»   » 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆದ್ದ 'ನಾಗಿಣಿ' ಜೋಡಿಗೆ ಸಿಕ್ಕ ಬಹುಮಾನ ಏನು.?

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆದ್ದ 'ನಾಗಿಣಿ' ಜೋಡಿಗೆ ಸಿಕ್ಕ ಬಹುಮಾನ ಏನು.?

Posted By:
Subscribe to Filmibeat Kannada
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗೆದ್ದ 'ನಾಗಿಣಿ' ಜೋಡಿಗೆ ಸಿಕ್ಕ ಬಹುಮಾನ ಏನು? | Filmibeat Kannada

'ಜೀ ಕನ್ನಡ' ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಒಂದು. ಈ ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಸಂಚಿಕೆ ನಿನ್ನೆ ಪ್ರಸಾರ ಆಗಿದೆ. 'ನಾಗಿಣಿ' ಧಾರಾವಾಹಿಯ ಜೋಡಿ ಅರ್ಜುನ್ ಮತ್ತು ಅಮೃತ ಕಾರ್ಯಕ್ರಮದ ವಿಜೇತರಾಗಿದ್ದಾರೆ.

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಒಟ್ಟು 11 ಜೋಡಿಗಳು ಪೈಕಿ 4 ಜೋಡಿಗಳು ಫೈನಲ್ ಗೆ ಬಂದಿತ್ತು. ಈ ಜೋಡಿಗಳ ಪೈಕಿ ಗ್ರಾಂಡ್ ಫಿನಾಲೆಯಲ್ಲಿ ಗೆಲುವು ಸಾಧಿಸುವುದಕ್ಕೆ ದೊಡ್ಡ ಪೈಪೋಟಿ ಏರ್ಪಟಿತ್ತು. ಆದರೆ ಕೊನೆಗೆ 'ನಾಗಿಣಿ' ಸೀರಿಯಲ್ ನಲ್ಲಿನ ಅರ್ಜುನ್ ಮತ್ತು ಅಮೃತ ಪಾತ್ರಧಾರಿಗಳಾದ ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಗೆದ್ದಿದ್ದಾರೆ. ಮುಂದೆ ಓದಿ...

ತುಮಕೂರಿನಲ್ಲಿ ನಡೆದ ಕಾರ್ಯಕ್ರಮ

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಗ್ರಾಂಡ್ ಫಿನಾಲೆ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿತ್ತು. ಈ ಕಾರ್ಯಕ್ರಮ ನಿನ್ನೆ ಪ್ರಸಾರ ಆಗಿದ್ದು, ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಕಾರ್ಯಕ್ರಮದ ವಿಜೇತರಾಗಿದ್ದಾರೆ. ಇನ್ನು ಎರಡನೇ ಸ್ಥಾನಕ್ಕೆ ವಿವೇಕ್ ಮತ್ತು ನೇಹಾ ಪಾಟೀಲ್ ಜೋಡಿ ತೃಪ್ತಿ ಪಟ್ಟುಕೊಂಡರು.

ಫೈನಲ್ ಗೆ ಬಂದ ಸ್ಪರ್ಧಿಗಳು

4 ತಂಡಗಳು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಫೈನಲ್ ವರೆಗೆ ಬಂದಿದ್ದರು. ಸ್ಪರ್ಧಿಗಳಾದ ದೀಕ್ಷಿತ್ ಶೆಟ್ಟಿ - ದೀಪಿಕಾ ದಾಸ್, ಚೆನ್ನಪ್ಪಾ - ಇಂಪನಾ, ವಿವೇಕ್ - ನೇಹಾ ಪಾಟೀಲ್ ಮತ್ತು ವೇಣುಗೋಪಾಲ್ ಮತ್ತು ಸಾನ್ವಿ ಅಂತಿಮ ಹಂತ ತಲುಪಿದ್ದರು.

11 ಜೋಡಿಗಳು

ಜೀ ಕನ್ನಡ ವಾಹಿನಿಯ ಫ್ಯಾಮಿಲಿ ವಾರ್ ಇದಾಗಿತ್ತು. 11 ಜೋಡಿಗಳು ಮಧ್ಯೆ ಸೆಣಸಾಟ ನೆಡೆದಿತ್ತು. ಜೀ ಕನ್ನಡ ವಾಹಿನಿಯ ಡ್ರಾಮಾ ಜೂನಿಯರ್ಸ್, ಕಾಮಿಡಿ ಕಿಲಾಡಿಗಳು, ಸರಿಗಮಪ ಮತ್ತು ಧಾರಾವಾಹಿಯ ಕಲಾವಿದರು ಇಲ್ಲಿ ಭಾಗವಹಿಸಿದ್ದರು.

'ಸರಿಗಮಪ'ಗೆ ಸಿಕ್ಕಿಯೇ ಬಿಟ್ಟರು 'ಮಹಾಗುರು'ಗಳು.!

'ನಾಗಿಣಿ' ಜೋಡಿ

ಮೊದಲು 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದಲ್ಲಿ ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಜೋಡಿ ಅತಿ ಕೆಳಗೆ ಇತ್ತು. ಆದರೆ 'ಓ ನನ್ನ ನಲ್ಲೆ' ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಆ ನಂತರ ಈ ಜೋಡಿ ಹಿಂದೆ ತಿರುಗಿ ನೋಡಲಿಲ್ಲ.

ತಮಿಳು ರಿಯಾಲಿಟಿ ಶೋಗೆ ಆಯ್ಕೆ ಆದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ

ಸಂಗೊಳ್ಳಿ ರಾಯಣ್ಣ

ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಜೋಡಿ ಗ್ರಾಂಡ್ ಫಿನಾಲೆ ಯಲ್ಲಿ ಸಂಗೊಳ್ಳಿ ರಾಯಣ್ಣನ ಕಥೆ ಇಟ್ಟುಕೊಂಡು ವಿಶೇಷ ನೃತ್ಯ ಮಾಡಿದ್ದರು. ತೀರ್ಪುಗಾರ ಮತ್ತು ಜನಗಳ ವೋಟಿಂಗ್ ಆಧಾರದ ಮೇಲೆ ಗೆಲುವು ನಿರ್ಧಾರವಾಯಿತು.

'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?

10 ಲಕ್ಷ ರೂಪಾಯಿ ಬಹುಮಾನ

ಕಾರ್ಯಕ್ರಮವನ್ನು ಗೆದ್ದ ದೀಕ್ಷಿತ್ ಶೆಟ್ಟಿ ಮತ್ತು ದೀಪಿಕಾ ದಾಸ್ ಜೋಡಿಗೆ ಜೀ ಕನ್ನಡ ವಾಹಿನಿ ಟ್ರೋಫಿ ಜೊತೆ 10 ಲಕ್ಷ ರೂಪಾಯಿ ಬಹುಮಾನ ನೀಡಿತು. ಇದರೊಂದಿಗೆ ಗೆದ್ದ ತಂಡದ ಡ್ಯಾನ್ಸ್ ಮಾಸ್ಟರ್ ಜಯ್ ಅವರಿಗೆ ಎರಡುವರೆ ಲಕ್ಷ ಬಹುಮಾನ ನೀಡಲಾಯಿತು.

English summary
Nagini serial Actor Deekshith Shetty and Actress Deepika Das won Zee Kannada's popular show Dance Karnataka Dance.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada