಗುರುತಿಸಿಕೊಂಡಾಕೆ

ಇಂಜಿನಿಯರ್ ಆಗಬೇಕು ಎಂಬ ಕನಸು ಕಂಡಿದ್ದ ದರ್ಶಿನಿ ಗೌಡ ಅವರಿಗೆ ಕಾರಣಾಂತರಗಳಿಂದ ಸಿಇಟಿ ಪರೀಕ್ಷೆ ಬರೆಯಲಿ ಸಾಧ್ಯವಾಗಲಿಲ್ಲವಂತೆ. ಹಾಗಾಗಿ ಡಿಪ್ಲೋಮಾ ಸೇರಿದ ಆಕೆ ಚೆನ್ನಾಗಿ ಓದಿದರು. ಮೊದಲನೇ ಮತ್ತೆ ಎರಡನೇ ವರ್ಷದಲ್ಲಿ ಉತ್ತಮ ಅಂಕವನ್ನು ಕೂಡಾ ಗಳಿಸಿದ್ದರು. ಆದರೆ ಅದೇ ಸಮಯದಲ್ಲಿ ಸ್ಥಳೀಯ ಖಾಸಗಿ ವಾಹಿನಿಯಲ್ಲಿ ನಿರೂಪಣೆ ಮಾಡುವ ಅವಲಾಶ ದೊರೆತಾಗ ಓದಿಗೆ ಗುಡ್ ಬಾಯ್ ಹೇಳಿದರು.

ಮನಸ್ವಿನಿ ಆಗಿ ಮನ ಸೆಳೆದ ಬೆಡಗಿ

ನಿರೂಪಕಿಯಾಗಿ ಕಿರುತೆರೆಯಲ್ಲಿ ಮಿಂಚಿದ ದರ್ಶಿನಿ ಗೌಡ ಅವರಿಗೆ 'ಪ್ರೇಮಲೋಕ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಸಂತಸದಲ್ಲಿ ಒಪ್ಪಿಕೊಂಡರಂತೆ. ಮನೋಜ್ಞ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ದರ್ಶಿನಿ ಮತ್ತೆ ಮನರಂಜಿಸಿದ್ದು ಪರಭಾಷೆಯ ಕಿರುತೆರೆಯಲ್ಲಿ.

ತಮಿಳು ಕಿರುತೆರೆಯಲ್ಲಿ ದರ್ಶಿನಿ ಕಮಾಲ್

'ಪ್ರೇಮಲೋಕ' ಧಾರಾವಾಹಿಯ ನಂತರ ಕನ್ನಡ ಕಿರುತೆರೆಯಿಂದ ದೂರವಿದ್ದ ದರ್ಶಿನಿ ನಂತರ ಕಾಣಿಸಿಕೊಂಡಿದ್ದು ತಮಿಳು ಕಿರುತೆರೆಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಂಗಳ ಗೌರಿ ಮದುವೆ' ಧಾರಾವಾಹಿಯು ತಮಿಳು ಭಾಷೆಗೆ ರಿಮೇಕ್ ಆಗಿದ್ದು 'ಸಿಲ್ ಒರ್ ಕಾದಲ್' ಹೆಸರಿನಲ್ಲಿ ಪ್ರಸಾರ ಕಂಡಿತ್ತು. ಅದರಲ್ಲಿ ನಾಯಕಿಯಾಗಿ ದರ್ಶಿನಿ ಗೌಡ ಕಾಣಿಸಿಕೊಂಡಿದ್ದರು.

ಸದ್ಯಕ್ಕೆ ತೆಲುಗು ಕಿರುತೆರೆಯಲ್ಲಿ ಬ್ಯುಸಿ

ತೆಲುಗಿನ 'ನಾಗಪಂಚಮಿ' ಧಾರಾವಾಹಿಯಲ್ಲಿ ನಾಯಕಿ ಪಂಚಮಿ ಆಗಿ ನಟಿಸುವ ಸುವರ್ಣಾವಕಾಶ ಪಡೆದುಕೊಂಡ ದರ್ಶಿನಿ ಗೌಡ ಮುದ್ದಾದ ನಟನೆಯ ಮೂಲಕ ಪರಭಾಷೆಯ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ಇದೀಗ ಅದೇ ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ದರ್ಶಿನಿ ಕಾಣಿಸಿಕೊಳ್ಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಸಂತಸ ನೀಡಿದೆ.

More from Filmibeat

English summary
Darshini Gowda returned to Kannada television as Panchami in Naga Panchami Serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X