ಹಲ್ಲೆ ನಡೆದ ಬಗ್ಗೆ 'ನಾಗಿಣಿ' ಸೀರಿಯಲ್ ನಟ ದೀಕ್ಷಿತ್ ಹೇಳಿದ್ದೇನು?
Recommended Video

'ನಾಗಿಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟ ದೀಕ್ಷಿತ್ ಶೆಟ್ಟಿ ಮೇಲೆ ನಿನ್ನೆ ತಡ ರಾತ್ರಿ ಹಲ್ಲೆ ಆಗಿತ್ತು. ಈ ಬಗ್ಗೆ ವಿಜಯ ನಗರ ಪೊಲೀಸ್ ಠಾಣೆಗೆ ಈಗಾಗಲೇ ದೀಕ್ಷಿತ್ ದೂರು ದಾಖಲಿಸಿದ್ದು, ಇದೀಗ ಘಟನೆಯ ಬಗ್ಗೆ ಮಾತನಾಡಿದ್ದಾರೆ.
'ನಾಗಿಣಿ' ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ದೀಕ್ಷಿತ್ ಆ ಸೀರಿಯಲ್ ಮೂಲಕ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಅಲ್ಲಿದೇ, ಇತ್ತೀಚಿಗಷ್ಟೆ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ಕೂಡ ಗೆದ್ದಿದ್ದರು. ಹೀಗಿರುವಾಗ ನಿನ್ನೆ ರಾತ್ರಿ ಮೂರು ಜನ ದುಷ್ಕರ್ಮಿಗಳು ದೀಕ್ಷಿತ್ ಹಲ್ಲೆ ಮಾಡಿದ್ದರು.
ಇದೀಗ ನಿನ್ನೆ ನಡೆದ ಘಟನೆ ಬಗ್ಗೆ ಸಂಪೂರ್ಣವಾಗಿ ನಟ ದೀಕ್ಷಿತ್ ಶೆಟ್ಟಿ ವಿವರಿಸಿದ್ದಾರೆ. ಜೀ ಕನ್ನಡ ವಾಹಿನಿ ಫೇಸ್ ಬುಕ್ ಪೇಜ್ ನಲ್ಲಿ ದೀಕ್ಷಿತ್ ವಿಡಿಯೋ ಮೂಲಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ನನಗೆ ಏನೂ ಆಗಿಲ್ಲ
''ಎಲ್ಲರಿಗೂ ನಮಸ್ಕಾರ ನಾನು ತುಂಬ ಕ್ಷೇಮವಾಗಿ ಇದ್ದೇನೆ. ನಿನ್ನೆ ರಾತ್ರಿ ಒಂದು ಹಲ್ಲೆ ನಡೆಯಿತು. ಅದರ ಬಗ್ಗೆ ಮಾಧ್ಯಮಗಳಲ್ಲಿಯೂ ಬರುತ್ತಿದೆ. ನನಗೆ ಏನು ಆಗಿಲ್ಲ'' - ದೀಕ್ಷಿತ್ ಶೆಟ್ಟಿ, ಕಿರುತೆರೆ ನಟ

ಅಪರಿಚಿತರಿಂದ ಕೃತ್ಯ
''ನನ್ನ ಕಾರು ಸ್ವಲ್ಪ ಡ್ಯಾಮೇಜ್ ಆಗಿದೆ. ರಾತ್ರಿ ಸಿನಿಮಾ ನೋಡಿಕೊಂಡು ಬರುತ್ತಿದೆ. ಆ ಟೈಂ ನಲ್ಲಿ ಮೂರು ಜನ ಅಪರಿಚಿತರು ಬಂದರು'' - ದೀಕ್ಷಿತ್ ಶೆಟ್ಟಿ, ಕಿರುತೆರೆ ನಟ

ಫೋಟೋ ಹೇಳಿದರು
''ನನ್ನ ಗಾಡಿ ತಟ್ಟಿ ಫೋಟೋ ಹೇಳಿದರು. ಅವರು ಕುಡಿದಿದ್ದರು ಅನಿಸುತ್ತದೆ. ಅದಕ್ಕೆ ನಾನು ಅವರನ್ನು ತಿರಸ್ಕರಿಸಿದೆ. ಅದಕ್ಕೆ ಅವರು ಅವಾಚ್ಯ ಪದಗಳಲ್ಲಿ ಬೈದರು. ಆ ಮೇಲೆ ಕಾರ್ ಮೇಲೆ ಕಲ್ಲು ಎತ್ತಿ ಹಾಕಿದರು. ಆದರೆ ನನಗೆ ಏನು ಸಮಸ್ಯೆ ಆಗಿಲ್ಲ'' - ದೀಕ್ಷಿತ್ ಶೆಟ್ಟಿ, ಕಿರುತೆರೆ ನಟ

ದೂರು ಕೊಟ್ಟಿದ್ದೇನೆ
''ಯಾರು ಯೋಚನೆ ಮಾಡಬೇಡಿ. ಪೊಲೀಸರಿಗೆ ದೂರು ಕೊಟ್ಟಿದ್ದೇನೆ. ಪೋಲಿಸರು ಹುಡುಕುತ್ತೇನೆ ಅಂತ ಹೇಳಿದ್ದಾರೆ. ಏನು ಸಮಸ್ಯೆ ಇಲ್ಲ. ಯಾರು ಆತಂಕ ಪಡುವ ಅಗತ್ಯ ಇಲ್ಲ'' - ದೀಕ್ಷಿತ್ ಶೆಟ್ಟಿ, ಕಿರುತೆರೆ ನಟ

ಫಟನೆಯ ವಿವರ
ನಟ ದೀಕ್ಷಿತ್ ಶೆಟ್ಟಿ ನಿನ್ನೆ ತಡರಾತ್ರಿ ವಿಜಯನಗರದ ಮಾರುತಿ ಮಂದಿರದ ಬಳಿ ತಮ್ಮ ಕಾರ್ ನಲ್ಲಿ ಬರುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಮೊದಲು ದೀಕ್ಷಿತ್ ಬಳಿ ಸೆಲ್ಫಿ ಕೇಳಿದ್ದಾರೆ. ಅದನ್ನು ನಿರಾಕರಿಸಿದಕ್ಕೆ ಏಕಾಏಕಿ ಮೂವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿ ಅವರ ಕಾರಿನ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ.
ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರು

ದೀಕ್ಷಿತ್ ಶೆಟ್ಟಿ ಬಗ್ಗೆ
ನಟ ದೀಕ್ಷಿತ್ ಶೆಟ್ಟಿ 'ನಾಗಿಣಿ' ಧಾರಾವಾಹಿಯ ಲೀಡ್ ರೋಲ್ ಆಗಿರುವ ಅರ್ಜುನ್ ಪಾತ್ರವನ್ನು ಮಾಡುತ್ತಿದ್ದಾರೆ. ಅಲ್ಲದೆ ಕೆಲ ದಿನಗಳ ಹಿಂದೆಯಷ್ಟೆ ತಮ್ಮ ಸಹ ನಟಿ ದೀಪಿಕಾ ದಾಸ್ ರೊಂದಿಗೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ವಿಜೇತರಾಗಿದ್ದಾರೆ.


Click it and Unblock the Notifications











