Deepa: 'ಬ್ರಹ್ಮಾಸ್ತ್ರ' ಧಾರಾವಾಹಿಯ ಶಿವರಂಜಿನಿ ಖ್ಯಾತಿಯ ಕಾನೂನು ಪದವೀಧರೆ

By ಅನಿತಾ ಬನಾರಿ

ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಉದಯ ವಾಹಿನಿಯು ಇನ್ನು ಮುಂದೆ 'ಆನಂದರಾಗ' ಧಾರಾವಾಹಿ ಮೂಲಕ ಪ್ರೇಕ್ಷಕರನ್ನು ರಂಜಿಸಲಿದೆ. ಹೌದು, ಉದಯ ಟಿವಿಯಲ್ಲಿ 'ಆನಂದರಾಗ' ಅನ್ನೋ ಹೊಸ ಧಾರಾವಾಹಿಯೊಂದು ಆರಂಭವಾಗಿದ್ದು ಅದರಲ್ಲಿ ನಾಯಕಿ ದುರ್ಗಾ ಆಗಿ ದೀಪಾ ಹೀರೆಮಠ್ ಅಭಿನಯಿಸುತ್ತಿದ್ದಾರೆ.

ಉದಯ ವಾಹಿನಿಯಲ್ಲಿ ಈ ಹಿಂದೆ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿ ಆಗಿ ಅಭಿನಯಿಸಿದ್ದ ಸುಷ್ಮಿತಾ ಭಟ್ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಾಗ ಆ ಜಾಗಕ್ಕೆ ಬಂದವರೇ ದೀಪಾ ಹೀರೆಮಠ್. ಮುಂದೆ ಒಂದಷ್ಟು ಸಂಚಿಕೆಗಳಲ್ಲಿ ಅಂಜಲಿಯಾಗಿ ಮೋಡಿ ಮಾಡಿದ್ಧ ದೀಪಾ ಕೊರೊನಾ ಕಾರಣದಿಂದ ಆ ಪಾತ್ರಕ್ಕೆ ವಿದಾಯ ಹೇಳಬೇಕಾಯಿತು.

ತೆಲುಗು ಧಾರಾವಾಹಿಯಲ್ಲಿ ನಟನೆ

ತೆಲುಗು ಧಾರಾವಾಹಿಯಲ್ಲಿ ನಟನೆ

'ಕಾವ್ಯಾಂಜಲಿ' ಧಾರಾವಾಹಿಯ ಅಂಜಲಿ ಪಾತ್ರದಿಂದ ಹೊರಬಂದ ಬಳಿಕ ದೀಪಾ ಹೀರೆಮಠ್ ಕಾಣಿಸಿಕೊಂಡಿದ್ದು ತೆಲುಗಿನಲ್ಲಿ. ತೆಲುಗಿನ 'ಮಲ್ಲಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ದೀಪಾ ಇದೀಗ ಸಣ್ಣ ಬ್ರೇಕ್‌ನ ನಂತರ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದು, ವೀಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ.

'ಮಹಾಸತಿ'ಯಲ್ಲಿ ಪೋಷಕ ಪಾತ್ರ

'ಮಹಾಸತಿ'ಯಲ್ಲಿ ಪೋಷಕ ಪಾತ್ರ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾಸತಿ' ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ದೀಪಾ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ವಾರಾಸ್ದಾರ' ಧಾರಾವಾಹಿಯಲ್ಲಿ ಪ್ರೀತಿ ಪಾತ್ರಕ್ಕೆ ಜೀವ ತುಂಬಿದ್ದರು.

ತಿರುವು ಕೊಟ್ಟಿದ್ದು 'ಬ್ರಹ್ಮಾಸ್ತ್ರ'

ತಿರುವು ಕೊಟ್ಟಿದ್ದು 'ಬ್ರಹ್ಮಾಸ್ತ್ರ'

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ನಾಯಕಿ ಶಿವರಂಜಿನಿ ಆಗಿ ಅಭಿನಯಿಸಿದ್ದ ದೀಪಾ ನಂತರ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವ್ಯಾಂಜಲಿ' ಧಾರಾವಾಹಿಯಲ್ಲಿ ಅಂಜಲಿ ಆಗಿ ಕಾಣಿಸಿಕೊಳ್ಳುವ ಮೂಲಕ ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು. ತದ ನಂತರ ಕನ್ನಡ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿದ್ದ ಈಕೆ ಇದೀಗ ದುರ್ಗಾ ಆಗಿ ವೀಕ್ಷಕರನ್ನು ಸೆಳೆಯಲು ಬರುತ್ತಿದ್ದಾರೆ. ಅದು ಕೂಡಾ ಉದಯ ವಾಹಿನಿಯಲ್ಲಿ!

ಕಾನೂನು ಪದವೀಧರೆ

ಕಾನೂನು ಪದವೀಧರೆ

ಕಾನೂನು ಪದವೀಧರೆಯಾಗಿರುವ ದೀಪಾ ಹೀರೆಮಠ್ ಅವರಿಗೆ ನಟನೆ ಎಂಬುದು ಕನಸಾಗಿತ್ತು. ಕನಸು ನನಸು ಮಾಡಿಕೊಳ್ಳುವ ಸಲುವಾಗಿಯೇ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ದೀಪಾ ಸದ್ಯ ಇಲ್ಲೇ ಬದುಕು ರೂಪಿಸಿಕೊಂಡಿದ್ದಾರೆ. ಇನ್ನು 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ನಟಿಸುವ ಮೂಲಕ ಬೆಳ್ಲಿತೆರೆಗೂ ಪಾದಾರ್ಪಣೆ ಮಾಡಿರುವ ದೀಪಾ ಸಿನಿಮಾಗಳ ಆಡಿಶನ್ ನಲ್ಲಿ ಭಾಗವಹಿಸುತ್ತಿದ್ದಾರೆ. ಉತ್ತಮ ಅವಕಾಶ ಮತ್ತು ಪಾತ್ರಕ್ಕಾಗಿ ಕಾಯುತ್ತಿರುವ ದೀಪಾಗೆ ಸಿನಿಮಾ ನಿರ್ದೇಶಿಸುವ ಕನಸಿದೆ.

More from Filmibeat

English summary
Deepa, who entered television through a supporting role, is now charming as a heroine,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X