'ಶ್ರೀರಸ್ತು ಶುಭಮಸ್ತು'ದಲ್ಲಿನ ದೀಪಿಕಾ ಕೇವಲ ನಟಿ ಮಾತ್ರ ಅಲ್ಲ,ಇಲ್ಲಿವೆ ದರ್ಶಿನಿಯ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು
"ಶ್ರೀರಸ್ತು ಶುಭಮಸ್ತು" ಧಾರಾವಾಹಿಯ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಎನ್ನುವುದಕ್ಕಿಂತ ದೀಪಿಕಾ ಎಂದರೆ ಪ್ರೇಕ್ಷಕರಿಗೆ ಬೇಗ ಪರಿಚಯವಾಗುತ್ತದೆ. ದರ್ಶಿನಿ ನಟಿ ಅಷ್ಟೇ ಅಲ್ಲದೆ ಅವರು ಕೊರಿಯೋಗ್ರಾಫರ್ ಕೂಡ ಹೌದು! ಇದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಂತೂ ಸಖತ್ ಆಕ್ಟಿವ್.
ಹಿರಿಯ ಕಲಾವಿದೆ ಸುಧಾರಾಣಿಯವರ ನಟನೆಯಲ್ಲಿ ಮೂಡಿ ಬರುತ್ತಿರುವ "ಶ್ರೀರಸ್ತು ಶುಭಮಸ್ತು" ಧಾರಾವಾಹಿ ಬಹಳಷ್ಟು ವಿಭಿನ್ನತೆಯಿಂದ ಕೂಡಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಈ ಧಾರಾವಾಹಿ ಹಲವು ಧಾರಾವಾಹಿಗಳಿಗೆ ಒಳ್ಳೆಯ ಪೈಪೋಟಿ ನೀಡುತ್ತಿದೆ. ಅದರಲ್ಲಿ ನಟಿಸುತ್ತಿರುವ ದರ್ಶಿನಿ ನಾಗರಾಜ್ ಅವರು ದರ್ಶಿನಿ ಡೆಲ್ಟಾ ನಾಗರಾಜ್ ಎಂದೇ ಪ್ರಸಿದ್ಧಿ. ಅವರ ತಂದೆ ನಾಗರಾಜ್ ಅವರು ಡೆಲ್ಟಾ ಕಂಪನಿಯನ್ನು ನಡೆಸುತ್ತಿದ್ದರಿಂದ ಅವರಿಗೆ ಡೆಲ್ಟಾ ನಾಗರಾಜ್ ಎಂಬ ಹೆಸರು ಬಂತು. ಇನ್ನು ಮಗಳಿಗೂ ಈ ಹೆಸರು ಮುಂದುವರೆಯಿತಂತೆ.

ಅಂದ ಹಾಗೆ ಸದ್ಯಕ್ಕೆ ಕನ್ನಡ ಕಿರುತೆರೆಯ "ಶ್ರೀರಸ್ತು ಶುಭಮಸ್ತು" ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ದರ್ಶಿನಿ ನಾಗರಾಜ್ ಅವರು ಮೂಲತಃ ಡ್ಯಾನ್ಸರ್ ಕೂಡ ಹೌದು. ಧಾರಾವಾಹಿಯ ಕಥೆಯಲ್ಲಂತೂ ಬಹಳ ಅನಿರೀಕ್ಷಿತ ಟ್ವಿಸ್ಟ್ ಗಳಿವೆ. ಇದೀಗ ತುಳಸಿಗೆ ಮಗುವಾಗಿದೆ. ಮಗು ಮಾತ್ರ ಬದುಕಿ ತಾಯಿ ತೀರಿದರು ಎಂದು ಎಲ್ಲರೂ ಬೇಸರ ಮಾಡಿಕೊಂಡಿರುವಾಗಲೇ ಅಚಾನಕ್ಕಾಗಿ ಅಂಬುಲೆನ್ಸ್ ನಲ್ಲಿ ತುಳಸಿ ಕಣ್ಣು ಬಿಡುತ್ತಾಳೆ. ಈ ರೀತಿಯ ಅಚಾನಕ್ ಬೆಳವಣಿಗೆ ಪ್ರೇಕ್ಷಕರಿಗಂತೂ ಹಿಡಿಸಿದಂತಿದೆ.
ದೀಪಿಕಾ ಇಷ್ಟು ದಿನ ಕೆಟ್ಟ ಸೊಸೆಯಾಗಿ ಮನೆಯವರನ್ನೆಲ್ಲಾ ಗೋಳಾಡಿಸುತ್ತಿದ್ದಳು. ಪೂರ್ಣಿ ಅನಾಥೆ ಎಂಬ ಕಾರಣಕ್ಕೆ ಪೂರ್ಣಿಯನ್ನು ಹೀಯಾಳಿಸುತ್ತಿದ್ದಳು. ಆದರೆ ತನ್ನ ತಪ್ಪಿನ ಅರಿವಾಗಿ ಇದೀಗ ಒಳ್ಳೆಯವಳಾಗಿದ್ದಾಳೆ. ಗಂಡನಿಗೆ ತಕ್ಕ ಹೆಂಡತಿ ಸೊಸೆಗೆ ಸರಿಯಾದ ಅತ್ತೆ ಹಾಗೂ ಮನೆಯವರೆಲ್ಲರಿಗೂ ಪ್ರೀತಿ ಹಾಗೂ ಅಕ್ಕರೆ ತೋರಿಸುತ್ತಿದ್ದಾಳೆ.
ಇಷ್ಟು ದಿನ ದೀಪಿಕಾ ಪಾತ್ರವನ್ನು ಬಹಳ ನೆಗೆಟಿವ್ ಶೇಡ್ ನಲ್ಲೆ ನೋಡಿದ್ದ ಪ್ರೇಕ್ಷಕರಿಗೆ ಇದೀಗ ಒಳ್ಳೆಯವಳಾಗಿರುವ ದೀಪಿಕಾಳ ನಡೆ ನುಡಿ ಬಹಳ ಹಿಡಿಸಿದೆ. ಅಂದಹಾಗೆ ಈ ದೀಪಿಕಾ ಪಾತ್ರ ಮಾಡುತ್ತಿರುವವರೇ ನಟಿ ದರ್ಶಿನಿ ಡೆಲ್ಟಾ ನಾಗರಾಜ್.
ದರ್ಶಿನಿ ಡೆಲ್ಟಾ ನಾಗರಾಜ್ ಬಗ್ಗೆ ಹೇಳುವುದಾದರೆ ಭಾರತ ಕಂಡ ಅತ್ಯುನ್ನತ ಕೊರಿಯೋಗ್ರಾಫರ್ಗಳಾದ ಪ್ರಭು ದೇವ್, ಮಾಸ್ಟರ್ ಜಾನಿ ಮುಂತಾದವರೊಂದಿಗೆ ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಭರತನಾಟ್ಯ ಡ್ಯಾನ್ಸರ್ ಆಗಿರುವ ಇವರು, ಕಂಟೆಂಪರರಿ ಡ್ಯಾನ್ಸಿಂಗ್ ನಲ್ಲೂ ಸೈ. ಸಂಗೀತದಲ್ಲೂ ಮಾಸ್ಟರ್ಸ್ ಮಾಡಿದ್ದಾರಂತೆ. ಅಸಿಸ್ಟೆಂಟ್ ಕೊರಿಯೋಗ್ರಾಫರ್ ಆಗಿ ಅಷ್ಟೇ ಅಲ್ಲದೆ ಸ್ವತಂತ್ರವಾಗಿಯೂ ಎಷ್ಟೋ ಸಿನಿಮಾಗಳಿಗೆ ಕೊರಿಯೋಗ್ರಾಫಿ ಮಾಡಿರುವ ಹೆಗ್ಗಳಿಕೆ ಇವರದ್ದು.
ಅತಿ ಚಿಕ್ಕ ವಯಸ್ಸಿನಲ್ಲಿ ಬಹು ಮುಖ್ಯ ಪ್ರತಿಭೆಯಾಗಿ ಹೊರಹೊಮ್ಮಿದ ಈಕೆ ತನ್ನ ವೃತ್ತಿ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ಸಂತಸದ ವಿಚಾರ. ಸಿನಿಮಾ ದಿಗ್ಗಜರಾದ ಅಲ್ಲು ಅರ್ಜುನ್, ಧನುಷ್, ಯಶ್, ನಟ ಜೂನಿಯರ್ ಎನ್ಟಿಆರ್ ಮುಂತಾದವರ ಸಿನಿಮಾಗಳಿಗೆ ಡಾನ್ಸ್ ಕೊರಿಯೋಗ್ರಾಫಿ ಮಾಡಿದ್ದಾರಂತೆ ನಟಿ ದರ್ಶಿನಿ ಡೆಲ್ಟಾ ನಾಗರಾಜ್.
ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲಿ ಚಿಕ್ಕಣ್ಣ ಹಾಗೂ ಮಲೈಕಾ ಅವರ ಡ್ಯಾನ್ಸ್ ಗೆ ಕೋರಿಯೋಗ್ರಾಫಿ ಮಾಡಿದ್ದಾರೆ. ಚಿಕ್ಕಂದಿನಿಂದಲೂ ಡ್ಯಾನ್ಸಿಂಗ್ ಬಗ್ಗೆ ಬಹಳಷ್ಟು ಆಸಕ್ತಿಯನ್ನು ಹೊಂದಿದ್ದ ಈಕೆ ಹಲವಾರು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದರಂತೆ. ವಿಶೇಷವಾಗಿ ತೆಲುಗು ರಿಯಾಲಿಟಿ ಡ್ಯಾನ್ಸ್ ಶೋಗಳುಳ್ಳಲ್ಲಿ ಭಾಗವಹಿಸಿರುವ ಇವರು ಇದೀಗ ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆಗಳನ್ನು ಮಾಡಿ ಸಿನಿಮಾ ಕಿರುತೆರೆ ಹಾಗೂ ಡಾನ್ಸ್ ಲೋಕದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.
ಅಂದ ಹಾಗೆ ನಟರಾದ ಶಿವರಾಜಕುಮಾರ್, ಅದಿತಿ ಪ್ರಭುದೇವ್, ಚರಣ್ ಮುಂತಾದವರು ದರ್ಶಿನಿ ಡೆಲ್ಟಾ ನಾಗರಾಜ್ ಅವರ ಕೊರಿಯಾಗ್ರಫಿ ಸ್ಕಿಲ್ಸನ್ನು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಸಕ್ಕತ್ ಆಕ್ಟಿವ್ ಇರುವ ನಟಿ ದರ್ಶಿನಿ ಡೆಲ್ಟ ನಾಗರಾಜ್ ಆಗಾಗ ಹಲವು ರೀತಿಯ ಫೋಟೋಶೂಟ್ ಹಾಗೂ ರೀಲ್ಸ್ ಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ತಮ್ಮ ಸಹ ನಟಿಯಾದ ಪೂರ್ಣಿ ಪಾತ್ರದ ಲಾವಣ್ಯ ಭಾರದ್ವಾಜ್ ಅವರೊಂದಿಗೂ ರಿಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
ಹೀಗಿರುವಾಗ ಇತ್ತೀಚೆಗಷ್ಟೇ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಪೋಸ್ಟ್ ಮಾಡಿರುವ ವಿಡಿಯೋ ಒಂದು ಸಕ್ಕತ್ ವೈರಲ್ ಆಗಿದೆ. ಈಗಾಗಲೇ ಹಲವು ಡ್ಯಾನ್ಸ್ ವೀಡಿಯೋಸ್ ಪೋಸ್ಟ್ ಮಾಡಿರುವ ಈ ನಟಿ ಕಿಶನ್ ಬೆಳಗಲಿ ಅವರೊಂದಿಗಿನ ಡಾನ್ಸ್ ವಿಡಿಯೋ ಜೊತೆಗೆ ಇನ್ನಷ್ಟು ಸೆಲೆಬ್ರಿಟಿಗಳೊಂದಿಗಿನ ಡಾನ್ಸ್ ವಿಡಿಯೋಗಳನ್ನು ಶೇರ್ ಮಾಡಿ ಫೇಮಸ್ ಆಗಿರುವ ನಟಿ ದರ್ಶಿನಿ ಡೆಲ್ಟಾ ನಾಗರಾಜ್ ಇತ್ತೀಚೆಗಷ್ಟೇ ಶೇರ್ ಮಾಡಿರುವ ವಿಡಿಯೋದಲ್ಲಿ ತುಂಬಾ ಹಾಟ್ ಆಗಿ ಡ್ಯಾನ್ಸ್ ಮಾಡಿ ಪಡ್ಡೆ ಹುಡುಗರ ಮನ ಕದ್ದಿದ್ದಾರೆ.
ಇವರ ಈ ಫೋಟೋಶೂಟ್ ಹಾಗೂ ವಿಡಿಯೋ ತುಂಬಾ ವೈರಲ್ ಆಗಿದೆ. ಅಭಿಮಾನಿಗಳು ಫಾಲೋವರ್ಸ್ ಹಾಗೂ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಬರೀ ವಿಡಿಯೋ ಅನ್ನು ಶೇರ್ ಮಾಡದೆ ಅದರ ಹಿಂದಿನ ಶೂಟಿಂಗ್ ಕಷ್ಟಗಳನ್ನೂ ಒಂದು ಚಿಕ್ಕ ರೀಲ್ ಮೂಲಕ ಶೇರ್ ಮಾಡಿದ್ದಾರೆ ನಟಿ ದರ್ಶಿನಿ ಡೆಲ್ಟಾ ನಾಗರಾಜ್. ಇವರ ಎಫರ್ಟ್ಸ್ ಗೆ ಹಾಗೂ ಕ್ರಿಯಾಶೀಲತೆಗೆ ಜನ ಕಾಮೆಂಟ್ ಸೆಕ್ಷನ್ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications











