ನಾನ್ಯಾವ ಆಸ್ತಿ ಮಾಡಿಲ್ಲ, ನನ್ನ ಹೆಸರಿನಲ್ಲಿ ಇರೋದು ಸ್ಮಶಾನದಲ್ಲಿ ಆರಡಿ ಜಾಗ ಮಾತ್ರ ಎಂದ ನಟಿ

ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರರಂಗದ ಅಂದ ಕೂಡಲೇ ಕಣ್ತುಂಬ ಬಣ್ಣ ತುಂಬಿಕೊಳ್ಳುತ್ತವೆ. ಆದರೆ, ವಾಸ್ತವದಲ್ಲಿ.. ಬೇರೆ ಎಲ್ಲ ಉದ್ಯಮಗಳಿಗೆ ಹೋಲಿಸಿದರೆ ಇಲ್ಲಿ ಅಭದ್ರತೆ ಹೆಚ್ಚೇ ಇದೆ. ಇಲ್ಲಿ ಇವತ್ತು ಇಲ್ಲ ಅಂದರೆ ನಾಳೆ ಗೆದ್ದೇ ಗೆಲ್ಲುತ್ತೇವೆ ಆ ಮೂಲಕ ಬದುಕಲ್ಲಿ ಬೆಳಕು ಮೂಡುತ್ತೆ ಎಂಬ ಭರವಸೆಯಿಂದ ಅನೇಕ ವರ್ಷಗಳಿಂದ ಅನೇಕ ಕಾರ್ಮಿಕರು, ತಂತ್ರಜ್ಞರು, ಕಲಾವಿದರು ಕಾಯುತ್ತಲೇ ಇದ್ದಾರೆ.

ಉದಾಹರಣೆಗೆ ದೀಪಿಕಾ ರಂಗರಾಜು. ಹೌದು ದೀಪಿಕಾ ರಂಗರಾಜು.. ಕಾಲಿವುಡ್‌ನ ಚೆಲುವೆ. ತಮಿಳು ಕಿರುತೆರೆಯಲ್ಲಿ ಇವರಿಗೆ ಇವ್ರದ್ದೇ ಆದ ಹೆಸರು ಇದೆ. ಬೆಲೆ ಇದೆ. ಬಣ್ಣದ ಕನಸೊತ್ತು, ಬಣ್ಣದ ಸೆಳೆತಕ್ಕೆ ಸಿಲುಕಿ ಚಿತ್ರರಂಗದತ್ತ ವಾಲಿದ ದೀಪಿಕಾ ಆರಂಭದಲ್ಲಿ ನಿರೂಪಕಿಯಾಗಿ ಹೆಸರು ಮಾಡಿದರು. ತಮಿಳು ಚಾನೆಲ್‌ನಲ್ಲಿ ಕೆಲಸವನ್ನು ಕೂಡ ಮಾಡಿದರು.

Deepa Rangaraj s Haunting Truth My Only Home is 6 Feet in a Cemetery

'ಚಿತಿರಂ ಪೆಸುತಡಿ' ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ದೀಪಿಕಾ ಆ ನಂತರ ಕಿರುತೆರೆಯ ಪ್ರೇಕ್ಷಕರ ಪಾಲಿಗೆ ಮನೆ ಮಗಳಾದರು. ತಮ್ಮ ಅಭಿನಯದಿಂದ ಹೃದಯವನ್ನು ಗೆದ್ದರು. 'ಬ್ರಹ್ಮಮುಡಿ' ಧಾರಾವಾಹಿ ಇವರ ಬದುಕಿನ ದಿಕ್ಕನ್ನೇ ಬದಲಿಸಿತು.

ಈ ಧಾರಾವಾಹಿಯಲ್ಲಿ ಬಿಗ್ ಬಾಸ್ ಖ್ಯಾತಿಯ ಮಾನಸ್ ಅವರ ಪತ್ನಿ ಕಾವ್ಯ ಪಾತ್ರವನ್ನು ದೀಪಿಕಾ ರಂಗರಾಜು ನಿರ್ವಹಿಸಿದ್ದರು. ಇದಲ್ಲದೇ 'ಆರಡಿ' ಚಿತ್ರದ ಮೂಲಕ ಚಿತ್ರರಂಗಕ್ಕೂ ಬಂದ ದೀಪಿಕಾ 'ಲಕ್ಷ್ಮೀ ಕಲ್ಯಾಣಂ' ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು.

ಇಂಥಾ ದೀಪಿಕಾ ಸದ್ಯ ಜಬರ್‌ದಸ್ತ್ ಖ್ಯಾತಿಯ ವರ್ಷಾ ಅವರಿಗೆ ಸಂದರ್ಶನವೊಂದನ್ನು ನೀಡಿದ್ದಾರೆ. ತಮ್ಮ ಬದುಕಿನ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.ಮಾತನಾಡುತ್ತಾ..ಮಾತನಾಡುತ್ತಾ..ಆಸ್ತಿಯೆಲ್ಲ ನಾನು ಮಾಡಿಲ್ಲ ಸ್ಮಶಾನದಲ್ಲಿ ಕೇವಲ ಆರಡಿ ಜಾಗ ಇರುವುದಾಗಿ ಹೇಳಿದ್ದಾರೆ. ಈ ಮೂಲಕ ನಿರೂಪಕಿಯ ಜೊತೆಗೆ ಪ್ರೇಕ್ಷಕರನ್ನು ಕೂಡ ಅಚ್ಚರಿಗೆ ದೂಡಿದ್ದಾರೆ.

ಈ ಕುರಿತು ಸಂದರ್ಶನದಲ್ಲಿ ಮಾತನಾಡಿರುವ ದೀಪಿಕಾ ನನಗೆ ಸ್ವಂತ ಮನೆ ಇಲ್ಲ ಎಂದು ಹೇಳಿದ್ದಾರೆ. ಆದರೆ ಚೆನ್ನೈನಲ್ಲಿ ಸ್ವಂತ ಮನೆ ಖರೀದಿಸುವುದು ನನ್ನ ಬಹದೊಡ್ಡ ಆಸೆ ಎಂದು ಕೂಡ ಹೇಳಿದ್ದಾರೆ. ಮುಂದುವರೆದು ನನಗೆ ಸ್ಮಶಾನದಲ್ಲಿ ಆರು ಅಡಿ ಜಾಗ ಮಾತ್ರ ಇದೆ ಎಂದು ಹೇಳಿರುವ ದೀಪಿಕಾ ಈ ಜಾಗ ಹೊರತು ಪಡಿಸಿದರೆ ನನಗೆ ಬೇರೆ ಯಾವುದೇ ಆಸ್ತಿ ಇಲ್ಲ ಎಂದು ಹೇಳಿದ್ದಾರೆ.

ಇನ್ನು ಕಿರುತೆರೆ ನಾಯಕಿಯರೆಂದರೆ ಅವರ ಸಂಭಾವನೆ ಬಗ್ಗೆ.. ಅವರ ಜೀವನ ಶೈಲಿಯ ಬಗ್ಗೆ ಅನೇಕರಲ್ಲಿ ಅನೇಕ ರೀತಿಯ ಕಲ್ಪನೆಗಳಿರುತ್ತವೆ. ಈ ಕುರಿತು ಕೂಡ ಮಾತನಾಡಿರುವ ದೀಪಿಕಾ ನನ್ನ ಸಂಭಾವನೆ ಕೋಟಿಗಳಲ್ಲಿ ಇಲ್ಲ ನಾನು ಇನ್ನೂ ಲಕ್ಷದಲ್ಲಿಯೇ ಇದ್ದೇನೆ ಎಂದು ಹೇಳಿದ್ದಾರೆ.

'ಬ್ರಹ್ಮಮುಡಿ' ಧಾರಾವಾಹಿಯಿಂದ ಬದುಕು ಬದಲಾಯ್ತು, ನನ್ನನ್ನು ಜನ ಗುರುತು ಹಿಡಿಯಲು ಶುರು ಮಾಡಿದರು, ಆ ಧಾರಾವಾಹಿಯಿಂದ ನನಗೆ ಜನಪ್ರಿಯತೆ ಕೂಡ ಸಿಕ್ತು ಎಂದು ಹೇಳಿರುವ ದೀಪಿಕಾ ಈ ಧಾರಾವಾಹಿ ಮೊದಲು ನಾನು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ಇವತ್ತಿನ ದಿನಗಳಲ್ಲಿ ಮನೆ ಖರೀದಿ ಮಾಡಲು ಲಕ್ಷ ಇದ್ದರೆ ಸಾಲುವುದಿಲ್ಲ ಬದಲಿಗೆ ಕೋಟಿಗಳು ಇರಬೇಕು ಎಂದು ಕೂಡ ಹೇಳಿದ್ದಾರೆ.

ಸದ್ಯ ದೀಪಿಕಾ ಅವರ ಈ ಮಾತು ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಲ್ಲಿ ಕೂಡ ವ್ಯಾಪಕ ಚರ್ಚೆಗೀಡಾಗಿದೆ. ಹಲವಾರು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ದೀಪಿಕಾ ಅವರ ತಾಳ್ಮೆ ಅವರ ಅಭಿನಯದ ಕುರಿತು ಮಾತುಗಳನ್ನಾಡುತ್ತಿದ್ದಾರೆ. ತಮ್ಮ ಮನದ ಮಾತುಗಳನ್ನು ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರ ಪರಿಣಾಮ ದೀಪಿಕಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

More from Filmibeat

English summary
Deepa Rangaraj shares a heartbreaking truth: "Only 6 feet in a cemetery is all I have." Read the TV star's emotional comments on her humble life and profound outlook.
Read more about: actress life tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X