Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Dasa Purandara Serial : 'ದಾಸ ಪುರಂದರ'ದಲ್ಲಿ ಗುಟ್ಟೊಂದು ರಟ್ಟಾಗಿದೆ?
'ದಾಸ ಪುರಂದರ' ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಒಂದು ಆಧ್ಯಾತ್ಮಿಕ ಧಾರಾವಾಹಿ. ವಾರಕ್ಕೆ ಎರಡು ದಿನ ಪ್ರಸಾರವಾಗುವ ಈ ಧಾರಾವಾಹಿಗೆ ತನ್ನದೇ ಆದ ಒಂದು ಅಭಿಮಾನಿ ವರ್ಗವಿದೆ.
ಧಾರಾವಾಹಿಯಲ್ಲಿ ಶ್ರೀನಿವಾಸನಾಯಕನ ಅಜ್ಜಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಬಂದ ವ್ಯಕ್ತಿಯು ತಾನೇ ಸಂಕಷ್ಟಕ್ಕೆ ಸಿಲುಕಿದ್ದಾನೆ. ಅಜ್ಜಿಯ ಪ್ರಾಣ ಕಾಪಾಡಲು ಗಾಲಿಗೆ ಸಿಕ್ಕಿ ತೀವ್ರ ಪೆಟ್ಟಾಗಿದೆ. ಅಪರಿಚಿತ ವ್ಯಕ್ತಿಯ ಪೂರ್ವಾಪರ ತಿಳಿದುಕೊಳ್ಳಲು ಶ್ರೀನಿವಾಸನ ಕುಟುಂಬಸ್ಥರು ತವಕಿಸುತ್ತಾರೆ. ಗಾಯಾಳುವನ್ನು ತಮ್ಮ ಮನೆಗೆ ಅಪರಿಚಿತ ವ್ಯಕ್ತಿಯನ್ನು ಕರೆದು ತಂದು ಉಪಚರಿಸುತ್ತಿದ್ದಾರೆ.
ಆತ ಕಳ್ಳನೋ ಮತ್ಯಾರೋ ಎಂಬುದೇ ಪ್ರಶ್ನೆ ಎದುರಾಗಿದೆ. ನರಭದ್ರ ಎಂಬ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ ಎಂದು ಹೇಳುವ ಬದಲು ರಾಜನ ಅಸ್ಥಾನದಿಂದ ಬಂದವರೂ ಬೇರೆ ಸುಳ್ಳು ಹೇಳಿ ಹೋಗುತ್ತಾರೆ. ಇತ್ತ ಸರಸ್ವತಿ ಗಾಯಾಳು ವ್ಯಕ್ತಿಯನ್ನು ಉಪಚರಿಸುತ್ತಾಳೆ.

ಅಪರಿಚತ ವ್ಯಕ್ತಿಯ ವೃತ್ತಾಂಥ
ಮನೆಯವರೆಲ್ಲರೂ ಅಪರಿಚಿತ ವ್ಯಕ್ತಿಯ ಜೊತೆ ಮಾತನಾಡಲು ಬರುತ್ತಾರೆ. ಆಗ ಆತ ನಾನೊಬ್ಬ ಅನಾಥ ನನಗೆ ನನ್ನವರು ಎಂದು ಯಾರಿಲ್ಲ ಎಂದು ತಿಳಿಸುತ್ತಾನೆ. ಅನಂತರ ಶ್ರೀನಿವಾಸನ ತಂದೆ ಬೇರೆಯ ಪೂರ್ವಾಪರ ವಿಚಾರಿಸಲು ಹೋದಾಗ ನಾನು ಜಾತ್ರೆಯಲ್ಲಿ ಕಳೆದು ಹೋದವನು, ನನ್ನ ತಾಯಿ ನದಿಯಲ್ಲಿ ಕೊಚ್ಚಿ ಹೋದಳು ಎಂದು ಹೇಳುತ್ತಾನೆ.

ತಾಯಿ ಕಟ್ಟಿದ ತಾಳಿ!
ಆಗ ಆತ ನನ್ನ ತಾಯಿ ಆಕೆಯ ನೆನಪಿಗೆ ಕೈಗೆ ಕಟ್ಟಿದ್ದ ತಾಳಿಯನ್ನು ತೋರಿಸುತ್ತಾನೆ. ತಾಳಿ ನೋಡಿದ ಕುಟುಂಬಸ್ಥರಿಗೆ ಶಾಕ್ ಆಗುತ್ತದೆ. ನನ್ನ ತಂದೆಯ ಬಗ್ಗೆ ನಿಮಗೆ ಗೊತ್ತಾ ಎಂದು ಅಪರಿಚಿತ ವ್ಯಕ್ತಿ ಕೇಳುತ್ತಾನೆ. ಅದಕ್ಕೆ ಮನೆಯವರು ಈ ತಾಳಿ ಮಾಡಿದ್ದು ನಾವೇ ಎಂದು ತಿಳಿಸುತ್ತಾರೆ ಹಾಗಾದರೆ ನನ್ನ ತಂದೆಯನ್ನು ನೀವು ತೋರಿಸಿ ಎಂದು ಹೇಳಿದಾಗ ಮನೆಯವರು ಅಪರಿಚಿತ ವ್ಯಕ್ತಿಗೆ ಮತ್ತಷ್ಟು ಪ್ರಶ್ನೆ ಕೇಳುತ್ತಾರೆ.

ಗುಟ್ಟೊಂದು ರಟ್ಟಾಯಿತು!
ಆತ ಎಲ್ಲದಕ್ಕೂ ಉತ್ತರವನ್ನು ನೀಡುತ್ತಾನೆ. ವರದನಾಯಕ ನಾನೇ ನಿನ್ನ ತಂದೆ ಎಂದು ಹೇಳುತ್ತಾನೆ. ಮುಖ ನೋಡಿದ ಅಪರಿಚಿತ ಖಂಡಿತ ನೀವಲ್ಲ ನನ್ನ ತಾಯಿಯನ್ನು ಅಂತ್ಯಸಂಸ್ಕಾರ ಮಾಡಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ ಎಂದು ತಿರಸ್ಕರಿಸುತ್ತಾನೆ. ದಯವಿಟ್ಟು ನನ್ನನ್ನು ಇಲ್ಲಿಂದ ಹೋಗಲು ಬಿಡಿ ಎಂದು ಕೂಗಾಡುತ್ತಾನೆ. ಇದನ್ನೆಲ್ಲ ಕಂಡು ಮನೆಯವರಿಗೆ ಶಾಕ್ ಆಗುತ್ತದೆ. ಮುಂದೆ ಅಪರಿಚಿತ ವ್ಯಕ್ತಿ ಹೇಗೆ ನನ್ನ ತಂದೆ ವರದನಾಯಕರೇ ಎಂದು ಒಪ್ಪಿಕೊಳ್ಳುತ್ತಾನಾ ಇಲ್ಲ ಎಂಬುದನ್ನು ಕಾದು ನೋಡಬೇಕಾಗಿದೆ.