'ಉಪ್ಪಿ 2 Unknownu' ಸುವರ್ಣದಲ್ಲಿ ದಸರಾ ಧಮಾಕಾ
ಸ್ಟಾರ್ ನೆಟ್ ವರ್ಕ್ಸ್ ನ ಕನ್ನಡ ಮನೋರಂಜನಾ ಸುವರ್ಣ ವಾಹಿನಿಯು ದಸರಾ ಹಬ್ಬದ ಪ್ರಯುಕ್ತ 'ಉಪ್ಪಿ 2 UNKNOWNU' ಎಂಬ ವಿಶೇಷ ಕಾರ್ಯಕ್ರಮವನ್ನು ಇದೇ ಅಕ್ಟೋಬರ್ 13 ರಂದು ಸಂಜೆ 5.30ಕ್ಕೆ ಪ್ರಸಾರ ಮಾಡುತ್ತಿದೆ.
ಈ ವಿಶೇಷ ಕಾರ್ಯಕ್ರಮವು ಕನ್ನಡ ಚಿತ್ರರಂಗದ ರೀಯಲ್ ಸ್ಟಾರ್ ಉಪೇಂದ್ರ ಅವರ 45ನೇ ಹುಟ್ಟು ಹಬ್ಬದ ಆಚರಣೆಗಾಗಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 'ಉಪ್ಪಿ ಫೌಂಡೇಷನ್' ಎಂಬ ಚಾರಿಟಿ ಫೌಂಡೇಷನ್ ಸ್ಥಾಪಿಸಿದರು. ಅಲ್ಲದೇ ಉಪ್ಪಿ 2 ಎಂಬ ಹೊಸ ಚಲನಚಿತ್ರದ ಮುಹೂರ್ತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಕನ್ನಡ ಚಿತ್ರರಂಗದ ಬ್ಲಾಕ್ ಬಸ್ಟರ್ ಚಿತ್ರ 'ಉಪೇಂದ್ರ' ಚಲನಚಿತ್ರದ ಮುಂದುವರೆದ ಭಾಗ 'ಉಪ್ಪಿ 2' ಆಗಿದೆ. ಉಪ್ಪಿ 2 ಚಿತ್ರವನ್ನು ಪ್ರಿಯಾಂಕಾ ಉಪೇಂದ್ರ ಮತ್ತು ಸಿ.ಆರ್ ಮೋಹನ್ ಅವರು ಉಪೇಂದ್ರ ಪ್ರೋಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

'ಉಪ್ಪಿ to Unknownu'ನಲ್ಲಿ ಮೇರು ನಟರು
'ಉಪ್ಪಿ to Unknownu' ಕಾರ್ಯಕ್ರಮವು ಕನ್ನಡ ಚಿತ್ರರಂಗದ ಮೇರುನಟರಾದ ಶಿವರಾಕುಮಾರ್, ರವಿಚಂದ್ರನ್, ಪುನೀತ್ ರಾಜಕುಮಾರ್, ಜಗ್ಗೇಶ್, ಪ್ರೀಯಾಮಣಿ, ರಾಗಿಣಿ ಹಾಗೂ ಮೊದಲಾದವರನ್ನೊಳಗೊಂಡು ತುಂಬಿ ತುಳುಕುತ್ತಿತ್ತು.

ಉಪ್ಪಿ ಮಕ್ಕಳು ಆಯುಷ್, ಐಶ್ವರ್ಯಾ ಡಾನ್ಸ್
ಉಪೇಂದ್ರರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯಾ ಡಾನ್ಸ್ ಮೂಲಕ ಈ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಉಪೇಂದ್ರ ಮತ್ತು ಶಿವರಾಜಕುಮಾರ್ ಪ್ರಪ್ರಥಮಬಾರಿಗೆ ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರಿ ಡಾನ್ಸ್ ಮಾಡಿದರು.

ಹರ್ಷಿಕಾ, ಸಂಜನಾ, ಭಾವನಾ ಹೆಜ್ಜೆ
ಯುವ ತಾರೆಗಳಾದ ಸಂಜನಾ, ಹರ್ಷಿಕಾ ಪೂಣಚ್ಚ ಮತ್ತು ಭಾವನಾ ರಾವ್ ಉಪ್ಪಿ ಹಾಡಿಗೆ ಹೆಜ್ಜೆ ಹಾಕಿ ನೆರೆದ ಪ್ರೇಕ್ಷಕರು ನಿಬ್ಬೆರಗಾಗುವಂತೆ ಪರ್ಫಾಮೆನ್ಸ್ ನೀಡಿದರು. ಎಲ್ಲ ಕಲಾವಿದರು ಉಪ್ಪಿಯೊಂದಿಗಿನ ನಂಟು, ಸಿಹಿ ನೆನಪುಗಳನ್ನು ಮೆಲಕುಹಾಕುತ್ತಾ ಅನುಭವಗಳನ್ನು ಹಂಚಿಕೊಂಡರು.

ಅನೂಪ್ ಚಂದ್ರಶೇಖರನ್ ಏನು ಹೇಳ್ತಾರೆ?
"'ಲೂನಾರ್ಸ್" ವಾಕ್ ಮೇಟ್ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ. ವಾಹಿನಿಯ ಬಿಸಿನೆಸ್ ಹೆಡ್, ಅನೂಪ್ ಚಂದ್ರಶೇಖರನ್ ಹೇಳುವ ಹಾಗೆ, "ದಸರಾ ವಿಶೇಷವಾಗಿ ನಾವು ಈ ಕಾರ್ಯಕ್ರಮವನ್ನು ನಮ್ಮ ವೀಕ್ಷಕರಿಗೆ ಅಕ್ಟೋಬರ್ 13 ರಂದು ಉಣಬಡಿಸುತ್ತಿರುವುದು ಒಂದು ವಿಶಿಷ್ಟವಾದುದು.

ಎಲ್ಲರೂ ಸ್ಮರಿಸುವಂತಹ ವಿಭಿನ್ನ ಕಾರ್ಯಕ್ರಮ
ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ಉಪೇಂದ್ರ ಮತ್ತು ಪ್ರೀಯಾಂಕಾರಿಗೆ ನಾನು ಧನ್ಯವಾದಗಳನ್ನು ಹೇಳಬಯಸುತ್ತೇನೆ. ಇದು ಎಲ್ಲರೂ ಸ್ಮರಿಸುವಂತಹ ವಿಭಿನ್ನ ಕಾರ್ಯಕ್ರಮ ಇದಾಗಿದೆ. ನಮ್ಮ ವೀಕ್ಷಕರು ಈ ಸಂಭ್ರಮಾಚರಣೆಯನ್ನು ನೋಡಿ ಸಂತಸಪಡುತ್ತಾರೆಂಬುದು ನನ್ನ ನಂಬಿಕೆ ಎಂದರು".

ಉಪೇಂದ್ರರಿಗೆ ಪ್ರಿಯಾಂಕಾ ಹುಟ್ಟುಹಬ್ಬ ಕೊಡುಗೆ
ಈ ಸಂದರ್ಭದಲ್ಲಿ ನಟಿ ಮತ್ತು ನಿರ್ಮಾಪಕಿ ಪ್ರೀಯಾಂಕಾ ಉಪೇಂದ್ರ ಮಾತನಾಡಿ, "ಈ ಕಾರ್ಯಕ್ರಮ ನನ್ನ ಪತಿ ಉಪ್ಪಿಗೆ ಅವರ ಹುಟ್ಟು ಹಬ್ಬಕ್ಕಾಗಿ ನಾನು ನೀಡಿದ ಉಡುಗೊರೆ. ಇದೇ ದಿನ ನಾವು ನಮ್ಮ ಪ್ರೊಡಕ್ಷನ್ ಹೌಸನ್ನು ಸ್ಥಾಪಿಸಿ ಅದರಡಿಯಲ್ಲೇ ಉಪ್ಪಿ 2 ಸಿನೆಮಾವನ್ನು ನಿರ್ಮಿಸಲು ಮುಂದಾಗುತ್ತಿದ್ದೇವೆ.

ವೀಕ್ಷಕರಿಗೆ ಈ ಕಾರ್ಯಕ್ರ ಇಷ್ಟವಾಗುತ್ತದೆ
ಉಪೇಂದ್ರ ಚಿತ್ರದ ಮುಂದುವರೆದ ಭಾಗವಾಗಿದೆ 'ಉಪ್ಪಿ 2'. ಈ ಕಾರ್ಯಕ್ರಮವು ಯಾವುದೇ ವಿಘ್ನಗಳಿಲ್ಲದೇ ಸರಾಗವಾಗಿ ನಡೆದು ಯಶಸ್ಸು ಕಂಡಿದ್ದಕ್ಕೆ ಕಲಾವಿದರು ಮತ್ತು ಚಲನಚಿತ್ರ ಮಡಳಿಯವರು ನೀಡಿದ ಸಹಕಾರಕ್ಕೆ ಧನ್ಯವಾದಗಳು. ಈ ಕಾರ್ಯಕ್ರಮ ಸುವರ್ಣ ಟೀವಿಯಲ್ಲಿ ಅಕ್ಟೋಬರ್ 13 ರಂದು ಪ್ರಸಾರವಾದಾಗ ವೀಕ್ಷಕರೂ ನೋಡಿ ಸಂತಸ ಪಡುತ್ತಾರೆಂಬುದು ನನ್ನ ನಂಬಿಕೆ ಎಂದರು".

ನಟ-ನಿರ್ದೇಶಕ ಉಪೇಂದ್ರ ಏನು ಹೇಳ್ತಾರೆ?
ರಿಯಲ್ ಸ್ಟಾರ್, ನಟ-ನಿರ್ದೇಶಕ ಉಪೇಂದ್ರ ಹೇಳುವಂತೆ, "ಪ್ರಿಯಾಂಕಾ ಈ ವರ್ಷದ ನನ್ನ ಹುಟ್ಟುಹಬ್ಬವನ್ನು ತುಂಬಾ ವಿಶೇಷವಾಗಿಸಿದಳು. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಮೊದಲು ಅವಳಿಗೆ ಥ್ಯಾಂಕ್ಸ್, ಹಾಗೂ ನನ್ನ ಕುಟುಂಬಕ್ಕೆ, ಚಲನಚಿತ್ರಮಂಡಳಿಯವರಿಗೂ ತುಂಬು ಹೃದಯದ ಧನ್ಯವಾದಗಳನ್ನೇಳಲಿಚ್ಚಿಸುತ್ತೇನೆ" ಎಂದಿದ್ದಾರೆ.

ಸುವರ್ಣದಲ್ಲಿ ಸದಭಿರುಚಿಯ ಕಾರ್ಯಕ್ರಮಗಳು
ಸುವರ್ಣ ವಾಹಿನಿಯು ಸದಭಿರುಚಿಯ ಕಾರ್ಯಕ್ರಮಗಳನ್ನೇ ನಿಡುತ್ತಾ ಬರುತ್ತಿದ್ದು ಜನಪ್ರಿಯ ಕಾರ್ಯಕ್ರಮಗಳಾದ ಪುಟಾಣಿ ಪಂಟ್ರು, ಅಮೃತ ವರ್ಷಿಣಿ, ಚುಕ್ಕಿ, ಪಲ್ಲವಿ ಅನುಪಲ್ಲವಿ, ಆಕಾಶದೀಪ, ಸರಸ್ವತಿ, ಕರ್ಪೂರದ ಗೊಂಬೆ, ಪ್ರೀಯದರ್ಶಿನಿ, ಮಿಲನ, ಅರಗಿಣಿ ಮತ್ತು ಪಂಚರಂಗಿ ಪೋಂ ಪೋಂ ಮೊದಲಾದವುಗಳನ್ನು ಹೊಂದಿದೆ.


Click it and Unblock the Notifications











