»   » 'ಸರಿಗಪಮ-13' ಫಲಿತಾಂಶದ ವಿರುದ್ಧ ಜನರ ಆಕ್ರೋಶ

'ಸರಿಗಪಮ-13' ಫಲಿತಾಂಶದ ವಿರುದ್ಧ ಜನರ ಆಕ್ರೋಶ

Posted By:
Subscribe to Filmibeat Kannada

ಜೀ-ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರಿಗಪಮ-13' ಆವೃತ್ತಿ ಯಶಸ್ವಿಯಾಗಿ ಮುಗಿದಿದ್ದು, ಸುನಿಲ್ ಜಯಶಾಲಿ ಆಗಿ ಹೊರಹೊಮ್ಮಿದ್ದಾರೆ. ಆದ್ರೆ, ಈ ಫಿನಾಲೆ ಮುಗಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಫಲಿತಾಂಶದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ.

ಕೆಲವರು ವಿನ್ನರ್ ಅವರು ಆಗಬೇಕಿತ್ತು, ವಿನ್ನರ್ ಇವರು ಆಗಬೇಕಿತ್ತು ಎಂಬ ವಾದ-ವಿವಾದ ಮಾಡಿದ್ರೆ. ಮತ್ತೆ ಕೆಲವು ಜೀ-ಕನ್ನಡದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೆ ಕೆಲವರು ಇದು ಉತ್ತಮ ಫಲಿತಾಂಶ, ಜನರಿಗೆ ಅಧಿಕಾರ ಕೊಟ್ಟ ಜೀ-ಕನ್ನಡಗೆ ಧನ್ಯವಾದಗಳನ್ನ ಹೇಳುತ್ತಿದ್ದಾರೆ. ಹಾಗಿದ್ರೆ, 'ಸರಿಗಪಮ-13' ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗುತ್ತಿದೆ ಎಂದು ಮುಂದೆ ಓದಿ.......

ಜನರ ಕೈಗೆ ತೀರ್ಪು ಕೊಟ್ಟಿದ್ದು ತಪ್ಪು

'ಸರಿಗಪಮ-13' ಫಿನಾಲೆಯ ಎರಡು ಸುತ್ತಿನಲ್ಲಿ ನಡೆಯಿತು. ಮೊದಲ ಸುತ್ತಿನಲ್ಲಿ ತೀರ್ಪುಗಾರರು ನಿರ್ಣಯ ತೆಗೆದುಕೊಂಡರು. ಆದ್ರೆ, ಎರಡನೇ ಸುತ್ತಿನಲ್ಲಿ ಜನರ ವೋಟ್ ವಿನ್ನರ್ ಯಾರು ಎಂಬುದನ್ನ ನಿರ್ಧರಿಸಿತ್ತು. ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಿನಾಲೆಯಲ್ಲಿ ಜನರ ಕೈಗೆ ತೀರ್ಪು ಕೊಟ್ಟಿದ್ದು ತಪ್ಪು ಎನ್ನುತ್ತಿದ್ದಾರೆ.

ಸರಿಗಮಪ ಸೀಸನ್-13 ಪ್ರಶಸ್ತಿ ಮುಡಿಗೇರಿಸಿಕೊಂಡ ಸುನಿಲ್

ಸಂಗೀತ ಗೊತ್ತಿಲ್ಲದ ಜನರು ವೋಟ್ ಮಾಡಿದ್ದಾರೆ

ಫಿನಾಲೆ ವಿನ್ನರ್ ಆಯ್ಕೆ ಮಾಡುವಲ್ಲಿ ಜನರಿಗೆ ಅಧಿಕಾರ ಕೊಟ್ಟಿದ್ದು ತಪ್ಪು. ಯಾಕಂದ್ರೆ, ಸಂಗೀತದ ಗಂಧವೇ ಗೊತ್ತಿಲ್ಲದೇ ಇರುವವರು ಕೇವಲ ಅಭಿಮಾನಕ್ಕಾಗಿ ವೋಟ್ ಮಾಡಿರುತ್ತಾರೆ. ಇದು ನಿಜವಾದ ಪ್ರತಿಭೆಗಳಿಗೆ ಮಾಡಿದ ಮೋಸ ಎಂಬ ವಾದವೂ ಜೋರಾಗಿದೆ.

ಸಂಗೀತ ಸಾಧಕರು ಯಾಕೆ ಬೇಕಿತ್ತು?

ಆರಂಭದಿಂದ ತೀರ್ಪುಗಾರರ ಆಯ್ಕೆಯಂತೆ ಕಾರ್ಯಕ್ರಮ ನಿರೂಪಿಸಿಕೊಂಡು ಬಂದ ಸರಿಗಮಮ ಕಾರ್ಯಕ್ರಮ, ಅಂತಿಮ ದಿನವೇಕೆ ಜನರ ತೀರ್ಮಾನಿಸಲಿ ಎಂದು ಬಿಟ್ಟರು. ಹೀಗಿರುವಾಗ, ಫಿನಾಲೆಗೆ ತೀರ್ಪುಗಾರು ಯಾಕೆ ಬೇಕಿತ್ತು? ಎಂಬ ಚರ್ಚೆ ನಡೆಯುತ್ತಿದೆ.

ವಿನ್ನರ್ ನಿರ್ಧಾರ ತೀರ್ಪುಗಾರರೇ ಮಾಡಬೇಕಿತ್ತು

ಮೊದಲಿನಿಂದಲೂ ಸ್ಫರ್ಧಿಗಳ ಪರ್ಫಾಮೆನ್ಸ್ ಹೇಗಿತ್ತು? ಯಾವುದರಲ್ಲಿ ಅವರು ಸಾಮರ್ಥ್ಯರು? ಯಾವುದರಲ್ಲಿ ಅವರು ಹಿಂದೆ ಉಳಿದಿದ್ದರು ಎಂಬುದು ತೀರ್ಪುಗಾರರಿಗೆ ಗೊತ್ತಿತ್ತು. ಹೀಗಾಗಿ, ಫಿನಾಲೆ ವಿನ್ನರ್ ಅಭ್ಯರ್ಥಿಯನ್ನ ತೀರ್ಪುಗಾರರೇ ಆಯ್ಕೆ ಮಾಡಬೇಕಿತ್ತು ಎನ್ನುವ ಮಾತಿದೆ.

'ಸರಿಗಮಪ ಸೀಸನ್ 13' ಕಾರ್ಯಕ್ರಮದಲ್ಲಿ ಯಾರಿಗೆ ಎಷ್ಟು ವೋಟು ಬಂದಿತ್ತು?

ಜೀ-ಕನ್ನಡ ನಿರ್ಧಾರಕ್ಕೆ ಚಪ್ಪಾಳೆ

ಈ ಬಾರಿಯ ಸರಿಗಮಪ ವಿನ್ನರ್ ಆಯ್ಕೆ ಮಾಡುವ ಅವಕಾಶ ಜನಗಳಿಗೆ ನೀಡಿದ್ದು ಒಳ್ಳೆಯ ನಿರ್ಧಾರವೆಂದು 'ಜೀ-ಕನ್ನಡ'ದ ನಡೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ವರ್ಗವೂ ಇದೆ.

ಸುನಿಲ್ ಸಾಧನೆ ಬಗ್ಗೆ ಮೆಚ್ಚುಗೆ

ಸರಿಗಮಪ-13 ನೇ ಆವೃತ್ತಿಯಲ್ಲಿ ಜಯಶಾಲಿ ಆಗಿ ಹೊರಹೊಮ್ಮಿದ ಸುನಿಲ್ ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಸಾಮಾನ್ಯ ಹುಡುಗನಾಗಿದ್ದ 'ಸುನೀಲ'ನ ಸ್ಫೂರ್ತಿದಾಯಕ 'ಸರಿಗಮಪ' ಜರ್ನಿ

ಶ್ರೀ ಹರ್ಷ ಪ್ರತಿಭೆ ಬೆಲೆ ಸಿಕ್ಕಿಲ್ಲವಂತೆ

ಸುನಿಲ್ ಸರಿಯಾದ ಆಯ್ಕೆ ಅಲ್ಲಾ, ಶ್ರೀ ಹರ್ಷ ಗೆಲ್ಲಬೇಕಿತ್ತು ಎಂಬು ವಾದವೂ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

English summary
Social media People Discussing about sarigamapa 13 Result

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada